ಚಂಡೀಗಢ: ಸಾಮಾಜಿಕ ಜಾಲತಾಣಗಳು, ಡೇಟಿಂಗ್ ಆ್ಯಪ್‌ಗಳಲ್ಲಿ ಪರಿಚಯವಾದವರನ್ನು ಭೇಟಿ ಮಾಡುವುದು ಎಷ್ಟು ಅಪಾಯ ಎಂಬುದಕ್ಕೆ ಆಗಾಗ ನಡೆಯುವ ಅಪರಾಧ ಪ್ರಕರಣಗಳು ಸಾಬೀತುಪಡಿಸುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಹರಿಯಾಣದ ಗುರುಗ್ರಾಮದಲ್ಲಿ ಡೇಟಿಂಗ್ ಆ್ಯಪ್ (Dating App) ಮೂಲಕ ಪರಿಚಯವಾದ ಯುವಕನನ್ನು ಭೇಟಿಯಾಗಲು ಹೋದ ಯುವತಿಯ ಮೇಲೆ ಯುವಕನು ಅತ್ಯಾಚಾರ ಎಸಗಿದ್ದಾನೆ.
ಯುವಕ ಹಾಗೂ ಯುವತಿಯು ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿದ್ದಾರೆ. ಇದೇ ವೇಳೆ ಇಬ್ಬರ ಮಧ್ಯೆ ಸಲುಗೆ ಬೆಳೆದಿದೆ. ಇದಾದ ಕೆಲವೇ ದಿನಗಳಲ್ಲಿ ಆತ ಯುವತಿಯನ್ನು ಜೂನ್ 29ರಂದು ಸೆಕ್ಟರ್ 50ರಲ್ಲಿರುವ ಹೋಟೆಲ್‌ಗೆ ಕರೆದಿದ್ದಾನೆ. ಯುವಕನನ್ನು ಹಿಂದೆ-ಮುಂದೆ ನೋಡದೆ ನಂಬಿದ ಯುವತಿಯು ಹೋಟೆಲ್‌ಗೆ ಹೋಗಿದ್ದಾಳೆ. ಅಲ್ಲಿ ಯುವಕ ಹಾಗೂ ಆತನ ಗೆಳೆಯರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಹೋಟೆಲ್‌ನಲ್ಲಿ ಯುವಕ ಹಾಗೂ ಆತನ ಗೆಳೆಯ ಯುವತಿಯನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಯುವತಿಗಾಗಿ ಊಟ ತರಿಸಿದ್ದಾರೆ. ಊಟ ಮಾಡಿದ ಯುವತಿಯ ಪ್ರಜ್ಞೆ ತಪ್ಪಿದೆ. ಇದಾದ ಬಳಿಕ ಆಕೆಯ ಮೇಲೆ ಇಬ್ಬರೂ ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ಯುವತಿ ದೂರು ನೀಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Physical Abuse: ಚಲಿಸುತ್ತಿರುವ ಆಟೋದಲ್ಲಿ ಯುವತಿ ಮೇಲೆ ಅತ್ಯಾಚಾರ, ಉತ್ತರ ಪ್ರದೇಶದಲ್ಲಿ ಆರೋಪಿ ಸೆರೆ!
ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ
“ನನಗೆ ನೀಡಿದ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಮಿಕ್ಸ್ ಮಾಡಿದ್ದಾರೆ. ನಾನು ಮೂರ್ಛೆಹೋದ ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಅತ್ಯಾಚಾರ ಎಸಗಿರುವುದನ್ನು ವಿಡಿಯೊ ಮಾಡಿರುವ ಅವರು, ಇದನ್ನು ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇವೆ ಎಂದು ಹೆದರಿಸಿದರು. ಇದರಿಂದಾಗಿ ನಾನು ಕೂಡಲೇ ಪ್ರಕರಣ ದಾಖಲಿಸಲು ಆಗಲಿಲ್ಲ. ಹಾಗಂತ, ಸುಮ್ಮನಿರಲೂ ಆಗದೆ ಈಗ ದೂರು ನೀಡಿದ್ದೇನೆ” ಎಂಬುದಾಗಿ ಯುವತಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರು ನಂಬಿ ಮೋಸ ಹೋಗಿದ್ದಾರೆ. ವಂಚನೆಯ ಜಾಲವೀಗ ಡೇಟಿಂಗ್ ಆ್ಯಪ್‌ಗೂ ಕಾಲಿಟ್ಟಿದೆ. ಹಾಗಾಗಿ, ಯಾವುದೇ ಆನ್‌ಲೈನ್ ವೇದಿಕೆ ಮೂಲಕ ಪರಿಚಯವಾದವರನ್ನು ನಂಬುವುದು ಅಪಾಯಕಾರಿ ಎಂದು ಪೊಲೀಸರು ಹಾಗೂ ಸೈಬರ್ ತಜ್ಞರು ಆಗಾಗ ಎಚ್ಚರಿಸುತ್ತಲೇ ಇರುತ್ತಾರೆ.