Site icon Vistara News

Physical Assault: ಪ್ರೇಮ ನಿವೇದನೆ ಒಪ್ಪದ 12 ವರ್ಷದ ಬಾಲಕಿಗೆ 10 ಬಾರಿ ಚಾಕು ಇರಿದು ಕೊಂದ ದುಷ್ಟ

Physical Abuse

Father of rape victim found hanging from tree days after she died by Suicide In Uttar Pradesh

ಮುಂಬೈ: ಪ್ರೇಮ ನಿವೇದನೆಯನ್ನು (Love Proposal) ಒಪ್ಪದ ಯುವತಿಯ ಮೇಲೆ ಆ್ಯಸಿಡ್ ಎರಚುವುದು, ಆಕೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಕೆಲವೊಮ್ಮೆ ಹಲ್ಲೆ ನಡೆಸುವುದು ಸೇರಿ ಹಲವು ಹುಚ್ಚಾಟಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದಲ್ಲಿ (Maharashtra) ಪ್ರೇಮ ನಿವೇದನೆಯನ್ನು ಒಪ್ಪದ 12 ವರ್ಷದ ಬಾಲಕಿಗೆ 10 ಬಾರಿ ಚಾಕು ಇರಿದು (Physical Assault) ಕೊಲೆ ಮಾಡಿದ್ದಾನೆ.

ಹೌದು, ಮಹಾರಾಷ್ಟ್ರದ ಕಲ್ಯಾಣ್‌ ಜಿಲ್ಲೆ ತೀಸ್‌ಗಾಂವ್‌ನಲ್ಲಿ ಆಗಸ್ಟ್‌ 16ರಂದು ರಾತ್ರಿ 8 ಗಂಟೆ ಸುಮಾರಿಗೆ ತಾಯಿ ಜತೆ 12 ವರ್ಷದ ಪ್ರಣೀತಾ ದಾಸ್‌ ತಮ್ಮ ಅಪಾರ್ಟ್‌ಮೆಂಟ್‌ಗೆ ತೆರಳುವಾಗ 20 ವರ್ಷದ ಆದಿತ್ಯ ಕಾಂಬ್ಳೆ ದಾಳಿ ನಡೆಸಿದ್ದಾರೆ. ತನ್ನ ಪ್ರೀತಿಯನ್ನು ಒಪ್ಪದ ಕಾರಣಕ್ಕೆ ಪ್ರಣೀತಾ ದಾಸ್‌ ಮೇಲೆ ಸೇಡು ತೀರಿಸಿಕೊಳ್ಳಲು ಆಗಮಿಸಿದ ಆತ, ಪ್ರಣೀತಾ ದಾಸ್‌ಳನ್ನು ಎಳೆದಿದ್ದಾನೆ. ಅಡ್ಡ ಬಂದ ಆಕೆಯ ತಾಯಿಯನ್ನು ನೂಕಿ, 10 ಬಾರಿ ಪ್ರಣೀತಾ ದಾಸ್‌ಗೆ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಮಗಳ ಮೇಲೆ ಏಕಾಏಕಿ ನಡೆದ ದಾಳಿಯಿಂದ ವಿಚಲಿತರಾದ ಆಕೆಯ ತಾಯಿಯು ಜೋರಾಗಿ ಕೂಗಿದ್ದಾರೆ. ಆದಿತ್ಯ ಕಾಂಬ್ಳೆಯನ್ನು ಎರಡು ಮೂರು ಬಾರಿ ಎಳೆದಿದ್ದಾರೆ. ಇಷ್ಟಾದರೂ ಕೊಸರಿಕೊಂಡು ಹೋದ ಆತ ಬಾಲಕಿಗೆ ಸತತವಾಗಿ ಚಾಕು ಇರಿದಿದ್ದಾರೆ. ಮಹಿಳೆಯ ಕೂಗಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಜನರು ಆದಿತ್ಯ ಕಾಂಬ್ಳೆಯಿಂದ ಬಾಲಕಿಯನ್ನು ಬಿಡಿಸಿದ್ದಾರೆ. ಇದಾದ ಬಲಿಕ ಆದಿತ್ಯ ಕಾಂಬ್ಳೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Man Stabs Woman | ಪ್ರೇಮ ನಿವೇದನೆ ತಿರಸ್ಕರಿಸಿದಳು ಎಂದು ಯುವತಿಗೆ 6 ಬಾರಿ ಚಾಕು ಇರಿದ ದುಷ್ಟ

ಕೆಲ ದಿನಗಳಿಂದ ಬಾಲಕಿಯನ್ನು ಆದಿತ್ಯ ಕಾಂಬ್ಳೆ ಪೀಡಿಸುತ್ತಿದ್ದ. ನನ್ನ ಪ್ರೀತಿಯನ್ನು ಒಪ್ಪಿಕೋ ಎಂದು ಒತ್ತಾಯಿಸುತ್ತಿದ್ದ. ಆದರೆ, ಇತ್ತೀಚೆಗೆ ಬಾಲಕಿಯ ಇದನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಳು. ಆಕೆ ಟ್ಯೂಷನ್‌ನಿಂದ ಮನೆಗೆ ಬರುವ ಸಮಯ ತಿಳಿದಿದ್ದ ಕಾಂಬ್ಳೆ, ಸೇಡು ತೀರಿಸಿಕೊಳ್ಳಲು ದಾಳಿ ನಡೆಸಿದ್ದಾನೆ. ಇನ್ನು, ಬಾಲಕಿಗೆ ಚಾಕು ಇರಿದ ಬಳಿಕ ಆತನು ಕೂಡ ಫೆನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದಿತ್ಯ ಕಾಂಬ್ಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Exit mobile version