Site icon Vistara News

CBSE Admit Card 2024: ಸಿಬಿಎಸ್‌ಇ 10, 12ನೇ ತರಗತಿ ಬೋರ್ಡ್‌ ಪರೀಕ್ಷೆಯ ಹಾಲ್ ಟಿಕೆಟ್ ಹೀಗೆ ಡೌನ್‌ಲೋಡ್‌ ಮಾಡಿ

admit card

admit card

ಬೆಂಗಳೂರು: ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕಂಡರಿ ಎಜುಕೇಷನ್‌ (Central Board of Secondary Education) 10 ಮತ್ತು 12ನೇ ತರಗತಿಯ 2024ರ ಸಾಲಿನ ಬೋರ್ಡ್‌ ಪರೀಕ್ಷೆಯ ಪ್ರವೇಶ ಪತ್ರವನ್ನು (ಹಾಲ್ ಟಿಕೆಟ್) ಬಿಡುಗಡೆ ಮಾಡಿದೆ (CBSE Admit Card 2024). ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ cbse.nic.in, cbse.gov.in ಮತ್ತು parikshasangam.cbse.gov.inಗೆ ಭೇಟಿ ನೀಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು ಲಾಗಿನ್ ಪಾಸ್‌ವರ್ಡ್‌ ನಮೂದಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಬಹುದು. ಹಾಲ್ ಟಿಕೆಟ್ ಅಭ್ಯರ್ಥಿಯ ಹೆಸರು, ವಿಷಯಗಳು, ರೋಲ್ ಸಂಖ್ಯೆ, ಸಂಬಂಧಿತ ಪರೀಕ್ಷಾ ದಿನಾಂಕಗಳು, ಪರೀಕ್ಷೆ ಮತ್ತು ವಿಷಯ ಕೋಡ್, ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿ ಯಾವ ರೀತಿ ವರ್ತಿಸಬೇಕು ಇತ್ಯಾದಿ ಪ್ರಮುಖ ಮಾರ್ಗಸೂಚಿಗಳಂತಹ ವಿವರಗಳನ್ನು ಒಳಗೊಂಡಿದೆ.

ಸಿಬಿಎಸ್‌ಇಯ 10ನೇ ತರಗತಿಯ ಪರೀಕ್ಷೆ ಫೆಬ್ರವರಿ 15ರಿಂದ ಮಾರ್ಚ್‌ 13ರ ವರೆಗೆ ನಡೆಯಲಿದೆ. ಇನ್ನು 12ನೇ ತರಗತಿಯ ಪರೀಕ್ಷೆ ಫೆಬ್ರವರಿ 15ರಿಂದ ಏಪ್ರಿಲ್‌ 2ರ ತನಕ ಆಯೋಜಿಸಲಾಗಿದೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.30ಕ್ಕೆ ಆರಂಭವಾಗಿ ಮಧ್ಯಾಹ್ನ 1.30ಕ್ಕೆ ಕೊನೆಗೊಳ್ಳಲಿದೆ. ಪರೀಕ್ಷೆ ಬರೆಯುವ ಮೊದಲು ಪ್ರಶ್ನೆಗಳನ್ನು ಓದಲು ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷ ಒದಗಿಸಲಾಗುತ್ತದೆ.

ಪ್ರವೇಶ ಪತ್ರ ಡೌನ್‌ಲೋಡ್‌ ಮಾಡುವ ವಿಧಾನ

10ನೇ ತರಗತಿ ಪರೀಕ್ಷೆಯ ಟೈಮ್‌ ಟೇಬಲ್‌

ದಿನಾಂಕವಿಷಯ
ಫೆಬ್ರವರಿ 19ಸಂಸ್ಕೃತ
ಫೆಬ್ರವರಿ 21ಹಿಂದಿ
ಫೆಬ್ರವರಿ 26ಇಂಗ್ಲಿಷ್‌
ಮಾರ್ಚ್‌ 2ಸೈನ್ಸ್‌
ಮಾರ್ಚ್‌ 4ಹೋಮ್‌ ಸೈನ್ಸ್‌
ಮಾರ್ಚ್‌ 7ಸೋಷಿಯಲ್‌ ಸೈನ್ಸ್‌
ಮಾರ್ಚ್‌ 11ಗಣಿತ
ಮಾರ್ಚ್‌ 13ಇನ್ಫರ್ಮೇಷನ್‌ ಟೆಕ್ನಾಲಜಿ

12ನೇ ತರಗತಿ ಪರೀಕ್ಷೆಯ ಟೈಮ್‌ ಟೇಬಲ್‌

ದಿನಾಂಕವಿಷಯ
ಫೆಬ್ರವರಿ 22ಇಂಗ್ಲಿಷ್‌
ಫೆಬ್ರವರಿ 27ಕೆಮಿಸ್ಟ್ರಿ
ಫೆಬ್ರವರಿ 29ಜಿಯೋಗ್ರಫಿ
ಮಾರ್ಚ್‌ 4ಫಿಸಿಕ್ಸ್‌
ಮಾರ್ಚ್‌ 9ಗಣಿತ
ಮಾರ್ಚ್‌ 18ಎಕಾನಾಮಿಕ್ಸ್‌
ಮಾರ್ಚ್‌ 19ಬಯೋಲಜಿ
ಮಾರ್ಚ್‌ 22ಪಾಲಿಟಿಕಲ್‌ ಸೈನ್ಸ್‌
ಮಾರ್ಚ್‌ 23ಅಕೌಂಟೆನ್ಸಿ
ಮಾರ್ಚ್‌ 27ಬ್ಯುಸಿನೆಸ್‌ ಸ್ಟಡೀಸ್‌
ಮಾರ್ಚ್‌ 28ಹಿಸ್ಟರಿ
ಏಪ್ರಿಲ್‌ 1ಸೋಷಿಯಾಲಜಿ
ಏಪ್ರಿಲ್‌ 2ಕಂಪ್ಯೂಟರ್‌ ಸೈನ್ಸ್‌

ಇದನ್ನೂ ಓದಿ: JEE Main 2024 Session 2: ಜೆಇಇ ಮೇನ್ಸ್‌ ಸೆಷನ್‌ 2 ನೋಂದಣಿ ಆರಂಭ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

Exit mobile version