CBSE Admit Card 2024: ಸಿಬಿಎಸ್‌ಇ 10, 12ನೇ ತರಗತಿ ಬೋರ್ಡ್‌ ಪರೀಕ್ಷೆಯ ಹಾಲ್ ಟಿಕೆಟ್ ಹೀಗೆ ಡೌನ್‌ಲೋಡ್‌ ಮಾಡಿ - Vistara News

ಶಿಕ್ಷಣ

CBSE Admit Card 2024: ಸಿಬಿಎಸ್‌ಇ 10, 12ನೇ ತರಗತಿ ಬೋರ್ಡ್‌ ಪರೀಕ್ಷೆಯ ಹಾಲ್ ಟಿಕೆಟ್ ಹೀಗೆ ಡೌನ್‌ಲೋಡ್‌ ಮಾಡಿ

CBSE Admit Card 2024: ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕಂಡರಿ ಎಜುಕೇಷನ್‌ 10 ಮತ್ತು 12ನೇ ತರಗತಿಯ 2024ರ ಸಾಲಿನ ಬೋರ್ಡ್‌ ಪರೀಕ್ಷೆಯ ಪ್ರವೇಶ ಪತ್ರವನ್ನು (ಹಾಲ್ ಟಿಕೆಟ್) ಬಿಡುಗಡೆ ಮಾಡಿದೆ. ಡೌಲ್‌ಲೋಡ್‌ ಮಾಡುವ ವಿಧಾನ ಇಲ್ಲಿದೆ.

VISTARANEWS.COM


on

admit card
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕಂಡರಿ ಎಜುಕೇಷನ್‌ (Central Board of Secondary Education) 10 ಮತ್ತು 12ನೇ ತರಗತಿಯ 2024ರ ಸಾಲಿನ ಬೋರ್ಡ್‌ ಪರೀಕ್ಷೆಯ ಪ್ರವೇಶ ಪತ್ರವನ್ನು (ಹಾಲ್ ಟಿಕೆಟ್) ಬಿಡುಗಡೆ ಮಾಡಿದೆ (CBSE Admit Card 2024). ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ cbse.nic.in, cbse.gov.in ಮತ್ತು parikshasangam.cbse.gov.inಗೆ ಭೇಟಿ ನೀಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು ಲಾಗಿನ್ ಪಾಸ್‌ವರ್ಡ್‌ ನಮೂದಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಬಹುದು. ಹಾಲ್ ಟಿಕೆಟ್ ಅಭ್ಯರ್ಥಿಯ ಹೆಸರು, ವಿಷಯಗಳು, ರೋಲ್ ಸಂಖ್ಯೆ, ಸಂಬಂಧಿತ ಪರೀಕ್ಷಾ ದಿನಾಂಕಗಳು, ಪರೀಕ್ಷೆ ಮತ್ತು ವಿಷಯ ಕೋಡ್, ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿ ಯಾವ ರೀತಿ ವರ್ತಿಸಬೇಕು ಇತ್ಯಾದಿ ಪ್ರಮುಖ ಮಾರ್ಗಸೂಚಿಗಳಂತಹ ವಿವರಗಳನ್ನು ಒಳಗೊಂಡಿದೆ.

ಸಿಬಿಎಸ್‌ಇಯ 10ನೇ ತರಗತಿಯ ಪರೀಕ್ಷೆ ಫೆಬ್ರವರಿ 15ರಿಂದ ಮಾರ್ಚ್‌ 13ರ ವರೆಗೆ ನಡೆಯಲಿದೆ. ಇನ್ನು 12ನೇ ತರಗತಿಯ ಪರೀಕ್ಷೆ ಫೆಬ್ರವರಿ 15ರಿಂದ ಏಪ್ರಿಲ್‌ 2ರ ತನಕ ಆಯೋಜಿಸಲಾಗಿದೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.30ಕ್ಕೆ ಆರಂಭವಾಗಿ ಮಧ್ಯಾಹ್ನ 1.30ಕ್ಕೆ ಕೊನೆಗೊಳ್ಳಲಿದೆ. ಪರೀಕ್ಷೆ ಬರೆಯುವ ಮೊದಲು ಪ್ರಶ್ನೆಗಳನ್ನು ಓದಲು ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷ ಒದಗಿಸಲಾಗುತ್ತದೆ.

ಪ್ರವೇಶ ಪತ್ರ ಡೌನ್‌ಲೋಡ್‌ ಮಾಡುವ ವಿಧಾನ

  • ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್‌ https://cbse.gov.in/ಗೆ ಭೇಟಿ ನೀಡಿ.
  • Pariksha Sangam ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  • ಆಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ಕಾಣಿಸುವ ಶಾಲೆಯ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  • ಬಳಿಕ Pre Exam Activities ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಂತರ BSE Board Admit Card 2024 ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  • ಈಗ ಲಾಗಿನ್‌ ವಿವರಗಳನ್ನು ತುಂಬಿ Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • ಈಗ ನಿಮ್ಮ ಪ್ರವೇಶ ಪತ್ರ ತೆರೆ ಮೇಲೆ ಮೂಡುತ್ತದೆ. ಅದನ್ನು ಡೌನ್‌ಲೋಡ್‌ ಮಾಡಿ.

10ನೇ ತರಗತಿ ಪರೀಕ್ಷೆಯ ಟೈಮ್‌ ಟೇಬಲ್‌

ದಿನಾಂಕವಿಷಯ
ಫೆಬ್ರವರಿ 19ಸಂಸ್ಕೃತ
ಫೆಬ್ರವರಿ 21ಹಿಂದಿ
ಫೆಬ್ರವರಿ 26ಇಂಗ್ಲಿಷ್‌
ಮಾರ್ಚ್‌ 2ಸೈನ್ಸ್‌
ಮಾರ್ಚ್‌ 4ಹೋಮ್‌ ಸೈನ್ಸ್‌
ಮಾರ್ಚ್‌ 7ಸೋಷಿಯಲ್‌ ಸೈನ್ಸ್‌
ಮಾರ್ಚ್‌ 11ಗಣಿತ
ಮಾರ್ಚ್‌ 13ಇನ್ಫರ್ಮೇಷನ್‌ ಟೆಕ್ನಾಲಜಿ

12ನೇ ತರಗತಿ ಪರೀಕ್ಷೆಯ ಟೈಮ್‌ ಟೇಬಲ್‌

ದಿನಾಂಕವಿಷಯ
ಫೆಬ್ರವರಿ 22ಇಂಗ್ಲಿಷ್‌
ಫೆಬ್ರವರಿ 27ಕೆಮಿಸ್ಟ್ರಿ
ಫೆಬ್ರವರಿ 29ಜಿಯೋಗ್ರಫಿ
ಮಾರ್ಚ್‌ 4ಫಿಸಿಕ್ಸ್‌
ಮಾರ್ಚ್‌ 9ಗಣಿತ
ಮಾರ್ಚ್‌ 18ಎಕಾನಾಮಿಕ್ಸ್‌
ಮಾರ್ಚ್‌ 19ಬಯೋಲಜಿ
ಮಾರ್ಚ್‌ 22ಪಾಲಿಟಿಕಲ್‌ ಸೈನ್ಸ್‌
ಮಾರ್ಚ್‌ 23ಅಕೌಂಟೆನ್ಸಿ
ಮಾರ್ಚ್‌ 27ಬ್ಯುಸಿನೆಸ್‌ ಸ್ಟಡೀಸ್‌
ಮಾರ್ಚ್‌ 28ಹಿಸ್ಟರಿ
ಏಪ್ರಿಲ್‌ 1ಸೋಷಿಯಾಲಜಿ
ಏಪ್ರಿಲ್‌ 2ಕಂಪ್ಯೂಟರ್‌ ಸೈನ್ಸ್‌

ಇದನ್ನೂ ಓದಿ: JEE Main 2024 Session 2: ಜೆಇಇ ಮೇನ್ಸ್‌ ಸೆಷನ್‌ 2 ನೋಂದಣಿ ಆರಂಭ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Toyota: ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024; ಟಿಟಿಟಿಐ ವಿದ್ಯಾರ್ಥಿಗಳ ಉತ್ತಮ ಸಾಧನೆ

Toyota: ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ದಿಂದ ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ಆಯೋಜಿಸಿದ್ದ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

VISTARANEWS.COM


on

Toyota Technical Training Institute students Excellent performance in India Skills Competition 2024
Koo

ರಾಮನಗರ: ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ದಿಂದ ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ಆಯೋಜಿಸಿದ್ದ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟೊಯೊಟಾ (Toyota) ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಸಂಯೋಜಿತ ಉತ್ಪಾದನೆ (ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ) ವಿಭಾಗದ ವೈಯಕ್ತಿಕ ಪ್ರತಿಸ್ಪರ್ಧಿಯಾಗಿ ಪ್ರೇಮ್. ವಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್‌ನಲ್ಲಿ ಮೋಹಿತ್ ಎಂ.ಯು, ಹರೀಶ್ ಆರ್, ಮತ್ತು ನೆಲ್ಸನ್ ವಿ ತಂಡ ಚಿನ್ನದ ಪದಕಗಳನ್ನು ಪಡೆದುಕೊಂಡಿದೆ.

ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ದರ್ಶನ್ ಗೌಡ ಸಿ.ಎಸ್. ಮತ್ತು ಭಾನು ಪ್ರಸಾದ್ ಎಸ್.ಎಂ ತಂಡ ಚಿನ್ನದ ಪದಕ ಗಳಿಸಿದೆ. ಹೇಮಂತ್ ಕೆ.ವೈ ಮತ್ತು ಉದಯ್ ಕುಮಾರ್ ಬಿ ತಂಡ ಬೆಳ್ಳಿ ಪದಕ ಗಳಿಸಿದೆ. ಇದಲ್ಲದೆ, ರೋಹನ್ ಎ.ಎಸ್. ಬೆಳ್ಳಿ ಪದಕ ಮತ್ತು ಸುದೀಪ್ ಎಸ್.ಎಂ. ಅವರು ಕಾರ್ ಪೇಂಟಿಂಗ್‌ನಲ್ಲಿ ವೈಯಕ್ತಿಕ ಸ್ಪರ್ಧಿಯಾಗಿ ಮೆಡಲಿಯನ್ ಆಫ್ ಎಕ್ಸಲೆನ್ಸ್ ಪಡೆದಿದ್ದಾರೆ.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ನಡೆದ ಸ್ಪರ್ಧೆಯ “ಆಫ್-ಸೈಟ್” ಭಾಗದ ನಾಲ್ಕು ವಿಭಾಗಗಳಲ್ಲಿ ಟಿಟಿಟಿಐ ಭಾಗವಹಿಸಿತ್ತು. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್, ಮೆಕಾಟ್ರಾನಿಕ್ಸ್, ಕಾರ್ ಪೇಂಟಿಂಗ್ ಮತ್ತು ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಟಿಟಿಟಿಐನ ವಿದ್ಯಾರ್ಥಿಗಳು ಅದ್ಭುತ ಕೌಶಲ್ಯ ಮತ್ತು ಡೆಡಿಕೇಷನ್ ಅನ್ನು ಪ್ರದರ್ಶಿಸಿದ್ದಾರೆ.

ಈ ವೇಳೆ ಎನ್‌ಎಸ್‌ಡಿಸಿ ಯ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ಜನರಲ್ ಮ್ಯಾನೇಜರ್ ಮೋನಿಕಾ ನಂದಾ ಮಾತನಾಡಿ, “ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಗಮನಾರ್ಹ ಸಾಧನೆ ಮಾಡಿದ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಟಿಟಿಟಿಐ) ನ ವಿದ್ಯಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಅನುಕರಣೀಯ ಕೌಶಲ್ಯಗಳು ಮತ್ತು ಸಮರ್ಪಣೆ ಟಿಟಿಟಿಐನ ತರಬೇತಿ ಕಾರ್ಯಕ್ರಮಗಳ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ. ಈ ವಿಜೇತರು ತಮ್ಮ ಸಂಸ್ಥೆಗೆ ಗೌರವವನ್ನು ತರುವುದಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತೀಯ ಕೌಶಲ್ಯ ಅಭಿವೃದ್ಧಿಯ ಖ್ಯಾತಿಯನ್ನು ಹೆಚ್ಚಿಸುತ್ತಾರೆ. ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾದವರು ಈ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸುತ್ತಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ನಮಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಹಣಕಾಸು ಮತ್ತು ಆಡಳಿತದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ಮಾತನಾಡಿ, “ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟಿಟಿಟಿಐ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳ ಬಗ್ಗೆ ನಾವು ಅಪಾರ ಹೆಮ್ಮೆ ಪಡುತ್ತೇವೆ. ಅವರ ಯಶಸ್ವಿ ಪ್ರಯಾಣ ನಮಗೆ ಹೆಚ್ಚು ಆನಂದವನ್ನು ನೀಡಿದೆ. ಕಠಿಣ ಪರಿಶ್ರಮದಿಂದಾಗಿ ಈ ಮೈಲಿಗಲ್ಲನ್ನು ವಿದ್ಯಾರ್ಥಿಗಳು ತಲುಪಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

ಚಿಕ್ಕಬಳ್ಳಾಪುರ

Physical Abuse: 7ನೇ ಕ್ಲಾಸ್‌ ಹುಡುಗಿ 3 ತಿಂಗಳ ಗರ್ಭಿಣಿ! ಅತ್ಯಾಚಾರವೆಸಗಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅರೆಸ್ಟ್‌

Physical Abuse: ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನೊಬ್ಬ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಪರಿಣಾಮ ಬಾಲಕಿ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಪ್ರಕರಣ ಸಂಬಂಧ ಮುಖ್ಯ ಶಿಕ್ಷಕನನ್ನು ಬಂಧಿಸಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

VISTARANEWS.COM


on

By

Physical Abuse
Koo

ಚಿಕ್ಕಬಳ್ಳಾಪುರ: ಗುರುವನ್ನು ಸಾಕ್ಷತ್‌ ಪರಬ್ರಹ್ಮನಿಗೆ ಹೋಲಿಕೆ ಮಾಡಲಾಗುತ್ತದೆ. ಮಕ್ಕಳಿಗೆ ದಾರಿ ತೋರಿಸಬೇಕಾದ ಗುರುವೇ ದಾರಿ (Physical Abuse) ತಪ್ಪಿದ್ದಾನೆ. ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Physical relationship) ಎಸಗಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಮುಖ್ಯ ಶಿಕ್ಷಕನೇ (Physical assault) ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ವೆಂಕಟೇಶ ಎಂಬಾತನನ್ನು ಬಂಧಿಸಲಾಗಿದೆ.

ವೆಂಕಟೇಶ್‌ 7ನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆಕೆ 3 ತಿಂಗಳ ಗರ್ಭಿಣಿ ಆದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ಮಗಳು ಗರ್ಭಿಣಿಯಾಗಿದ್ದು ತಿಳಿದು ಪಾಲಕರು ಕಂಗಾಲಾಗಿ ದೂರು ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆಯಿಂದ ವಿದ್ಯಾರ್ಥಿನಿಯನ್ನು ರಕ್ಷಿಸಿ ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ.

ಇದನ್ನೂ ಓದಿ: Suspicious Death : ಕೊಪ್ಪಳದಲ್ಲಿ ತಾಯಿ, ಮಗಳು, ಮೊಮ್ಮಗನ ಅನುಮಾನಾಸ್ಪದ ಸಾವು

ಬಾಲಕಿ ನೀಡಿರುವ ಹೇಳಿಕೆ ಮೇರೆಗೆ ಆರೋಪಿ ಶಿಕ್ಷಕನ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ ಸಂತ್ರಸ್ತೆಗೆ ಒಂದು ವರ್ಷದಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ.

ಬಾಲಕಿಯ ಮೈ-ಕೈ, ಎದೆ ಭಾಗವನ್ನು ಮುಟ್ಟಿ ಮಾತನಾಡುತ್ತಿದ್ದನಂತೆ. ಇದಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸಿದಾಗ, ಏನು ತೊಂದರೆ ಆಗುವುದಿಲ್ಲ ಎಂದೇಳಿ ಆಫೀಸ್‌ ರೂಮಿನೊಳಗೆ ಕರೆದುಕೊಂಡು ಅತ್ಯಾಚಾರವೆಸಗಿದ್ದಾನೆ. ನಂತರ ನಡೆದ ಯಾವ ವಿಚಾರವನ್ನು ಯಾರ ಜತೆಗೂ ಹೇಳದಂತೆ ಷರತ್ತು ಹಾಕಿದ್ದಾನೆ.

ಕಳೆದ ಐದು ತಿಂಗಳಿಂದ ಮುಟ್ಟಾಗದೇ ಇರುವುದರಿಂದ ಆತಂಕಗೊಂಡ ಬಾಲಕಿ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದಾರೆ. ಸದ್ಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಶಿಕ್ಷಕ ವೆಂಕಟೇಶ್‌ ವಿರುದ್ಧ ಪೋಕ್ಸೋ 376 ಅಡಿ ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

ಚಿಕ್ಕಬಳ್ಳಾಪುರ ಅಪ್ರಾಪ್ತೆ ಮೇಲೆ ಶಿಕ್ಷಕನಿಂದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. ಇಂತಹ ವಿಚಾರ ಬಂದಾಗ ಕಾನೂನು ರೀತಿಯ ಶಿಕ್ಷೆಗೆ ಒಳಪಡಿಸಲಾಗುತ್ತದೆ.
ಎಸ್.ಡಿ.ಎಂ.ಸಿ‌ ಹಾಗೂ ಸರ್ಕಾರ ಹೊಂದಾಣಿಕೆ ಮಾಡಿಕೊಂಡು ಎಚ್ಚರ ವಹಿಸುತ್ತೇವೆ. ಯಾವುದೇ ವಿಚಾರ ಬಂದರೂ ನಮ್ಮ‌ ಸರ್ಕಾರ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತದೆ. ಕಾನೂನು ಪ್ರಕಾರ ಆರೋಪಿಗೆ ತಕ್ಕ ಶಿಕ್ಷೆ ಆಗಲಿದೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ

School Reopen : ಮೇ 29 ರಿಂದ ರಾಜ್ಯಾದ್ಯಂತ ಪ್ರಾಥಮಿಕ, ಪ್ರೌಢಶಾಲೆಗಳ ಮರು ಆರಂಭವಾಗುತ್ತಿದೆ. ಮೊದಲ ದಿನವೇ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ವಿದ್ಯಾರ್ಥಿಗಳಿಗೆ ಮೊದಲ ದಿನವೇ ಕ್ಷೀರಭಾಗ್ಯ, ಬಿಸಿಯೂಟ ವಿತರಣೆಗೆ ಆದೇಶ ಹೊರಡಿಸಲಾಗಿದೆ.

VISTARANEWS.COM


on

By

School reopen
Koo

ಬೆಂಗಳೂರು: ಏಪ್ರಿಲ್‌ 11ರಿಂದ ಶುರುವಾಗಿದ್ದ ಬೇಸಿಗೆ ರಜೆಯು ಇಂದಿಗೆ (ಮೇ 28) ಮುಗಿಯುತ್ತಿದ್ದು, ನಾಳೆಯಿಂದ (ಮೇ 29) ರಾಜ್ಯಾದ್ಯಂತ ಪ್ರಾಥಮಿಕ, ಪ್ರೌಢ ಶಾಲೆಗಳು (government schools) ಪುನಾರಂಭಗೊಳ್ಳಲಿವೆ. ಶೈಕ್ಷಣಿಕ ಮಾರ್ಗಸೂಚಿಯಂತೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಕಲ ತಯಾರಿ (school reopen) ಮಾಡಿಕೊಳ್ಳಲಾಗಿದೆ. ಇನ್ನೂ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಎಂಬಂತೆ ಮೊದಲ ದಿನವೇ ಕ್ಷೀರಭಾಗ್ಯ, ಬಿಸಿಯೂಟ ವಿತರಣೆಗೆ ಆದೇಶ ಹೊರಡಿಸಲಾಗಿದೆ.

ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2024-25ರ ಸಾಲಿನಲ್ಲಿ ಮೊದಲನೇ ಅವಧಿ ಮೇ 29 ಹಾಗೂ ಎರಡನೇ ಅವಧಿ ಅಕ್ಟೋಬರ್‌ 21ಕ್ಕೆ ಶುರುವಾಗಲಿದೆ. ಅಕ್ಟೋಬರ್‌ 3ರಿಂದ 20ರವರಗೆ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ. ಏಪ್ರಿಲ್‌ 11ರಿಂದ ಬೇಸಿಗೆ ರಜೆ ಶುರುವಾಗಲಿದೆ.

ಇನ್ನೂ 2024-25 ನೇ ಸಾಲಿಗೆ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಎರಡು ಜತೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಈಗಾಗಲೇ ಸಂಬಂಧಿಸಿದ ತಾಲೂಕುಗಳಿಗೆ ಸರಬರಾಜು ಮಾಡಲಾಗಿದೆ. ಏ.10 ರೊಳಗೆ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರ ಮುಖಾಂತರ ಮಕ್ಕಳಿಗೆ ತಲುಪಿಸಲಾಗಿದೆ. ಶಾಲಾ ಪ್ರಾರಂಭೋತ್ಸವದಂದು ಮಕ್ಕಳು ಸಮವಸ್ತ್ರ ಧರಿಸಿ ಪಠ್ಯಪುಸ್ತಕಗಳೊಂದಿಗೆ ಶಾಲೆಗೆ ಹಾಜರಾಗಲು ಸೂಚಿಸಲಾಗಿದೆ.

ಇದನ್ನೂ ಓದಿ: Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

School Reopen

ಶಾಲಾ ದಾಖಲಾತಿಗೆ ಜೂನ್‌ 30 ಕೊನೆ ದಿನ

ವಿದ್ಯಾರ್ಥಿಗಳ ಶಾಲಾ ಪ್ರವೇಶಾತಿಯನ್ನು ಮತ್ತು ದಾಖಲಾತಿಯನ್ನು ಮೇ 31 ರಿಂದ ಶಾಲಾ ಪ್ರಾರಂಭೋತ್ಸವದೊಂದಿಗೆ ಆರಂಭಿಸಿ, ಜೂನ್‌ 30ರಂದು ಮುಕ್ತಾಯಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಕೆಲವು ಮಕ್ಕಳು ನಿರಂತರವಾಗಿ ಶಾಲೆಗೆ ಗೈರು ಹಾಜರಾಗುತ್ತಿರುವುದು ಮತ್ತು ಶಾಲೆಯನ್ನು ಅರ್ಧದಲ್ಲಿಯೇ ಬಿಡುವ ಮಕ್ಕಳನ್ನು ಕಡ್ಡಾಯವಾಗಿ ಹಾಜರಾತಿಗೆ ಕ್ರಮಹಿಸಿಲು ಸೂಚಿಸಲಾಗಿದೆ. ಇದಕ್ಕಾಗಿ ಮೇ 31ರಿಂದ ಜೂನ್‌ 5ರವರಗೆ ಶಾಲಾ ದಾಖಲಾತಿ ಆಂದೋಲವನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

PGCET 2024: ಪಿಜಿಸಿಇಟಿ 2024ಕ್ಕೆ ಮೇ 27ರಿಂದ ಅರ್ಜಿ ಸಲ್ಲಿಕೆ ಆರಂಭ; ಪರೀಕ್ಷೆ ಯಾವಾಗ, ಇಲ್ಲಿದೆ ವೇಳಾಪಟ್ಟಿ

PGCET 2024: ಪಿಜಿಸಿಇಟಿ 2024 ಪರೀಕ್ಷೆಗೆ ಮೇ 27ರಿಂದ ಜೂನ್ 17 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಜೂನ್ 18 ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ.

VISTARANEWS.COM


on

PGCET 2024
Koo

ಬೆಂಗಳೂರು: 2024-25ನೇ ಸಾಲಿನ ಎಂಬಿಎ, ಎಂಸಿಎ, ಎಂ.ಟೆಕ್, ಎಂಇ, ಎಂ.ಆರ್ಕಿಟೆಕ್ಟರ್ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET 2024) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದಿನಾಂಕ ನಿಗದಿ ಮಾಡಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜುಲೈ 13 ಮತ್ತು 14ರಂದು ಪಿಜಿಸಿಇಟಿ-24 ನಡೆಯಲಿದೆ.

ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಟರ್ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಜುಲೈ 13 ರಂದು ಹಾಗೂ ಎಂಸಿಎ ಮತ್ತು ಎಂಬಿಎ ಕೋರ್ಸ್ ಪ್ರವೇಶ ಪರೀಕ್ಷೆಯನ್ನು ಜುಲೈ 14ರಂದು ನಡೆಸಲಾಗುತ್ತದೆ. ಪಿಜಿಸಿಇಟಿ ಪರೀಕ್ಷೆಗೆ ಮೇ 27ರಿಂದ ಜೂನ್ 17 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜೂನ್ 18 ಶುಲ್ಕ ಪಾವತಿಸಲು ಕೊನೆಯ ದಿನಾಂಕವಾಗಿದೆ.

ಎಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ವಿಭಾಗದಲ್ಲಿ ಗೇಟ್‌ (GATE) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮಾತ್ರ ವಿಟಿಯು, ಬೆಳಗಾವಿ ಅಡಿಯಲ್ಲಿನ ವಿವಿಧ ಎಂ.ಟೆಕ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ಗೇಟ್ ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವವರು (Valid GATE Score) ಎಂಇ / ಎಂ.ಟೆಕ್ / ಎಂ. ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕಾಗಿ, ಪಿಜಿಸಿಇಟಿ-2024ಕ್ಕೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಆದರೆ ಅಂತಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿಸಿ ಪ್ರವೇಶಕ್ಕೆ ಅರ್ಹರಾಗಬಹುದು. ಎಸ್‌-ಎಸ್‌ಟಿ, ಒಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಇನ್ನು ಕರ್ನಾಟಕೇತರ ಅಭ್ಯರ್ಥಿಗಳು ಎಂಬಿಎ ಮತ್ತು ಎಂಸಿಎ ಪ್ರವೇಶಕ್ಕೆ ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬಿಟ್ಟುಕೊಡುವ ಸೀಟುಗಳನ್ನು ಮಾತ್ರ ಆಯ್ಕೆ ಮಾಡಲು ಅರ್ಹತೆ ಪಡೆಯುತ್ತಾರೆ. ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳು ಅನ್ವಯಿಸುವುದಿಲ್ಲ. ಆದ್ದರಿಂದ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ (50%) ಅರ್ಹತೆಯನ್ನು ಪಡೆಯಬಹುದಾಗಿದೆ ಹಾಗೂ ಪ್ರವೇಶಕ್ಕಾಗಿ ನೊಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ | COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಕ್ಕೆ, ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಒಟ್ಟು ಕನಿಷ್ಟ ಶೇ.50 ಹಾಗೂ ಕರ್ನಾಟಕದ ಎಸ್.ಸಿ., ಎಸ್.ಟಿ., ಪ್ರವರ್ಗ-1 ರ ಅಭ್ಯರ್ಥಿಗಳು ಕನಿಷ್ಠ ಶೇ.45% ಅಂಕಗಳನ್ನು ಪಡೆದಿರಬೇಕು. CGPA / SGPA ಗ್ರೇಡ್‌ಗಳ ಮಾದರಿಯಲ್ಲಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಯ ಅಂಕಗಳು, ಅಗತ್ಯವಿರುವ ಕನಿಷ್ಠ ಅರ್ಹತಾ ಅಂಕಗಳನ್ನು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗ್ರೇಡ್‌ಗಳ ಅಂಕಗಳು ಸೂಚಿಸುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಎಂದು ಕೆಇಎ ಮಾಹಿತಿ ನೀಡಿದೆ.

Continue Reading
Advertisement
karnataka weather forecast
ಮಳೆ23 mins ago

Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Rishab Pant
ಪ್ರಮುಖ ಸುದ್ದಿ53 mins ago

Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

Wildlife Sanctuaries
ಪರಿಸರ53 mins ago

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

T20 World Cup
ಕ್ರೀಡೆ1 hour ago

T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

namaz on road
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ನಡುರಸ್ತೆಯಲ್ಲೇಕೆ ನಮಾಜ್‌ ಮಾಡಬೇಕು?

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ಜಂಟಿ ಹೂಡಿಕೆ ವ್ಯವಹಾರದಿಂದ ದೂರವಿರಿ

Prajwal Revanna Case
ಪ್ರಮುಖ ಸುದ್ದಿ8 hours ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ8 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Cyber Crime
ಪ್ರಮುಖ ಸುದ್ದಿ8 hours ago

Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

Bomb Threat
ಪ್ರಮುಖ ಸುದ್ದಿ9 hours ago

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ12 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು20 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌