ನವದೆಹಲಿ: ಹವಾಮಾನ ಬದಲಾವಣೆಯು (Climate Change) ಜನರ ಬದುಕಿನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಈಗ ಹೊಸದಾಗಿ ಬಿಡುಗಡೆಯಾಗಿರುವ ವರದಿಯ ಪ್ರಕಾರ(Study Report), ಹವಾಮಾನ ಬದಲಾವಣೆಯಿಂದಾಗಿ ವಿಶ್ವದ ಆರ್ಥಿಕತೆ ಕೂಡ ತಗ್ಗುತ್ತಿದೆ(Global GDP). ಸಿಒಪಿ28 (COP28) ಸಮಾವೇಶವು ಮುಂದಿರುವಂತೆ ಬಿಡುಗಡೆಯಾಗಿರುವ ಈ ವರದಿಯು ಸಾಕಷ್ಟು ಆತಂಕಕ್ಕೂ ಕಾರಣವಾಗಿದೆ. ಡೆಲವೇರ್ ವಿಶ್ವವಿದ್ಯಾನಿಲಯದ ವರದಿಯು ಮಾನವ ಪ್ರೇರಿತ ಹವಾಮಾನ ಬದಲಾವಣೆಯ ಪರಿಣಾಮಗಳು ಕಳೆದ ವರ್ಷ ಜಾಗತಿಕ ಆರ್ಥಿಕ ಉತ್ಪಾದನೆಯಿಂದ ಶೇಕಡಾ 6.3 ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಿದೆ. ದುಬೈನಲ್ಲಿ (Dubai) ಗುರುವಾರದಿಂದ ಸಿಒಪಿ28 ಸಭೆ ನಡೆಯಲಿದೆ.
ಈ ವರದಿಯ ಅಂಕಿ ಅಂಶಗಳು ಹವಾಮಾನ ಬದಲಾವಣೆಯ ನೇರ ಪರಿಣಾಮಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಕೃಷಿ ಮತ್ತು ಉತ್ಪಾದನೆಗೆ ಅಡೆತಡೆಗಳು ಮತ್ತು ಹೆಚುತ್ತಿರುವ ತಾಪಮಾನದಿಂದಾಗಿ ಉತ್ಪಾದಕತೆ ಮೇಲೆ ದುಷ್ಪರಿಣಾಮ, ಹಾಗೆಯೇ ವಿವಿಧ ದೇಶಗಳ ಜಾಗತಿಕ ವ್ಯಾಪಾರ ಮತ್ತು ಹೂಡಿಕೆಗಳ ಮೇಲೂ ಪರಿಣಾಮ ಬೀರುತ್ತಿವೆ.
ಹವಾಮಾನ ಬದಲಾವಣೆಯಿಂದಾಗಿ ಪ್ರಪಂಚವು ಲಕ್ಷಾಂತರ ಕೋಟಿ ನಷ್ಟವನ್ನು ಅನುಭವಿಸುತ್ತಿದೆ. ಇದರ ಹೆಚ್ಚಿನ ಹೊರೆ ಬಡ ದೇಶಗಳ ಮೇಲೆ ಬಿದ್ದಿದೆ ಎಂದು ಡೆಲವೇರ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಜೇಮ್ಸ್ ರೈಸಿಂಗ್ ಹೇಳಿದ್ದಾರೆ. ಈ ಮಾಹಿತಿಯು ಇಂದು ಅನೇಕ ದೇಶಗಳು ಈಗಾಗಲೇ ಎದುರಿಸುತ್ತಿರುವ ಸವಾಲುಗಳನ್ನು ಮತ್ತು ಅವುಗಳನ್ನು ಪರಿಹರಿಸಲು ತುರ್ತಾಗಿ ಅಗತ್ಯವಿರುವ ಬೆಂಬಲವನ್ನು ಸ್ಪಷ್ಟಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದರು.
ಸರಾಸರಿ ವ್ಯಕ್ತಿಯಿಂದ ಉಂಟಾಗುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಲೆಕ್ಕ ಹಾಕಿದಾಗ 2022ರಲ್ಲಿ ಜಾಗತಿಕ ಜಿಡಿಪಿಯ ನಷ್ಟವು ಜಿಡಿಪಿಯ 1.8 ಪ್ರತಿಶತ ಅಥವಾ ಸುಮಾರು 1.5 ಟ್ರಿಲಿಯನ್ ಡಾಲರ್ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆ ಎರಡು ಸಂಖ್ಯೆಗಳ ನಡುವಿನ ವ್ಯತ್ಯಾಸವು ಪರಿಣಾಮಗಳ ಅಸಮಾನ ವಿತರಣೆಯನ್ನು ಪ್ರತಿಬಿಂಬಿಸುತ್ತದೆ, ಇದು ಕಡಿಮೆ-ಆದಾಯದ ದೇಶಗಳು ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಎಂದು ತಿಳಿಸಲಾಗಿದೆ.
ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು, ಹೆಚ್ಚಿನ ಜನಸಂಖ್ಯೆ ಇರುವ ದೇಶಗಳು ಶೇ.8.3ರಷ್ಟು ಜಿಡಿಪಿ ನಷ್ಟವನ್ನು ಅನುಭವಿಸಿವೆ. ವಿಶೇಷವಾಗಿ ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕ್ರಮವಾಗಿ ಈ ಪ್ರದೇಶಗಳ ರಾಷ್ಟ್ರಗಳು ಅವುಗಳ ಜಿಡಿಪಿಯ ಶೇ.14. ಮತ್ತು ಶೇ.11.2ರಷ್ಟು ನಷ್ಟ ಅನುಭವಿಸಿವೆ. ಆದರೆ, ಮತ್ತೊಂದೆಡೆ ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೆಚ್ಚಿನ ಲಾಭವನ್ನು ಮಾಡಿಕೊಂಡಿವೆ. ಕಳೆದ ವರ್ಷದ ಜಿಡಿಪಿಯಲ್ಲಿ ಯುರೋಪಿಯನ್ ರಾಷ್ಟ್ರಗಳು ಶೇ.5ರಷ್ಟು ಲಾಭಪಡೆದುಕೊಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಈಜಿಪ್ಟ್‌ನಲ್ಲಿ ನಡೆದ ಜಿಒಪಿ27 ಮಾತುಕತೆಯಲ್ಲಿ, ಹವಾಮಾನ ವಿಪತ್ತುಗಳು ಮತ್ತು ವಿಪರೀತ ಹವಾಮಾನದಿಂದ ಆಗು ನಷ್ಟವನ್ನು ನಿಭಾಯಿಸಲು ದುರ್ಬಲ ದೇಶಗಳಿಗೆ ಸಹಾಯ ಮಾಡಲು ಮೀಸಲಾದ ನಿಧಿಯನ್ನು ಸ್ಥಾಪಿಸಲು ರಾಷ್ಟ್ರಗಳು ಒಪ್ಪಿಕೊಂಡಿದ್ದವು. ಹಾಗಾಗಿ, ಈಗ ನಡೆಯಲಿರುವ ಸಿಒಪಿ28 ಮೀಟಿಂಗ್‌ನಲ್ಲಿ ಯಾರು ಎಷ್ಟು ನಿಧಿಯನ್ನು ನೀಡಲಿದ್ದಾರೆ ಎಂಬ ಚರ್ಚೆಯಾಗಲಿದೆ. ಗುರವಾರದಿಂದ ದುಬೈನಲ್ಲಿ ಸಿಒಪಿ28 ಶುರುವಾಗಲಿದೆ.
ಈ ಸುದ್ದಿಯನ್ನೂ ಓದಿ: Warmest February: 122 ವರ್ಷದಲ್ಲೇ ದಾಖಲೆಯಲ್ಲಿ ‘ಬಿಸಿ’ಯಾದ ಫೆಬ್ರವರಿ! ಹವಾಮಾನ ಬದಲಾವಣೆ ಎಫೆಕ್ಟ್?