Site icon Vistara News

Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

Dubai Airport

ನವದೆಹಲಿ: 2.92 ಲಕ್ಷ ಕೋಟಿ ರೂಪಾಯಿ (35 ಬಿಲಿಯನ್ ಡಾಲರ್) ವೆಚ್ಚದಲ್ಲಿ 400 ಗೇಟ್ ಗಳು ಮತ್ತು ಐದು ಸಮಾನಾಂತರ ರನ್ ವೇಗಳಿರುವ ವಿಶ್ವದ ಅತ್ಯಂತ ದೊಡ್ಡ ಏರ್​ಪೋರ್ಟ್​​ ನಿರ್ಮಾಣ (Dubai Airport) ಮಾಡುವುದಾಗಿ ದುಬೈ ಆಡಳಿತ ಭಾನುವಾರ ಪ್ರಕಟಿಸಿದೆ. ಅದಕ್ಕೆ ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಎಂದು ಹೆಸರಿಡುವುದಾಗಿ ಹೇಳಿದೆ.

“ಇಂದು, ನಾವು ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್​ಗಳ ವಿನ್ಯಾಸಗಳನ್ನು ಅನುಮೋದಿಸಿದ್ದೇವೆ. ದುಬೈ ಏವಿಯೇಷನ್ ಕಾರ್ಪೊರೇಷನ್​​ನ ಕಾರ್ಯತಂತ್ರದ ಭಾಗವಾಗಿ 128 ಬಿಲಿಯನ್ ಡಾಲರ್ ವೆಚ್ಚದಲ್ಲಿ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ” ಎಂದು ದುಬೈ ಆಡಳಿತಗಾರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಪ್ರಕಟಿಸಿದ್ದಾರೆ.

“ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿರುತ್ತದೆ, 2.6 ಕೋಟಿ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲಿದೆ. ಇದು ಪ್ರಸ್ತುತ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ. ಮುಂಬರುವ ವರ್ಷಗಳಲ್ಲಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎಲ್ಲಾ ಕಾರ್ಯಾಚರಣೆಗಳನ್ನು ಅದಕ್ಕೆ ವರ್ಗಾಯಿಸಲಾಗುವುದು” ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಈ ವಿಮಾನ ನಿಲ್ದಾಣ ವಿಶ್ವದ ಅತಿ ದೊಡ್ಡ ನಿಲ್ದಾಣವಾಗುವ ವೇಳೆ ಅಲ್ಲಿ ಇರಬಹುದಾದ ಕೆಲವೊಂದು ಸೌಲಭ್ಯಗಳು ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಆ ಕುರಿತು ಇಲ್ಲಿದೆ ಸಂಕ್ಷಿಪ್ತ ವಿವರ ಇಲ್ಲಿದೆ.

ಸಾಮರ್ಥ್ಯ ಎಷ್ಟು?


ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಹೆಚ್ಚು ಸಾಮರ್ಥ್ಯ ಹೊಂದಿರುವ ವಿಮಾನ ನಿಲ್ದಾಣವಾಗಲಿದೆ. ವಾರ್ಷಿಕವಾಗಿ 2.6 ಕೋಟಿ (260 ಮಿಲಿಯನ್) ಪ್ರಯಾಣಿಕರು ಈ ವಿಮಾನದ ಮೂಲಕ ಪ್ರಯಾಣ ಮಾಡಲಿದ್ದಾರೆ.

ಗಾತ್ರ ಎಷ್ಟು?
ಇದು ಪ್ರಸ್ತುತ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ.

ಮೂಲಸೌಕರ್ಯ ಹೇಗಿರುತ್ತದೆ?

ವಿಮಾನಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣವು 400 ವಿಮಾನ ಗೇಟ್ ಗಳನ್ನು ಹೊಂದಿರುತ್ತದೆ. ಏಕಕಾಲಕ್ಕೆ ಇಲ್ಲಿ ಅಷ್ಟೊಂದು ವಿಮಾನಗಳು ಪ್ರವೇಶಿಸಬಹುದು.

ರನ್ ವೇಗಳು ಎಷ್ಟು?

ವಿಮಾನಗಳ ಸಂಚಾರವನ್ನು ಸಮರ್ಥವಾಗಿ ನಿರ್ವಹಿಸಲು ಇದು ಐದು ಸಮಾನಾಂತರ ರನ್ ವೇಗಳನ್ನು ಹೊಂದಿರುತ್ತದೆ. ಒಂದೇ ಬದಿಯಲ್ಲಿ ಅಷ್ಟೊಂದು ವಿಮಾನಗಳು ಏಕಕಾಲಕ್ಕೆ ಟೇಕ್​ಆಫ್​ ಅಥವಾ ಲ್ಯಾಂಡಿಂಗ್ ಆಗಬಹುದು.

ಹೊಸತೇನು?

ಈ ವಿಮಾನ ನಿಲ್ದಾಣದಲಲಿ ಹೊಸ ವಾಯುಯಾನ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ ಎಂದು ಅವರು ಹೇಳದಿ್ದಾರೆ. ಇದು ವಾಯುಯಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಎಂದು ಹೇಲಾಗಿದೆ.

ವೆಚ್ಚ ಎಷ್ಟು?

ಈ ಯೋಜನೆಗೆ ಸುಮಾರು 2.9 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ.

ಮುಗಿಯುವುದು ಯಾವಾಗ?

ವರ್ಷಕ್ಕೆ 150 ಮಿಲಿಯನ್ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಮೊದಲ ಹಂತವು 10 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಮುಂದುವರಿದ ಭಾಗವು ಆ ಬಳಿಕ ಸಾಗಲಿದೆ.

ಇದನ್ನೂ ಓದಿ: Pro-Khalistan slogan : ಕೆನಡಾ ಪ್ರಧಾನಿ ಟ್ರುಡೊ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ!

ಲಾಜಿಸ್ಟಿಕ್ಸ್ ಮತ್ತು ವಾಯು ಸಾರಿಗೆ ಕ್ಷೇತ್ರಗಳಲ್ಲಿ ವಿಶ್ವದ ಪ್ರಮುಖ ಕಂಪನಿಗಳಿಗೆ ಆತಿಥ್ಯ ವಹಿಸುವ “ದುಬೈ ದಕ್ಷಿಣದ ವಿಮಾನ ನಿಲ್ದಾಣದ ಸುತ್ತಲೂ” ಅವರು ಇಡೀ ನಗರವನ್ನು ನಿರ್ಮಿಸುತ್ತಿದ್ದಾರೆ. ಒಂದು ಮಿಲಿಯನ್ ಜನರಿಗೆ ಉಳಿದುಕೊಳ್ಳುವುದಕ್ಕೂ ಅವಕಾಶ ಮಾಡಿಕೊಡುತ್ತೇವೆ ಎಂದು ಆಡಳಿತಗಾರ ಹೇಳಿದ್ದರೆ.

“ನಾವು ಭವಿಷ್ಯದ ಪೀಳಿಗೆಗಾಗಿ ಹೊಸ ಯೋಜನೆಯನ್ನು ನಿರ್ಮಿಸುತ್ತಿದ್ದೇವೆ ನಮ್ಮ ಮಕ್ಕಳು ಮತ್ತು ಅವರ ಮಕ್ಕಳಿಗೆ ನಿರಂತರ ಮತ್ತು ಸ್ಥಿರ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತಿದ್ದೇವೆ. ದುಬೈ ವಿಶ್ವದ ವಿಮಾನ ನಿಲ್ದಾಣ, ಅದರ ಬಂದರು, ಅದರ ನಗರ ಕೇಂದ್ರ ಮತ್ತು ಅದರ ಹೊಸ ಜಾಗತಿಕ ಕೇಂದ್ರವಾಗಲಿದೆ.

Exit mobile version