Site icon Vistara News

Paytm: ನಾಳೆಯಿಂದ ಪೇಟಿಎಂಗೆ ನಿರ್ಬಂಧ; ನಿಮ್ಮ ಆ್ಯಪ್‌ನಲ್ಲಿ ಏನಿರತ್ತೆ? ಏನಿರಲ್ಲ?

Paytm

What's working and what next for Paytm Payments Bank? Here You Need To Know

ನವದೆಹಲಿ: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ (Paytm Payments Bank) ಆರ್‌ಬಿಐ (RBI) ನಿರ್ಬಂಧ ಹೇರಿದ್ದು, ಶುಕ್ರವಾರದಿಂದಲೇ (ಮಾರ್ಚ್‌ 15) ನಿರ್ಬಂಧ ಜಾರಿಗೆ ಬರಲಿದೆ. ನಿರ್ಬಂಧದಿಂದಾಗಿ ಪೇಟಿಎಂ (Paytm) ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದೆ. ಇನ್ನು, ಶುಕ್ರವಾರದಿಂದ ನಿರ್ಬಂಧ ಜಾರಿಯಾದರೆ ಪೇಟಿಎಂ ಗ್ರಾಹಕರಿಗೆ, ಫಾಸ್ಟ್‌ಟ್ಯಾಗ್‌ ಅಳವಡಿಸಿಕೊಂಡವರಿಗೆ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಹಾಗಾದರೆ, ಪೇಟಿಎಂ ಆ್ಯಪ್‌ ಹೊಂದಿರುವವರಿಗೆ ಯಾವೆಲ್ಲ ಸೇವೆ ಲಭ್ಯವಿರುವುದಿಲ್ಲ? ಯಾವೆಲ್ಲ ಸೌಲಭ್ಯಗಳು ಸಿಗಲಿವೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸೇವಿಂಗ್ಸ್‌ ಖಾತೆಯಲ್ಲಿರುವ ಹಣದ ಗತಿ ಏನು?

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಖಾತೆದಾರರು ತಮ್ಮ ಖಾತೆಯಲ್ಲಿ ಹಣ ಉಳಿದಿದ್ದರೆ ಮಾರ್ಚ್‌ 15ರ ನಂತರವೂ ಹಲವು ರೀತಿಯಲ್ಲಿ ಆ ಹಣವನ್ನು ಬಳಸಬಹುದಾಗಿದೆ. ಫಾಸ್ಟ್‌ಟ್ಯಾಗ್‌, ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (NCMC) ಖಾತೆಗಳ ವ್ಯಾಲೆಟ್‌ಗಳ ಮೂಲಕ ಸೇವಿಂಗ್ಸ್‌ ಖಾತೆಯಲ್ಲಿ ಉಳಿದಿರುವ ಹಣವನ್ನು ವ್ಯಯಿಸಬಹುದಾಗಿದೆ.

ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು

ಇದನ್ನೂ ಓದಿ: ಪೇಟಿಎಂ ನಿರ್ಬಂಧ; ಫಾಸ್ಟ್‌ಟ್ಯಾಗ್‌ಗೆ ನಾಳೆಯೊಳಗೆ ಮೊದಲು ಈ ಕೆಲಸ ಮಾಡಿ

ಆರ್‌ಬಿಐ ನಿರ್ಬಂಧ ಏಕೆ?

ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಆರ್‌ಬಿಐ ನಿರ್ಬಂಧ ಹೇರಿದೆ. ಒಂದೇ ಒಂದು ಪರ್ಮನೆಂಟ್​​ ಅಕೌಂಟ್​ ನಂಬರ್​ (ಪ್ಯಾನ್) ಮೂಲಕ 1,000 ಕ್ಕೂ ಹೆಚ್ಚು ಖಾತೆಗಳನ್ನು ಲಿಂಕ್ ಮಾಡಿರುವುದು ಕಂಡುಬಂದಿದೆ. ಆರ್​​ಬಿಐ ಮತ್ತು ಲೆಕ್ಕಪರಿಶೋಧಕರು ನಡೆಸಿದ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಬ್ಯಾಂಕ್ ಸಲ್ಲಿಸಿದ ಮಾಹಿತಿ ತಪ್ಪಾಗಿದೆ ಎಂದು ತಿಳಿದುಬಂದಿತ್ತು. ಕೆಲವು ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿರಬಹುದು ಎಂದು ಆರ್​​ಬಿಐ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವುದರ ಜೊತೆಗೆ, ಆರ್​​ಬಿಐ ತನ್ನ ಸಂಶೋಧನೆಗಳನ್ನು ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಕಳುಹಿಸಿದೆ. ಇದಾದ ಬಳಿಕ ವಹಿವಾಟಿಗೆ ನಿರ್ಬಂಧ ಹೇರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version