Site icon Vistara News

Mens Winter Fashion: ಚಳಿಗಾಲದ ಮೆನ್ಸ್ ಲೇಯರ್‌ ಲುಕ್‌ಗೆ 3 ಮಿಕ್ಸ್‌ ಮ್ಯಾಚ್‌ ಸ್ಟೈಲಿಂಗ್‌ ರೂಲ್ಸ್

Mens Winter Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಪುರುಷರು ಲೇಯರ್‌ ಲುಕ್‌ನಲ್ಲೂ (Mens Winter Fashion) ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೆಂದಲ್ಲಿ ಒಂದಿಷ್ಟು ಮಿಕ್ಸ್‌ ಮ್ಯಾಚ್‌ ಸ್ಟೈಲಿಂಗ್‌ ರೂಲ್ಸ್ ಫಾಲೋ ಮಾಡಬೇಕು. ಧರಿಸುವಾಗ ಟ್ರೆಂಡಿ ಶೇಡ್ಸ್‌ ಆಯ್ಕೆ ಮತ್ತು ಸೂಕ್ತ ಉಡುಪಿನ ಸೆಲೆಕ್ಷನ್‌ ಮಾಡಿದಲ್ಲಿ, ನಿರಾಂತಕವಾಗಿ ಹ್ಯಾಂಡ್‌ಸಮ್‌ ಆಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. “ಇನ್ನು ಚಳಿಗಾಲದ ಫ್ಯಾಷನ್‌ನಲ್ಲಿ ಲೇಯರ್‌ ಲುಕ್‌ಗೆಬ (Mens Winter Fashion) ಅಗ್ರಸ್ಥಾನ. ಯುವತಿಯರು ಮಾತ್ರವಲ್ಲ, ಯುವಕರು ಕೂಡ ಚಳಿ-ಗಾಳಿಗೆ ಲೇಯರ್‌ ಲುಕ್‌ ಅಳವಡಿಸಿಕೊಳ್ಳಬೇಕಾಗುತ್ತದೆ. ಸಿಂಪಲ್ಲಾಗಿ ಈ ಸೀಸನ್‌ಗೆ ಒಪ್ಪುವಂತೆ ಹೇಗೆಲ್ಲಾ ಕಾಣಿಸಿಕೊಳ್ಳಬಹುದು” ಎಂಬುದರ ಬಗ್ಗೆ ಸ್ಟೈಲಿಸ್ಟ್‌ ಯಶ್‌ ರಾಮ್‌ ಸಿಂಪಲ್ಲಾಗಿ ತಿಳಿಸಿದ್ದಾರೆ.

ಸರಿಯಾಗಿ ಮಿಕ್ಸ್‌ –ಮ್ಯಾಚ್‌ ಮಾಡಿ

ಯಾವುದೋ ಉಡುಪಿಗೆ ಇನ್ಯಾವುದೋ ಶೇಡ್‌ ಮಿಕ್ಸ್‌ ಮ್ಯಾಚ್‌ ಮಾಡುವುದು ನಾಟ್‌ ಓಕೆ. ಪುರುಷರು ಅವರ ಉದ್ಯೋಗ ಹಾಗೂ ಅವರು ಕೆಲಸ ಮಾಡುವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅದಕ್ಕೆ ಪೂರಕವಾಗುವಂತೆ ಔಟ್‌ಫಿಟ್‌ ಮಿಕ್ಸ್‌ ಮ್ಯಾಚ್‌ ಮಾಡಬೇಕು. ಉದಾಹರಣೆಗೆ., ಟೀಚರ್‌, ಪ್ರೊಫೆಸರ್‌ ಹಾಗೂ ಸರಕಾರಿ ನೌಕರರಾದಲ್ಲಿ ಫಂಕಿ ಲುಕ್‌ ಮಾಡಕೂಡದು. ಬದಲಿಗೆ ಡೀಸೆಂಟ್‌ ಫುಲ್‌ ಸ್ಲೀವ್‌ ಶರ್ಟ್, ಫಾರ್ಮಲ್‌ ಪ್ಯಾಂಟ್‌ ಅದಕ್ಕೆ ಹೊಂದುವಂತಹ ಹಾಫ್‌ ಸ್ವೆಟರ್ ಧರಿಸಬಹುದು. ಇನ್ನು ಕಾಲೇಜು ಹುಡುಗರಾದಲ್ಲಿ ಫಂಕಿ ಲುಕ್‌ ನೀಡುವ ವೈಬ್ರೆಂಟ್‌ ಶೇಡ್ಸ್ನ ಔಟ್‌ಫಿಟ್‌ ಮಿಕ್ಸ್‌ ಮ್ಯಾಚ್‌ ಮಾಡಬಹುದು.

ಜಾಕೆಟ್‌-ಕೋಟ್‌ ಮಿಕ್ಸ್‌ ಮ್ಯಾಚ್‌ ಹೀಗೆ

ಯಾವುದೇ ಪ್ಯಾಂಟ್‌ ಶರ್ಟ್ ಮೇಲೆ ಜಾಕೆಟ್‌ ಧರಿಸುವುದಾದಲ್ಲಿ ಮೊದಲಿಗೆ ಅದರ ಡಿಸೈನ್‌ ನೋಡಿ. ಡಿಸೆಂಟ್‌ ಲುಕ್‌ ಇದ್ದಲ್ಲಿ ಫಾರ್ಮಲ್‌ ಜೊತೆಗೆ ಧರಿಸಬಹುದು. ಫಂಕಿ ಜಾಕೆಟ್‌ ಆದಲ್ಲಿ ಜೀನ್ಸ್ ಪ್ಯಾಂಟ್‌ ಜೊತೆ ಧರಿಸಬಹುದು. ಇನ್ನು ವೃತ್ತಿಪರರು ಆದಷ್ಟೂ ಕೋಟ್‌ಗಳ ಆಯ್ಕೆ ಮಾಡುವುದು ಸೂಕ್ತ. ಅದರಲ್ಲೂ ಡಿಸೆಂಟ್‌ ಲುಕ್‌ ನೀಡುವ ಬ್ರೌನ್‌, ಬ್ಲ್ಯೂ ಹಾಗೂ ಬ್ಲಾಕ್‌ ಕಲರ್‌ ಆಯ್ಕೆ ಮಾಡಬೇಕು. ಇನ್ನು ಕಾಲೇಜು ಹುಡುಗರಿಗೆ ಡೆನೀಮ್‌ ಜಾಕೆಟ್‌ ಓಕೆ. ವೈಬ್ರೆಂಟ್‌ ಶೇಡ್‌ನವು ಓಕೆ. ಮಧ್ಯವಯಸ್ಕರಿಗೆ ಲಾಂಗ್‌ ಜಾಕೆಟ್ಸ್ ಬೆಸ್ಟ್.

ಸ್ವೆಟರ್‌ – ಪುಲ್‌ಓವರ್ಸ್

ಸ್ವೆಟರ್‌ ಧರಿಸಲು ಬಯಸುವ ಪುರುಷರು ಆದಷ್ಟೂ ತಮ್ಮ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಬೇಕು. ಯುವಕರಿಗೆ ಯಾವುದೇ ಸ್ಟೈಲ್‌ನದ್ದಾದರೂ ಸರಿ. ಆದರೆ, ವೃತ್ತಿಪರರು ಮಾತ್ರ ಸಾದಾ ಇಲ್ಲವೇ ಸ್ಟ್ರೈಪ್ಸ್‌ನ ಸ್ವೆಟರ್‌ ಧರಿಸಬಹುದು. ಒಳಗೆ ತೆಳುವಾದ ಶರ್ಟ್ ಅಥವಾ ಟೀ ಶರ್ಟ್ ಧರಿಸುವುದು ಸೂಕ್ತ. ಇನ್ನು ಪುಲ್‌ಓವರ್ಸ್, ವೀಕೆಂಡ್‌ ಅಥವಾ ಹಾಲಿಡೇ ಟ್ರಾವೆಲ್‌ಗೆ ಬೆಸ್ಟ್‌ ಅಪ್ಷನ್‌.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Mens Fashion: ಸೀಸನ್‌ ಎಂಡ್‌ನಲ್ಲಿ ಮೆನ್ಸ್ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಲಿನನ್‌ ಶರ್ಟ್ ಜಾಕೆಟ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version