ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ಯಾಲೆಂಟೈನ್ಸ್ ಡೇ ಪಾರ್ಟಿವೇರ್ ಫ್ಯಾಷನ್‌ನಲ್ಲಿ (Galentine’s day Partywears) ಇದೀಗ ಬಿಂದಾಸ್ ಲುಕ್ ನೀಡುವ ಫ್ಯಾಷನ್‌ವೇರ್‌ಗಳು ಟ್ರೆಂಡಿಯಾಗಿವೆ. ಅವುಗಳಲ್ಲಿ 3 ಶೈಲಿಯ ಫ್ಯಾಷನ್‌ವೇರ್‌ಗಳಿಗೆ ಆದ್ಯತೆ ಹೆಚ್ಚಾಗಿದೆ.
ಗ್ಯಾಲೆಂಟೈನ್ಸ್ ಡೇ ಉಡುಪುಗಳಿವು
“ವ್ಯಾಲೆಂಟೈನ್ಸ್ ಡೇ ಹಿಂದಿನ ದಿನ ಅಥವಾ ಪ್ರೇಮಿಗಳ ದಿನಾಚರಣೆಯ ವೀಕ್‌ನಲ್ಲಿ, ಯಾವುದೇ ದಿನ ಆಚರಿಸಬಹುದಾದ ಗ್ಯಾಲೆಂಟೈನ್ಸ್ ಡೇಯಂದು ಹುಡುಗಿಯರು, ಯುವತಿಯರು ಹಾಗೂ ಮಹಿಳೆಯರು ಬಿಂದಾಸ್ ಪಾರ್ಟಿ ಮಾಡುತ್ತಾರೆ. ಬಿಂದಾಸ್ ಪಾರ್ಟಿವೇರ್ ಲುಕ್‌ಗೆ ಸೈ ಎನ್ನುತ್ತಾರೆ. ಅದರಲ್ಲೂ ಗ್ಲಾಮರಸ್ ಪಾರ್ಟಿವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಪಾರ್ಟಿಯಲ್ಲಿ ಬಿಂದಾಸ್ ಆಗಿ ಕಾಣಿಸಿಕೊಳ್ಳಲು ಲೆಕ್ಕವಿಲ್ಲದಷ್ಟು ಬಗೆಯ ಔಟ್‌ಫಿಟ್‌ಗಳು ಬಂದಿವೆ. ಆಯಾ ಫಿಮೇಲ್ ಗ್ರೂಪ್‌ಗೆ ತಕ್ಕಂತೆ ಡ್ರೆಸ್‌ಕೋಡ್ ಅಥವಾ ಪಾರ್ಟಿವೇರ್ ಧರಿಸುವುದು ನಿರ್ಧಾರವಾಗಿರುತ್ತದೆ. ಇದಕ್ಕೆ ಪೂರಕ ಎಂಬಂತೆ, ಈ ಸೀಸನ್‌ಗೆ ತಕ್ಕಂತೆ 3 ಬಗೆಯವು ಹೆಚ್ಚು ಟ್ರೆಂಡ್‌ನಲ್ಲಿ ರನ್ನಿಂಗ್‌ನಲ್ಲಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್. ಅವರ ಪ್ರಕಾರ, ಥೀಮ್‌ಗೆ ತಕ್ಕಂತೆ ಧರಿಸುವ ಸ್ಟೈಲಿಂಗ್‌ನಲ್ಲಿ ಬದಲಾವಣೆಯಾಗುತ್ತದೆ ಅಷ್ಟೇ! ಎನ್ನುತ್ತಾರೆ.
ಶೈನಿಂಗ್ ಸ್ಟ್ರಾಪ್ ಸ್ಲಿಟ್ ಬಾಡಿಕಾನ್ ಡ್ರೆಸ್
ಬಿಂದಾಸ್ ಲುಕ್ ನೀಡುವ ಶಿಮ್ಮರ್ ಇರುವಂತಹ ಶೈನಿಂಗ್ ಸ್ಟ್ರಾಪ್ ಸ್ಲಿಟ್ ಬಾಡಿಕಾನ್ ಡ್ರೆಸ್‌ಗಳು ಗ್ಯಾಲೆಂಟೈನ್ಸ್ ಡೇ ಹುಡುಗಿಯರಿಗಾಗಿ ಹೇಳಿ ಮಾಡಿಸಿದಂತಹ ಔಟ್‌ಫಿಟ್. ಇವುಗಳಲ್ಲೇ ನಾನಾ ಬಗೆಯವು ಟ್ರೆಂಡಿಯಾಗಿವೆ. ಗ್ರೂಪ್‌ನಲ್ಲೂ ಕೂಡ ಹುಡುಗಿಯರು ಇವನ್ನು ಧರಿಸುವುದು ಸಾಮಾನ್ಯವಾಗಿದೆ. ಇವು ಬಿಂದಾಸ್ ಲುಕ್ ನೀಡುತ್ತವೆ.
ಶಿಮ್ಮರ್ ಔಟ್‌ಫಿಟ್ಸ್
ಶಿಮ್ಮರ್ ಟಾಪ್‌ಗೆ ಸಾದಾ ಡಂಗ್ರೀಸ್ ಅಥವಾ ಶಾಟ್ರ್ಸ್, ಶಿಮ್ಮರ್ ಕೋ ಆರ್ಡ್ ಸೆಟ್, ರಾಂಪರ್, ಫ್ರಾಕ್, ಶೋಲ್ಡರ್‌ಲೆಸ್ ಡ್ರೆಸ್ ಹೀಗೆ ನಾನಾ ಬಗೆಯ ಶಿಮ್ಮರ್ ಔಟ್‌ಫಿಟ್ಸ್‌ಗಳು ಈ ಗ್ಯಾಲೆಂಟೈನ್ಸ್ ಡೇಯಲ್ಲಿ ಹುಡುಗಿಯರನ್ನು ಮಿನುಗುಸುತ್ತಿವೆ. ಕಲರ್‌ಫುಲ್ ಪ್ಯಾಟರ್ನ್‌ಗಳು ಹುಡುಗಿಯರ ಗ್ಯಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ.
ವೆಸ್ಟರ್ನ್ ಬಿಂದಾಸ್ ಫ್ರಾಕ್ಸ್
ಕ್ಯಾಶುವಲ್ ವೇರ್ ಲಿಸ್ಟ್‌ನಲ್ಲಿ ಬರುವ ನಾನಾ ಬಗೆಯ ವೆಸ್ಟರ್ನ್ ಲುಕ್ ನೀಡುವ ಫ್ರಾಕ್‌ಗಳು ಹುಡುಗಿಯರನ್ನು ಆವರಿಸಿಕೊಂಡಿವೆ. ನೋಡಲು ಯಂಗ್ ಲುಕ್ ನೀಡುವ ಇವು ಪ್ರಿಂಟೆಡ್‌ನಲ್ಲಿ ಲೈವ್ಲಿಯಾಗಿಸಿವೆ. ಯುವತಿಯರನ್ನು ಪಾರ್ಟಿ ಲುಕ್‌ನಲ್ಲೂ ಸಿಂಪಲ್ ಆಗಿಸಿವೆ. ಗ್ಲಾಮಸರ್ ನೆಕ್‌ಲೈನ್‌ನವು, ಸ್ಲೀವ್ ಡಿಸೈನ್‌ನವು ಆಕರ್ಷಕವಾಗಿ ಬಿಂಬಿಸುತ್ತಿವೆ. ಹೆಚ್ಚು ಶೈನಿಂಗ್ ಬೇಡ ಎನ್ನುವವರು ಈ ಡಿಸೈನ್ ಫ್ರಾಕ್‌ಗಳಿಗೆ ಮೊರೆ ಹೋಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Red Saree Fashion: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ರೆಡ್ ಸೀರೆ ಹಂಗಾಮ!