ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ವೆಡ್ಡಿಂಗ್ ಗ್ರ್ಯಾಂಡ್ ಜ್ಯುವೆಲ್ (Wedding Jewel Fashion) ಫ್ಯಾಷನ್ನಲ್ಲಿ ಮುತ್ತಿನ ಮೂಗುತಿಗಳು ಟಾಪ್ ಲಿಸ್ಟ್ನಲ್ಲಿವೆ. ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಗ್ರ್ಯಾಂಡ್ ಲುಕ್ ಜೊತೆಗೆ ರಾಯಲ್ ಲುಕ್ ನೀಡುತ್ತವೆ. ಬ್ರೈಡಲ್ ಜ್ಯುವೆಲ್ನಲ್ಲಿ ಮಾತ್ರವಲ್ಲ, ಗ್ರ್ಯಾಂಡ್ ಲುಕ್ ಬಯಸುವ ಯುವತಿಯರ ಮುಖವನ್ನು ಸಿಂಗರಿಸುತ್ತಿವೆ. ಹಾಫ್ ವೈಟ್, ಕ್ರೀಮ್, ಮಿಲ್ಕಿ ವೈಟ್ ಮುತ್ತಿನ ಮೂಗುತಿಗಳು ಚಾಲ್ತಿಯಲ್ಲಿವೆ.
ಜವೇರಿ ಪರ್ಲ್ ಮೂಗುತಿಗಳು
ಇದೀಗ ಗ್ರ್ಯಾಂಡ್ ಲುಕ್ ನೀಡುವ ಪರ್ಲ್ ಜರ್ಕೋನಿ ವೆಡ್ಡಿಂಗ್ ಕಲೆಕ್ಷನ್ಗಳು ಇದೀಗ ಸಖತ್ ಟ್ರೆಂಡಿಯಾಗಿವೆ. ತಮ್ಮ ಸಂಪ್ರದಾಯದ ರಿವಾಜಿನಲ್ಲಿ ಇಂತಹ ಮೂಗುತಿಗಳನ್ನು ಧರಿಸುವ ಪರಿಪಾಠ ಇಲ್ಲದಿದ್ದರೂ ಕೂಡ ಫೋಟೋಶೂಟ್ ಹಾಗೂ ಗ್ರ್ಯಾಂಡ್ ಲುಕ್ಗಾಗಿ ಇಂತವನ್ನು ಧರಿಸುವುದು ಹೆಚ್ಚಾಗಿದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ಗಳು. ಅವರ ಪ್ರಕಾರ, ಇವು ಮುಖದಲ್ಲಿ ಇವು ಎದ್ದು ಕಾಣುತ್ತವೆ.
ಪರ್ಲ್ ನೋಸ್ ಹೂಪ್ ರಿಂಗ್
ಪುಟ್ಟ ರಿಂಗ್ನಲ್ಲಿ ಮುತ್ತಿನ ಎಳೆ ಪೊಣಿಸಿದಂತೆ ಕಾಣುವ ಇವು ತೆಳುವಾದ ಬಂಗಾರದ ತಂತಿಯಲ್ಲಿ ಹೂಪ್ನಂತೆ ಸಿದ್ಧಪಡಿಸಲಾಗಿರುತ್ತದೆ. ಮೈಕ್ರೋ ಪರ್ಲ್ ಅಂದರೆ. ತೀರಾ ಚಿಕ್ಕದಾದ ಸೈಝಿನ ಮುತ್ತುಗಳ ನೋಸ್ ಹೂಪ್ ರಿಂಗ್ ಮುತ್ತಿನ ಬ್ರೈಡಲ್ ಸೆಟ್ಗೆ ಮ್ಯಾಚ್ ಆಗುವಂತೆ ಧರಿಸಲಾಗುತ್ತದೆ.
ಪರ್ಲ್ ಸ್ಟಡ್ ಮೂಗುತಿ
ಸಿಂಗಲ್ ಪರ್ಲ್, ಸ್ಟಾರ್ ಶೇಪ್ನ ಪರ್ಲ್ ಮೂಗುತಿ ಹೀಗೆ ನಾನಾ ಸೈಜ್ ಹಾಗೂ ಆಕಾರವಿರುವ ಸ್ಟಡ್ ಪರ್ಲ್ ಮೂಗುತಿಗಳು ಸಿಂಪಲ್ ಲುಕ್ ಜೊತೆಗೆ ಮುಖವನ್ನು ಹೈಲೈಟ್ ಮಾಡುತ್ತವೆ. ಇವು ಬಂಗಾರೇತರ ಮೆಟಲ್ಗಳಲ್ಲೂ ಇವು ಪ್ರಚಲಿತದಲ್ಲಿವೆ.
ಯಾರಿಗೆ ಯಾವುದು ಸೂಕ್ತ?
- ಉದ್ದ ಮೂಗು ಹೊಂದಿರುವವರಿಗೆ ಹೂಪ್ ಪರ್ಲ್ ಮೂಗುತಿಗಳು ಹೊಂದುತ್ತವೆ.
- ಅಗಲ ಮೂಗಿರುವವರಿಗೆ ಹೂಪ್ ಅಥವಾ ರಿಂಗ್ ಶೈಲಿಯ ಪರ್ಲ್ ಮೂಗುತಿಗಳು ಮ್ಯಾಚ್ ಆಗುವುದಿಲ್ಲ.
- ಸ್ಟಡ್ ಪರ್ಲ್ ಮೂಗುತಿಗಳು ಬಹುತೇಕ ಎಲ್ಲಾ ಆಕಾರದ ಮುಖಕ್ಕೆ ಹೊಂದುತ್ತವೆ.
- ಅಗಲವಾದ ಪರ್ಲ್ ಮೂಗುತಿಗಳು ಅಗಲವಾದ ಮುಖಕ್ಕೆ ಓಕೆ.
- ಪುಟ್ಟ ಮುಖದವರಿಗೆ ಟೈನಿ ಪರ್ಲ್ ಮೂಗುತಿ ಬೆಸ್ಟ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಹಾಫ್ & ಹಾಫ್ ಸೀರೆಯ ರಿ ಎಂಟ್ರಿಗೆ ನಾಂದಿ ಹಾಡಿದ ಸಾರಾ ಅಲಿ ಖಾನ್