- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫುಲ್ ಸ್ಲೀವ್ ಸೀರೆ ಬ್ಲೌಸ್‌ಗಳು (Saree Blouse Fashion) ಈ ಚಳಿಗಾಲದಲ್ಲಿ ಕಾಲಿಟ್ಟಿದ್ದು, ಅವುಗಳಲ್ಲಿ 3 ಶೈಲಿಯವು ಟ್ರೆಂಡಿಯಾಗಿವೆ. ಈ ಸೀಸನ್‌ನಲ್ಲಿ ಸೀರೆಗಳೊಂದಿಗೆ ಫುಲ್ ಸ್ಲೀವ್ ಬ್ಲೌಸ್‌ಗಳನ್ನು ಧರಿಸುವುದು ಹೆಚ್ಚಾಗಿದೆ. ಹೊರಗಿನ ಹವಾಮಾನದಲ್ಲಿ ಬೆಚ್ಚಗಿಡುವ ಈ ಬ್ಲೌಸ್‌ಗಳು ಸೀರೆಗಳೊಂದಿಗೆ ಮ್ಯಾಚ್ ಮಾಡುವುದು ಸಾಮಾನ್ಯವಾಗಿದೆ. ಬಗೆಬಗೆಯ ಬ್ಲೌಸ್‌ಗಳು ಚಾಲ್ತಿಯಲ್ಲಿವೆಯಾದರೂ ಅತಿ ಸುಲಭವಾಗಿ ರೆಡಿಮೇಡ್‌ನಲ್ಲಿ ದೊರಕುವ ಅಥವಾ ಹೊಲೆಸಬಹುದಾದ ಬ್ಲೌಸ್‌ಗಳಲ್ಲಿ 3 ಶೈಲಿಯವು ಹೆಚ್ಚು ಪ್ರಚಲಿತದಲ್ಲಿವೆ.
ಪರ್ಸನಾಲಿಟಿಗೆ ತಕ್ಕಂತಿರಲಿ
“ಚಳಿಗಾಲದಲ್ಲಿ ಸೀರೆ ಪ್ರಿಯರು, ಅದರಲ್ಲೂ ಇಂಡೋ-ವೆಸ್ಟರ್ನ್ ಲುಕ್ ನೀಡಲು ಬಯಸುವವರು ಅಥವಾ ಕೊಂಚ ಫ್ಯಾಷನ್ ಲುಕ್ ನೀಡಲು ಇಷ್ಟಪಡುವವರು ಡಿಫರೆಂಟ್ ಲುಕ್ ನೀಡುವ ಸಲುವಾಗಿ ಹಾಗೂ ಸೀಸನ್‌ಗೆ ಹೊಂದುವಂತಹ ಫುಲ್ ಸ್ಲೀವ್ ಸೀರೆ ಬ್ಲೌಸ್‌ಗಳ ಆಯ್ಕೆ ಮಾಡತೊಡಗಿದ್ದಾರೆ. ಇದು ಚಳಿಗಾಲಕ್ಕೆ ಕೈಗಳನ್ನು ಬೆಚ್ಚಗಿಡುವುದರೊಂದಿಗೆ ನೋಡಲು ಕೊಂಚ ಭಿನ್ನ ಲುಕ್ ನೀಡುತ್ತವೆ. ಟೈಲರ್ ಬಳಿಯು ಇವನ್ನು ಹೊಲೆಸಬಹುದು ಅಥವಾ ಇದೀಗ ಶಾಪ್‌ಗಳಲ್ಲೂ ರೆಡಿಮೇಡ್‌ನಲ್ಲಿ ಲಭ್ಯ” ಎನ್ನುತ್ತಾರೆ ಬ್ಲೌಸ್ ಡಿಸೈನರ್ ರಾಜಾ. ಅವರ ಪ್ರಕಾರ, ಅವರವರ ಪರ್ಸನಾಲಿಟಿಗೆ ತಕ್ಕಂತೆ ಡಿಸೈನ್ ಹೊಲೆಸುವುದು ಹಾಗೂ ಆಯ್ಕೆ ಮಾಡುವುದು ಉತ್ತಮ.
ವೆಲ್ವೆಟ್ ಫುಲ್ ಸ್ಲೀವ್ ಬ್ಲೌಸ್
ಇದೀಗ ವೆಲ್ವೆಟ್ ಫ್ಯಾಬ್ರಿಕ್‌ನ ಫುಲ್ ಸ್ಲೀವ್ ಬ್ಲೌಸ್‌ಗಳು ಆಗಮಿಸಿವೆ. ಅದರಲ್ಲೂ ಡಾರ್ಕ್ ಶೇಡ್‌ನವು ಟ್ರೆಂಡಿಯಾಗಿವೆ. ಇನ್ನು ಬ್ಲಾಕ್ ಕಲರ್‌ನವು ಅತಿ ಹೆಚ್ಚು ಟ್ರೆಂಡಿಯಾಗಿವೆ. ಇವನ್ನು ಯಾವ ಸೀರೆಗೆ ಬೇಕಾದರೂ ಮ್ಯಾಚ್ ಮಾಡಬಹುದು. ಬಾರ್ಡರ್ ಸೀರೆಯಿಂದಿಡಿದು ಸಾಮಾನ್ಯ ಸೀರೆಗೂ ಧರಿಸಬಹುದು.
ಶೀರ್ ಡಿಸೈನ್ ಫುಲ್ ಸ್ಲೀವ್ ಬ್ಲೌಸ್
ಪಾರದರ್ಶಕವಾಗಿರುವ ಫ್ಯಾಬ್ರಿಕ್‌ನ ಫುಲ್ ಸ್ಲೀವ್ ಬ್ಲೌಸ್‌ಗಳು ಇದೀಗ ನಾನಾ ಬಗೆಯ ಡಿಸೈನರ್ ಸೀರೆಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ಇವು ಸೀರೆಯೊಂದಿಗೆ ನೋಡಲು ಫ್ಯಾಷೆನಬಲ್ ಆಗಿ ಕಾಣಿಸುತ್ತವೆ. ಸೀರೆಯ ಮ್ಯಾಚಿಂಗ್ ಕೆಲವೊಮ್ಮೆ ಕಾಂಟ್ರಾಸ್ಟ್ ಶೇಡ್‌ನಲ್ಲಿ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣುತ್ತವೆ.
ರೆಡಿಮೇಡ್ ಫುಲ್ ಸ್ಲೀವ್ ಬ್ಲೌಸ್
ರೆಡಿಮೇಡ್ ಫುಲ್ ಸ್ಲೀವ್ ಬ್ಲೌಸ್‌ಗಳು ಇದೀಗ ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿವೆ. ನಾನಾ ವರ್ಣಗಳಲ್ಲಿ ದೊರೆಯುವ ಇವನ್ನು ಮ್ಯಾಚಿಂಗ್ ಸೀರೆಗೆ ತಕ್ಕಂತೆ ಧರಿಸಬಹುದು. ಇವು ಸ್ಟ್ರೆಚಬಲ್ ಫ್ಯಾಬ್ರಿಕ್ ಹೊಂದಿರುವುದರಿಂದ ಒಂದು ಬ್ಲೌಸನ್ನು ಯಾರೂ ಬೇಕಾದರೂ ಧರಿಸಬಹುದು. ನೆಕ್‌ಲೈನ್ ಅಗಲವಾಗಿರುವುದಿಲ್ಲ. ಹಾಗಾಗಿ ಸೀರೆಗೆ ಹೊಂದುವುದೇ ಎಂಬುದನ್ನು ನೋಡಿಕೊಂಡು ಆಯ್ಕೆ ಮಾಡುವುದು ಉತ್ತಮ.
(ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Star Couple Winter Fashion: ವಿಂಟರ್ ಹಾಲಿಡೇ ಫ್ಯಾಷನ್; ಗಮನ ಸೆಳೆದ ಲೂಸ್ ಮಾದ ಫ್ಯಾಮಿಲಿಯ ಡ್ರೆಸ್ ಕೋಡ್!