ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಲಿಮ್ ಫಿಟ್ ಸೂಟ್‌ನಲ್ಲಿ (Star Suit Fashion) ಯುವಕರು ಕ್ಲಾಸಿ ಲುಕ್ ಪಡೆಯುವುದು ಹೇಗೆ? ಎಂಬ ಪ್ರಶ್ನೆಗೆ, ನಟ ವಿಜಯ್ ದೇವರಕೊಂಡ ಅವರ ಸಮ್ಮರ್ ಸೀಸನ್ ಶೇಡ್‌ನ ಕ್ರೀಮ್ ಕಲರ್ ಸೂಟ್ ಸ್ಟೈಲ್ ಸ್ಟೇಟ್‌ಮೆಂಟೇ ಸಾಕ್ಷಿ ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು, ವಿಜಯ್, ಈ ಸೂಟ್‌ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿರುವುದು ಮಾತ್ರವಲ್ಲ, ಈ ಸೀಸನ್‌ನ ಪರ್ಫೆಕ್ಟ್ ಮೆನ್ಸ್ ಸೂಟ್ ಫ್ಯಾಷನ್‌ಗೆ ನಾಂದಿ ಹಾಡಿದ್ದಾರೆ. ಕಂಪ್ಲೀಟ್ ಕ್ಲಾಸಿಕ್ ಲುಕ್‌ಗೆ ಸೈ ಎಂದಿದ್ದಾರೆ. ಸೋ, ಇವರಂತೆಯೇ ಇತರೇ ಯುವಕರು ಸ್ಟಾರ್ ಲುಕ್ ಪಡೆಯುವುದು ಹೇಗೆ? ಎಂಬುದಕ್ಕೆ ಸ್ಟೈಲಿಸ್ಟ್‌ಗಳು ಒಂದೈದು ಸಿಂಪಲ್ ಐಡಿಯಾ ನೀಡಿದ್ದಾರೆ.
ಸೀಸನ್ ಟ್ರೆಂಡ್‌ನಲ್ಲಿರುವ ಸೂಟ್ ಆಯ್ಕೆ ಮಾಡಿ
ಸಮ್ಮರ್ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಸೂಟ್ ಆಯ್ಕೆ ಮಾಡಿ. ಲೆಕ್ಕವಿಲ್ಲದಷ್ಟು ಬಗೆಯವು ಈ ಸೀಸನ್‌ಗೆ ಹೊಂದುವಂತೆ ಈಗಾಗಲೇ ಬಿಡುಗಡೆಗೊಂಡಿವೆ. ಕೇವಲ ಕಾಲರ್ ಡಿಸೈನ್‌ನಲ್ಲೆ ನಾನಾ ಬಗೆಯವು ಲಭ್ಯ. ಪ್ಯಾಂಟ್ ಸೂಟ್‌ನಂತವು ಹೆಚ್ಚು ಟ್ರೆಂಡಿಯಾಗಿವೆ.
ಲೈಟ್ ಶೇಡ್‌ನನ್ನು ಸೆಲೆಕ್ಟ್ ಮಾಡಿ
ಹಗಲು ವೇಳೆ ಬ್ಯ್ಲಾಕ್ ಶೇಡ್‌ನನ್ನು ಆದಷ್ಟೂ ಧರಿಸಬೇಡಿ. ಯಾಕೆಂದರೇ ಈ ಶೇಡ್‌ನವು ಶಾಖವನ್ನು ಹೀರಿಕೊಳ್ಳುತ್ತವೆ. ದೇಹದ ಉಷ್ಣಾಂಶ ಏರಿಸುತ್ತವೆ. ಹಾಗಾಗಿ ಆದಷ್ಟೂ ಈ ಸೀಸನ್ ಟ್ರೆಂಡ್‌ನಲ್ಲಿರುವ ಪಾಸ್ಟೆಲ್ ಶೇಡ್ ಹಾಗೂ ಲೈಟ್ ಕಲರ್‌ಗಳ ಆಯ್ಕೆ ಮಾಡಿ.
ದೊಗಲೆ ಸೂಟ್ ಆವಾಯ್ಡ್ ಮಾಡಿ
ಸೂಟ್ ಪ್ರಿಯರು ಆದಷ್ಟೂ ದೊಗಲೆ ಸೂಟ್‌ಗಳನ್ನು ಧರಿಸಬೇಡಿ. ಇದು ವಯಸ್ಸಾದಂತೆ ಬಿಂಬಿಸುತ್ತವೆ. ಯಂಗ್ ಲುಕ್ ಬೇಕಿದ್ದವರು ಸ್ಲಿಮ್ ಫಿಟ್ ಸೂಟ್ ಸೆಲೆಕ್ಟ್ ಮಾಡಿಕೊಳ್ಳುವುದು ಉತ್ತಮ. ಇದು ಬಾಡಿ ಮಾಸ್ ಇಂಡೆಕ್ಸ್ ಹೈ ಲೈಟ್ ಮಾಡುತ್ತದೆ. ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.
ಮಾನೋಕ್ರೋಮ್ ಸ್ಲಿಮ್ ಸೂಟ್ಸ್
ಇಡೀ ಸೂಟ್ ಒಂದೇ ಶೇಡ್‌ನಲ್ಲಿರುವಂತಹ ಸೆಟ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಕೇವಲ ಸಭೆ-ಸಮಾರಂಭಗಳಲ್ಲಿ ಮಾತ್ರವಲ್ಲ, ಕಾರ್ಪೋರೇಟ್ ಫಂಕ್ಷನ್‌ಗಳಲ್ಲೂ ಇವನ್ನು ಧರಿಸಿ ಕ್ಲಾಸಿಯಾಗಿ ಕಾಣಿಸಬಹುದು. ಬಣ್ಣದ ಆಯ್ಕೆಯಲ್ಲಿ ಜಾಣತನ ತೋರಿಸಬೇಕಷ್ಟೇ! ಫೆಮಿನೈನ್ ಲುಕ್ ನೀಡುವ ಕಲರ್‌ಗಳನ್ನು ಅವಾಯ್ಡ್ ಮಾಡಬೇಕು, ಎಂಬುದು ನೆನಪಿರಲಿ.
ಮಿನಿಮಲ್ ಆಕ್ಸೆಸರೀಸ್ ಧರಿಸಿ
ಯುವಕರು ಸ್ಲಿಮ್ ಫಿಟ್ ಸೂಟ್ ಧರಿಸಿದಾಗ ಆದಷ್ಟೂ ಮಿನಿಮಲ್ ಆಕ್ಸೆಸರೀಸ್ ಧರಿಸಿ. ಇದು ಸೂಟನ್ನು ಹೈಲೈಟ್ ಮಾಡುತ್ತದೆ. ಜೊತೆಗೆ ಡೀಸೆಂಟ್ ಲುಕ್ ನೀಡುತ್ತದೆ. ಫಾರ್ಮಲ್ ಶೂ ಮ್ಯಾಚ್ ಮಾಡಬಹುದು. ಇಲ್ಲವೇ ಬ್ಲ್ಯಾಕ್ ಶೇಡ್ ಶೂ ಅಥವಾ ಸ್ನೀಕರ್ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Star Hairstyle: ಸೂಪರ್ ಸ್ಟಾರ್‌ಗಳ ಕೂದಲಿಗೆ ಕತ್ತರಿ ಹಾಕುವ ಡಿಸೈನರ್ ಇವರೇ ನೋಡಿ!