ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ವಿನ್ನಿಂಗ್ ಸ್ಟೈಲ್ (kids twinning Fashion) ಇದೀಗ ಮಕ್ಕಳನ್ನು ಆವರಿಸಿದೆ. ಮಕ್ಕಳು ಅವಳಿ-ಜವಳಿಯಲ್ಲದಿದ್ದರೂ, ಅಣ್ಣ-ತಂಗಿ, ಅಕ್ಕ-ತಮ್ಮ, ಫ್ರೆಂಡ್ಸ್ ಹೀಗೆ ಮಕ್ಕಳನ್ನು ಟ್ವಿನ್ನಿಂಗ್ ಫ್ಯಾಷನ್ನಲ್ಲಿ ಬಿಂಬಿಸುವುದು ಸಾಮಾನ್ಯವಾಗಿದೆ. ಹೇಗೆಲ್ಲಾ ಮಕ್ಕಳಿಗೆ ಟ್ವಿನ್ನಿಂಗ್ ಡ್ರೆಸ್ ಮಾಡಬಹುದು ಎಂಬುದರ ಬಗ್ಗೆ ಕಿಡ್ಸ್ ಸ್ಟೈಲಿಸ್ಟ್ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.
ಸೀಸನ್ಗೆ ತಕ್ಕಂತಿರಲಿ ಟ್ವಿನ್ನಿಂಗ್
ಆಯಾ ಸೀಸನ್ಗೆ ತಕ್ಕಂತೆ ನೀವು ಮಾಡುವ ಟ್ವಿನ್ನಿಂಗ್ ಹೊಂದಬೇಕು. ಉದಾಹರಣೆಗೆ., ಬೇಸಿಗೆಯಲ್ಲಿ ಸಿಂಪಲ್, ಚಳಿಗಾಲದಲ್ಲಿ ಲೇಯರ್ ಲುಕ್ ನೀಡುವ ಟ್ವಿನ್ನಿಂಗ್ ಸ್ಟೈಲಿಂಗ್ ಮಾಡಬೇಕು. ಇಲ್ಲವಾದಲ್ಲಿ ನೋಡಲು ಬೇಕಾಬಿಟ್ಟಿ ಎಂದೆನಿಸಬಹುದು.
ಕ್ಯಾಶುವಲ್ ಡ್ರೆಸ್ ಟ್ವಿನ್ನಿಂಗ್
ಕ್ಯಾಶುವಲ್ ಹಾಗೂ ವೆಸ್ಟರ್ನ್ ಶೈಲಿಯ ಉಡುಪುಗಳಲ್ಲಿ ಟ್ವಿನ್ನಿಂಗ್ ಮಾಡುವುದು ಬಲು ಸುಲಭ. ಯಾಕೆಂದರೇ, ಒಂದೇ ಬಗೆಯ ಉಡುಪುಗಳು ಅತಿ ಸುಲಭವಾಗಿ ರೆಡಿಮೇಡ್ನಲ್ಲಿ ದೊರೆಯುತ್ತವೆ. ಹಾಗಾಗಿ ಹೆಚ್ಚು ತಲೆ ಬಿಸಿಯಿರದು.
ಟ್ವಿನ್ನಿಂಗ್ಗೆ ಜೆಂಡರ್ ಭೇದ-ಬಾವವಿಲ್ಲ
ಇಬ್ಬರು ಗಂಡು ಮಕ್ಕಳು ಅಥವಾ ಹೆಣ್ಣುಮಕ್ಕಳಾದಲ್ಲಿ ಟ್ವಿನ್ನಿಂಗ್ ಸ್ಟೈಲಿಂಗ್ ಮಾಡುವುದು ಸುಲಭ. ಅದೇ ಒಂದು ಹುಡುಗ, ಒಂದು ಹುಡುಗಿಯಾದಲ್ಲಿ ಉಡುಪುಗಳು ಬದಲಾಗಬಹುದು. ಒಂದೇ ಫ್ಯಾಬ್ರಿಕ್ ಹಾಗೂ ಒಂದೇ ಶೇಡ್ ಧರಿಸುವುದರಿಂದ ಈ ಸ್ಟೈಲಿಂಗ್ ಫಾಲೋ ಮಾಡಬಹುದು.
ಎಥ್ನಿಕ್ ಔಟ್ಫಿಟ್ಸ್ ಟ್ವಿನ್ನಿಂಗ್
ಕ್ಯಾಶುವಲ್ ಉಡುಪುಗಳಂತೆ ಎಥ್ನಿಕ್ ಉಡುಪುಗಳ ಟ್ವಿನ್ನಿಂಗ್ ಮಾಡುವುದು ತುಸು ಕಷ್ಟ. ಯಾಕೆಂದರೇ ಇವು ರೆಡಿಮೇಡ್ ದೊರೆಯುವುದಿಲ್ಲ! ಅಲ್ಲದೇ, ಖುದ್ದು ಪರಿಶೀಲಿಸಿ ಡಿಸೈನ್ ಹೊಲೆಸಬೇಕಾಗುತ್ತದೆ. ಟೈಲರ್ ಅಥವಾ ಡಿಸೈನರ್ ಬಳಿ ಟ್ವಿನ್ನಿಂಗ್ಗೆ ಮ್ಯಾಚ್ ಆಗುವಂತೆ ತಿಳಿಸಿ ಪ್ಲಾನ್ ಮಾಡಿ ಹೊಲೆಸಬೇಕಾಗುತ್ತದೆ.
ಟ್ವಿನ್ನಿಂಗ್ ಸ್ಟೈಲಿಂಗ್ ಕಿರಿಕಿರಿಯಾಗದಿರಲಿ
ಮಕ್ಕಳಿಗೆ ಮಾಡುವ ಟ್ವಿನ್ನಿಂಗ್ ಸ್ಟೈಲಿಂಗ್ ಕಿರಿಕಿರಿಯಾಗಕೂಡದು. ಆದಷ್ಟೂ ಉತ್ತಮ ಫ್ಯಾಬ್ರಿಕ್ ಹಾಗೂ ಸಿಂಪಲ್ ಡಿಸೈನ್ ಇರುವಂತಹ ಉಡುಪುಗಳನ್ನೇ ಆಯ್ಕೆ ಮಾಡಬೇಕು. ಆರಾಮ ಎನಿಸುವ ಶೈಲಿ ಹೊಂದಿರಬೇಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show: ಕೇರಳದ ಬ್ರೈಡಲ್ ಫ್ಯಾಷನ್ ವೀಕ್ನಲ್ಲಿ ಕನ್ನಡತಿ ಚಂದನಾ ಶೋ ಸ್ಟಾಪರ್ ವಾಕ್