ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ, ವಿಂಟರ್ ಸೀಸನ್ ಇಯರ್ ಎಂಡ್ ಸೇಲ್ (Winter Season End Sale 2024) ಎಲ್ಲಾ ಮಾಲ್‌ಗಳಲ್ಲೂ ಆರಂಭಗೊಂಡಿದೆ. ಲೇಯರ್ ಲುಕ್ ನೀಡುವ ಬಗೆಬಗೆಯ ಕೋಟ್‌ಗಳಿಂದಿಡಿದು ನಾನಾ ಬಗೆಯ ಆಕ್ಸೆಸರೀಸ್‌ಗಳು ಈ ಸೇಲ್‌ನಲ್ಲಿ ಕಡಿಮೆ ಬೆಲೆಗೆ ದೊರಕುತ್ತಿವೆ.
ಇಯರ್ ಎಂಡ್ ಸೇಲ್ ಸದುಪಯೋಗ
ಕೆಲವೊಮ್ಮೆ ಇಯರ್ ಎಂಡ್ ಸೇಲ್‌ನಲ್ಲಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ, ಶಾಪಿಂಗ್‌ನ ಸದುಪಯೋಗಪಡಿಸಿಕೊಳ್ಳಬಹುದು. ಒಂದಿಷ್ಟು ಹಣವನ್ನು ಉಳಿಸಬಹುದು. ಇದಕ್ಕಾಗಿ ಒಂದೈದು ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಶಾಪಿಂಗ್ ಎಕ್ಸ್ ಪರ್ಟ್ಸ್.
ಮೊದಲು ವಿಂಡೋ ಶಾಪಿಂಗ್ ಮಾಡಿ
ಸೇಲ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ಮೊದಲು ತಿಳಿದುಕೊಳ್ಳಲು ಮೊದಲು ವಿಂಡೋ ಶಾಪಿಂಗ್ ಮಾಡಿ. ಆಗಷ್ಟೇ ನಿಮಗೆ ಸೇಲ್‌ನಲ್ಲಿ ಏನೇನಿದೆ? ಯಾವುದು ಕೊಳ್ಳಲು ಸೂಕ್ತ? ಎಂಬುದು ತಿಳಿಯುವುದು. ಹಾಗಾಗಿ ರೆಗ್ಯುಲರ್ ಶಾಪಿಂಗ್‌ಗೆ ಮುನ್ನ ವಿಂಡೋ ಶಾಪಿಂಗ್‌ಗೆ ಮೊರೆ ಹೋಗಿ.
ಸೀಸನ್‌ಗೆ ಹೊಂದದಿದ್ದರೂ ಖರೀದಿ ಯಾಕೆ ಎಂಬುದು ತಿಳಿದಿರಲಿ
ವಿಂಟರ್ ಸೀಸನ್‌ನ ಉಡುಪುಗಳು ಮುಂಬರುವ ಸೀಸನ್‌ಗೆ ಹೊಂದುವುದಿಲ್ಲ! ಆದರೆ, ಖರೀದಿಸುತ್ತಿರುವುದು ಯಾಕೆ? ಎಂಬುದು ಮೊದಲು ತಿಳಿದಿರಲಿ. ಮುಂದಿನ ವರ್ಷದ ವಿಂಟರ್‌ಗಾಗಿ ಯಾವುದೇ ಕಾರಣಕ್ಕೂ ಖರೀದಿಸಬೇಡಿ. ಫ್ಯಾಷನ್ ಬದಲಾಗುವ ಚಾನ್ಸ್ ಇರುತ್ತದೆ.
ಬಿಡಿಯಾಗಿರುವ ಉಡುಪುಗಳನ್ನು ಆಯ್ಕೆ ಮಾಡಿ
ವಿಂಟರ್‌ನಲ್ಲಿ ಲೇಯರ್ ಲುಕ್‌ಗಾಗಿ ಧರಿಸುವ ಬಿಡಿಬಿಡಿಯಾಗಿರುವ ಉಡುಪುಗಳನ್ನು ಖರೀದಿಸಿ. ಅದರಲ್ಲೂ ಸ್ಟ್ರಾಪ್, ಸ್ಲೀವ್‌ಲೆಸ್, ತೆಳುವಾದ ಇನ್ನರ್ ಔಟ್‌ಫಿಟ್‌ಗಳು ಈ ಬೇಸಿಗೆಯ ಸೀಸನ್‌ಗೂ ಹೊಂದಬಲ್ಲದು.
ದಪ್ಪನೆಯ ಫ್ಯಾಬ್ರಿಕ್ ಬೇಡ
ಇದೀಗ ಬೇಸಿಗೆ ಆರಂಭವಾಗಿರುವುದರಿಂದ ದಪ್ಪನೆಯ ಫ್ಯಾಬ್ರಿಕ್‌ನ ಉಡುಪು ಖರೀದಿಸಬೇಡಿ. ಇದು ಸೆಕೆಯಾಗಬಹುದು. ಧರಿಸದೇ ಸುಮ್ಮನೆ ಮೂಲೆ ಸೇರಬಹುದು. ಹಾಗಾಗಿ ಇದು ಖರೀದಿಸುವಾಗ ಗಮನದಲ್ಲಿರಲಿ.
ಎಥ್ನಿಕ್‌ವೇರ್‌ಗಳನ್ನು ಖರೀದಿಸಿ
ಸಮಾರಂಭಗಳಲ್ಲಿ, ಹಬ್ಬಗಳಲ್ಲಿ ಎಥ್ನಿಕ್‌ವೇರ್‌ಗಳನ್ನು ಧರಿಸಬಹುದು. ಹಾಗಾಗಿ ಇವು ವಿಂಟರ್ ಸೇಲ್‌ನಲ್ಲಿ ಕಡಿಮೆ ಬೆಲೆಗೆ ದೊರಕಿದಾಗ ಖರೀದಿಸಿ. ಇವುಗಳ ಖರೀದಿ ಲಾಭವಾಗಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Oscars 2024: ಆಸ್ಕರ್ ರೆಡ್ ಕಾರ್ಪೆಟ್ ಫ್ಯಾಷನ್‌ನಲ್ಲಿ ವೈವಿಧ್ಯಮಯ ಗೌನ್‌ಗಳದ್ದೇ ಹವಾ!