Site icon Vistara News

Winter Mens Fashion Tips: ಚಳಿಗಾಲದ ಫ್ಯಾಷನ್‌ನಲ್ಲಿ ಪುರುಷರು ಗಮನಿಸಬೇಕಾದ 5 ಸಂಗತಿಗಳು

Winter Mens Fashion Tips

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್‌ ಫ್ಯಾಷನ್‌ ಫಾಲೋ ಮಾಡುವ ಪುರುಷರು ಒಂದಿಷ್ಟು ಫ್ಯಾಷನ್‌ (Winter Mens Fashion Tips) ರೂಲ್ಸ್ ಮಾಡಿದಲ್ಲಿ ನೋಡಲು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಟ್ರೆಂಡಿಯಾಗಿ ಕಾಣಿಸಬಹುದು. ಹಾಗೆನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಚಳಿಗಾಲದಲ್ಲಿ ಕೇವಲ ಮಾನಿನಿಯರು ಮಾತ್ರವಲ್ಲ, ಪುರುಷರು ಕೂಡ ಕೆಲವು ಅತ್ಯಗತ್ಯ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೈಲಿಂಗ್‌ ಮಾಡಿದಲ್ಲಿ, ಸೀಸನ್‌ಗೆ ತಕ್ಕಂತೆ ಕಾಣುವುದು ಮಾತ್ರವಲ್ಲ, ಪ್ರೊಫೆಷನಲ್‌ ಆಗಿ ಕಾಣಿಸಬಹುದು. ಇದಕ್ಕಾಗಿ ಒಂದೈದು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್‌ ಜಾನ್‌. ಅವರ ಪ್ರಕಾರ, ಧರಿಸುವ ಎಲ್ಲಾ ಉಡುಪುಗಳು ಬ್ರಾಂಡೆಡ್‌ ಆಗಬೇಕಾಗಿಲ್ಲ. ಆದರೆ, ಉತ್ತಮ ಗುಣಮಟ್ಟ ಹೊಂದಿರಬೇಕು ಆಗ ನೋಡಲು ಸ್ಟೈಲಿಶ್‌ ಆಗಿ ಕಾಣಿಸುವುದರೊಂದಿಗೆ ಕಂಫರ್ಟಬಲ್‌ ಫೀಲ್‌ ಪಡೆಯಬಹುದು ಎನ್ನುತ್ತಾರೆ.

ಮೆನ್ಸ್ ಲೇಯರ್‌ ಲುಕ್‌

ಈ ಸೀಸನ್‌ನಲ್ಲಿ ಯುವಕರು ಅಥವಾ ಮಧ್ಯ ವಯಸ್ಕರು ಲೇಯರ್‌ ಲುಕ್‌ ಮಾಡಬಹುದು. ಹಾಗೆಂದು ಕಚೇರಿಯಲ್ಲಿ ಕುಳಿತಾಗ ಹಾಗೂ ಮೀಟಿಂಗ್‌ಗಳಲ್ಲಿ ಈ ರೀತಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹವರು ಅತಿ ಸುಲಭವಾಗಿ ಪ್ರೊಫೆಷನಲ್‌ ಲುಕ್‌ ಪಡೆಯಬಹುದಾದ ಲೇಯರ್‌ ಲುಕ್‌ಗೆ ಮೊರೆ ಹೋಗಬೇಕು.

ಗುಣಮಟ್ಟದ ಜಾಕೆಟ್‌/ಕೋಟ್‌

ವಾರ್ಡ್ರೋಬ್‌ ತುಂಬೆಲ್ಲಾ ಜಾಕೆಟ್‌ ಹಾಗೂ ಕೋಟ್‌ಗಳನ್ನು ತುಂಬಿಕೊಳ್ಳುವ ಬದಲು ಅತ್ಯುತ್ತಮ ಗುಣಮಟ್ಟದ ಹಾಗೂ ಲೈಟ್‌ವೈಟ್‌ ಜಾಕೆಟ್‌ಗಳನ್ನು ಖರೀದಿಸಿ. ಆದಷ್ಟೂ ಎಲ್ಲಾ ಸಂದರ್ಭಕ್ಕೂ ಧರಿಸಬಹುದಾದಂತಹ ಕಲೆಕ್ಷನ್‌ ನಿಮ್ಮ ಬಳಿಯಿರಲಿ.

ಅತಿಯಾದ ಅಕ್ಸೆಸರೀಸ್‌ ಧರಿಸುವುದು ಬೇಡ

ಲೇಯರ್‌ ಲುಕ್‌ ಜೊತೆಗೆ ಅತಿಯಾದ ಆಕ್ಸೆಸರೀಸ್‌ ಧರಿಸುವುದು ಬೇಡ. ಇದು ಮೆಸ್ಸಿಯಾಗಿ ಕಾಣಬಹುದು. ನೀವು ಕಾಲೇಜು ಯುವಕರಾದಲ್ಲಿ ಓಕೆ. ಪ್ರೊಫೆಷನಲ್‌ ಪುರುಷರಾದಲ್ಲಿ ಆದಷ್ಟೂ ಸಿಂಪಲ್‌ ಫ್ಯಾಷನ್‌ ಆಕ್ಸೆಸರೀಸ್‌ ನಿಮ್ಮದಾಗಿರಲಿ. ಸನ್‌ ಗ್ಲಾಸ್‌ ಧರಿಸಿದಲ್ಲಿ ಸ್ಟೈಲಿಶ್‌ ಲುಕ್‌ ನೀಡಬಹುದು

ಲೇಯರ್‌ ಟ್ವಿನ್ನಿಂಗ್‌ ಲುಕ್‌ ಬೇಡ

ಈ ಸೀಸನ್‌ನಲ್ಲಿ ಅದರಲ್ಲೂ ವಿಂಟರ್ವೇರ್ಸ್‌ನಲ್ಲಿ ಟ್ವಿನ್ನಿಂಗ್‌ ಮಾಡುವುದನ್ನು ಅವಾಯ್ಡ್‌ ಮಾಡಿ. ಒಬ್ಬಬ್ಬರ ದೇಹದ ಉಷ್ಣಾಂಶ ಒಂದೊಂದು ಬಗೆಯಿರುತ್ತದೆ. ಹಾಗಾಗಿ ಒಂದೇ ಬಗೆಯ ಲೇಯರ್‌ ಲುಕ್‌ ಎಲ್ಲರಿಗೂ ಆರಾಮದಾಯಕ ಎಂದೆನಿಸದು.

ಮಾಯಿಶ್ಚರೈಸರ್‌ ಬಳಸಿ

ನಾನು ಹುಡುಗ, ಬ್ಯೂಟಿ ಕಾನ್ಶಿಯಸ್‌ ಯಾಕಿರಬೇಕು? ಎನ್ನುವ ಮನೋಭಾವ ಬಿಟ್ಟುಬಿಡಿ. ನಿಮ್ಮ ಮುಖಕ್ಕೆ ಅಗತ್ಯವಿರುವ ವಿಂಟರ್‌ಕೇರ್‌ ಮಾಡಿ. ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ಗೆ ಮುಖದ ಅಂದವೂ ಮುಖ್ಯ ಎಂಬುದು ನೆನಪಿನಲ್ಲಿಡಿ. ಮನೆಯಲ್ಲಿದ್ದಾಗ ತ್ಚಚೆ ಒಣಗದಂತೆ ಮಾಯಿಶ್ಚರೈಸರ್‌ ಬಳಸಿ. ಕೊಬ್ಬರಿ ಎಣ್ಣೆ ಹಚ್ಚಿ, ಕಾಲು ಗಂಟೆಯ ನಂತೆ ಮುಖ ವಾಶ್‌ ಮಾಡಿ ನೋಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Fashion: ವಿಂಟರ್‌ ಫ್ಯಾಷನ್‌ಗೆ ಮರಳಿದ ಆಕರ್ಷಕ ವುಲ್ಲನ್‌ ಪೊಂಚೊ

Exit mobile version