ಶೀಲಾ ಸಿ,. ಶೆಟ್ಟಿ, ಬೆಂಗಳೂರು
ಕೃತಕ ಐ ಲ್ಯಾಶೆಸ್ (False eyelash fashion tips) ಪ್ರಿಯರಿಗೆ ಸಂತಸದ ಸುದ್ದಿ! ಇದೀಗ ನಾನಾ ಬಗೆಯವು ಅದರಲ್ಲೂ ಸುಲಭವಾಗಿ ಬಳಸವಂತಹ ಫಾಲ್ಸ್ ಐ ಲ್ಯಾಶೆಸ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಪರಿಣಾಮ, ಇವನ್ನು ಬಳಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋ, ಫೇಕ್ ಐ ಲ್ಯಾಶೆಸ್‌ಗಳು ಬ್ರಾಂಡ್‌ಗಳಲ್ಲಿ ಮಾತ್ರವಲ್ಲ, ಕಳಪೆ ಗುಣಮಟ್ಟದಲ್ಲೂ ಮಾರುಕಟ್ಟೆಗೆ ಬಂದಿವೆ. ಹಾಗಾಗಿ ಇವನ್ನು ಬಳಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ, ಧರಿಸುವುದು ಅಗತ್ಯ. ಇಲ್ಲವಾದಲ್ಲಿ, ಆಕರ್ಷಕವಾಗಿ ಕಾಣಬೇಕಿದ್ದ ರೆಪ್ಪೆಗಳು ಕೃತಕವಾಗಿ ಕಾಣಿಸಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್. “ಇದೀಗ ಆಫ್‌ಲೈನ್ ಹಾಗೂ ಆನ್‌ಲೈನ್ ಮಾರುಕಟ್ಟೆಗಳಲ್ಲಿ, ಲೆಕ್ಕವಿಲ್ಲದಷ್ಟು ಶೈಲಿಯ ಕೃತಕ ಐ ಲ್ಯಾಶೆಸ್‌ಗಳು ಬಂದಿವೆ. ನೋಡಲು ತಕ್ಷಣಕ್ಕೆ ಎಲ್ಲವೂ ಒಂದೇ ರೀತಿಯಾಗಿ ಕಂಡರೂ, ಅವನ್ನು ಪರಿಶೀಲಿಸಿ ಖರೀದಿಸುವುದು ಅಗತ್ಯ” ಎನ್ನುತ್ತಾರೆ ಸೌಂದರ್ಯ ತಜ್ಞರು.
ಗುಣಮಟ್ಟದ್ದನ್ನು ಖರೀದಿಸಿ
ಗುಣಮಟ್ಟದ್ದನ್ನು ಆಯ್ಕೆ ಮಾಡಿ ಖರೀದಿಸಿ. ಅದಕ್ಕಾಗಿ ನೀವು ಉತ್ತಮ ಬ್ರಾಂಡೆಡ್ ಫಾಲ್ಸ್ ಐ ಲ್ಯಾಶೆಸ್ ಖರೀದಿಸುವುದು ಉತ್ತಮ. ಲೋಕಲ್ ಕಂಪನಿಯವನ್ನು ಯಾವದುಏ ಕಾರಣಕ್ಕೂ ಆಯ್ಕೆ ಮಾಡಲೇಬೇಡಿ.
ನಿಮ್ಮ ಕಣ್ಣಿನ ರೆಪ್ಪೆಯ ಸೈಝಿಗೆ ತಕ್ಕಂತಿರಲಿ
ಕೃತಕ ಐ ಲ್ಯಾಶೆಸ್‌ಗಳು ನಾನಾ ಸೈಝಿನಲ್ಲಿ ದೊರೆಯುತ್ತವೆ. ಹಾಗಾಗಿ, ನಿಮ್ಮ ಕಣ್ಣಿನ ರೆಪ್ಪೆಯ ಸೈಝಿಗೆ ಹೊಂದುವಂತದ್ದನ್ನು ಮಾತ್ರ ಆರಿಸಿಕೊಳ್ಳಿ. ಇಲ್ಲವಾದಲ್ಲಿ ರೆಪ್ಪೆಯಿಂದ ಕೆಳಗೆ ಜಾರಿ, ನೋಡಲು ನೈಜವೆನಿಸದೇ ಇರಬಹುದು.
ಕಣ್ಣಿನ ರೆಪ್ಪೆಯ ಕಲರ್‌ಗೆ ತಕ್ಕಂತಿರಲಿ
ಕೆಲವು ಬ್ಲ್ಯಾಕ್, ಬ್ರೌನ್ ಹಾಗೂ ಕೊಂಚ ಕೆಂಚನೆಯ ಶೇಡ್‌ಗಳಿರುತ್ತವೆ. ನಿಮ್ಮ ತಲೆಕೂದಲಿನ ಬಣ್ಣಕ್ಕೆ ತಕ್ಕಂತೆ ನೋಡಿ ಪರಿಶೀಲಿಸಿ, ಆಯ್ಕೆ ಮಾಡಿ.
ಮರುಬಳಕೆ ಮಾಡುವಂತಹ ಐ ಲ್ಯಾಶೆಸ್ ಖರೀದಿಸಿ
ಒಮ್ಮೆ ಬಳಕೆ ಮಾಡಿದರೇ, ಬಿಸಾಡುವಂತಹ ಐ ಲ್ಯಾಶೆಸ್ ಖರೀದಿಸಬೇಡಿ. ಗಮ್ ಜೊತೆಯಲ್ಲಿ ಪ್ಯಾಕೆಟ್‌ನಲ್ಲಿ ಸಿಗುವಂತಹದ್ದನ್ನು ಕೊಳ್ಳಿ. ಇಲ್ಲವಾದಲ್ಲಿ ಎಸೆಯಬೇಕಾದಿತು.
ಬಳಸುವ ವಿಧಾನ ತಿಳಿದುಕೊಳ್ಳಿ
ಮೊದಲಿಗೆ ಐ ಲೈನರ್ ಹಚ್ಚಿ. ನಂತರ ರೆಪ್ಪೆಮೇಲೆ ಅಂಟಿಸಿ. ಗೊತ್ತಾಗದಿದ್ದಲ್ಲಿ ಯೂ ಟ್ಯೂಬ್‌ನಲ್ಲಿ ಈ ಕುರಿತಂತೆ ಲಭ್ಯವಿರುವ ವಿಡಿಯೋ ಟ್ಯುಟೋರಿಯಲ್ ನೋಡಿ ಕಲಿತುಕೊಳ್ಳಿ. ನೈಜವಾಗಿ ಕಾಣಿಸುವಂತಹದ್ದನ್ನು ಬಳಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)