ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್‌ನಲ್ಲಿ ನಿಮ್ಮ ಮಕ್ಕಳಿಗೆ ಆಯ್ಕೆ ಮಾಡುವ ಟ್ರೆಂಡಿ ವುಲ್ಲನ್‌ವೇರ್‌ಗಳು ನೋಡಲು ಆಕರ್ಷಕವಾಗಿ ಕಾಣಿಸುವುದರೊಂದಿಗೆ ಚಿಣ್ಣರಿಗೆ ಕಂಫರ್ಟಬಲ್ ಕೂಡ ಎಂದನಿಸಬೇಕು. ಅವನ್ನು ಇಷ್ಟಪಟ್ಟು ಧರಿಸಬೇಕು. ಇದಕ್ಕಾಗಿ ನೀವು ಯಾವ ಬಗೆಯ ವುಲ್ಲನ್‌ವೇರ್‌ಗಳನ್ನು ಖರೀದಿಸಬೇಕು? ಆಯ್ಕೆ ಮಾಡಬೇಕು? ಆ ಸಮಯದಲ್ಲಿ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಒಂದಿಷ್ಟು ಟಿಪ್ಸನ್ನು (Winter Kids Fashion Tips) ಕಿಡ್ಸ್ ಸ್ಟೈಲಿಶ್‌ಗಳು ಇಲ್ಲಿ ನೀಡಿದ್ದಾರೆ.
ಮಕ್ಕಳ ಚಾಯ್ಸ್‌ಗೆ ಆದ್ಯತೆ ನೀಡಿ
ಈ ವಿಂಟರ್ ಸೀನಸ್‌ನಲ್ಲಿರುವ ಟ್ರೆಂಡಿ ಡಿಸೈನ್‌ಗಳನ್ನು ಆಯ್ಕೆ ಮಾಡುವುದು ಮಾತ್ರವಲ್ಲ, ಮಕ್ಕಳಿಗೆ ಇಷ್ಟವಾಗುವಂತಹ ಚಿತ್ತಾರಗಳಿರುವ ವುಲ್ಲನ್‌ವೇರ್‌ಗೆ ಆದ್ಯತೆ ನೀಡಿ. ನಿಮ್ಮ ಮಕ್ಕಳನ್ನು ಖರೀದಿ ಮಾಡುವಾಗ ಕರೆದುಕೊಂಡು ಹೋಗಿ. ಮಕ್ಕಳ ಚಾಯ್ಸ್ ಕೇಳಿ ನೋಡಿ. ಅವರು ಇಷ್ಟ ಪಟ್ಟ ವುಲ್ಲನ್‌ವೇರ್, ಸ್ವೆಟರ್‌ಗಳನ್ನು ಕೊಂಡುಕೊಳ್ಳಿ. ಆಗ ಅವರು ಇಷ್ಟಪಟ್ಟು ಧರಿಸುತ್ತಾರೆ.
ಸೀಸನ್‌ಗೆ ತಕ್ಕ ಟ್ರೆಂಡಿ ಡಿಸೈನ್
ಈ ಸೀಸನ್‌ನಲ್ಲಿರುವ ಟ್ರೆಂಡಿ ಡಿಸೈನ್‌ಗೆ ಆದ್ಯತೆ ನೀಡಿ. ಮಕ್ಕಳ ಕಾರ್ಟೂನ್ ಚಾನೆಲ್‌ಗಳಲ್ಲಿ ಖ್ಯಾತಿ ಗಳಿಸಿರುವ ಕ್ಯಾರೆಕ್ಟರ್ ಚಿತ್ತಾರಗಳಿರುವ ಡಿಸೈನ್ ಹೊಂದಿರುವ ವುಲ್ಲನ್‌ವೇರ್‌ಗಳನ್ನು ಆಯ್ಕೆ ಮಾಡಿ. ಯಾಕೆಂದರೇ, ಮಕ್ಕಳಿಗೆ ತಾವು ನೋಡುವ ಕಾರ್ಟೂನ್ ಕ್ಯಾರೆಕ್ಟರ್ ಚಿತ್ತಾರವಿರುವ ವುಲ್ಲನ್‌ವೇರ್ ಧರಿಸುವುದೆಂದರೇ ಬಲು ಇಷ್ಟವಾಗುತ್ತವೆ.
ಕಂಫರ್ಟಬಲ್ ಆಗಿರಲಿ
ಮಕ್ಕಳಿಗೆ ಖರೀದಿಸುವ ವುಲ್ಲನ್‌ವೇರ್‌ಗಳು ನೋಡಲು ಚೆನ್ನಾಗಿದ್ದರೇ ಸಾಲದು. ಧರಿಸಿದಾಗ ಆದಷ್ಟೂ ಆರಾಮದಾಯಕವಾಗಿರಬೇಕು. ತೀರಾ ಟೈಟಾಗಿರಕೂಡದು. ಕೊಂಚ ಲೂಸಾಗಿರಬೇಕು. ಉಡುಪಿನ ಮೇಲೆ ಧರಿಸಿದಾಗ ಕೈಕಾಲು ಆಡಿಸಲು ಸುಲಭವಾಗಿರಬೇಕು.
ಲೈಟ್‌ವೈಟ್ ವುಲ್ಲನ್‌ವೇರ್ಸ್ ಆಯ್ಕೆ
ಚಿಣ್ಣರಿಗೆ ಧರಿಸುವ ವುಲ್ಲನ್‌ವೇರ್ಸ್ ಲೈಟ್‌ವೈಟ್‌ನದ್ದಾಗಿರಬೇಕು. ಹಾಗಾಗಿ ಖರೀದಿಸುವಾಗ ಆದಷ್ಟೂ ಲೈಟ್‌ವೈಟ್ ವುಲ್ಲನ್‌ವೇರ್ ಆಯ್ಕೆ ಮಾಡಬೇಕು. ಧರಿಸಿದಾಗ ಕಂಫರ್ಟಬಲ್ ಆಗುವುದು. ಸೆಕೆಯಾಗುವುದಿಲ್ಲ.
ವಿನ್ಯಾಸದ ಆಯ್ಕೆ
ವುಲ್ಲನ್‌ವೇರ್‌ನಲ್ಲಿ ಬಟನ್, ಬಟನ್‌ಲೆಸ್, ಪುಲ್‌ಒವರ್ ಶೈಲಿಯವು ದೊರೆಯುತ್ತವೆ. ಹುಡುಗರಿಗೆ ಆದಷ್ಟೂ ಬಟನ್‌ಲೆಸ್ ಆಯ್ಕೆ ಮಾಡಬೇಕು. ಹೆಣ್ಣುಮಕ್ಕಳಿಗೆ ಬಟನ್ ಇರುವಂತವನ್ನು ಆಯ್ಕೆ ಮಾಡಬೇಕು
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಶೈನಿಂಗ್ ಸಿಕ್ವೀನ್ಸ್ ಸೀರೆಯಲ್ಲಿ ನಟಿ ಸಂಜನಾ ಬುರ್ಲಿ ಮಿಂಚಿಂಗ್