ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯ ಎಥ್ನಿಕ್ ಹೈ ಫ್ಯಾಷನ್‌ನಲ್ಲಿ (Summer Fashion) ಇದೀಗ ಡಿಸೈನರ್ ಬಿಕಿನಿ ಬ್ಲೌಸ್ ಲೆಹೆಂಗಾಗಳು ಲಗ್ಗೆ ಇಟ್ಟಿವೆ. ನೋಡಲು ಹಾಟ್ ಲುಕ್ ನೀಡುವ ಇವು ಸೆಲೆಬ್ರೆಟಿಗಳ ಹಾಗೂ ಶ್ರೀಮಂತ ಯುವತಿಯರ ಹೈ ಫ್ಯಾಷನ್ ಲಿಸ್ಟ್‌ಗೆ ಸೇರಿದ್ದು, ಗ್ಲಾಮರಸ್ ಟಚ್ ನೀಡಿವೆ.
ಸಿನಿಮಾ ತಾರೆಯರ ಗ್ಲಾಮರಸ್ ಲುಕ್‌ಗೆ ಬಿಕಿನಿ ಡಿಸೈನರ್ ಬ್ಲೌಸ್
ಈ ಸಮ್ಮರ್ ಸೀಸನ್‌ನ ಗ್ರ್ಯಾಂಡ್ ಸಮಾರಂಭಗಳು, ವೆಡ್ಡಿಂಗ್ ಹಾಗೂ ಫೆಸ್ಟಿವಲ್‌ನಲ್ಲಿ ನಾನಾ ಬಗೆಯ ಡಿಸೈನರ್ ಬಿಕಿನಿ ಸ್ಟೈಲ್ ಲೆಹೆಂಗಾ ಬ್ಲೌಸ್‌ಗಳು ಟ್ರೆಂಡಿಯಾಗಿದ್ದು, ಬಹುತೇಕ ಸಿನಿಮಾ ತಾರೆಯರು ಈ ಶೈಲಿಯ ಔಟ್‌ಫಿಟ್‌ನಲ್ಲೆ ಕಾಣಿಸತೊಡಗಿದ್ದಾರೆ. ಎಥ್ನಿಕ್ ಲುಕ್ ಜೊತೆಜೊತೆಗೆ ಹಾಟ್ ಲುಕ್ ನೀಡುವ ಇವು ಸೆಲೆಬ್ರೆಟಿಗಳ ಫೇವರೇಟ್ ಲಿಸ್ಟ್‌ಗೆ ಸೇರಿವೆ. ಇನ್ನು ಎಥ್ನಿಕ್ ಹೈ ಫ್ಯಾಷನ್‌ನಲ್ಲಿರುವ ಬಗೆಬಗೆಯ ಡಿಸೈನರ್ ಬಿಕಿನಿ ಲೆಹೆಂಗಾ ಬ್ಲೌಸ್‌ಗಳು, ಅಲ್ಟ್ರಾ ಮಾಡರ್ನ್ ಹಾಗೂ ಜೆನ್ ಜಿ ಹುಡುಗಿಯರನ್ನು ಸೆಳೆಯತೊಡಗಿವೆ. ಪರಿಣಾಮ, ಲೆಕ್ಕವಿಲ್ಲದಷ್ಟು ಬಗೆಯವು ಮಾರುಕಟ್ಟೆಗೆ ಎಂಟ್ರಿ ನೀಡಿವೆ.
ಪಾಪುಲರ್ ಆಗಿರುವ ಡಿಸೈನರ್ ಬಿಕಿನಿ ಬ್ಲೌಸ್
ಇನ್ನು, ಲೆಹೆಂಗಾ ಎಂದಾಕ್ಷಣ ಹೆವಿ ಡಿಸೈನ್‌ನವು ಮೈ ತುಂಬಾ ಹೊದ್ದುಕೊಳ್ಳುವಂತಹ ಡ್ರೆಸ್‌ಕೋಡ್ ಎಂದುಕೊಳ್ಳುತ್ತೇವೆ. ಆದರೆ, ಈ ಸೀಸನ್‌ನಲ್ಲಿ ಆ ಶೈಲಿಯವು ಸೆಕೆಯಾಗುತ್ತವೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್ ಡಿಸೈನರ್ ಇಂತಹ ಬಿಕಿನಿ ಲೆಹೆಂಗಾ ಬ್ಲೌಸ್‌ಗಳನ್ನು ಸಿದ್ಧಪಡಿಸಿದ್ದು, ಬಹುತೇಕ ತಾರೆಯರು ಈ ಬಿಕಿನಿ ಬ್ಲೌಸ್‌ಗೆ ಮೊರೆ ಹೋಗುತ್ತಿದ್ದಾರೆ. ಇವು ಗ್ರ್ಯಾಂಡ್ ಲುಕ್ ಜೊತೆಗೆ ಗ್ಲಾಮರಸ್ ಆಗಿಯೂ ಬಿಂಬಿಸುತ್ತವೆ. ಜೊತೆಗೆ ಹಾಟ್ ಲುಕ್ ಕೂಡ ನೀಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ದಿಯಾ ಖಾನ್. ಅವರ ಪ್ರಕಾರ, ಡಿಸೈನರ್ ಬಿಕಿನಿ ಬ್ಲೌಸ್‌ಗಳು ನೋಡಿದಾಕ್ಷಣಾ ಬಿಕಿನಿ ಲುಕ್ ನೀಡುವುದಿಲ್ಲ. ಹಾಗಾಗಿ ಇವು ಪಾಪುಲರ್ ಆಗಿವೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಡಿಸೈನರ್ ಬಿಕಿನಿ ಬ್ಲೌಸ್‌ಗಳಿವು
ರೆಗ್ಯುಲರ್ ಡಿಸೈನರ್ ಬಿಕಿನಿ, ಹಾಲ್ಟರ್ ನೆಕ್‌ಲೈನ್ ಡಿಸೈನರ್ ಬಿಕಿನಿ, ಕೋಲ್ಡ್ ಶೋಲ್ಡರ್ ಬಿಕಿನಿ ಡಿಸೈನರ್ ಬ್ಲೌಸ್, ಶೋಲ್ಡರ್ ಲೆಸ್ ಡಿಸೈನರ್ ಬಿಕಿನಿ ಬ್ಲೌಸ್‌ಗಳು ಸೆಲೆಬ್ರೆಟಿಗಳ ಗ್ರ್ಯಾಂಡ್ ಲೆಹೆಂಗಾಗಳಿಗೆ ಸಾಥ್ ನೀಡುತ್ತಿವೆ. ಇವು ದೇಹವನ್ನು ಕೊಂಚ ಎಕ್ಸ್‌ಪೋಸ್ ಮಾಡುವುದರಿಂದ ಗ್ಲಾಮರಸ್ ಲುಕ್‌ಗೆ ಜೊತೆಯಾಗಿವೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್ ಡಿಸೈನರ್‌ಗಳು ಒಂದಕ್ಕಿಂತ ಒಂದು ಸುಂದರವಾದ ಡಿಸೈನ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
- · ಡಿಸೈನರ್ ಬಿಕಿನಿ ಲೆಹೆಂಗಾ ಬ್ಲೌಸ್ ಹೆವ್ವಿ ಪರ್ಸನಾಲಿಟಿಯವರಿಗೆ ನಾಟ್ ಓಕೆ.
- · ಎಕ್ಸ್‌ಪೋಸ್ ಆಗುವುದರಿಂದ ಫಿಟ್ಟಿಂಗ್ ಸರಿಯಾಗಿರುವುದು ಅಗತ್ಯ.
· ಎಥ್ನಿಕ್ ಲುಕ್ಗಾಗಿ ಮೇಕ್ಓವರ್ ಕೂಡ ಸಾಥ್ ನೀಡಬೇಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Stars Holi Fashion: ವೈವಿಧ್ಯಮಯ ದಿರಸಿನಲ್ಲಿ ಸೆಲೆಬ್ರೆಟಿಗಳ ಹೋಳಿ ಸಂಭ್ರಮ