Site icon Vistara News

Cowrie Fashion Accessories: ಕವಡೆಗೂ ಸಿಕ್ತು ಫಂಕಿ ಚೋಕರ್‌ ನೆಕ್ಲೇಸ್‌ ರೂಪ!

Cowrie Fashion Accessories

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಂಕಿ ಕವಡೆಯ ಚೋಕರ್‌ ನೆಕ್ಲೇಸ್‌ಗಳು (Cowrie Fashion Accessories) ಇದೀಗ ಟ್ರೆಂಡಿಯಾಗಿವೆ. ಹೌದು. ನಾನಾ ಶೈಲಿಯ ಕವಡೆಯ ನೆಕ್ಲೇಸ್‌ಗಳು,ಕವಡೆ ಚೈನ್‌ ಮತ್ತು ಹಾರಗಳು ಇದೀಗ ಫಂಕಿ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ನಲ್ಲಿ ಟಾಪ್‌ ಸ್ಥಾನ ಗಳಿಸಿವೆ.

ಜೆನ್‌ ಜಿ ಹುಡುಗಿಯರನ್ನು ಸೆಳೆದ ಕವಡೆ ಚೋಕರ್‌

“ಈಗಾಗಲೇ ಜೆನ್‌ ಜಿ ಹುಡುಗಿಯರನ್ನು ಹಾಗೂ ಕಾಲೇಜು ಯುವತಿಯರನ್ನು ಆಕರ್ಷಿಸಿರುವ ಈ ಆಕ್ಸೆಸರೀಸ್‌ ಫಂಕಿ ಲುಕ್‌ಗೆ ಸಾಥ್‌ ನೀಡುತ್ತಿವೆ. ಕವಡೆಯ ಈ ನೆಕ್ಲೇಸ್‌ಗಳು ಮೊದಲು ಕಾಣಿಸಿಕೊಂಡದ್ದು, ಬಾಲಿವುಡ್‌ ತಾರೆಯರ ಕೆಲವು ಫೋಟೋಶೂಟ್‌ಗಳಲ್ಲಿ ಹಾಗೂ ಅವರ ಫಂಕಿ ಲುಕ್‌ನಲ್ಲಿ. ನಂತರ ಇವು ಟ್ರೆಂಡ್‌ ಸೆಟ್‌ ಆದವು. ಇದೀಗ ಸಾಮಾನ್ಯ ಹುಡುಗಿಯರನ್ನು ಇವು ಸೆಳೆದಿವೆ. ನೋಡಲು ಡಿಫರೆಂಟ್‌ ಲುಕ್‌ ನೀಡುವ ಇವು ಬಗೆಬಗೆಯ ಡಿಸೈನ್‌ನಲ್ಲಿ ದೊರೆಯುತ್ತಿವೆ” ಎನ್ನುತ್ತಾರೆ ಜ್ಯುವೆಲ್‌ ವಿನ್ಯಾಸಕಿ ರೀಟಾ. ಅವರ ಪ್ರಕಾರ, ಕವಡೆಯ ಆಭರಣಗಳು ಈ ಮೊದಲು ಟ್ರೈಬಲ್‌ ಜನಾಂಗದವರ ಆಭರಣಗಳಾಗಿದ್ದವು. ಇದೀಗ ಅವುಗಳಿಂದ ಸ್ಪೂರ್ತಿಗೊಂಡ ಫಂಕಿ ಜ್ಯುವೆಲರ್‌ ಡಿಸೈನರ್‌ಗಳು ಇವಕ್ಕೆ ಹೊಸ ರೂಪ ಕೊಟ್ಟು ಕೊಂಚ ಡಿಸೈನ್‌ ಬದಲಿಸಿ, ಫಂಕಿ ಲುಕ್‌ ನೀಡಿ ಸಾಮಾನ್ಯ ಫ್ಯಾಷನ್‌ ಪ್ರಿಯರು ಧರಿಸುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಳಿಸಿದ್ದಾರೆ ಎನ್ನುತ್ತಾರೆ. ಇನ್ನು, ಕವಡೆಗೂ ಸಿಕ್ತು ಕಿಮ್ಮತ್ತು! ಎನ್ನುವ ಮಾತಿನಂತೆ ಇದೀಗ ಇವಕ್ಕೂ ಫ್ಯಾಷನ್‌ ಲುಕ್‌ ದೊರೆತಿರುವುದು ಹಾಗೂ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿರುವುದು ಟ್ರೆಂಡ್‌ ಸೆಟ್‌ ಆಗಲು ಮತ್ತೊಂದು ಕಾರಣ ಎನ್ನುತ್ತಾರೆ ವಿನ್ಯಾಸಕರಾದ ರಾಣಿ ಜಯಂತ್‌.

ವೆರೈಟಿ ಕವಡೆ ನೆಕ್ಲೇಸ್‌ ವಿನ್ಯಾಸ

ಚೋಕರ್‌ ಕವಡೆ, ಕವಡೆ ಚೈನ್‌, ಕವಡೆ ಹಾರ, ಕವಡೆ ಲೇಯರ್‌ ಹಾರ, ಕವಡೆ ನೆಕ್ಲೇಸ್‌, ಕವಡೆ ಹ್ಯಾಂಗಿಂಗ್‌ ನೆಕ್‌ ಚೈನ್‌ ಸೇರಿದಂತೆ ನಾನಾ ಬಗೆಯ ನೆಕ್ಲೇಸ್‌ ವಿನ್ಯಾಸಗಳು ಬಂದಿವೆ. ಇನ್ನು ಕೆಲವು ಒರಿಜಿನಲ್‌ ಕವಡೆಗಳಲ್ಲಿ ಡಿಸೈನ್‌ ಮಾಡಿದವು ದೊರೆತರೇ, ಇನ್ನು ಕೆಲವು ಇವುಗಳ ರಿಪ್ಲಿಕಾ ಅಂದರೆ ಪ್ಲಾಸ್ಟಿಕ್‌ ಕವಡೆಯ ನೆಕ್ಲೇಸ್‌ಗಳು ದೊರೆಯುತ್ತಿವೆ. ಬೆಲೆಯೂ ಕಡಿಮೆ. ನೂರು ರೂ. ಗಳಿಂದ ಆರಂಭವಾಗಿ ಮೂನ್ನೂರು, ನಾನೂಲ್ಕು ನೂರು ರೂ.ಗಳವರೆಗೂ ಇವಕ್ಕೆ ಬೆಲೆಯಿದೆ. ಆಯಾ ಡಿಸೈನ್‌ಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ ಎನ್ನುತ್ತಾರೆ ಮಾರಾಟಗಾರರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Fashion: ಚಳಿಗಾಲದ ಫ್ಯಾಷನ್‌ನಲ್ಲಿ ಯುವತಿಯರನ್ನು ಸೆಳೆದ ಪ್ಲೀಟೆಡ್‌ ಮಿಡಿ ಸ್ಕರ್ಟ್

Exit mobile version