ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ನ ಹಾಲಿಡೇ ಫ್ಯಾಷನ್‌ನಲ್ಲಿ (Flat Sandals Fashion) ಫ್ಲ್ಯಾಟ್ ಸ್ಯಾಂಡಲ್ಸ್ ನದ್ದೇ ಹವಾ! ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಮಾನಿನಿಯರನ್ನು ಸೆಳೆದಿವೆ. ಅದರಲ್ಲೂ ಫ್ಯಾಷೆನಬಲ್ ಔಟ್‌ಫಿಟ್‌ಗಳಿಗೆ ಮ್ಯಾಚ್ ಆಗುವಂತಹ ಬಗೆಬಗೆಯ ವಿನ್ಯಾಸಗಳಲ್ಲಿ ಎಂಟ್ರಿ ನೀಡಿವೆ. ಹುಡುಗಿಯರ ಹಾಲಿ ಡೇ ಫ್ಯಾಷನ್‌ಗೆ ಸಾಥ್ ನೀಡುತ್ತಿವೆ. “ಇದೀಗ ಟ್ರೆಂಡಿಯಾಗಿರುವ ಫ್ಲ್ಯಾಟ್ ಸ್ಯಾಂಡಲ್ಸ್ ಎಲ್ಲರಿಗೂ ಪ್ರಿಯವಾಗುತ್ತಿವೆ. ಯಾಕೆಂದರೇ, ಎಷ್ಟು ದೂರ ನಡೆದಾಡಿದರೂ ಕಾಲು ನೋವಾಗುವುದಿಲ್ಲ. ಅಲ್ಲದೇ ಧರಿಸಿದಾಗ ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಹಾಲಿ ಡೇ ಫ್ಯಾಷನ್ ಉಡುಪುಗಳಿಗೂ ಮ್ಯಾಚ್ ಆಗುತ್ತವೆ. ಊಹೆಗೂ ಮೀರಿದ ವಿನ್ಯಾಸದಲ್ಲಿ ಇವು ಬಿಡುಗಡೆಗೊಂಡಿವೆ. ಹಾಗಾಗಿ ಇದೀಗ ವಯಸ್ಸಿನ ಭೇದವಿಲ್ಲದೇ ಟೀನೇಜ್ ಹುಡುಗಿಯರಿಂದಿಡಿದು ಮಧ್ಯ ವಯಸ್ಸಿನ ಮಹಿಳೆಯರು ಕೂಡ ಈ ಪಾದರಕ್ಷೆಗಳಿಗೆ ಮನಸೋಲುತ್ತಿದ್ದಾರೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಟ್ರೆಂಡ್‌ನಲ್ಲಿರುವ ಶೇಡ್ಸ್ & ಡಿಸೈನ್ಸ್
ನಿಯಾನ್, ಪಾಸ್ಟೆಲ್, ಮೆಟಾಲಿಕ್ ಶೇಡ್ಸ್, ಶ್ವೇತವರ್ಣ, ರೇಡಿಯಂ ಬಣ್ಣ, ಹಾಟ್ ಪಿಂಕ್, ಎಲೆಕ್ಟ್ರಿಕ್ ಬ್ಲ್ಯೂ ಕಲರ್ಸ್ ಮತ್ತು ಶೇಡ್ಸ್‌ನವು ಟ್ರೆಂಡಿಯಾಗಿವೆ. ಅಂದ ಹಾಗೆ, ಇವು ಬಿಸಿಲಿನಲ್ಲಿ ಪಾದಗಳ ರಂಗನ್ನು ಹೆಚ್ಚಿಸುತ್ತವಂತೆ. ಇನ್ನು ವಿನ್ಯಾಸದ ವಿಷಯಕ್ಕೆ ಬಂದಲ್ಲಿ, ವಿ ಶೇಪ್ ಸಿಂಪಲ್ ಸ್ಯಾಂಡಲ್ಸ್‌ನಿಂದಿಡಿದು, ಬೋ, ಫ್ಲವರ್, ಕ್ರಿಸ್ಟಲ್ ವ್ರಾಪ್, ಎಂಬ್ರಾಯ್ಡರಿ ಎಥ್ನಿಕ್ ಫ್ಲ್ಯಾಟ್ಸ್, ಗ್ಲಾಡಿಯೇಟರ್ಸ್ ಡಿಸೈನ್ನ ಫ್ಲ್ಯಾಟ್ಸ್, ಹಾಫ್ ಶೂ ಶೈಲಿಯವು, ಬಗೆಬಗೆಯ ಕಲರ್ನ ಸ್ಟ್ರಾಪ್ ಹೊಂದಿರುವಂತವು, ಬಣ್ಣ ಬಣ್ಣದ ಪೊಲ್ಕಾ ಡಾಟ್ಸ್ ಇರುವಂತವು ಸೇರಿದಂತೆ ಊಹೆಗೂ ಮೀರಿದ ಡಿಸೈನ್‌ನಲ್ಲಿ ಕಾಲಿಟ್ಟಿವೆ. ಇಲ್ಲಿ ತಿಳಿಸಿರುವುದು ಕೇವಲ ಸ್ಯಾಂಪಲ್ ಅಷ್ಟೇ! ಎನ್ನುತ್ತಾರೆ ಮಾರಾಟಗಾರರು. ಇನ್ನು ಫ್ಲಿಪ್-ಫ್ಲಾಫ್ಸ್, ಗ್ಲಾಡಿಯೆಟರ್ಸ್, ಪೀಟ್ ಟೋಸ್, ರೋಮನ್ ಡಿಸೈನ್, ಹಾಫ್ ಸ್ನೀಕರ್ಸ್ ಸ್ಯಾಂಡಲ್‌ಗಳಿಗೆ ದಶಕದಿಂದಲೂ ಬೇಡಿಕೆ ಕುಂದಿಲ್ಲ ಎನ್ನುತ್ತಾರೆ.
ಹಾಲಿಡೇ ಫ್ಯಾಷನ್‌ಗೆ ಪರ್ಫೆಕ್ಟ್
ಶೂಗಳನ್ನು ಹೊರತುಪಡಿಸಿದಲ್ಲಿ, ಹಾಲಿಡೇ ಫ್ಯಾಷನ್‌ಗೆ ಈ ಫ್ಲ್ಯಾಟ್ ಸ್ಯಾಂಡಲ್‌ಗಳು ಹೇಳಿಮಾಡಿಸಿದಂತಿರುತ್ತವೆ. ಉದಾಹರಣೆಗೆ., ಬೀಚ್ ಸೈಡ್‌ನಲ್ಲಿ ಇವನ್ನು ಧರಿಸಿ ಫೋಟೋಶೂಟ್ ಮಾಡಿಸಬಹುದು ಎಂದು ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್ಸ್.
ಫ್ಲ್ಯಾಟ್ಸ್ ಸ್ಯಾಂಡಲ್ಸ್ ಮಹಿಮೆ
- ಫ್ಲ್ಯಾಟ್ಸ್ ಸ್ಯಾಂಡಲ್ಸ್ನಲ್ಲಿ ಬಣ್ಣದ ಆಯ್ಕೆಗೆ ಪ್ರಾಮುಖ್ಯತೆ ನೀಡಿ.
- ಟ್ರೆಕ್ಕಿಂಗ್ ನಂತಹ ಹಾಲಿಡೇಗೆ ಇದು ನಾಟ್ ಓಕೆ.
- ಹೆಚ್ಚು ಸ್ಟ್ರ್ಯಾಫ್ಸ್ ಇರುವ ಸ್ಯಾಂಡಲ್ಸ್ ಬಾಳಿಕೆ ಬರದು.
- ಹಿಮ್ಮಡಿ ಕನಿಷ್ಠ ಒಂದಿಂಚು ದಪ್ಪವಾಗಿರಲಿ. ಇಲ್ಲವಾದಲ್ಲಿ ಒಂದೆರಡು ದಿನಕ್ಕೆ ಸವೆಯಬಹುದು.
- ಡ್ರೆಸ್ಗೆ ಮ್ಯಾಚಿಂಗ್ ಕೂಡ ದೊರೆಯುತ್ತದೆ.
- ಅತ್ಯುತ್ತಮ ಡಿಸೈನ್ಗೆ ಸ್ಟ್ರೀಟ್ ಶಾಪಿಂಗ್ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)