ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವೆಡ್ಡಿಂಗ್ ಸೀಸನ್ನಲ್ಲಿ, ಧರಿಸಿದಾಗ (Shimmer half shoes trend) ಪಾದಗಳನ್ನು ಆಕರ್ಷಕವಾಗಿ ಬಿಂಬಿಸುವಂತಹ ಮಿನುಗುವ ಮಹಿಳೆಯರ ಶಿಮ್ಮರ್ ಹಾಫ್ ಶೂಗಳು ಟ್ರೆಂಡಿಯಾಗಿವೆ. ಫಾರ್ಮಲ್ ಲುಕ್ ಜೊತೆಗೆ ಇಂಡೋ-ವೆಸ್ಟರ್ನ್ ಲುಕ್ ನೀಡುವ ಇವು ನಾನಾ ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ.
ಹುಡುಗಿಯರ ಮನ ಗೆದ್ದ ಶಿಮ್ಮರ್ ಹಾಫ್ ಶೂ
ಸಮಾರಂಭಗಳಲ್ಲಿ ಮಾತ್ರವಲ್ಲ, ಗ್ರ್ಯಾಂಡ್ ಫಂಕ್ಷನ್ ಹಾಗೂ ಪಾರ್ಟಿಗಳಲ್ಲಿ ಧರಿಸಬಹುದಾದ ಜಗಮಗಿಸುವ ಹಾಫ್ ಶೂಗಳು ಹುಡುಗಿಯರ ಮನ ಗೆದ್ದಿವೆ. ಗೌನ್ಗಳು, ಲೆಹೆಂಗಾ, ಸಲ್ವಾರ್-ಕಮೀಝ್ ಸೇರಿದಂತೆ ಗ್ರ್ಯಾಂಡ್ ಉಡುಪಿನ ಜೊತೆ ಮ್ಯಾಚ್ ಮಾಡಬಹುದಾದ ಇವು ಹೀಲ್ಸ್ ಹಾಗೂ ಹೀಲ್ಸ್ ರಹಿತ ಡಿಸೈನ್ನಲ್ಲೂ ಲಭ್ಯ. ಹಾಗಾಗಿ ಇವು ಹೆಚ್ಚು ಬೇಡಿಕೆಯಲ್ಲಿವೆ.
ಯಾವ್ಯಾವ ಡಿಸೈನ್ನಲ್ಲಿ ಲಭ್ಯ?
ಸಿಲ್ವರ್, ಗೋಲ್ಡನ್, ಹಾಫ್ ವೈಟ್, ಪ್ಲಾಟಿನಂ ಶೇಡ್, ಬ್ರೌನ್, ರೆಡ್, ಸ್ಟೋನ್ ಡಿಸೈನ್ ಸೇರಿದಂತೆ ನಾನಾ ಶೇಡ್ ಹಾಗೂ ವಿನ್ಯಾಸದ ಶಿಮ್ಮರಿಂಗ್ ಹಾಫ್ ಶೂಗಳು ದೊರೆಯುತ್ತಿವೆ. ಎಥ್ನಿಕ್ ಲುಕ್ ನೀಡುವ ಶಿಮ್ಮರಿಂಗ್ ಹಾಫ್ ಶೂಗಳು ಮಹಿಳೆಯರನ್ನು ಸೆಳೆದರ, ಹೈ ಹೀಲ್ಸ್ ಇರುವಂತವು ಹುಡುಗಿಯರನ್ನು ಆಕರ್ಷಿಸುತ್ತಿವೆ. ಕೆಲವು ಜಗಮಗಿಸುವ ಮೆಟಿರಿಯಲ್ನ ಪ್ಯಾಚ್ ವರ್ಕ್ ಹೊಂದಿರುವಂತವು ಬಂದಿವೆ. ಒಟ್ಟಿನಲ್ಲಿ , ಈ ವೆಡ್ಡಿಂಗ್ ಸೀಸನ್ಗೆ ಹೊಂದುವಂತಿವೆ.
ಹೇಗೆಲ್ಲಾ ಮಿಕ್ಸ್ ಮ್ಯಾಚ್ ಮಾಡಬಹುದು?
ಗೌನ್ಗಳೊಂದಿಗೆ ಮ್ಯಾಚ್ ಮಾಡುವುದು ತೀರಾ ಸುಲಭ. ಆದರೆ, ಇವು ಹೀಲ್ಸ್ ಹೊಂದಿದ ಹಾಫ್ ಶೂಗಳಾಗಿರಬೇಕು. ಇನ್ನು ಹೀಲ್ಸ್ ಇಲ್ಲದವನ್ನು ಯಾವುದೇ ಎಥ್ನಿಕ್ ಲುಕ್ ನೀಡುವ ಔಟ್ಫಿಟ್ನೊಂದಿಗೆ ಧರಿಸಿದರೂ ಒಕೆ. ಸ್ಟೋನ್ ಹಾಗೂ ಶೈನಿಂಗ್ ಇರುವ ಹಾಫ್ ಶೂಗಳಲ್ಲಿ ಗೋಲ್ಡನ್ ಕಲರ್ನವು ಎಲ್ಲಾ ಬಗೆಯ ಗ್ರ್ಯಾಂಡ್ ಉಡುಪುಗಳಿಗೂ ಮ್ಯಾಚ್ ಆಗುತ್ತವೆ. ಇತರೇ ವರ್ಣದವಾದಲ್ಲಿ ಅವಕ್ಕೆ ಹೊಂದು ಶೇಡ್ನದ್ದಕ್ಕೆ ಮ್ಯಾಚ್ ಮಾಡಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಶಿಮ್ಮರ್ ಹಾಫ್ ಶೂ ಪ್ರಿಯರಿಗೆ ಟಿಪ್ಸ್
- ಹೀಲ್ಸ್ ಇರುವಂತಹ ಹಾಫ್ ಶೂ ಆದಲ್ಲಿ ಸರಿಯಾದ ಸೈಜ್ನದ್ದೇ ಕೊಳ್ಳಿ. ಲೂಸಾಗಿರಕೂಡದು.
- ಗೋಲ್ಡನ್ ಶೇಡ್ನಲ್ಲೂ ನಾಲ್ಕೈದು ಬಗೆಯವು ದೊರೆಯುತ್ತವೆ.
- ಎಥ್ನಿಕ್ ಲುಕ್ ಇದ್ದಲ್ಲಿ ಬಹುತೇಕ ಉಡುಪಿಗೆ ಧರಿಸಬಹುದು.
- ಗೋಲ್ಡನ್ ಹಾಗೂ ಸಿಲ್ವರ್ ಶೇಡ್ನ ಶಿಮ್ಮರ್ ಹಾಫ್ ಶೂಗಳು ಟ್ರೆಂಡಿಯಾಗಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್ನಲ್ಲಿ ಟ್ರೆಂಡಿಯಾದ 3 ಡಿಸೈನ್ನ ಮುತ್ತಿನ ಮೂಗುತಿಗಳಿವು