ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ನಡೆದ ಧೃತಿ ಉತ್ಸವದಲ್ಲಿ (Dhruthi Utsava Fashion Show) ರಾಜ ರವಿವರ್ಮಾ ಪೇಟಿಂಗ್ಸ್‌ನಲ್ಲಿನ ಆಯ್ದ ಕೆಲವು ಕ್ಯಾರೆಕ್ಟರ್‌ಗಳಿಗೆ ತಕ್ಕಂತೆ ಕಾಣಿಸಿಕೊಂಡ ಮಹಿಳೆಯರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಟ್ರೆಡಿಷನಲ್ ಹಾಗೂ ಸಾಂಸ್ಕೃತಿಕ ಹಿನ್ನೆಲೆಗೆ ಹೊಂದುವಂತಹ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಂಡು ನೋಡುಗರ ಮನಸೆಳೆದರು.
ರಾಜ ರವಿವರ್ಮಾ ಥೀಮ್‌ನ ಫ್ಯಾಷನ್ ಶೋ
ರಾಜ ರವಿವರ್ಮಾ ಥೀಮ್ ಇರಿಸಿಕೊಂಡು ಹಮ್ಮಿಕೊಳ್ಳಲಾದ ಈ ಮಹಿಳೆಯರ ಫ್ಯಾಷನ್ ಶೋನಲ್ಲಿ ಮೈಸೂರಿನ ಕಲಾವಿದ ಎಲ್. ಕೆ. ಆಚಾರ್ಯರವರು ರಚಿಸಿದ ಚಿತ್ತಾರಗಳು ಕೂಡ ಜೊತೆ ಜೊತೆಯಲ್ಲೆ ವೇದಿಕೆ ಮೇಲೆ ಅನಾವರಣಗೊಂಡವು.
ಹೆಜ್ಜೆ ಹಾಕಿದ ಹಾಕಿದ ಮಾಡೆಲ್‌ಗಳು
ರಾಧೆಯಾಗಿ ಅನಘಾ, ರಾಣಿ ಲಕ್ಷ್ಮಿ ಬಾಯಿಯಾಗಿ ಸಂಜನಾ, ತಂಬೂರ ಹಿಡಿದಿರುವ ಜಾನ್ಹವಿ, ಕುರುಪಮ್ ರಾಣಿಯಾಗಿ ಅನುಷಾ, ಚಂದ್ರನ ಬೆಳಕಿನಲ್ಲಿನ ರಾಧೆಯಾಗಿ ತನುಶ್ರೀ, ಜಾನಕಿ ಬಾಯಿಯಾಗಿ ಶಿಶಿರಾ, ಹಣ್ಣು ಹಿಡಿದಿರುವ ಮಹಿಳೆಯಾಗಿ ಲಿಖಿತಾ, ವಯಲೀನ್ ಹಿಡಿದ ಯುವತಿಯಾಗಿ ವೈಷ್ಣವಿ, ಮಗುವಿನೊಂದಿಗೆ ಮಹಿಳೆ ಹೀಗೆ ಪೇಟಿಂಗ್‌ನಲ್ಲಿರುವ ಮಹಿಳೆಯರಂತೆಯೇ ಸಿಂಗರಾಗೊಂಡ ಮಹಿಳೆಯರು ಫ್ಯಾಷನ್ ಶೋನಲ್ಲಿ ವಾಕ್ ಮಾಡಿ ಸೈ ಎನಿಸಿಕೊಂಡರು. ಇದು ರಾಜಾ ರವಿವರ್ಮಾ ಪೇಟಿಂಗ್‌ಗಳನ್ನು ಕಣ್ಮುಂದೆ ತಂದು ನಿಲ್ಲಿಸಿದವು.
ಅಪರ್ಣಾ ರಾವ್ ಮಾತು
“ಧೃತಿ ಮಾರುಕಟ್ಟೆ ಮಹಿಳೆಯರಿಂದ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ನಡೆಯುತ್ತಿರುವ ಮಾರುಕಟ್ಟೆಯಾಗಿದೆ. ಇಲ್ಲಿ ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಜೊತೆಗೆ ಮನೋರಂಜನೆ ನೀಡುವಂತಹ ಕಾರ್ಯಕ್ರಮಗಳನ್ನು ಧೃತಿ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ. ಫ್ಯಾಷನ್ ಶೋ ಮಾತ್ರವಲ್ಲ, ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಯಶಸ್ವಿಯಾಗಿ ನಡೆಸಲಾಗಿದೆ” ಎಂದು ಸಂಸ್ಥಾಪಕರಾದ ಅಪರ್ಣಾ ರಾವ್ ಅವರು ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞೆ ಗೀತಾ ರಾಮನುಜಂ, ಕಲಾವಿದರಾದ ಜಯಲಕ್ಷ್ಮಿ ಪಾಟೀಲ್, ದೀಪಾ ರವಿಶಂಕರ್ ಪಾಲ್ಗೊಂಡಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)