Site icon Vistara News

Tie Up Crop Top Fashion: ವೀಕೆಂಡ್‌ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಟೈ-ಅಪ್‌ ಕ್ರಾಪ್‌ ಟಾಪ್‌

Tie Up Crop Top Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಲೌಸ್‌ ಶೈಲಿಯ ಟೈ-ಅಪ್‌ ಕ್ರಾಪ್‌ ಟಾಪ್‌ಗಳು (Tie Up Crop Top Fashion) ಈ ಸೀಸನ್‌ನ ವೀಕೆಂಡ್‌ ಔಟಿಂಗ್‌ಗೆ ಸಾಥ್‌ ನೀಡಲು ಆಗಮಿಸಿವೆ. ಹಾಲಿಡೇಯ ರಂಗು ಹೆಚ್ಚಿಸಲು ಆಗಮಿಸಿರುವ ಇವು ರೆಟ್ರೊ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿವೆ. ವೀಕೆಂಡ್‌ ಔಟಿಂಗ್‌ ಮಾತ್ರವಲ್ಲ, ಬೀಚ್‌ ಅಥವಾ ಯಾವುದೇ ಹಾಲಿ ಡೇಯ ಖುಷಿಯನ್ನು ಹೆಚ್ಚಿಸಲು ಸಜ್ಜಾಗಿವೆ.

ರೆಟ್ರೊ ಸ್ಟೈಲಿಂಗ್‌

“ಅಂದ ಹಾಗೆ, ಮಾಮೂಲಿ ಕ್ರಾಪ್‌ ಟಾಪ್‌ಗಳು, ಹೊಟ್ಟೆಯ ಬೆಲ್ಲಿಯ ಮೇಲೆ ನಿಲ್ಲುತ್ತವೆ. ಆದರೆ, ಇವು ಬೆಲ್ಲಿಯನ್ನು ಮರೆಮಾಚಿ ಟೈಯಿಂಗ್‌ ಲುಕ್‌ ನೀಡುತ್ತವೆ. ಅಷ್ಟೆ ಯಾಕೆ? ಹಾಲಿಡೇಯಲ್ಲಿನ ಸ್ಟೈಲಿಂಗ್‌ಗೆ ಸಾಥ್‌ ನೀಡುತ್ತವೆ. ಆಕರ್ಷಕವಾಗಿ ಕಾಣುವ ಇವು ಬಿಂದಾಸ್‌ ಲುಕ್‌ನಲ್ಲಿ ಸೇರುತ್ತವೆ. ಹುಡುಗಿಯರು ಅದರಲ್ಲೂ ಜೆನ್‌ ಜಿ ಯುವತಿಯರಿಗೆ ಇವು ಪ್ರಿಯವಾಗಿವೆ. ಸಾಮಾನ್ಯ ದಿನಗಳಲ್ಲಿ ಧರಿಸಲು ಹಿಂಜರಿಯುವ ಯುವತಿಯರು ಹಾಲಿಡೇಗಳಲ್ಲಿ ಇವನ್ನು ಧರಿಸಲಾರಂಭಿಸಿದ್ದಾರೆ. ನೋಡಲು ಮನಮೋಹಕವಾಗಿ ಕಾಣಿಸುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್ ರಾಗ. ಅವರ ಪ್ರಕಾರ, ಟೈ-ಅಪ್‌ ಕ್ರಾಪ್‌ ಟಾಪ್‌ ನೋಡಲು ಬ್ಲೌಸ್‌ನ ಹೊಸ ರೂಪದಂತೆಯೇ ಕಾಣುತ್ತವೆ.

ಟೈ-ಅಪ್‌ ಕ್ರಾಪ್‌ ಟಾಪ್‌ ವಿಶೇಷತೆ

ನೋಡಲು ಪಕ್ಕಾ ಸೀರೆ ಬ್ಲೌಸ್‌ನಂತೆ ಕಾಣುವ ಇವು ಅವಲ್ಲ! ಹಿಂದಿನ ಸಿನಿಮಾಗಳಲ್ಲಿ ರೆಟ್ರೊ ಸ್ಟೈಲ್‌ನಲ್ಲಿ ಇವು ಟ್ರೆಂಡಿಯಾಗಿದ್ದವು. ಸಿನಿಮಾ ತಾರೆಯರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ, ಸಮಾರಂಭಗಳಲ್ಲೂ ಇವನ್ನು ಧರಿಸುತ್ತಿದ್ದರು. ಹಾಗಾಗಿ ಇವು ರೆಟ್ರೊ ಸ್ಟೈಲ್‌ ಕ್ರಾಪ್‌ ಟಾಪ್‌ ಎನ್ನಲಾಗುತ್ತದೆ. ಬೆಲ್‌ ಬಾಟಮ್‌ ಪ್ಯಾಂಟ್‌ ಜೊತೆ ಇವನ್ನು ಕಾಣಬಹುದಾಗಿತ್ತು. ಇದೀಗ, ಇವು ಸ್ಕರ್ಟ್, ಮಿಡಿ ಹಾಗೂ ಶಾಟ್ರ್ಸ್ ಜೊತೆಯೂ ನೋಡಬಹುದಾಗಿದೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ಗಳು.

ಟೈ-ಅಪ್‌ ಕ್ರಾಪ್‌ ಟಾಪ್‌ ಕೋ ಆರ್ಡ್ ಸೆಟ್‌

ಇದೀಗ ಹೆಚ್ಚಾಗಿ ಫ್ಯಾಷನ್‌ನಲ್ಲಿರುವುದು ಕೋ ಆರ್ಡ್ ಸೆಟ್‌ನ ಟೈ-ಅಪ್‌ ಕ್ರಾಪ್‌ ಟಾಪ್‌ಗಳು. ಪ್ರಿಂಟೆಡ್‌ ಅತಿ ಹೆಚ್ಚು ಟ್ರೆಂಡಿಯಾಗಿವೆ. ಡಿಸೈನರ್‌ ಸೆಟ್‌ಗಳಲ್ಲಿ ಇವು ದೊರಕುತ್ತಿವೆ. ಸಿನಿಮಾ ತಾರೆಯರು ತಮ್ಮ ಬ್ರಂಚ್‌ ಪಾರ್ಟಿಗಳಲ್ಲಿ ಹಾಗೂ ಹಾಲಿಡೇಗಳಲ್ಲಿ ಧರಿಸುತ್ತಿರುವುದು ಕಾಮನ್‌ ಆಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಟೈ-ಅಪ್‌ ಕ್ರಾಪ್‌ ಟಾಪ್‌ ಮಿಕ್ಸ್‌ ಮ್ಯಾಚ್‌

ನಿಮಗೆ ಗೊತ್ತೇ! ಈ ಟಾಪ್‌ಗಳನ್ನು ಇತರೇ ಔಟ್‌ಫಿಟ್‌ನೊಂದಿಗೂ ಮಿಕ್ಸ್ ಮ್ಯಾಚ್‌ ಮಾಡಬಹುದು. ಜೀನ್ಸ್ ಪ್ಯಾಂಟ್‌ನೊಂದಿಗೆ, ಸ್ಕರ್ಟ್ ಹಾಗೂ ಶಾಟ್ರ್ಸ್‌ನೊಂದಿಗೂ ಧರಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Compact Eyeshadow Palette: ಮಿನಿ ಐ ಶ್ಯಾಡೋ ಪ್ಯಾಲೆಟ್‌ ಆಯ್ಕೆ ಮಾಡೋದು ಹೇಗೆ?

Exit mobile version