Site icon Vistara News

Denim Co Ord Set Fashion: ವಿಂಟರ್‌ ಫ್ಯಾಷನ್‌ನಲ್ಲಿ ಬಂತು ಬೆಚ್ಚಗಿಡುವ ಡೆನಿಮ್‌ ಕೋ ಆರ್ಡ್ ಸೆಟ್‌

Denim Co Ord Set Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡೆನಿಮ್‌ ಕೋ ಆರ್ಡ್ ಸೆಟ್‌ ಫ್ಯಾಷನ್‌ (Denim Co Ord Set Fashion) ವಿಂಟರ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಈ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಡೆನಿಮ್‌ ಫ್ಯಾಬ್ರಿಕ್‌ನ ಕೋ ಆರ್ಡ್ ಸೆಟ್‌ ಔಟ್‌ಫಿಟ್‌ಗಳು ಯುವತಿಯರ ಸೀಸನ್‌ ಫ್ಯಾಷನ್‌ ಲಿಸ್ಟ್‌ಗೆ ಸೇರಿವೆ.

ಡೆನಿಮ್‌ ಕೋ ಆರ್ಡ್ ಸೆಟ್‌ ಟ್ರೆಂಡ್‌

“ಡೆನಿಮ್‌ ಕೋ ಆರ್ಡ್ ಸೆಟ್‌ ಔಟ್‌ಫಿಟ್‌ಗಳನ್ನು ತಮ್ಮ ಫ್ಯಾಷನ್‌ ಲಿಸ್ಟ್‌ಗೆ ಸೇರಿಸಿಕೊಳ್ಳಲು ಬಯಸುವವರು ಹೊಸತನ್ನು ಖರೀದಿಸಬಹುದು ಅಥವಾ ತಮ್ಮ ಬಳಿ ಕಲೆಕ್ಷನ್‌ನಲ್ಲಿರುವ ಡೆನಿಮ್‌ ಫ್ಯಾಬ್ರಿಕ್‌ನ ಟಾಪ್‌, ಪ್ಯಾಂಟ್‌, ಶಾರ್ಟ್ಸ್, ಸ್ಕರ್ಟ್ ಅಥವಾ ಮಿಡಿಯನ್ನು ಮರು ಬಳಕೆ ಮಾಡಿ ಟ್ರೆಂಡಿ ಸ್ಟೈಲಿಂಗ್‌ ಮಾಡಬಹುದು. ಇದಕ್ಕಾಗಿ ಒಂದಿಷ್ಟು ಸ್ಟೈಲಿಂಗ್‌ ಐಡಿಯಾ ತಿಳಿದಿರಬೇಕಷ್ಟೇ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಈ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಡೆನಿಮ್‌ ಔಟ್‌ಫಿಟ್‌ಗಳು ಕೋ ಆರ್ಡ್ ಸೆಟ್‌ನಲ್ಲಿ ಆಗಮಿಸಿವೆ. ಅದರಲ್ಲೂ, ಜೆನ್‌ ಜಿ ಹುಡುಗಿಯರಿಗೆ ಹಾಗೂ ಕಾರ್ಪೋರೇಟ್‌ ಕ್ಷೇತ್ರದ ಯುವತಿಯರಿಗೆ ಇಷ್ಟವಾಗುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ಡೆನಿಮ್‌ ಕೋ ಆರ್ಡ್ ಸೆಟ್‌

ಡೆನಿಮ್‌ ಜಾಕೆಟ್‌-ಪ್ಯಾಂಟ್‌, ಡೆನಿಮ್‌ ಕೋಟ್‌ – ಸ್ಕರ್ಟ್, ಡೆನಿಮ್‌ ಟಾಪ್‌-ಮಿಡಿ ಸ್ಕರ್ಟ್, ಡೆನಿಮ್‌ ಲಾಂಗ್‌ ಶರ್ಟ್ ಟಾಪ್‌-ಮಿನಿ ಶಾಟ್ರ್ಸ್, ಡೆನಿಮ್‌ ಫ್ರಾಕ್‌-ಡೆನಿಮ್‌ ಕೆಪ್ರೀಸ್‌, ಡೆನಿಮ್‌ ಲೆಗ್ಗಿಂಗ್ಸ್-ಕ್ರಾಪ್‌ ಟಾಪ್‌, ಡೆನಿಮ್‌ ಕ್ರಾಪ್‌ ಟಾಪ್‌-ಬರ್ಮಡಾ ಶಾಟ್ರ್ಸ್, ಡೆನಿಮ್‌ ಶರ್ಟ್ – ಮಿಡಿ ಸೇರಿದಂತೆ ನಾನಾ ಶೈಲಿಯ ಕೋ ಆರ್ಡ್ ಸೆಟ್‌ಗಳು ಬಿಡುಗಡೆಗೊಂಡಿವೆ. ಸೀಸನ್‌ಗೆ ತಕ್ಕಂತೆ ಹೊಂದುವಂತಹ ಡಿಸೈನ್‌ಗಳಲ್ಲಿ ಕಾಣಿಸಿಕೊಂಡಿವೆ.

ವಾರ್ಡ್‌ರೋಬ್‌ನಲ್ಲಿರುವ ಡೆನಿಮ್‌ ಮಿಕ್ಸ್‌ ಮ್ಯಾಚ್‌

ನೀವು ಹೊಸದಾಗಿ ಖರೀದಿಸಲು ಆಸಕ್ತಿ ಇಲ್ಲದಿದ್ದಲ್ಲಿ ಅಥವಾ ಸುಮ್ಮಸುಮ್ಮನೆ ಶಾಪಿಂಗ್‌ ಮಾಡಲು ಇಷ್ಟವಿಲ್ಲದಿದ್ದಲ್ಲಿ ನಿಮ್ಮ ಬಳಿ ಇರುವ ಡೆನಿಮ್‌ ಔಟ್‌ಫಿಟ್‌ಗಳನ್ನೇ ಮಿಕ್ಸ್‌ ಮ್ಯಾಚ್‌ ಮಾಡಿ ಕೋ ಆರ್ಡ್ ಸೆಟ್‌ ಮಾಡಬಹುದು. ಇದಕ್ಕೆ ಒಂದಿಷ್ಟು ಸಿಂಪಲ್‌ ಐಡಿಯಾ ಕಾರ್ಯಗತಗೊಳಿಸಬೇಕಷ್ಟೇ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇದಕ್ಕಾಗಿ ಒಂದಿಷ್ಟು ಇಲ್ಲಿ ಉದಾಹರಣೆ ಕೊಟ್ಟಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Lehenga Fashion: ನಟಿ ಮೌನಿ ರಾಯ್ ಗ್ರ್ಯಾಂಡ್ ಕೇಸರಿ ಲೆಹೆಂಗಾ ಜಾದೂ

Exit mobile version