-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸದಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಚೈತ್ರಾ ಆಚಾರ್ (Chaitra Achar), ಈ ಬಿರು ಬಿಸಿಲಿನಲ್ಲಿ, ಪಾರದರ್ಶಕ ನಿಟ್‌ವೇರ್ ಧರಿಸಿ ಬಿಂದಾಸ್ ಆಗಿ ಕಾಣಿಸಿಕೊಂಡು, ನೋಡುಗರ ಹುಬ್ಬೇರಿಸಿದ್ದಾರೆ.
ಪ್ರಯೋಗಾತ್ಮಕ ಹಾಟ್ ಲುಕ್
“ಬಿಸಿಲು ಕಾಲದಲ್ಲಿ ತಾರೆಯರು ನಾನಾ ಬಗೆಯ ಸಮ್ಮರ್‌ವೇರ್ ಧರಿಸುವುದು ಸಾಮಾನ್ಯ. ಇದರೊಂದಿಗೆ ಟ್ರೆಂಡ್ ಸೆಟ್ ಮಾಡುವುದರೊಂದಿಗೆ ಸೀಸನ್‌ಗೆ ತಕ್ಕಂತೆ ಕಾಣಿಸಿಕೊಳ್ಳುತ್ತಾರೆ. ಇನ್ನು ಕೆಲವು ನಟಿಯರು, ಒಂದು ಹೆಜ್ಜೆ ಮುಂದೆ ಇಡುತ್ತಾರೆ. ಸೀಸನ್‌ನಲ್ಲಿ ಟ್ರೆಂಡಿಯಾಗಿರದ ಉಡುಪುಗಳನ್ನು ಚಿತ್ರ-ವಿಚಿತ್ರವಾಗಿ ಧರಿಸಿ, ನೋಡುಗರನ್ನು ಸೆಳೆಯುತ್ತಾರೆ. ಇದಕ್ಕೆ ಸೋಷಿಯಲ್ ಮೀಡಿಯಾ ಕೂಡ ಸಾಥ್ ನೀಡುತ್ತದೆ. ಈ ನಿಟ್ಟಿನಲ್ಲಿ ಇದೀಗ ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ ಸರದಿ. ಮೊದಲಿನಿಂದಲೂ ಬಹುತೇಕ ಟ್ರೆಡಿಷನಲ್ ಹಾಗೂ ಕೂಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಇದ್ದಕ್ಕಿಂದ್ದಂತೆ ಪಾರದರ್ಶಕ ನಿಟ್ಟೆಡ್‌ವೇರ್ ಧರಿಸಿದ್ದಾರೆ. ಎಲ್ಲದಕ್ಕಿಂತ ಹುಬ್ಬೇರಿಸುವ ವಿಚಾರವೆಂದರೇ, ಅವರು ಈ ನಿಟ್ಟೇಡ್‌ವೇರ್‌ನೊಳಗೆ ಧರಿಸಿರುವ ಇನ್ನರ್‌ವೇರ್ಸ್ ಹೈ ಲೈಟಾಗಿರುವುದು. ಇದು ಬೇಕಂತಲೇ ಮಾಡಿರುವ ಸ್ಟೈಲಿಂಗ್. ಸಮ್ಮರ್ ಸ್ಟೈಲಿಂಗ್ ಎನ್ನಲು ಸಾಧ್ಯವಿಲ್ಲ! ಯಾಕೆಂದರೇ, ಅವರು ಧರಿಸಿರುವ ಟ್ರಾನ್ಸಪರೆಂಟ್ ಫುಲ್‌ಓವರ್ನಂತಹ ನಿಟ್ಟೆಡ್‌ವೇರ್ ಈ ಸೀಸನ್‌ನ ಔಟ್‌ಫಿಟ್ ಅಲ್ಲವೇ ಅಲ್ಲ. ಹಾಗಾಗಿ ಇದೊಂದು ಪ್ರಯೋಗಾತ್ಮಕ ಸ್ಟೈಲಿಂಗ್” ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ವಿದ್ಯಾ. ಅವರ ಪ್ರಕಾರ, ಇದೊಂದು ಮಿಕ್ಸ್ ಮ್ಯಾಚ್ ಇಂಡಿಪೆಂಟೆಂಡ್ ಸ್ಟೈಲಿಂಗ್. ಇದಕ್ಕಾಗಿ ಏನೂ ವೆಚ್ಚ ಮಾಡದೇ ಬಿಂಬಿಸಿಕೊಂಡಿರುವ ಲುಕ್ ಎನ್ನುತ್ತಾರೆ.
ಏನಿದು ನಿಟ್ಟೆಡ್‌ವೇರ್ ಮೆಶ್ ಲುಕ್
ಮೆಶ್ ಲುಕ್ ಎಂದರೇ, ಪಾರದರ್ಶಕ ಉಡುಪಿನ ಲುಕ್. ಇದು ಯಾವುದೇ ಜಾಲರಿಯಂತಹ ಉಡುಪು ಧರಿಸಿದಾಗ ಹೇಳಲಾಗುತ್ತದೆ. ಅದು ಕೀ ಹೋಲ್, ಲೇಸ್ ಕಟೌಟ್ ಸೇರಿದಂತೆ ಜಾಲರಿಯಂತಹ ಯಾವುದೇ ಉಡುಪಾಗಬಹುದು. ನಿಟ್ಟೆಡ್ವೇರ್ ಎಂದಾಗ ಎಲ್ಲರಿಗೂ ತೋಚುವುದು ಚಳಿಗಾಲದಲ್ಲಿ ಧರಿಸುವ ಪುಲ್‌ಓವರ್‌ನಂತ ಸ್ವೆಟರ್ಗಳು. ಉಡುಪಿನ ಮೇಲೆ ಧರಿಸುವ ಉಲ್ಲನ್‌ನಿಂದ ಸಿದ್ಧಪಡಿಸಲಾದ ತೆಳುವಾದ ಮೇಲುಡುಗೆಗಳಿವು. ಇದೀಗ ಇದನ್ನೇ ನಟಿ ಚೈತ್ರಾ ಆಚಾರ್ ತಮ್ಮ ಸ್ಟೈಲಿಂಗ್‌ನಲ್ಲಿ ಸೇರಿಸಿಕೊಂಡು, ಇನ್ನರ್‌ವೇರ್ ಮೇಲೆ ಧರಿಸಿ, ಹಾಟ್ ಲುಕ್‌ಗೆ ನಾಂದಿ ಹಾಡಿದ್ದಾರೆ.
ಯಾರಿದು ಚೈತ್ರಾ ಆಚಾರ್
ಮಾಹಿರಾ ಚಿತ್ರದ ಮೂಲಕ ನಟನೆಗೆ ಕಾಲಿಟ್ಟ ಚೈತ್ರಾ ಆಚಾರ್, ಸಪ್ತ ಸಾಗರಾದಾಚೆ, ಬ್ಲಿಂಕ್, ಉತ್ತರಾಕಾಂಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು, ಇವರು ಗಾಯಕಿ ಕೂಡ.
ಚೈತ್ರಾ ಹಾಟ್ ಲುಕ್
ಸದಾ ಒಂದಲ್ಲ ಒಂದು ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೈತ್ರಾ ಆಚಾರ್‌ರ ಈ ಹೊಸ ಪ್ರಯೋಗಾತ್ಮಕ ಹಾಟ್ ಲುಕ್, ಪ್ರಯೋಗಾತ್ಮಕ ಬಿಂದಾಸ್ ಸ್ಟೈಲಿಂಗ್‌ಗೆ ಸೇರಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Saree Fashion: ಸೀರೆಯ ಹೊಸ ಟ್ರೆಂಡ್ ಬಗ್ಗೆ ರ‍್ಯಾಪರ್ ಇಶಾನಿಯ ವ್ಯಾಖ್ಯಾನ ಇದು!