ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಲೂನ್ಗಳಲ್ಲಿ ಹೇರ್ ಕಲರಿಂಗ್ ಮಾಡಿಸುವಾಗ ಎಚ್ಚರವಹಿಸುವುದು (Star Saloon Awareness) ತೀರಾ ಅಗತ್ಯ. ಇಲ್ಲವಾದಲ್ಲಿ ಸಮಸ್ಯೆ ಎದುರಿಸಬೇಕಾದೀತು ಎಂದಿದ್ದಾರೆ ನಟಿ ಹಿತಾ ಚಂದ್ರಶೇಖರ್. ಸಲೂನ್ನಲ್ಲಿ ಕಲರಿಂಗ್ ಮಾಡಿಸಿದ ನಂತರ ತಮಗಾದ ರಿಯಾಕ್ಷನ್ ಹಾಗೂ ಅಲರ್ಜಿಯ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಹಿತಾ ಹೇರ್ ಕಲರಿಂಗ್ ಹಿನ್ನೆಲೆ
ಸೋಷಿಯಲ್ ಮೀಡಿಯಾದಲ್ಲಿ ಕೊಲಾಬರೇಷನ್ಗೆಂದು ಪ್ರತಿಷ್ಠಿತ ಸಲೂನ್ಗೆ ತೆರಳಿದ ನಟಿ ಹಿತಾ, ಹೇರ್ ಕಟನ್ನೊಂದಿಗೆ ಹೇರ್ ಕಲರಿಂಗ್ ಮಾಡಿಸಿದ್ದಾರೆ. ಎಲ್ಲವೂ ಸಾಂಗವಾಗಿ ಮುಗಿದಿದೆ. ಪ್ರತಿಷ್ಠಿತ ಸಲೂನ್ ಆದ್ದರಿಂದ ನಾನು ಯಾವ ಪ್ರಾಡಕ್ಟ್ ಬಳಸುತ್ತಿದ್ದಾರೆ ಎಂದು ಕೇಳಲಿಲ್ಲ ಎಂದಿದ್ದಾರೆ ಹಿತಾ. ಕಲರಿಂಗ್ ನೋಡಲು ಚೆನ್ನಾಗಿ ಕಾಣಿಸುತ್ತಿತ್ತು. ಮನೆಗೆ ಬಂದ ನಂತರ ನನ್ನ ಸ್ಕಾಲ್ಪ್ನಲ್ಲಿ ತುರಿಕೆ ಆರಂಭವಾಯಿತು. ಬರಬರುತ್ತಾ ಇದು ಹೆಚ್ಚಾಯಿತು. ರಾತ್ರಿ ನೋಡಿದರೇ ತಲೆ ಊದಿಕೊಂಡಿತು.ಅದರ ಜೊತೆಗೆ ಮುಖ, ಕಣ್ಣು ಎಲ್ಲವೂ ಊದಿಕೊಂಡಿತು. ಸಹಿಸಲು ಅಸಾಧ್ಯವಾದ ಅಲರ್ಜಿ ಉಂಟಾಗಿತ್ತು. ಬೆಳಗ್ಗೆ ಡರ್ಮಾಟಲಾಜಿಸ್ಟ್ ಬಳಿ ಹೋದ ನಂತರ ತಿಳಿಯಿತು. ಹಿಂದಿನ ದಿನ ಹೇರ್ ಕಲರ್ಗಾಗಿ ಬಳಸಿದ ಬಣ್ಣದ ಎಫೆಕ್ಟ್ನಿಂದ ಹೀಗಾಗಿದೆ ಎಂದು ಹಿತಾ ವಿವರಿಸಿದ್ದಾರೆ. ಅವರಿಗೆ ಡರ್ಮಾಟಲಾಜಿಸ್ಟ್ ಹೇಳಿದ ಪ್ರಕಾರ, ಹೆಚ್ಚು ದಿನಗಳ ಕಾಲ ಕೂದಲಲ್ಲಿ ಬಣ್ಣ ಉಳಿಯುವ ಸಲುವಾಗಿ ಅಮೋನಿಯಾ ಇರುವಂತಹ Paraphenylenediamine (PPD) ಪಿಪಿಡಿ ಕೆಮಿಕಲ್ ಅಂಶವಿರುವ ಹೇರ್ ಕಲರ್ ಪ್ರಾಡಕ್ಟ್ಗಳನ್ನು ಬಹಳಷ್ಟು ಸಲೂನ್ನವರು ಬಳಸುತ್ತಾರೆ. ಇದು ಬಹಳಷ್ಟು ಜನರಿಗೆ ರಿಯಾಕ್ಷನ್ ಅಥವಾ ಅಲರ್ಜಿಯುಂಟುಮಾಡುತ್ತದೆ. ಕೆಲವೊಮ್ಮೆ ಇದು ತೀರಾ ಅತಿರೇಕಕ್ಕೂ ಹೋಗಿ ಉಸಿರಾಟದ ತೊಂದರೆಯನ್ನುಂಟು ಮಾಡಬಹುದು. ತಲೆನೋವು ತರಬಹುದು. ಇನ್ನಿತರೇ ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಹಾಗಾಗಿ ಮೊದಲೇ ಈ ಬಗ್ಗೆ ತಿಳಿದುಕೊಂಡು ಮುಂದುವರಿಯಬೇಕು ಎಂದು ಸಲಹೆ ನೀಡಿದ್ದಾರೆ.
ಹಿತಾ ಕಿವಿ ಮಾತು
ಸಲೂನ್ನಲ್ಲಿ ಮೊದಲೇ ಯಾವ ಪ್ರಾಡಕ್ಟ್ ಬಳಸುತ್ತಿದ್ದಾರೆ, ಅದರಲ್ಲಿರುವ ಕೆಮಿಕಲ್ ಅಂಶಗಳೇನು? ನಿಮಗೆ ಅದು ಹೊಂದುತ್ತದೆಯೇ? ಎಂಬುದನ್ನು ತಿಳಿದುಕೊಂಡು ಮುಂದುವರೆಯಿರಿ. ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಜಾಗೃತಿ ಮೂಡಿಸಿದ್ದಾರೆ ನಟಿ ಹಿತಾ ಚಂದ್ರಶೇಖರ್.
- ಫ್ಯಾನ್ಸಿಯಾಗಿರುವ ಸಲೂನ್ ಎಂದುಕೊಂಡು ಪ್ರಾಡಕ್ಟ್ ಚೆಕ್ ಮಾಡದೇ ಕಲರಿಂಗ್ ಮಾಡಿಸಬೇಡಿ.
- ಒಂದು ದಿನ ಮೊದಲೇ ಪ್ಯಾಚ್ ಟೆಸ್ಟ್ ಮಾಡಿಸಿ. ಸೆಟ್ ಆದಲ್ಲಿ ಮುಂದುವರೆಯಿರಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Tieing Pants Fashion: ಫ್ಯಾಷನ್ನಲ್ಲಿ ಬಂತು ಬೆಲ್ಟ್ ಇಲ್ಲದ ಟೈಯಿಂಗ್ ಪ್ಯಾಂಟ್