Site icon Vistara News

Saanya Iyer: ಗ್ರ್ಯಾಂಡ್‌ ಲೆಹೆಂಗಾದಲ್ಲಿ ರಾಣಿಯಂತೆ ಕಂಗೊಳಿಸಿದ ನಟಿ ಸಾನ್ಯಾ ಅಯ್ಯರ್‌

Saanya Iyer

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರ್ಯಾಂಡ್‌ ಬ್ರೈಡಲ್‌ ಲೆಹೆಂಗಾದಲ್ಲಿ ನಟಿ ಸಾನ್ಯಾ ಅಯ್ಯರ್‌ (Saanya Iyer) ರಾಣಿಯಂತೆ ಕಂಗೊಳಿಸಿದ್ದಾರೆ.
ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಗ್ರ್ಯಾಂಡ್‌ ಲೆಹೆಂಗಾಗಳಿಗೆ ಪೂರಕ ಎಂಬಂತೆ, ಸಾನ್ಯಾ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಈ ಸೀಸನ್‌ನ ವೆಡ್ಡಿಂಗ್‌ ಸೀಸನ್‌ನಲ್ಲಿ ಲೆಹೆಂಗಾಗಳನ್ನು ಧರಿಸುವ ಹೆಣ್ಣುಮಕ್ಕಳು ಹೆಚ್ಚಾಗಿದ್ದಾರೆ. ಕೇವಲ ಮದುವೆಯಾಗುವ ಹೆಣ್ಣುಮಕ್ಕಳು ಮಾತ್ರವಲ್ಲ, ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಯುವತಿಯರು ಕೂಡ ಬ್ರೈಡಲ್‌ ಗ್ರ್ಯಾಂಡ್‌ ಲೆಹೆಂಗಾಗಳನ್ನು ಧರಿಸತೊಡಗಿದ್ದಾರೆ. ಆ ಮಟ್ಟಿಗೆ ಲೆಹೆಂಗಾಗಳು ಇಂದು ಟ್ರೆಂಡಿಯಾಗಿವೆ. ಹೆಣ್ಣು ಮಕ್ಕಳ ಪ್ರೀತಿಗೆ ಪಾತ್ರವಾಗಿವೆ. ಡಿಸೈನರ್‌ಗಳು ಕೂಡ ಹೆವ್ವಿ ಗ್ರ್ಯಾಂಡ್‌ ಲೆಹೆಂಗಾಗಳನ್ನು ಒಂದರ ಮೇಲೊಂದರಂತೆ ಡಿಸೈನ್‌ ಮಾಡಿ ಬಿಡುಗಡೆ ಮಾಡಲಾರಂಭಿಸಿದ್ದಾರೆ.

ಸಾನ್ಯಾ ಲೆಹೆಂಗಾ ಲವ್‌

“ಗ್ರ್ಯಾಂಡ್‌ ಲೆಹೆಂಗಾ ಧರಿಸಿದಾಗ ಕ್ವೀನ್‌ ಫೀಲಿಂಗ್‌ ಆವರಿಸಿಕೊಂಡಿತ್ತು. ಅತ್ಯಾಕಷಕ ಲೆಹೆಂಗಾ ನನ್ನ ಮನಸೆಳೆಯಿತು” ಎಂದಿರುವ ನಟಿ ಸಾನ್ಯಾಗೆ ಈ ಲೆಹೆಂಗಾ ಡಿಸೈನ್ಸ್‌ ಬಹಳ ಇಷ್ಟವಾಗಿದೆಯಂತೆ.

ಸಾನ್ಯಾ ಗ್ರ್ಯಾಂಡ್‌ ಲೆಹೆಂಗಾ ಡಿಟೇಲ್ಸ್

ವಿಭಿನ್ನ ಸ್ಟೈಲಿಂಗ್‌ನ ಫೈರೋಬ್‌ ಬೆಂಗಳೂರು ಅವರ ಈ ಹೆವ್ವಿ ಡಿಸೈನ್‌ನ ಹ್ಯಾಂಡ್‌ ವರ್ಕ್‌ ಲೆಹೆಂಗಾ ಡಿಟೇಲ್‌ ಕುಸುರಿ ಕಲಾತ್ಮಕ ಡಿಸೈನ್‌ ಒಳಗೊಂಡಿದೆ. ‌

ಮನಮೋಹಕ ಲೆಹೆಂಗಾ ಬ್ಲೌಸ್‌

ಡಿಸೈನರ್‌ ಮರೂನ್‌ ಶೇಡ್‌ನ ವೆಲ್ವೆಟ್‌ ಬ್ಲೌಸ್‌ ಗೋಲ್ಡನ್‌ ಹ್ಯಾಂಡ್‌ ವಿನ್ಯಾಸ ಹೊಂದಿದ್ದು, ಫ್ಲೋರಲ್‌ ಕುಸುರಿ ಒಳಗೊಂಡಿದೆ. ನೆಕ್‌ಲೈನ್‌ ಕೂಡ ಕಲಾತ್ಮಕವಾಗಿದ್ದು, ಇನ್ನು ಸ್ಲೀವ್‌ ವಿನ್ಯಾಸವಂತೂ ಅತ್ಯಾಕರ್ಷಕವಾಗಿದೆ. ಸೆಂಟರ್‌ನಲ್ಲಿ ಸಿಂಗರಿಸಲಾದ ಮೋಟಿಫ್‌ ಡಿಸೈನ್‌, ಕೊನೆಯಲ್ಲಿರುವ ಗೋಲ್ಡನ್‌ ಬಾರ್ಡರ್‌ ವಿನ್ಯಾಸ ಎಲ್ಲವೂ ಮನಸೆಳೆಯುವಂತಿವೆ. ಈ ವಿನ್ಯಾಸದ ಬ್ಲೌಸ್‌ಗಳು ಲೆಹೆಂಗಾದ ಲುಕ್ಕನ್ನು ಮತ್ತಷ್ಟು ಎತ್ತಿ ಹಿಡಿಯುತ್ತವೆ ಎನ್ನಬಹುದು.

ಲೆಹೆಂಗಾ ಡಿಸೈನ್‌ ಡಿಟೇಲ್ಸ್‌

ಇನ್ನು ಲೆಹೆಂಗಾದ ಲಂಗದ ವಿನ್ಯಾಸದ ಬಗ್ಗೆ ಹೇಳುವುದೇ ಬೇಡ! ಅಷ್ಟರ ಮಟ್ಟಿಗೆ ಗ್ರ್ಯಾಂಡ್‌ ಆಗಿದೆ. ಮೂರಕ್ಕಿಂತ ಹೆಚ್ಚು ಬಾರ್ಡರ್‌ ವಿನ್ಯಾಸ ಹೊಂದಿರುವ ಈ ಲೆಹೆಂಗಾ ಸುತ್ತಲೂ ಸುತ್ತಲೂ ಹೂದಾನಿಗಳ ಡಿಸೈನ್‌ನಿಂದ ಸಿಂಗರಿಸಲಾಗಿದೆ. ಅವುಗಳ ಮಧ್ಯೆ ಮಧ್ಯೆ ಇರುವ ಚಿಕ್ಕ ಚಿಕ್ಕ ಡಿಟೇಲ್‌ಗಳೂ ಕೂಡ ಲೆಹೆಂಗಾದ ಸೌಂದರ್ಯ ಹೆಚ್ಚಿಸಿವೆ. ಗೋಲ್ಡನ್‌ ಥ್ರೆಡ್‌ ಜೊತೆಗೆ ಕೆಂಪು, ಹಸಿರು, ಮರೂನ್‌ ನೀಲಿ, ಹಳದಿ ಸೇರಿದಂತೆ ನಾನಾ ಥ್ರೆಡ್‌ ವರ್ಕ್‌ ಇಡೀ ಲೆಹೆಂಗಾಕ್ಕೆ ರಾಯಲ್‌ ಲುಕ್‌ ನೀಡಿವೆ. ಒಂದೊಂದು ಡಿಸೈನ್‌ ಕೂಡ ಯೂನಿಕ್‌ ಡಿಸೈನ್‌ ಆಗಿದ್ದು, ರಾಣಿ-ಮಹಾರಾಣಿಯರ ಲುಕ್‌ಗೆ ಸಾಥ್‌ ನೀಡಿವೆ.

ಬಾರ್ಡರ್‌ ಶೀರ್‌ ದುಪಟ್ಟಾ

ಈ ಲೆಹೆಂಗಾದ ಪಾರದರ್ಶಕ ಶೀರ್‌ ದುಪಟ್ಟಾ ಗೋಲ್ಡನ್‌ ಬಾರ್ಡರ್‌ ಹೊಂದಿದ್ದು, ಅಲ್ಲಲ್ಲಿ ಗೋಲ್ಡನ್‌ ಮೋಟಿಫ್‌ ಡಿಸೈನ್‌ಗಳನ್ನು ಒಳಗೊಂಡಿವೆ. ರಾಯಲ್‌ ಲುಕ್‌ಗೆ ಸಾಥ್‌ ನೀಡಿದೆ.

ರಾಯಲ್‌ ಮೇಕಪ್‌

ಇನ್ನು ಈ ಗ್ರ್ಯಾಂಡ್‌ ಲೆಹೆಂಗಾಗೆ ಮಾಡಿರುವ ಲಕ್ಷ್ಮಿಯವರ ಮೇಕಪ್‌, ಇತ್ತೀಚಿನ ಬಾಲಿವುಡ್‌ನ ಸಿನಿಮಾ ಹೀರಾ ಮುಂಡಿಯನ್ನು ಹೋಲುವಂತಿದೆ. ಬೀಡೆಡ್‌ ಟ್ರೆಶರ್ಸ್‌ ಜ್ಯುವೆಲರಿಗಳಲ್ಲಿ ಕೈಗಳಿಗೆ ಧರಿಸಿರುವ ಬಿಗ್‌ ಹರಳಿನ ಎಥ್ನಿಕ್‌ ಫಿಂಗರ್‌ರಿಂಗ್‌ಗಳು ಹಾಗೂ ಹಣೆಯಿಂದ ತಲೆಗೆ ಚಾಚಿರುವ ಚಾಂದ್‌ಬಾಲಿ ಮಾತಾಪಟ್ಟಿ ಮೊಗಲರ ರಾಣಿಯರನ್ನು ನೆನಪಿಸುವಂತಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

Exit mobile version