Site icon Vistara News

Star Saree Fashion: ಶೈನಿಂಗ್ ಸಿಕ್ವೀನ್ಸ್ ಸೀರೆಯಲ್ಲಿ ನಟಿ ಸಂಜನಾ ಬುರ್ಲಿ ಮಿಂಚಿಂಗ್

Star Saree Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸದ್ಯ ಟ್ರೆಂಡಿಯಾಗಿರುವ ಶೈನಿಂಗ್ ಸಿಕ್ವೀನ್ಸ್ ಸೀರೆಯಲ್ಲಿ ಸೀರಿಯಲ್ (Star Saree Fashion) ನಟಿ ಸಂಜನಾ ಬುರ್ಲಿ ಮಿಂಚಿದ್ದಾರೆ. ಸದ್ಯ ಬಾಲಿವುಡ್‌ನವರ ಫೇವರೇಟ್ ಲಿಸ್ಟ್‌ನಲ್ಲಿರುವ ಶೈನಿಂಗ್ ಸಿಕ್ವೀನ್ಸ್ ಸೀರೆ ಇದೀಗ ನಮ್ಮಲ್ಲಿಯೂ ಕಾಲಿಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಸಂಜನಾ ಬುರ್ಲಿಯವರು ಪರ್ಪಲ್ ಶೇಡ್‌ನ ಸಿಕ್ವಿನ್ಸ್ ಸೀರೆಯಲ್ಲಿ ಮಿಂಚಿದ್ದಾರೆ. ಈ ಸೀರೆಯ ಸಾಕಷ್ಟು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿರುವ ಸಂಜನಾಗೆ ಸೀರೆ ಪ್ರಿಯರ ಪ್ರಶಂಸೆ ದೊರಕಿದೆ. ಮಾತ್ರವಲ್ಲ, ಈ ಸೀರೆಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಏನಿದು ಪರ್ಪಲ್ ಸಿಕ್ವೀನ್ಸ್ ಸೀರೆ?

ಸಿಕ್ವೀನ್ಸ್ ಸೀರೆ ಕಳೆದ ಸೀಸನ್‌ನಿಂದಲೂ ಟ್ರೆಂಡ್‌ನಲ್ಲಿದೆ. ಬಾಲಿವುಡ್‌ಗರು ಈ ಸೀರೆಯ ಟ್ರೆಂಡ್ ಸೆಟ್ಟರ್ ಎಂದರೂ ತಪ್ಪಾಗಲಾರದು. ಯಾಕೆಂದರೇ, ಪಾರ್ಟಿವೇರ್ ಸೀರೆಯಾಗಿ ಅತಿ ಹೆಚ್ಚಾಗಿ ಇದನ್ನು ಉಟ್ಟು ಫೋಟೋಪೋಸ್ ನೀಡಿದ್ದೇ ಅವರು. ಶಿಲ್ಪಾ ಶೆಟ್ಟಿ, ಕಾಜೋಲ್, ಮಾಧುರಿ ದೀಕ್ಷೀತ್, ದಿಶಾ ಪಟಾನಿ ಸೇರಿದಂತೆ ಹಿರಿಯ-ಕಿರಿಯ ನಟಿಯರು ಈ ಸೀರೆಯಲ್ಲಿ ಕಾಣಿಸಿಕೊಂಡು ರೆಡ್ ಕಾರ್ಪೆಟ್ ತುಳಿದಿದ್ದಾರೆ. ಇನ್ನು ಈ ಸೀರೆಗೆ ಗ್ಲಾಮರಸ್ ಹಾಟ್ ಬ್ಲೌಸ್ ಧರಿಸಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಮೊದಮೊದಲು ಈ ಸೀರೆ ಕೊಂಚ ದುಬಾರಿಯಾಗಿತ್ತಾದರೂ ಇದೀಗ ಶ್ರೀ ಸಾಮಾನ್ಯ ಮಹಿಳೆಯು ಕೊಂಡು ಕೊಳ್ಳುವ ಮಟ್ಟಿಗೆ ಬೆಲೆ ಇಳಿದಿದೆ. ಹಾಗಾಗಿ ಇದೀಗ ಈ ಸೀರೆ ಮಹಿಳೆಯರ ಪಾರ್ಟಿವೇರ್ ಸೀರೆ ಲಿಸ್ಟ್‌ಗೆ ಸೇರಿದೆ. ಉಟ್ಟಾಗ ಮಿನಿಗುವ ಈ ಸೀರೆ ಎಂತಹ ಮಹಿಳೆಯರಿಗೂ ಚೆನ್ನಾಗಿ ಕಾಣಿಸುತ್ತದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಪರ್ಪಲ್ ಸಿಕ್ವೀನ್ಸ್ ಸೀರೆಯಲ್ಲಿ ಸಂಜನಾ ಬುರ್ಲಿ

ಪರ್ಪಲ್ ಶೇಡ್‌ನ ಸಿಕ್ವಿನ್ಸ್ ಸೀರೆ ನಟಿ ಸಂಜನಾ ಬುರ್ಲಿಯವರನ್ನು ಮತ್ತಷ್ಟು ಆಕರ್ಷಕವಾಗಿ ಬಿಂಬಿಸಿದೆ. ತಾರಾ ರಾಮ್ ಅವರ ಮೇಕಪ್, ಮ್ಯಾಚಿಂಗ್ ಇಯರಿಂಗ್ಸ್ ಹಾಗೂ ಸಿಂಪಲ್ ಫ್ರೀ ಹೇರ್‌ಸೈಲ್‌ ಚೆನ್ನಾಗಿ ಬಿಂಬಿಸಿದೆ. ಸಾಮಾನ್ಯ ಮಹಿಳೆಯರು ಈ ಸೀರೆ ಧರಿಸಿದಾಗ ಹೀಗೆಯೇ ಕಾಣಿಸಬಹುದು ಎಂಬುದನ್ನು ಪ್ರತಿಬಿಂಬಿಸಿದೆ. ಹಾಗಾಗಿ ಸಂಜನಾ ಅವರ ಈ ಸೀರೆ ಸ್ಟೈಲಿಂಗ್ ಫಸ್ಟ್ ಕ್ಲಾಸ್ ಲುಕ್ ನೀಡಿದೆ ಎಂದು ಫ್ಯಾಷನ್ ವಿಮರ್ಶಕರು ರಿವ್ಯೂ ನೀಡಿದ್ದಾರೆ.
ಒಟ್ಟಾರೆ, ನಟಿಯರು ಉಟ್ಟ ಸಿಕ್ವೀನ್ಸ್ ಸೀರೆ ಇದೀಗ ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿದೆ, ಮಾನಿನಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂಬುದು ಸ್ಟೈಲಿಸ್ಟ್‌ಗಳ ಅಭಿಪ್ರಾಯ.

(ಲೇಖಕಿ : ಫ್ಯಾನ್ ಪತ್ರಕರ್ತೆ)

ಇದನ್ನೂ ಓದಿ: Winter Travel Fashion Tips: ಆಕರ್ಷಕ ವಿಂಟರ್‌ ಟ್ರಾವೆಲ್‌ ಫ್ಯಾಷನ್‌ಗೆ 5 ಸಿಂಪಲ್‌ ಟಿಪ್ಸ್

Exit mobile version