ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ನ ಸ್ಟ್ರೀಟ್ ಫ್ಯಾಷನ್‌ನಲ್ಲಿ (Actress Saree Fashion) ನಟಿ ತೇಜಸ್ವಿನಿ ಶರ್ಮಾ, ಸನ್ ಕಲರ್ ಶೇಡ್‌ನ ಸಿಂಪಲ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಸೀರೆ ಪ್ರಿಯ ಮಹಿಳೆಯರನ್ನು ಸೆಳೆದಿದ್ದಾರೆ. ಸದ್ಯ ಟ್ರೆಂಡ್‌ನಲ್ಲಿರುವ ಈ ಶೇಡ್ ಸೀರೆಗಳು ಲೆಕ್ಕವಿಲ್ಲದಷ್ಟು ಬಗೆಯ ಪ್ರಿಂಟ್ಸ್ ಹಾಗೂ ಸಿಂಪಲ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಈ ಸೀಸನ್‌ಗೆ ಹೊಂದುವ ಕಾಟನ್, ಲೆನಿನ್ ಹಾಗೂ ಇತರೇ ಬ್ರಿಥೆಬಲ್ ಫ್ಯಾಬ್ರಿಕ್‌ನಲ್ಲಿ ಆಗಮಿಸಿವೆ. ನೋಡಲು ಮನಮೋಹಕವಾಗಿ ಕಾಣುವ ಈ ಸನ್ ಶೇಡ್ ಸೀರೆಗಳು ಸದ್ಯ ಸೀಸನ್ ಟ್ರೆಂಡ್‌ನ ಟಾಪ್ ಲಿಸ್ಟ್‌ನಲ್ಲಿವೆ.
ನಟಿ ತೇಜಸ್ವಿನಿ ಶರ್ಮಾ ಸೀರೆ ಲವ್
ನಟಿ ತೇಜಸ್ವಿನಿ ಶರ್ಮಾಗೆ ಮೊದಲಿನಿಂದಲೂ ಸೀರೆ ಲವ್ ಇದೆ. ಸೀಸನ್‌ಗೆ ತಕ್ಕಂತೆ ಸೀರೆ ಉಡುವುದು ಅವರ ಸೀರೆ ಪ್ರೇಮ ಎತ್ತಿ ತೋರಿಸುತ್ತದೆ. ಅದರಲ್ಲೂ ದೇಸಿ ಸೀರೆಗಳೆಂದರೇ ಅವರಿಗೆ ಸಖತ್ ಇಷ್ಟ. ಇದೀಗ ಈ ಸನ್ ಶೇಡ್ ಸೀರೆ ಅವರ ಮನಸ್ಸನ್ನು ಮತ್ತಷ್ಟು ಗೆದ್ದಿದೆ. ಅದರೊಂದಿಗೆ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಖುದ್ದು ಅವರೇ ಹೇಳುತ್ತಾರೆ. ಸಮ್ಮರ್ ಸೀಸನ್‌ನಲ್ಲಿ ನಾನು ಆದಷ್ಟೂ ಫ್ರೆಶ್ ಲುಕ್ ನೀಡುವ ಹಾಗೂ ಉಲ್ಲಾಸಿತಗೊಳಿಸುವ ಸೀರೆಗಳನ್ನು ಉಡಲು ಇಷ್ಟಪಡುತ್ತೇನೆ. ಇನ್ನು ಸೀರೆ ಪ್ರಿಯರು ಕೂಡ ಆದಷ್ಟೂ ಉತ್ಸಾಹ ಹೆಚ್ಚಿಸುವ ಶೇಡನ್ನು ಆಯ್ಕೆ ಮಾಡುಬೇಕು ಎನ್ನುತ್ತಾರೆ.
ಮಾರುಕಟ್ಟೆಯಲ್ಲಿ ಸನ್ ಶೇಡ್ ಸೀರೆಗಳು
“ಸಮ್ಮರ್‌ನಲ್ಲಿ ಯೆಲ್ಲೋ ಶೇಡ್ ಸೀರೆಗಳು ಅತಿ ಹೆಚ್ಚು ಬಿಡುಗಡೆಗೊಳ್ಳುತ್ತವೆ. ಅದರಲ್ಲೂ ನಾನಾ ಬಗೆಯ ಲೈಟ್ ಶೇಡ್‌ಗಳು ಚಾಲ್ತಿಗೆ ಬರುತ್ತವೆ. ಅವುಗಳಲ್ಲಿ ಸನ್ ಶೇಡ್ ಅತಿ ಹೆಚ್ಚು ಪ್ರಚಲಿತದಲ್ಲಿವೆ. ಸನ್ ಶೇಡ್‌ನಲ್ಲೂ ನಾನಾ ಲೈಟ್ ಹಾಗೂ ಡಾರ್ಕ್ ಶೇಡ್‌ಗಳು ದೊರೆಯುತ್ತಿವೆ. ಇವುಗಳಲ್ಲಿ ಮಾನೋಕ್ರೋಮ್ ಶೇಡ್‌ನವು ಅತಿ ಹೆಚ್ಚು ಟ್ರೆಂಡ್‌ನಲ್ಲಿವೆ. ಇನ್ನು ಚಿಕ್ಕ ಪ್ರಿಂಟೆಡ್, ಫ್ಲೋರಲ್ ಪ್ರಿಂಟ್‌ನವು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇನ್ನು ಸಮ್ಮರ್‌ಗೆ ಸೂಟ್ ಆಗುವ ಫ್ಯಾಬ್ರಿಕ್‌ಗಳಲ್ಲೂ ಸನ್ ಶೇಡ್ ಸೀರೆಗಳು ಲಗ್ಗೆ ಇಟ್ಟಿವೆ ” ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ ರಾಯನ್. ಅವರ ಪ್ರಕಾರ, ಬೇಸಿಗೆ ಸನ್ ಕಲರ್ ಸೀರೆಗಳಿಗೆ ಹೇಳಿ ಮಾಡಿಸಿದ ಕಾಲ ಎನ್ನುತ್ತಾರೆ.
ಸನ್ ಶೇಡ್ ಸೀರೆ ಆಯ್ಕೆ ಯಾಕೆ?
ಸನ್ ಶೇಡ್ ಬಿಸಿಲು ಕಾಲದ ಕಲರ್‌ಗಳು. ಇವು ಫ್ರೆಶ್ ಲುಕ್ ನೀಡುವುದರೊಂದಿಗೆ ಸೀರೆಗಳನ್ನು ಉಟ್ಟಾಗ ಮನೋಲ್ಲಾಸ ನೀಡುತ್ತವೆ. ಹಾಗಾಗಿ ಈ ಶೇಡ್‌ನ ನಾನಾ ಪ್ರಿಂಟ್ಸ್‌ನ ಸೀರೆಗಳು ಈ ಕಾಲದಲ್ಲೆ ಅತಿ ಹೆಚ್ಚಾಗಿ ಬಿಡುಗಡೆಗೊಳ್ಳುತ್ತವೆ. ಹೆಸರಿಗೆ ಒಂದೇ ಶೇಡ್ ಎಂದೆನಿಸದರೂ ಲೈಟ್ ಡಾರ್ಕ್ ಹೀಗೆ ನಾನಾ ಪ್ರಿಂಟ್ಸ್‌ನವು ಇವುಗಳಲ್ಲಿ ದೊರೆಯುತ್ತವೆ.
ಸನ್ ಶೇಡ್ ಸೀರೆಗೆ ಬ್ಲೌಸ್ ಮಿಕ್ಸ್ ಮ್ಯಾಚ್ ಹೇಗೆ?
ಸನ್ ಶೇಡ್ ಸೀರೆಗೆ ನೀವು ಅದೇ ವರ್ಣದ ಬ್ಲೌಸ್ ಧರಿಸಬೇಕೆಂಬ ರೂಲ್ಸ್ ಇಲ್ಲ. ಯಾವುದಾದರೂ ಸರಿಯೇ ಕಾಂಟ್ರಸ್ಟ್ ಬಣ್ಣವನ್ನು ಮ್ಯಾಚ್ ಮಾಡಿದರಾಯಿತು. ಇನ್ನು ಈ ಸೀಸನ್‌ನಲ್ಲಿ ಆದಷ್ಟೂ ಸ್ಲಿವ್‌ಲೆಸ್ ಬ್ಲೌಸ್, ಸ್ಲಿವ್‌ಲೆಸ್ ಕ್ರಾಪ್ ಟಾಪ್ ಹಾಗೂ ಹಾಲ್ಟರ್ ನೆಕ್‌ಲೈನ್ ಇರುವಂತವನ್ನು ಚೂಸ್ ಮಾಡುವುದು ಉತ್ತಮ. ಇವು ಆಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಡಿಸೈನರ್ಸ್.
ಸನ್ ಶೇಡ್ ಸೀರೆ ಪ್ರಿಯರ ಲುಕ್‌ಗೆ 4 ಟಿಪ್ಸ್
- ಸಿಂಪಲ್ ಸಮ್ಮರ್ ಮೇಕಪ್ ಇರಲಿ.
- ಹೆಚ್ಚು ಆಕ್ಸೆಸರೀಸ್ ಬೇಡ.
- ಸೀಸನ್‌ಗೆ ತಕ್ಕ ಫ್ಯಾಬ್ರಿಕ್ನ ಸೀರೆ ಆಯ್ಕೆ ಮಾಡಿ.
- ಉದ್ದದ್ದದ ಸ್ಲೀವ್ ಬ್ಲೌಸ್ ಆಯ್ಕೆ ಬೇಡ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Earrings Fashion: ಬಳೆಗಿಂತ ದೊಡ್ಡದಾಯ್ತು ಕಿವಿಯ ಹೂಪ್ ರಿಂಗ್!