ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಶಿಲ್ಪಾ ಮಂಜುನಾಥ್ ಹಾಟ್ ಲುಕ್‌ನಲ್ಲಿ (Actress Summer Fashion) ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಬೇಸಿಗೆಯ ಬಿಸಿಲಿನಲ್ಲಿ ಪೂಲ್ ಸೈಡ್‌ನಲ್ಲಿ ಕಾಣಿಸಿಕೊಂಡಿರುವ ಶಿಲ್ಪಾ, ವೈಟ್ ಸ್ಟ್ರಾಪ್ ಮಿನಿ ಕ್ರಾಪ್ ಟಾಪ್, ಜೀನ್ಸ್ ಶಾರ್ಟ್ಸ್ ಹಾಗೂ ಇದರ ಮೇಲೊಂದು ಶೀರ್ ಶಿಫಾನ್ ಪ್ರಿಂಟೆಡ್ ಟ್ರಾಪಿಕಲ್ ವಿನ್ಯಾಸದ ತೆಳುವಾದ ಜಾಕೆಟ್‌ನಲ್ಲಿ ಬಿಂದಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಡೆಲ್/ನಟಿ ಶಿಲ್ಪಾ ಬಿಂದಾಸ್ ಲುಕ್
ಮಾಡೆಲ್ ಕಮ್ ನಟಿ ಶಿಲ್ಪಾ ಆಗಾಗ ಒಂದಲ್ಲ ಒಂದು ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇವರು ಕನ್ನಡದ ಹುಡುಗಿ ಮಾತ್ರವಲ್ಲ, ಮಾಜಿ ಮಿಸ್ ಕರ್ನಾಟಕ ಕೂಡ. ಕನ್ನಡ ಸಿನಿಮಾಗಳ ಮೂಲಕ ನಟನೆಗೆ ಕಾಲಿಟ್ಟ ಶಿಲ್ಪಾ, ತದನಂತರ ತಮಿಳು, ತೆಲುಗು ಸೇರಿದಂತೆ ಇತರೇ ಭಾಷೆಗಳಲ್ಲಿ ನಟಿಸಲಾರಂಭಿಸಿದರು. ಇದೀಗ ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಫ್ಯಾನ್ ಫಾಲೋವಿಂಗ್ ಹೊಂದಿರುವ ಇವರು, ಆಗಾಗ್ಗೆ ಸಾಕಷ್ಟು ಫೋಟೋಶೂಟ್‌ಗಳ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಇದರೊಂದಿಗೆ ಸೀಸನ್‌ಗೆ ತಕ್ಕಂತೆ ಸ್ಟೈಲಿಂಗ್ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೇ ರೀತಿ ಇದೀಗ ಬಾಲಿವುಡ್‌ಗರನ್ನು ಹೋಲುವಂತಹ ಈ ಸೀಸನ್‌ನ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ತಮ್ಮ ಈ ಬಿಂದಾಸ್ ಔಟ್‌ಫಿಟ್‌ಗೆ ತಕ್ಕಂತೆ ಸನ್‌ಗ್ಲಾಸ್, ಕೈಗಳಿಗೆ ಫಂಕಿ ಬ್ರೇಸ್‌ಲೇಟ್ಸ್, ಪಾದಕ್ಕೆ ಫ್ಲಿಪ್ ಫ್ಲಾಪ್, ಆಂಕಲ್ ಸೈನ್, ಧರಿಸಿ, ಈ ಲುಕ್ಕನ್ನು ಹೈಲೈಟ್ ಮಾಡಿದ್ದಾರೆ. ಪೂಲ್‌ಸೈಟ್‌ನಲ್ಲಿ ಇವರ ಔಟ್‌ಲುಕ್ ಸಖತ್ತಾಗಿ ಮ್ಯಾಚ್ ಆಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಅಲ್ಟ್ರಾ ಮಾಡರ್ನ್ ಹುಡುಗಿಯರ ಪೂಲ್‌ಸೈಡ್ ಲುಕ್
ಶಿಲ್ಪಾ ಕಾಣಿಸಿಕೊಂಡಿರುವ ಈ ಪೂಲ್‌ಸೈಡ್ ಪಾರ್ಟಿಯ ಬಿಂದಾಸ್ ಲುಕ್ ಎಂದು ಕೂಡ ಕರೆಯಬಹುದು. ಹಾಗೆಂದು ಇದು ನೈಟ್ ಪಾರ್ಟಿಯದ್ದಲ್ಲ! ಮಧ್ಯಾಹ್ನದ ಸಮಯದಲ್ಲಿ ನಡೆಯುವ ಬ್ರಂಚ್ ಅಥವಾ ಲಂಚ್ ಪಾರ್ಟಿಯ ಬಿಂದಾಸ್ ಲುಕ್ ಇದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್‌ಡೋರ್ ಪಾರ್ಟಿಗಳಲ್ಲಿ ಈ ಔಟ್‌ಫಿಟ್ ಸಾಮಾನ್ಯ ಎನ್ನುತ್ತಾರೆ ಅವರು.
ಬಾಲಿವುಡ್‌ನವರ ಫೆವರೇಟ್ ಲುಕ್
ಇನ್ನು, ಬಿಸಿಲು ಕಾಲದಲ್ಲಿ ಸೆಕೆ ಹೆಚ್ಚು, ಹಾಗಾಗಿ, ಈ ಲುಕ್ ಬಾಲಿವುಡ್‌ಗರ ಫೇವರೇಟ್ ಲುಕ್ ಎಂದರೂ ತಪ್ಪಲ್ಲ! ದಿನದ ಮಧ್ಯೆ ನಡೆಯುವ ಪಾರ್ಟಿ ಲುಕ್‌ಗಾಗಿ ಈ ಸ್ಟೈಲಿಂಗ್‌ನಲ್ಲಿ ಬಾಲಿವುಡ್ ತಾರೆಯರು ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಉದಾಹರಣೆಗೆ., ದಿಶಾ ಪಟಾನಿ, ಅನನ್ಯಾ, ಜಾನ್ಹವಿ, ಅಹನಾ, ಸುಹಾನಾ, ನೋರಾ, ಖುಷಿ ಕಪೂರ್ ಸೇರಿದಂತೆ ನಾನಾ ನಟಿಯರು ಈ ಲುಕ್‌ನ ದಾಸರು. ಈ ಲುಕ್ ಬಾಡಿ ಮಾಸ್ ಇಂಡೆಕ್ಸ್ ಹೈಲೈಟ್ ಮಾಡುವುದರೊಂದಿಗೆ, ಹಾಟ್ ಲುಕ್ ನೀಡುತ್ತದೆ. ಜೊತೆಗೆ ನೋಡುಗರನ್ನು ಸೆಳೆಯುತ್ತದೆ ಎನ್ನುತ್ತಾರೆ ಸ್ಟೈಲಿಂಗ್ ಎಕ್ಸ್‌ಫರ್ಟ್ಸ್. ಬಹಳಷ್ಟು ಬಾರಿ ಈ ನಟಿಯರ ಡೈಲಿ ಲುಕ್ ಕೂಡ ಇದಾಗಿರುತ್ತದೆ. ಆದರೆ, ಇಲ್ಲಿನ ಸ್ಥಳೀಯ ನಟಿಯರು ಹಾಗೂ ಮಾಡೆಲ್‌ಗಳು ಮಾತ್ರ, ಈ ಬಗ್ಗೆ ಸಖತ್ ಕಾನ್ಶಿಯಸ್! ತಮ್ಮ ಔಟಿಂಗ್ ಹಾಗೂ ವೀಕೆಂಡ್ ಮತ್ತು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವಾಗ ಮಾತ್ರ ಈ ಲುಕ್‌ಗೆ ಮೊರೆ ಹೋಗುತ್ತಾರೆ. ಅದು ಇನ್‌ಡೋರ್ ಪಾರ್ಟಿಗಳಲ್ಲಿ ಮಾತ್ರ ಹೀಗೆಲ್ಲಾ ಕಾಣಿಸಿಕೊಳ್ಳುತ್ತಾರೆ. ಪಬ್ಲಿಕ್‌ನಲ್ಲಿ ಈ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Season Hairstyle: ವೆಸ್ಟರ್ನ್ ಲುಕ್‌ಗೆ ಎಂಟ್ರಿ ಕೊಟ್ಟ ಟ್ರೆಡಿಷನಲ್ ಲುಕ್‌ನ ಎರಡು ಜಡೆಯ 3 ರೂಪ ಹೇಗಿದೆ ನೋಡಿ!