-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಸಾಮಾನ್ಯ ಮಹಿಳೆ ಕೂಡ ಅಂಬಾನಿ ಫ್ಯಾಮಿಲಿಯ (Ambani Family Fashion) ಮಹಿಳೆಯರು ಧರಿಸುವ ಜ್ಯುವೆಲರಿಗಳನ್ನು, ತಾವು ಕೂಡ ಧರಿಸಿ ಸಂತಸ ಪಡಬಹುದು! ಹೌದು. ಅದು ಹೇಗೆ? ಎಂದು ಯೋಚಿಸುತ್ತಿದ್ದೀರಾ! ಅವರಂತೆ ಒರಿಜಿನಲ್ ಜ್ಯುವೆಲರಿಗಳನ್ನು ಖರೀದಿಸಲು ಸಾಧ್ಯವಾಗದಿದ್ದರೂ, ಥೇಟ್ ಅವರು ಧರಿಸಿರುವಂತಹ ಜ್ಯುವೆಲರಿಗಳನ್ನೇ ಹೋಲುವಂತಹ ಕೃತಕ ಪ್ರಿಶಿಯಸ್ ಸ್ಟೋನ್‌ನಿಂದ ಸಿದ್ಧಗೊಂಡ ಇಮಿಟೇಷನ್ ಜ್ಯುವೆಲರಿಗಳನ್ನು ಕೊಂಡು ಧರಿಸಿ ಖುಷಿ ಪಡಬಹುದು. ಇದಕ್ಕೆ ಪ್ರಮುಖ ಕಾರಣ, ಕೈಗೆಟಕುವ ಬೆಲೆ. ಹಾಗಾಗಿ ಈ ಕೃತಕ ಇಮಿಟೇಷನ್ ಜ್ಯುವೆಲರಿಗಳು ಇದೀಗ ಸಖತ್ ಟ್ರೆಂಡಿಯಾಗಿವೆ.
ಅಂಬಾನಿ ಫ್ಯಾಮಿಲಯ ಮಹಿಳೆಯರ ಜ್ಯುವೆಲರಿ ಮೋಹ
ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಸೇರಿದಂತೆ ಅಂಬಾನಿ ಕುಟುಂಬದ ಮಹಿಳೆಯರ ಪ್ರೆಸ್ಟಿಜ್‌ನ ಧ್ಯೋತಕವಾದ ಅಮೂಲ್ಯವಾದ ಎಮಾರಾಲ್ಡ್ ಜ್ಯುವೆಲರಿಗಳ ರಿಪ್ಲೀಕಾದಂತೆ ಕಾಣುವ ಈ ಆರ್ಟಿಫಿಶಿಯಲ್ ಇಮಿಟೇಷನ್ ಆಭರಣಗಳು, ಎಲ್ಲಾ ವರ್ಗದ ಮಹಿಳೆಯರನ್ನು ಆಕರ್ಷಿಸಿವೆ. ಕೋಟಿಗಟ್ಟಲೆ ಬೆಲೆ ಬಾಳುವ ಜ್ಯುವೆಲರಿ ಧರಿಸಲಾಗದಿದ್ದರೂ, ಅದರಂತೆಯೇ ಕಾಣಿಸುವ ಜ್ಯುವೆಲರಿಗಳನ್ನು ಧರಿಸುವ ಇಚ್ಛೆ ಸಾಕಷ್ಟು ಮಹಿಳೆಯರದ್ದಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಡಿಸೈನ್‌ನ ಆಭರಣಗಳು ಕಾಲಿಟ್ಟಿವೆ ಎನ್ನುತ್ತಾರೆ ಇಮಿಟೇಷನ್ ಜ್ಯುವೆಲರಿ ಮಾರಾಟಗಾರಾದ ರಾಕೇಶ್.
ಎಮಾರಾಲ್ಡ್ ಸೆಟ್‌ನಂತೆ ಕಾಣುವ ಇಮಿಟೇಷನ್ ಜ್ಯುವೆಲರಿ
ಅಂದಹಾಗೆ, ಎಲ್ಲರಿಗೂ ತಿಳಿದಿರುವಂತೆ ನೀತಾ ಅಂಬಾನಿಯವರ ಬಳಿ ಎಮರಾಲ್ಡ್‌ನ ದೊಡ್ಡ ಸೆಟ್ ಜ್ಯುವೆಲರಿಗಳಿವೆ. ಮಗಳು ಮತ್ತು ಸೊಸೆಯ ಬಳಿಯೂ ಸಾಕಷ್ಟಿವೆ. ಪ್ರಪಂಚದ ಅತ್ಯಂತ ದುಬಾರಿ ಎಮರಾಲ್ಡ್‌ನಿಂದ ಮಾಡಿದ ಜ್ಯುವೆಲರಿ ಸೆಟ್‌ಗಳಿವು. ಪ್ರಿ-ವೆಡ್ಡಿಂಗ್‌ನಲ್ಲಿ ಇವರೆಲ್ಲರೂ ಧರಿಸಿದ್ದೇ ತಡ, ಕೃತಕ ಆಭರಣ ಲೋಕದಲ್ಲಿ, ಇವುಗಳ ರಿಪ್ಲೀಕಾ ಜ್ಯುವೆಲರಿಗಳ ಆಗಮನವಾಗತೊಡಗಿತು. ಕೇವಲ ಎರಡ್ಮೂರು ಸಾವಿರ ರೂ.ಗಳಿಗೆ ದೊರಕುಲಾರಂಭಿಸಿತು. ಹಾಗಾಗಿ ಬೇಡಿಕೆಯು ಹೆಚ್ಚಿತು ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್. ಅಷ್ಟೇಕೆ, ಇದೀಗ ಬ್ರೈಡಲ್ ಸೆಟ್‌ಗಳಲ್ಲೂ ನಾನಾ ಡಿಸೈನ್‌ನವು ಕಾಲಿಟ್ಟಿವೆ. ಖರೀದಿ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಕೃತಕ ಆಭರಣದ ಮಾರಾಟಗಾರರು.
ಇದನ್ನೂ ಓದಿ: Saree Fashion: ಸೆಲೆಬ್ರೆಟಿ ಲುಕ್‌ಗಾಗಿ ಬಂತು ಬಂಗಾರ ವರ್ಣದ ಸೀರೆಗಳು!
ಇಮಿಟೇಷನ್ ಎಮಾರಾಲ್ಡ್ ಜ್ಯುವೆಲರಿ ಪ್ರಿಯರಿಗೆ ಸಿಂಪಲ್ ಟಿಪ್ಸ್
- ಫಿನಿಶಿಂಗ್ ಇರುವಂತಹ ಜ್ಯುವೆಲ್ ಸೆಟ್ ಆಯ್ಕೆ ಮಾಡಿ.
- ಗೋಲ್ಡನ್ ಹಾಗೂ ಸಿಲ್ವರ್ ಕೋಟೆಡ್ ಸೆಟ್ಗಳು ಟ್ರೆಂಡ್ನಲ್ಲಿವೆ.
- ಈ ಸೆಟ್ನೊಂದಿಗೆ ಮ್ಯಾಚ್ ಆಗದ ಇತರೇ ಮೆಟಲ್ನ ಜ್ಯುವೆಲರಿಗಳನ್ನು ಧರಿಸಕೂಡದು.
- ಕ್ಲಾಸಿ ಲುಕ್ಗೆ ಇವು ಮ್ಯಾಚ್ ಆಗುತ್ತವೆ.
- ಡಾರ್ಕ್ ಶೇಡ್ ಹಾಗೂ ಮಿಂಟ್ ಗ್ರೀನ್ ಶೇಡ್ನವು ಪ್ರಚಲಿದಲ್ಲಿವೆ.
( ಲೇಖಕಿ ಫ್ಯಾಷನ್ ಪತ್ರಕರ್ತೆ )