Site icon Vistara News

Ambani Wedding: ಜಾಗತಿಕ ಮಟ್ಟದಲ್ಲಿ ದಾಖಲೆ ಸೃಷ್ಟಿಸಿದ ಅಂಬಾನಿ ಫ್ಯಾಮಿಲಿಯ ರಾಯಲ್‌ ವೆಡ್ಡಿಂಗ್‌ ಫ್ಯಾಷನ್‌!

Ambani Wedding

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ ಫ್ಯಾಷನ್‌ ಇದೀಗ ಜಾಗತಿಕ ಮಟ್ಟದ ಫ್ಯಾಷನ್‌ಲೋಕದಲ್ಲಿ ದಾಖಲೆ ಸೃಷ್ಟಿಸಿದೆ. ಹಾಗೆನ್ನುತ್ತಾರೆ ಫ್ಯಾಷನ್‌ ದಿಗ್ಗಜರು. ಹೌದು. ಇದುವರೆಗೂ ನಿರಂತರವಾಗಿ ನಡೆದ ಅಂಬಾನಿ ಫ್ಯಾಮಿಲಿಯ ಪ್ರಿ ಹಾಗೂ ವೆಡ್ಡಿಂಗ್‌ ಫ್ಯಾಷನ್‌ ಕೇವಲ ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ತನ್ನದೇ ಆದ ದಾಖಲೆ ಬರೆದಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ರೇಷ್ಮೆ ಸೀರೆಗಳಿಂದ ಹಿಡಿದು, ಊಹೆಗೂ ಮೀರಿದ ಬಗೆಬಗೆಯ ಲೆಹೆಂಗಾ, ಗಾಗ್ರ, ಪುರುಷರ ವೆರೈಟಿ ಬಂದ್ಗಾಲ, ಕುರ್ತಾ, ಚೂಡಿದಾರ್‌ ಸೂಟ್‌ ಸೇರಿದಂತೆ ಕಲ್ಚರ್‌ಗೆ ಸಾಥ್‌ ನೀಡುವ ಉಡುಗೆ-ತೊಡುಗೆಗಳು, ಅತ್ಯಾಕರ್ಷಕ ಜ್ಯುವೆಲರಿಗಳು, ಆಕ್ಸೆಸರೀಸ್‌ಗಳು, ಇಡೀ ಫ್ಯಾಷನ್‌ ಪ್ರಪಂಚವನ್ನೇ ಹುಬ್ಬೇರಿಸುವಂತೆ ಮಾಡಿದೆ ಎನ್ನುತ್ತಾರೆ ಫ್ಯಾಷನ್‌ ದಿಗ್ಗಜರು.

ವಜ್ರ-ವೈಢೂರ್ಯದ ಡಿಸೈನರ್‌ವೇರ್ಸ್ ಧರಿಸಿದ ಏಕೈಕ ಕುಟುಂಬ

ಇನ್ನು ಫ್ಯಾಷನಿಸ್ಟ್‌ ಜಾನ್‌ ಹೇಳುವಂತೆ, ಅಂಬಾನಿಯವರ ಫ್ಯಾಮಿಲಿ ಪ್ರಿ-ವೆಡ್ಡಿಂಗ್‌ನಲ್ಲಿ ಕೇವಲ ಟ್ರೆಡಿಷನಲ್‌ ಡಿಸೈನರ್‌ವೇರ್ಸ್ ಮಾತ್ರವಲ್ಲ, ಬಂಗಾರದ ಸೂಟ್‌, ರೇಷ್ಮೆ ಸೀರೆ, ವಜ್ರ ವೈಢೂರ್ಯದಿಂದ ಸಿದ್ಧಗೊಂಡ ಲೆಹೆಂಗಾ-ಗಾಗ್ರ ಸೇರಿದಂತೆ ಕೋಟಿಗಟ್ಟಲೇ ಬೆಲೆಬಾಳುವ ಕ್ರಾಫ್ಟೆಡ್ ಜ್ಯುವೆಲರಿಗಳು ಅನಾವರಣಗೊಂಡವು. ಮದುವೆ ಜೊತೆಗೆ ಟ್ರೆಡಿಷನಲ್‌ ಫ್ಯಾಷನ್‌ ಸಂಭ್ರಮಿಸಿದ ಏಕೈಕ ಕುಟುಂಬ ಇದಾಗಿದೆ ಎನ್ನುತ್ತಾರೆ.

ಎಕ್ಸ್‌ಕ್ಲ್ಯೂಸಿವ್‌ ಡಿಸೈನರ್‌ವೇರ್‌ಗಳಿಗೆ ವೇದಿಕೆ

ಪ್ರಿ-ವೆಡ್ಡಿಂಗ್‌ನಿಂದ ಹಿಡಿದು ಮದುವೆಯವರೆಗೂ ಪ್ರತಿ ಕಾರ್ಯಕ್ರಮಕ್ಕೂ ಒಂದೊಂದು ಬಗೆಯ ಡ್ರೆಸ್‌ಕೋಡ್‌, ಕಲರ್ಸ್ ಹಾಗೂ ಥೀಮ್‌ ಇರಿಸಿ, ಸೆಲೆಬ್ರೆಟಿಗಳನ್ನೇ ಮಾಡೆಲ್‌ಗಳನ್ನಾಗಿ ಬಿಂಬಿಸಿದ ಕ್ರೆಡಿಟ್‌ ಅಂಬಾನಿ ಫ್ಯಾಮಿಲಿಗೆ ಸಲ್ಲುತ್ತದೆ. ಅಲ್ಲದೇ, ಕೆಲವು ತಿಂಗಳಿಂದ ಪ್ರಪಂಚದಾದ್ಯಂತ ಇರುವ ಫ್ಯಾಷನ್‌ ಪ್ರೇಮಿಗಳನ್ನು ನಿರಂತರವಾಗಿ ಸೆಳೆದಿಟ್ಟ ಹೆಗ್ಗಳಿಕೆ ಕೂಡ ಸಲ್ಲುತ್ತದೆ ಎನ್ನುತ್ತಾರೆ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ.

ರಿಚ್‌ ಫ್ಯಾಷನ್‌ ಟ್ರೆಂಡ್‌

ನೀತಾ ಅಂಬಾನಿ, ಇಶಾ, ಶ್ಲೋಕ, ರಾಧಿಕಾ ಮರ್ಚೆಂಟ್‌-ಅನಂತ್‌ ಅಂಬಾನಿ ಸೇರಿದಂತೆ ಪ್ರತಿಯೊಬ್ಬರು ಧರಿಸಿದ ಭಾರಿ ವಿನ್ಯಾಸದ ದುಬಾರಿ ಡಿಸೈನರ್‌ವೇರ್‌ಗಳು ರಾಜ-ಮಹಾರಾಜರ ಉಡುಗೆ-ತೊಡುಗೆಗಳನ್ನು ನೆನಪಿಸುವಂತೆ ಮಾಡಿದವಲ್ಲದೇ, ಭಾರತೀಯರು ಇಷ್ಟರ ಮಟ್ಟಿಗೆ ರಿಚ್‌ ಫ್ಯಾಷನ್‌ ಹೊಂದಿದ್ದಾರೆಂಬುದನ್ನು ಪ್ರೂವ್‌ ಮಾಡಿತು ಎನ್ನುವ ಫ್ಯಾಷನ್‌ ವಿಶ್ಲೇಷಕ ಸಮೀರ್‌ ಪ್ರಕಾರ, ಸಂಸ್ಕೃತಿ ಬಿಂಬಿಸುವ ಡಿಸೈನರ್‌ವೇರ್ಗಳನ್ನು ಮರುಕಳಿಸುವಂತೆ ಮಾಡಿತು ಎನ್ನುತ್ತಾರೆ.

ಸ್ವದೇಶ್‌ ಮೂಲಕ ಪ್ರೋತ್ಸಾಹ

ಮೊದಲಿನಿಂದಲೂ ಫ್ಯಾಷನ್‌ ಕಾನ್ಶಿಯಸ್‌ ಆಗಿರುವ ನೀತಾ ಅಂಬಾನಿ, ತಮ್ಮದೇ ಆದ ಮುಖೇಶ್‌ ಅಂಬಾನಿ ಕಲ್ಚರ್‌ ಸೆಂಟರ್‌ನಲ್ಲಿ ಸ್ವದೇಶ್‌ ಎಕ್ಸಿಬೀಷನ್‌ ಮೂಲಕವೂ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅಲ್ಲದೇ ತಮ್ಮ ಮಗನ ಪ್ರಿ-ವೆಡ್ಡಿಂಗ್‌ ಫ್ಯಾಷನ್‌ನಲ್ಲೂ ಕುಸುರಿ ಕಲಾಂಕಾರಿ, ಮೀನಾಂಕಾರಿ, ಜರ್ದೋಸಿಯಂತಹ ಸೂಕ್ಷ್ಮ ಕಲೆಗೆ ಉತ್ತೇಜನ ನೀಡಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಾಜೇಶ್‌ ಶೆಟ್ಟಿ.

(ಲೇಖಕರು ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Wedding Fashion: ಅನಂತ್ ಅಂಬಾನಿ ಮದುವೆಯ ಡ್ರೆಸ್ ಕೋಡ್ ಏನಿತ್ತು? ಗಣ್ಯರ ಉಡುಗೆ ಹೇಗಿತ್ತು?

Exit mobile version