-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ಪ್ರಿ -ವೆಡ್ಡಿಂಗ್ ಸಂಗೀತ್ ಕಾರ್ಯಕ್ರಮದಲ್ಲಿ, ಮದುಮಗ (Ambani Wedding Fashion) ಅನಂತ್ ಅಂಬಾನಿ ಸಂಗೀತ್ ಕಾರ್ಯಕ್ರಮದಲ್ಲಿ ಧರಿಸಿದ ಆಕರ್ಷಕ ಬಂದ್ಗಾಲ ಸೂಟ್ ಯಾವುದು ಎಂದು ಕೊಂಡಿದ್ದೀರಾ! ಅಪರಂಜಿ ಬಂಗಾರದಿಂದ ಸಿದ್ಧಪಡಿಸಿದ್ದು. ಹೌದು. ಕೇವಲ ಅಂಬಾನಿ ಫ್ಯಾಮಿಲಿಯ ಮಹಿಳೆಯರು ಮಾತ್ರವಲ್ಲ, ಪುರುಷರ ಡಿಸೈನರ್‌ವೇರ್‌ಗಳನ್ನು ಕೂಡ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಅದು ಅಂತಿಂತಹ ವಿನ್ಯಾಸವಲ್ಲ! ರಾಜ-ಮಹಾರಾಜರು ಧರಿಸುತ್ತಿದ್ದ ಉಡುಗೆಯನ್ನು ಇಲ್ಲಿ ಮರು ಸೃಷ್ಟಿಮಾಡಲಾಗಿದೆ.
ಮೆನ್ಸ್ ಎಥ್ನಿಕ್ ಫ್ಯಾಷನ್ ಲೋಕದಲ್ಲಿ ಸಂಚಲನ
ಇದುವರೆಗೂ ಎಲ್ಲರಿಗೂ ಕೇವಲ ಅಂಬಾನಿ ಮಹಿಳೆಯರ ಡಿಸೈನರ್‌ವೇರ್ ಹಾಗೂ ವಜ್ರ –ವೈಢೂರ್ಯದಿಂದ ತಯಾರಾದ ಆಭರಣಗಳ ಮೇಲೆ ಕಣ್ಣು ಹೋಗುತ್ತಿತ್ತು. ಇದೀಗ, ಅನಂತ್ ಧರಿಸಿದ ಬಂದ್ಗಾಲ ಸೂಟ್ ಮೇಲೆ ಪುರುಷರ ಕಣ್ಣು ಬಿದ್ದಿದೆ. ಬಾಡಿ ಸ್ಟ್ರಕ್ಚರ್ ಹೇಗಿದ್ದರೇನು? ಧರಿಸಿದ ಡಿಸೈನರ್‌ವೇರ್ ಎಲ್ಲರನ್ನು ಸೆಳೆಯಬೇಕಷ್ಟೇ! ಎಂಬ ಕಾನ್ಸೆಪ್ಟ್ಗೆ ಪೂರಕ ಎನ್ನುವಂತೆ, ಅನಂತ್ ಅಂಬಾನಿಯವರು ಧರಿಸಿದ್ದ, ಈ ಅತ್ಯಾಕರ್ಷಕ ಬಂಗಾರದ ಬಂದ್ಗಾಲ ಸೂಟ್ ಮೆನ್ಸ್ ಫ್ಯಾಷನ್ ಲೋಕದಲ್ಲಿ ಸಂಚಲನ ಮೂಡಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಬಾಲಿವುಡ್ ಡಿಸೈನರ್ ಅಬು ಜಾನಿ & ಸಂದೀಪ್ ಕೋಸ್ಲಾ ಕೈಚಳಕ
ಈ ಚಿನ್ನದ ಬಂದ್ಗಾಲ ಅಥವಾ ಎಥ್ನಿಕ್ ಜಾಕೆಟ್ ಸೂಟ್ ಸೃಷ್ಟಿ ಮಾಡಿದವರು ಬೇರ್ಯಾರು ಅಲ್ಲ! ಬಾಲಿವುಡ್‌ನ ಖ್ಯಾತ ಸೆಲೆಬ್ರೆಟಿ ಡಿಸೈನರ್ ಅಬು ಜಾನಿ & ಸಂದೀಪ್ ಕೋಸ್ಲಾ. ಇದುವರೆಗೂ ಸಾಕಷ್ಟು ರಾಯಲ್ ಮದುವೆಗಳಿಗೆ ಮಾತ್ರವಲ್ಲ, ಸೆಲೆಬ್ರೆಟಿಗಳಿಗೆ ಎಥ್ನಿಕ್ ಡಿಸೈನರ್‌ವೇರ್ ಸಿದ್ಧಪಡಿಸಿ ಹೆಸರು ಮಾಡಿದ ಡಿಸೈನರ್ ಜೋಡಿ ಈ ಯೂನಿಕ್ ಡಿಸೈನರ್‌ವೇರ್ ಡಿಸೈನ್ ಮಾಡಿದೆ.
ಚಿನ್ನದ ಬಂದ್ಗಾಲ ಸೂಟ್ ವಿಶೇಷತೆ
ಡಾರ್ಕ್ ರಾಯಲ್ ನೀಲಿ ಬಣ್ಣದ ಬಂಗಾರದ ಎಂಬ್ರಾಯ್ಡರಿ ಹೊಂದಿರುವ ಈ ಬಂದ್ಗಾಲ ಸೂಟ್ “ ದಿ ಮಿಡ್‌ನೈಟ್ ಗಾರ್ಡನ್ “ ಎಂಬ ಥೀಮ್‌ಗೆ ತಕ್ಕಂತೆ ಡಿಸೈನ್‌ಗೊಂಡಿದೆ. ಜರಿ, ಫ್ರೆಂಚ್ ನಾಟ್ಸ್, ಟಿಕ್ಕಿಗಳನ್ನು ಜರ್ದೋಸಿ ಮೋಟಿಫ್‌ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಬಟನ್‌ಗಳನ್ನು ರೂಬಿ ಹಾಗೂ ಡೈಮಂಡ್‌ನಿಂದ ಸಿದ್ಧಪಡಿಸಲಾಗಿದೆ. ಬಂಗಾರದ ಫ್ಲೋರಲ್ ಹ್ಯಾಂಡ್ ಎಂಬ್ರಾಯ್ಡರಿ ಯಾವ ಮಟ್ಟಿಗೆ ಅತ್ಯಾಕರ್ಷಕವಾಗಿದೆ ಎಂದರೇ, ಇದುವರೆಗೂ ಈ ಡಿಸೈನ್ ಎಲ್ಲಿಯೂ ಕಾಣಸಿಗಲಿಕ್ಕಿಲ್ಲ ಎಂದು ಸ್ಟೈಲಿಸ್ಟ್ ಶಲೀನಾ ನತಾಲಿ ಹೇಳಿದ್ದಾರೆ.
ಇದನ್ನೂ ಓದಿ: Sequins Lehenga Trend: ಅಂಬಾನಿ ಮಗನ ಮದುವೆ ಎಫೆಕ್ಟ್; ಸಿಕ್ವಿನ್ಸ್ ಲೆಹೆಂಗಾಗಳಿಗೆ ಡಿಮ್ಯಾಂಡ್!
ಡೈಮಂಡ್ ಟೈಗರ್ ಬ್ರೋಚ್
ಈ ಚಿನ್ನದ ಬಂದ್ಗಾಲ ಸೂಟ್‌ಗೆ ಕೋಟಿಗಟ್ಟಲೇ ಬೆಲೆ ಬಾಳುವ ವಜ್ರ-ವೈಢೂರ್ಯದಿಂದ ಸಿದ್ಧಪಡಿಸಲಾದ ಬ್ರೋಚ್ ಧರಿಸಿರುವುದನ್ನು ಕಾಣಬಹುದು. ಒಟ್ಟಾರೆ, ಅನಂತ್ ಅಂಬಾನಿ ನಾನೇನೂ ಕಡಿಮೆ ಇಲ್ಲ ಎಂಬಂತೆ, ವಜ್ರ-ವೈಡೂರ್ಯದಿಂದ ಅಲಂಕೃತಗೊಂಡ ಬಂಗಾರದ ಬಂದ್ಗಾಲ ಸೂಟ್‌ನಲ್ಲಿ ಮಿಂಚಿದ್ದು, ಇದೀಗ ಮೆನ್ಸ್ ಫ್ಯಾಷನ್ ಹಿಸ್ಟರಿಯಲ್ಲಿ ದಾಖಲೆಯಾಗಿ ಉಳಿಯಲಿದೆ ಎನ್ನುತ್ತಾರೆ ಫ್ಯಾಷನ್ ಹಿಸ್ಟಾರಿಯನ್ಸ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)