-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ಪ್ರಿ –ವೆಡ್ಡಿಂಗ್ (Ambani wedding fashion) ಅರಿಷಿನ ಶಾಸ್ತ್ರದ ಕಾರ್ಯಕ್ರಮ ರಂಗು ರಂಗಾಗಿತ್ತು. ಹಳದಿ ಅಂದರೆ, ಸನ್ ಕಲರ್ ಮಾತ್ರವಲ್ಲ, ನಾನಾ ಟ್ರೆಡಿಷನಲ್ ಮಿಕ್ಸ್ ಮ್ಯಾಚ್ ಕಲರ್ಸ್‌ನ ಸೆಲೆಬ್ರೆಟಿಗಳ ಎಥ್ನಿಕ್‌ವೇರ್‌ಗಳು ಅಂಬಾನಿ ಕುಟುಂಬದ ಅರಿಷಿಣ ಶಾಸ್ತ್ರದ ಕಾರ್ಯಕ್ರಮದಲ್ಲಿ ಹೈಲೈಟಾದವು. ಕುಟುಂಬದ ಸದಸ್ಯರು ಮಾತ್ರವಲ್ಲ, ಬಾಲಿವುಡ್ ತಾರೆಯರು ಕೂಡ ತಮ್ಮದೇ ಆದ ಎಥ್ನಿಕ್ ಟಚ್ ನೀಡುವ ರಂಗು ರಂಗೀಲಾ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಂಡರು. ಈ ಕುರಿತಂತೆ ಇಲ್ಲಿದೆ ವರದಿ.
ಅಂಬಾನಿ ಫ್ಯಾಮಿಲಿಯ ಅರಿಷಿಣ ಶಾಸ್ತ್ರಕ್ಕೂ ಡ್ರೆಸ್‌ಕೋಡ್
ಮೊದಲೆ ನಿಗದಿಪಡಿಸಿದಂತೆ ಈ ಕಾರ್ಯಕ್ರಮಕ್ಕೆ ಯೆಲ್ಲೋ, ಸನ್ ಕಲರ್, ಹಳದಿ ಅಥವಾ ಆರೆಂಜ್ ಶೇಡ್‌ನ ಮಿಕ್ಸ್ ಮ್ಯಾಚ್ ಟ್ರೆಡಿಷನಲ್ ಲುಕ್ ನೀಡುವ ಎಥ್ನಿಕ್ ಡ್ರೆಸ್‌ಗಳನ್ನು ನಿಗಧಿಪಡಿಸಲಾಗಿತ್ತು. ಆದರೆ, ಸೆಲೆಬ್ರೆಟಿಗಳು ಧರಿಸಿದ ಉಡುಗೆಗಳ ಕಲರ್ ಒಂದಕ್ಕಿಂತ ಒಂದು ಭಿನ್ನ-ವಿಭಿನ್ನವಾಗಿತ್ತು. ಕೆಲವರು ಪಕ್ಕಾ ಹಳದಿ ವರ್ಣದ ಉಡುಪು ಧರಿಸಿದ್ದರೇ, ಇನ್ನು ಕೆಲವರು ಡಾರ್ಕ್ ಆರೆಂಜ್ ಶೇಡ್‌ನ ಉಡುಪುಗಳಲ್ಲಿ ಕಾಣಿಸಿಕೊಂಡರು. ಮತ್ತೆ ಕೆಲವರು ಗೋಲ್ಡನ್ ಹಳದಿ ಡ್ರೆಸ್‌ನಲ್ಲಿದ್ದರು.
ಅಂಬಾನಿ ಫ್ಯಾಮಿಲಿಯ ಎಥ್ನಿಕ್‌ವೇರ್
ಶ್ಲೋಕಾ ಹಾಗೂ ನಿಶಾ ಅಂಬಾನಿ ಮಾತ್ರ ಮೊದಲೇ ಈ ಅರಿಷಿನ ಶಾಸ್ತ್ರಕ್ಕೂ ಸಿದ್ಧಪಡಿಸಿದ ಡಿಸೈನರ್‌ವೇರ್‌ಗಳನ್ನು ಡಿಸೈನರ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅನಾವರಣಗೊಳಿಸಿದರು. ಶ್ಲೋಕ ಅವರ ಟ್ರೆಡಿಷನಲ್ ಲುಕ್ ನೀಡಿದ ಮಲ್ಟಿ ಕಲರ್‌ನ ಹಾಲ್ಟರ್ ನೆಕ್‌ನ ಲಾಂಗ್ ಬ್ಲೌಸ್ ಜೊತೆಗೆ ಕವಡೆ ಹಾಗೂ ಟಾಸೆಲ್ಸ್ ಹೊಂದಿರುವ ಪ್ಯಾಚ್ ವರ್ಕ್‌ನ ಲೆಹೆಂಗಾ ಫ್ಯಾಷನ್ ಪ್ರಿಯರನ್ನು ಸೆಳೆದಿತ್ತು. ಇನ್ನು, ಶ್ಲೋಕಾ ಅವರ ಸೌತ್ ಇಂಡಿಯನ್ ಲುಕ್‌ನಂತೆ ಕಂಡ ಹೆವ್ವಿ ಜ್ಯುವೆಲ್ ಲೆಹೆಂಗಾ ಅವರನ್ನು ಮನಮೋಹಕವಾಗಿಸಿತ್ತು. ಇನ್ನಿತರರ ಡಿಸೈನರ್‌ವೇರ್‌ಗಳು ಒಂದರ ಹಿಂದೊಂದರಂತೆ ಸೋಷಿಯಲ್ ಮೀಡಿಯಾದಲ್ಲಿ ಒಂದರ ಹಿಂದೊಂದರಂತೆ ಲಗ್ಗೆ ಇಡಲಿವೆ ಎಂಬುದಂತೂ ನಿಜ.
ಇದನ್ನೂ ಓದಿ: Ambani Wedding Fashion: ಅಂಬಾನಿ ಮಗನ ಬಂದ್ಗಾಲ ಸೂಟ್ ಬಂಗಾರದ್ದು! ರಾಜರ ಕಾಲದ ಉಡುಗೆಯ ಮರು ಸೃಷ್ಟಿ
ಸೆಲೆಬ್ರೆಟಿಗಳ ಎಥ್ನಿಕ್ ಲುಕ್
ನಟ ಸಲ್ಮಾನ್ ಖಾನ್, ರಣವೀರ್ ಸಿಂಗ್ ಹಳದಿ ಕುರ್ತಾದಲ್ಲಿ, ಅರ್ಜುನ್ ಕಪೂರ್ ಶಾರ್ಟ್ ರೆಡ್ ಕುರ್ತಾದಲ್ಲಿ ಕಾಣಿಸಿಕೊಂಡರು. ಒರ್ರಿ ಪಿಸ್ತಾ ಶೇಡ್ ಸಿಲ್ಕ್ ಕುರ್ತಾದಲ್ಲಿ ಪೋಸ್ ನೀಡಿದರು.ಇನ್ನು, ನಟಿಯರಾದ ಜಾನ್ವಿ ಕಪೂರ್ ಹಳದಿ ಸೀರೆಯಲ್ಲಿ, ಖುಷಿ, ಗೋಲ್ಡನ್ ಡಿಸೈನರ್‌ವೇರ್‌ನಲ್ಲಿ, ಅನನ್ಯಾ ಲೈಟ್ ಪಾಸ್ಟೆಲ್ ಶೇಡ್ ಸಲ್ವಾರ್ ಸೂಟ್‌ನಲ್ಲಿ, ಮಾನು ಶೀ ಚಿಲ್ಲರ್ ಹಳದಿ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ನ ಅರಿಶಿನ ಶಾಸ್ತ್ರ, ಟ್ರೆಡಿಷನಲ್ ಎಥ್ನಿಕ್ ಡಿಸೈನರ್‌ವೇರ್‌ಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿ ಮಾರ್ಪಟ್ಟಿತ್ತು ಎನ್ನಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)