ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹುಡುಗಿಯರ ಬೆಳ್ಳಿ ಕಾಲ್ಗೆಜ್ಜೆಯ ಜಾಗಕ್ಕೆ ಇದೀಗ ಫಂಕಿ ಆಕ್ಸೆಸರೀಸ್ಗಳು ಕಾಲಿಟ್ಟಿವೆ. ಇತ್ತ ಗೆಜ್ಜೆಯೂ ಅಲ್ಲ, ಅತ್ತ ಜ್ಯುವೆಲರಿಯೂ ಅಲ್ಲ ಎನ್ನುವ ಈ ವಿನ್ಯಾಸದ ಆಂಕ್ಲೆಟ್ಗಳು (Anklet Fashion) ಜೆನ್ ಜಿ ಹುಡುಗಿಯರ ಪಾದಗಳಿಗೆ ಫಂಕಿ ಲುಕ್ ನೀಡುತ್ತಿವೆ.
ಚಿತ್ರ-ವಿಚಿತ್ರ ಡಿಸೈನ್ನ ಕಾಲಿನ ಆಂಕ್ಲೆಟ್ಗಳಿವು
ಕಪ್ಪು ದಾರಕ್ಕೆ ಪೊಣಿಸಿದ ಬೀಡ್ಸ್, ಗೆಜ್ಜೆ, ಕಲರ್ ಮಣಿಗಳ ದಾರ, ಜೊತೆಗೆ ಹೆಣೆದ ಕರಿಮಣಿಯ ಜಡೆಯಂತಹ ಡಿಸೈನ್, ಮೆಟಲ್ ಚೈನ್ಗೆ ಫಂಕಿ ಡಿಸೈನ್ನ ಪೆಂಡೆಂಟ್ನಂತಹ ಮಿನಿ ಹ್ಯಾಂಗಿಂಗ್ಸ್, ಬ್ಲಾಕ್,ವೈಟ್ ಮೆಟಲ್ನ ಲೇಯರ್ ಚೈನ್ಸ್, ಗೋಲ್ಡ್ ಬೀಡ್ಸ್ ಅಥವಾ ಗೋಲ್ಡನ್ ಶೇಡ್ಸ್ ಮೆಟಲ್ನ ಚೈನ್. ಸಿಂಗಲ್, ಡಬ್ಬಲ್ ಅಥವಾ ಮಲ್ಟಿ ಲೇಯರ್ನ ಬೀಡ್ಸ್ ಆಂಕ್ಲೆಟ್, ಕಾಲಿಗೆ ಸುತ್ತಿದಂತೆ ಕಾಣುವ ಕರಿ ದಾರದ ಅಬ್ಸ್ಟ್ರಾಕ್ಟ್ ಡಿಸೈನ್ ಇಲ್ಲವೇ ಜೆಮೆಟ್ರಿಕಲ್ ವಿನ್ಯಾಸದ ಮಿನಿ ಪೆಂಡೆಂಟ್ಸ್ನ ಆಂಕ್ಲೆಟ್ ಹೀಗೆ ಊಹೆಗೂ ಮೀರಿದ ನಾನಾ ಬಗೆಯ ಫಂಕಿ ಆಕ್ಸೆಸರಿಸ್ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇವಕ್ಕೆ ಇಂತಹ ಡಿಸೈನ್ಗಳು ಎಂಬ ಟ್ಯಾಗ್ ಲೈನ್ ಇಲ್ಲ. ಡಿಸೈನರ್ಗಳ ಕೈಗಳಲ್ಲಿ ತಯಾರಾದ ನಂತರ ಹೆಸರು ಪಡೆಯುತ್ತವೆ. ಅವುಗಳ ಡಿಸೈನ್ನ ಆಧಾರದ ಮೇಲೆ ಬೆಲೆ ಕೂಡ ನಿಗಧಿಯಾಗಿರುತ್ತವೆ ಎನ್ನುತ್ತಾರೆ ಫಂಕಿ ಜ್ಯುವೆಲ್ ಡಿಸೈನರ್ಸ್ ರಾಘವ್. ಅವರ ಪ್ರಕಾರ, ಇವು ವೆಸ್ಟರ್ನ್ ಔಟ್ಫಿಟ್ಸ್ಗೆ ಇವು ಪರ್ಫೆಕ್ಟ್ ಮ್ಯಾಚ್ ಆಗುತ್ತವೆ.
ಉದ್ಯಾನನಗರಿಯಲ್ಲಿ ಎಲ್ಲೆಲ್ಲಿ ಲಭ್ಯ
ಬೆಂಗಳೂರಿನಲ್ಲಿ ಕಮರ್ಷಿಯಲ್ ಸ್ಟ್ರೀಟ್ನ ಅಕ್ಕ-ಪಕ್ಕದ ಬೀದಿಗಳಲ್ಲಿ ಬ್ಲ್ಯಾಕ್, ವೈಟ್ ಹಾಗೂ ಜಂಕ್ ಜ್ಯುವೆಲರಿಗಳ ಶಾಪ್ಗಳು ಸಾಕಷ್ಟಿವೆ. ಇನ್ನು ಮಲ್ಲೇಶ್ವರದ 8ನೇ ಕ್ರಾಸ್ನ ಸ್ಟ್ರೀಟ್ ಶಾಪ್ಗಳಲ್ಲೂ ಕಾಣಬಹುದು. ಜಯನಗರದ 4ನೇ ಬ್ಲಾಕ್ನಲ್ಲೂ ಲಭ್ಯ. ಅಷ್ಟೇಕೆ! ಚರ್ಚ್ ಸ್ಟ್ರೀಟ್ನ ಬೀದಿ ಬದಿಗಳಲ್ಲೂ ಇವನ್ನು ಮಾರಾಟ ಮಾಡುವ ಜನರು ಸಿಗುತ್ತಾರೆ. ಬೆಲೆ 100ರೂ.ಗಳಿಂದ ಆರಂಭಗೊಂಡು 500ರೂ.ಗಳವರೆಗೂ ಇದೆ. ಚೌಕಾಸಿ ಮಾಡಿ ಖರೀದಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಹೀಗೂ ಸ್ಟೈಲಾಗಿ ಧರಿಸಿ
- ಸಿಂಗಲ್ ಆಂಕ್ಲೆಟ್ ಕೂಡ ಧರಿಸಬಹುದು.
- ಎಲ್ಲಾ ಬಗೆಯ ವೆಸ್ಟರ್ನ್ ಔಟ್ಫಿಟ್ಗೆ ಮ್ಯಾಚ್ ಆಗುತ್ತವೆ.
- ಇಂಡಿಯನ್ ಔಟ್ಫಿಟ್ಸ್ಗೆ ಮ್ಯಾಚ್ ಆಗುವುದಿಲ್ಲ.
- ಸ್ಕಿನ್ ಅಲರ್ಜಿಯಾದಲ್ಲಿ ಆವಾಯ್ಡ್ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Jeans Saree Fashion: ಜೀನ್ಸ್ ಮೇಲೆ ಸೀರೆ ಧರಿಸಿದರೆ ಹೇಗಿರುತ್ತದೆ? ಜೀನ್ಸ್ ಸೀರೆ ಫ್ಯಾಷನ್ ಟ್ರೆಂಡ್!