ಸಂದರ್ಶನ : ಶೀಲಾ ಸಿ. ಶೆಟ್ಟಿ
ಪ್ರತಿಯೊಬ್ಬರ ಕ್ರಿಯೇಟಿವಿಟಿ ಅವರವರ ಫ್ಯಾಷನ್ ಲುಕ್ಕನ್ನು ಪ್ರತಿಬಿಂಬಿಸುತ್ತದೆ. ಅದು ಟ್ರೆಡಿಷನಲ್ ಆಗಬಹುದು ಅಥವಾ ಪಕ್ಕಾ ದೇಸಿ ಫ್ಯಾಷನ್ ಆಗಬಹುದು. ಇದು ನಮ್ಮ ವ್ಯಕ್ತಿತ್ವದ ಕನ್ನಡಿಯಂತೆ ಎನ್ನುವ ಮಿಸೆಸ್ ಇಂಡಿಯಾ ಕರ್ನಾಟಕ ಎಲಿಗೆಂಟ್ 2022 ಸ್ಮಿತಾ ಪ್ರಕಾಶ್ ಬಹು ಮುಖ ಪ್ರತಿಭೆ. ಬೆಂಗಳೂರು ರನ್ನರ್ ಮಾಡೆಲ್ ಆಫ್ ದಿ ಇಯರ್ ಆವಾರ್ಡ್ ವಿಜೇತೆ. ಕ್ಲಾಸಿಕಲ್ ಭರತನಾಟ್ಯಂ ಕಲಾವಿದೆ. ಕೂಚುಪುಡಿ ಕೊರಿಯೊಗ್ರಾಫರ್ ಕೂಡ. ಈ ಬಾರಿಯ ಮಾಡೆಲ್ ಫ್ಯಾಷನ್ ಲೈಫ್‌ನಲ್ಲಿ (Model Fashion life) ವಿಂಟರ್ ಫ್ಯಾಷನ್ ಸ್ಟೇಟ್‌ಮೆಂಟ್ಸ್ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.
ಕಲಾವಿದರೂ ಆಗಿರುವ ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಏನು ?
ನನಗೆ ರೆಡ್ ಮತ್ತು ಬ್ಯ್ಲಾಕ್ ಸೀರೆಗಳೆಂದರೇ ಇಷ್ಟ. ಅದರಲ್ಲೂ ಫ್ಯೂಷನ್ ಸೀರೆಗಳನ್ನು ಉಡುವುದು, ಮಾಡರ್ನ್ ಪ್ರಿಂಟ್ಸ್ ಇರುವಂತವಕ್ಕೆ ಕಂಟೆಂಪರರಿ ಡ್ರೆಪಿಂಗ್‌ನಿಂದ ವಿಭಿನ್ನ ಲುಕ್ ನೀಡುವುದು ಪ್ರಿಯವಾದ ಸಂಗತಿಗಳಲ್ಲೊಂದು. ಇನ್ನು ಫ್ಯೂಷನ್ ಜ್ಯುವೆಲರಿ ಇವುಗಳೊಂದಿಗೆ ಧರಿಸುವುದು ಇಷ್ಟ. ನನ್ನ ಪ್ರಕಾರ, ಪಲ್ಹಾಜೋ ಪ್ಯಾಂಟ್‌ನೊಂದಿಗೆ ಕುರ್ತಾ ಬೆಸ್ಟ್ ಡ್ರೆಸ್. ಇದೆಲ್ಲಾ ನನ್ನ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಸೇರಿದೆ.
ನಿಮ್ಮ ವಾರ್ಡ್ರೋಬ್ ಕಲೆಕ್ಷನ್‌ನಲ್ಲಿ ಏನೇನಿದೆ?
ವಾರ್ಡ್ರೋಬ್ ತುಂಬೆಲ್ಲಾ ಸಿಲ್ಕ್ ಸೀರೆಗಳಿವೆ. ಪಾರ್ಟಿವೇರ್ ಸೀರೆಗಳು, ಕುರ್ತಿಗಳು, ಜೀನ್ಸ್ ಹಾಗೂ ಮ್ಯಾಚಿಂಗ್ ಟೀ ಶರ್ಟ್‌ಗ ಳ ತುಂಬಿ ಹೋಗಿವೆ.
ನಿಮ್ಮ ವಿಂಟರ್ ಫ್ಯಾಷನ್ ಏನು?
ನಾನು ಆದಷ್ಟೂ ಬೆಚ್ಚಗಿರುವ ಉಡುಪುಗಳಿಗೆ ಪ್ರಾಮುಖ್ಯತೆ ನೀಡುತ್ತೇನೆ. ಸೀರೆಗೆ ಫುಲ್ ಬ್ಲೌಸ್ ಧರಿಸುತ್ತೇನೆ. ಲೇಯರ್ ಲುಕ್ ನೀಡುತ್ತೇನೆ. ಇದು ಚರ್ಮವನ್ನು ರಕ್ಷಿಸುತ್ತದೆ. ಸೀರೆ ಪ್ರಿಯರು ಇದಕ್ಕೂ ಲೇಯರ್ ಲುಕ್ ನೀಡಬಹುದು.
ವಿಂಟರ್ ಬ್ಯೂಟಿಗಾಗಿ ಏನು ಟಿಪ್ಸ್ ನೀಡುತ್ತೀರಾ?
ಕೆಮಿಕಲ್ ಇರುವಂತಹ ಯಾವುದೇ ಬ್ಯೂಟಿ ಪ್ರಾಡಕ್ಟ್ಸ್ ಬಳಸುವುದಿಲ್ಲ. ಬದಲಿಗೆ ಸ್ನಾನಕ್ಕೆ ಮುನ್ನ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತೇನೆ. ಕೊಬ್ಬರಿ ಎಣ್ಣೆ ಸೌಂದರ್ಯವರ್ಧಕ ಪ್ರತಿಯೊಬ್ಬರು ಬಳಸಬಹುದು. ಹೆಚ್ಚು ನೀರು ಸೇವಿಸುವುದು ಉತ್ತಮ. ಹಣ್ಣಿನ ರಸದ ಸೇವನೆ ಕೂಡ ಉತ್ತಮ.
ಟ್ರೆಡಿಷನಲ್ ಲುಕ್‌ನಲ್ಲೂ ವಿಂಟರ್ ಫ್ಯಾಷನ್ ಮಾಡಬಹುದೇ?
ಖಂಡಿತಾ. ನಾನಾ ಬಗೆಯ ಡ್ರೆಪಿಂಗ್ ಹಾಗೂ ಡಿಫರೆಂಟ್ ಬ್ಲೌಸ್ ಧರಿಸುವುದರಿಂದ ಹಾಗೂ ಅವುಗಳ ಮೇಲೆ ಜಾಕೆಟ್ ಹಾಗೂ ಶಾಲು ಬಳಸುವುದರಿಂದ ಲೇಯರ್ ಲುಕ್ ನೀಡಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ಸ್ಟೈಲಿಶ್ ಸ್ಯಾಕ್ಸೋಫೋನಿಸ್ಟ್ ಭಾರತಿ ಗೋಪಾಲ್ ವಿಂಟರ್ ಫ್ಯಾಷನ್ ಟಿಪ್ಸ್ ಹೀಗಿದೆ…