Site icon Vistara News

Model Fashion Life: ರೆಟ್ರೊ ಫ್ಯಾಷನ್ ಪ್ರಿಯೆ ಮಾಡೆಲ್ ಲುಸಿ ಸರೆರಿಯಾ ಚಳಿಗಾಲದ ಟಿಪ್ಸ್‌ ಹೀಗಿದೆ

Model Fashion Life

ಸಂದರ್ಶನ : ಶೀಲಾ ಸಿ. ಶೆಟ್ಟಿ
ಮಿಸೆಸ್ ಇಂಡಿಯಾ ಕರ್ನಾಟಕ ಮಂಡ್ಯ, ಮಿಸೆಸ್ ಡ್ಯಾಜ್ಹಲಿಂಗ್ ಸ್ಟಾರ್ 2023 ಟೈಟಲ್ ವಿಜೇತರಾಗಿರುವ ಮಾಡೆಲ್ ಲುಸಿ ಸೆರೆರಿಯಾ ಮೂಲತಃ ಗುಜರಾತಿನವರು. ಮಂಡ್ಯ ಮೂಲದ ವ್ಯಕ್ತಿಯನ್ನು ಮದುವೆಯಾದ ನಂತರ ಇಲ್ಲಿಯವರೇ ಆಗಿದ್ದಾರೆ. ರ‍್ಯಾಂಪ್‌ ವಾಕ್ ಪ್ರೀತಿಸುವ ಇವರಿಗೆ ಕಲಾತ್ಮಕ ಫ್ಯಾಷನ್ ಜೊತೆಗೆ ರೆಟ್ರೋ ಸ್ಟೈಲ್ ಕೂಡ ಇಷ್ಟವಂತೆ. ಇದಕ್ಕೆ ಪೂರಕ ಎಂಬಂತೆ, ಗುಜರಾತಿನ ಹ್ಯಾಂಡ್ಮೇಡ್ ಬಾಂದನಿ ಫ್ಯಾಬ್ರಿಕ್ ಫ್ಯಾಷನ್ ಪ್ರೇಮಿಯಂತೆ. ಸಾಧ್ಯವಾದಷ್ಟು ಇದನ್ನು ಪ್ರಮೋಟ್ ಮಾಡುತ್ತಾರಂತೆ. ಇದು ನಮ್ಮ ರಾಷ್ಟ್ರದ ಸಾಂಸ್ಕೃತಿಕ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎನ್ನುತ್ತಾರೆ. ಈ ಬಾರಿಯ ಮಾಡೆಲ್ ಫ್ಯಾಷನ್ ಲೈಫ್ (Model Fashion life) ಕಾಲಂಗಾಗಿ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.

ನಿಮ್ಮ ಫ್ಯಾಷನ್ ಸ್ಟೇಟ್ಮೆಂಟ್ ಏನು ?

ನನಗೆ ಹೊಸ ಟ್ರೆಂಡ್‌ಗಿಂತ ಹಳೇ ಫ್ಯಾಷನ್ ಇಷ್ಟ. ಉದಾಹರಣೆಗೆ ಈಗಾಗಲೇ ಧರಿಸಿದ ಲೆಹೆಂಗಾ, ಸೀರೆ, ಕುರ್ತಿ, ಸೆಲ್ವಾರ್ ಹೀಗೆ ಇವುಗಳನ್ನೇ ಮತ್ತೊಮ್ಮೆ ಹೊಸ ರೂಪದಲ್ಲಿ ರೆಟ್ರೊ ಸ್ಟೈಲ್‌ನಲ್ಲಿ ಧರಿಸುವುದು ಹಾಗೂ ರಿಕ್ರಿಯೇಟ್ ಮಾಡುವುದು ನನಗಿಷ್ಟ.

ಸ್ಟೈಲ್ ಸ್ಟೇಟ್ಮೆಂಟ್ ಬಗ್ಗೆ ಹೇಳಿ ?

ಕಲಾತ್ಮಕ ಫ್ಯಾಷನ್ ನನ್ನ ಸ್ಟೈಲ್ ಸ್ಟೇಟ್ಮೆಂಟ್. ಸಂಸ್ಕೃತಿಯನ್ನು ಎತ್ತು ಹಿಡಿಯುವ ಸ್ಟೈಲ್ ಸ್ಟೇಟ್ಮೆಂಟ್‌ನಲ್ಲಿ ಕಾಣಿಸಿಕೊಳ್ಳುವುದು ನನಗಿಷ್ಟ. ಅದು ರೆಟ್ರೋ ಸ್ಟೈಲ್ ಆದರೂ ಆಗಬಹುದು.

ವಿಂಟರ್ ಫ್ಯಾಷನ್‌ಗೆ ನೀವು ನೀಡುವ ಟಿಪ್ಸ್ ಏನು ?

ಥರ್ಮಲ್ ಲಾಂಗ್ ಸ್ಲೀವ್ ಟಾಪ್‌ಗೆ ಲಾಂಗ್ ಸ್ಕರ್ಟ್‌ ಅನ್ನು ಫ್ಯಾಷೆನಬಲ್ ಆಗಿ ಕಾಣಿಸಬಹುದು. ಇದರ ಮೇಲೆ ಸ್ಟೈಲಾಗಿ ಕೋಟ್ ಧರಿಸಿ ಫ್ಯೂಷನ್ ಫ್ಯಾಷನ್ ಮಾಡಬಹುದು. ಮೆಸ್ಸಿ ಹೇರ್ಬನ್ ಕ್ಯೂಟಾಗಿ ಕಾಣಿಸುತ್ತದೆ. ಬೂಟ್ ಧರಿಸಿ, ಇದರೊಂದಿಗೆ ಕಲಾತ್ಮಕ ಸ್ಲಿಂಗ್ ಬ್ಯಾಗ್ ಅಥವಾ ಬಟ್ಟೆಯ ಬ್ಯಾಗ್ ಧರಿಸಿದಲ್ಲಿ ಕಂಪ್ಲೀಟ್ ವಿಭಿನ್ನ ಲುಕ್ ನಿಮ್ಮದಾಗುವುದು. ಇದು ನನ್ನ ವಿಂಟರ್ ಫ್ಯೂಷನ್ ಫ್ಯಾಷನ್ ಡ್ರೆಸ್ಕೋಡ್ ಟಿಪ್ಸ್.

ಚಳಿಗಾಲದ ಬ್ಯೂಟಿ ಸಲಹೆ ಏನು ನೀಡುತ್ತೀರಾ?

ಆದಷ್ಟೂ ಅರ್ಗಾನಿಕ್ ಬ್ಯೂಟಿ ಪ್ರಾಡಕ್ಟ್‌ಗಳನ್ನೇ ಬಳಸಿ. ಇನ್ನು ಚಳಿಗಾಲದಲ್ಲಿ ಕೂದಲಿಗೆ ಎಣ್ಣೆಯಷ್ಟೇ ಹೇರ್ ಮಾಸ್ಕ್ ಹಾಕುವುದು ಕೂಡ ಮುಖ್ಯ. ಸೌಂದರ್ಯವರ್ಧಕವಾಗಿ ಅಲೋವೇರಾ ಜೆಲ್ ಬಳಸಬಹುದು.

ರಿಸೈಕಲ್ ಫ್ಯಾಷನ್ ಬಗ್ಗೆ ಆಸಕ್ತಿ ಇದೆಯಂತೆ?

ಹೌದು. ಅಜ್ಜಿ-ಅಮ್ಮನ ಸೀರೆಗಳನ್ನು ವಿಭಿನ್ನವಾಗಿ ಉಡಲು ಇಷ್ಟಪಡುತ್ತೇನೆ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Winter Fashion: ವಿಂಟರ್ ಸೀಸನ್‌ನ್ನಲ್ಲಿ ಯುವತಿಯರ ರಂಗೇರಿಸಿದ ಟೈ ಡೈ ಶರ್ಟ್ ಕೋ ಆರ್ಡ್ ಸೆಟ್

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version