ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಂದೆರೆಡು ದಶಕಗಳ ಹಿಂದೆ ಸಖತ್ ಟ್ರೆಂಡಿಯಾಗಿದ್ದ, ರೆಟ್ರೋ ಸ್ಟೈಲ್‌ನ ಬ್ಯಾಕ್ ಬಟನ್ ಸೀರೆ ಬ್ಲೌಸ್‌ಗಳು (Back Button Saree Blouse) ಇದೀಗ ಮತ್ತೊಮ್ಮೆ ವೆರೈಟಿ ಡಿಸೈನ್‌ನಲ್ಲಿ ತಮ್ಮ ಜಾದೂ ಮಾಡಿವೆ. ಸೀರೆ ಪ್ರಿಯ ಮಾನಿನಿಯರನ್ನು ಸಿಂಗರಿಸಲಾರಂಭಿಸಿವೆ.
ಬ್ಯಾಕ್ ಬಟನ್ ಬ್ಲೌಸ್ ಪುರಾಣ
“ಬಹುತೇಕ ಸೀರೆ ಬ್ಲೌಸ್‌ಗಳಿಗೆ ಫ್ರಂಟ್ ಬಟನ್ ಡಿಸೈನ್ ಇರುವುದು ಸಾಮಾನ್ಯ. ಎಲ್ಲರಿಗೂ ತಿಳಿದಿರುವಂತೆ ಈ ಡಿಸೈನ್ ಮೊದಲಿನಿಂದಲೂ ಎವರ್‌ಗ್ರೀನ್ ವಿನ್ಯಾಸದಲ್ಲಿ ಸೇರಿ ಹೋಗಿದೆ. ವಯಸ್ಸಿನ ಪರಿಮಿತಿಯಿಲ್ಲದೇ ಎಲ್ಲರೂ ಈ ಡಿಸೈನ್‌ನ ಸೀರೆಯನ್ನು ಉಡುವುದು ಸಾಮಾನ್ಯವಾಗಿದೆ. ಇನ್ನು, ಬ್ಯಾಕ್ ಬಟನ್ ಸೀರೆ ಬ್ಲೌಸ್ ವಿಷಯಕ್ಕೆ ಬಂದಲ್ಲಿ, ಒಂದೆರೆಡು ದಶಕಗಳ ಹಿಂದೆ ಈ ಫ್ಯಾಷನ್ ಬಂತು. ಈ ಫ್ಯಾಷನ್ ಯಾವ ಮಟ್ಟಿಗೆ ಹಿಟ್ ಆಯಿತೆಂದರೇ, ಅಂದು ಈ ಶೈಲಿಯ ಸೀರೆ ಬ್ಲೌಸ್ ಧರಿಸಿದವರನ್ನು ಮಾಡರ್ನ್ ಹುಡುಗಿಯರು ಎಂದು ಗುರುತಿಸಲಾಗುತ್ತಿತ್ತು. ಆ ಮಟ್ಟಿಗೆ ಈ ರೀತಿಯ ಬ್ಲೌಸ್‌ಗಳು ಜನಪ್ರಿಯಗೊಂಡಿದ್ದವು” ಎನ್ನುತ್ತಾರೆ ಬ್ಲೌಸ್ ಡಿಸೈನರ್ಸ್ ರಾಘವ್.
ಟ್ರೆಂಡ್‌ನಲ್ಲಿರುವ ಬ್ಯಾಕ್ ಬಟನ್ ಸೀರೆ ಬ್ಲೌಸ್
ಅಂದಹಾಗೆ, ಬ್ಯಾಕ್ ಬಟನ್ ಸೀರೆ ಬ್ಲೌಸ್‌ಗಳಲ್ಲಿ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಡೀಪ್ ಹಾರ್ಟ್ ಶೇಪ್ ಕಟ್ ಇರುವಂತಹ ಡಿಸೈನ್‌ನವು, ಹೈ ನೆಕ್ ಬಟನ್ ಬ್ಲೌಸ್, ಡೀಪ್ ನೆಕ್ ಬ್ಯಾಕ್ ಬಟನ್ ಬ್ಲೌಸ್, ಟ್ಯಾಸೆಲ್ಸ್ & ಬಟನ್ ಬ್ಯಾಕ್ ಲೆಸ್ ಬ್ಲೌಸ್, ವೈಡ್ ಕಟ್ ಬಟನ್ ಬ್ಲೌಸ್, ಟೈಯಿಂಗ್ ಬ್ಯಾಕ್ ಬಟನ್ ಬ್ಲೌಸ್, ಕ್ರಾಪ್ ಟಾಪ್ ಶೈಲಿಯ ಬ್ಯಾಕ್ ಬಟನ್ ಬ್ಲೌಸ್ ಸೇರಿದಂತೆ ನಾನಾ ವಿನ್ಯಾಸದವು ಮಾನಿನಿಯರನ್ನು ಸಿಂಗರಿಸಿವೆ. ಆಯಾ, ಸೀರೆಯ ಫ್ಯಾಬ್ರಿಕ್‌ನ ಆಧಾರದ ಮೇಲೆ ಬ್ಲೌಸ್ ಡಿಸೈನರ್‌ಗಳು ಇಂತಹ ವಿನ್ಯಾಸವನ್ನು ನಿರ್ಧರಿಸುತ್ತಿದ್ದಾರೆ. ಅದರಲ್ಲೂ ಯಂಗ್ ಹೆಣ್ಣುಮಕ್ಕಳು ಈ ವಿನ್ಯಾಸದ ಸೀರೆ ಬ್ಲೌಸ್‌ಗಳನ್ನು ಅತಿ ಹೆಚ್ಚು ಧರಿಸುತ್ತಿದ್ದಾರೆ ಎನ್ನುತ್ತಾರೆ ಬ್ಲೌಸ್ ಡಿಸೈನರ್ ದಿಯಾ ಹಾಗೂ ರಕ್ಷಾ. ಅವರ ಪ್ರಕಾರ, ಬ್ಯಾಕ್ ಬಟನ್ ಬ್ಲೌಸ್‌ಗಳು ಮಾಡರ್ನ್ ಲುಕ್ ನೀಡುವುದರೊಂದಿಗೆ ಯಂಗ್ ಲುಕ್ ನೀಡುತ್ತವಂತೆ.
ಸೀರೆಗೆ ತಕ್ಕ ಡಿಸೈನ್ ಆಯ್ಕೆ
ಉಡುವ ಸೀರೆಗೆ ತಕ್ಕಂತೆ ಈ ಬ್ಯಾಕ್ ಬಟನ್ ಬ್ಲೌಸ್ ಡಿಸೈನ್ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಸ್. ಡಿಸೈನರ್ ಸೀರೆಗೆ ಕಾಕ್‌ಟೈಲ್ ಡಿಸೈನ್ಸ್, ರೇಷ್ಮೆ ಸೀರೆಗೆ ಡೀಪ್ ನೆಕ್ ಹಾಗೂ ಟಾಸೆಲ್ಸ್ ಇರುವಂತವು, ಎಂಬ್ರಾಯ್ಡರಿ ಹ್ಯಾಂಡ್ ವರ್ಕ್ ಇರುವಂತವು, ಸಾದಾ ಸೀರೆಗೆ ಹೈ ನೆಕ್ ಶೈಲಿಯವು ಮ್ಯಾಚ್ ಆಗುತ್ತವೆ ಎನ್ನುತ್ತಾರೆ.
ಇದನ್ನೂ ಓದಿ: Star Cricket Theme Fashion: ಕ್ರಿಕೆಟ್ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್!
ಬ್ಯಾಕ್ ಬಟನ್ ಸೀರೆ ಬ್ಲೌಸ್ ರೆಟ್ರೋ ಲುಕ್‌ಗೆ 3 ಟಿಪ್ಸ್
- ಬ್ಯಾಕ್ ಬಟನ್ ಸೀರೆ ಬ್ಲೌಸ್ನಲ್ಲಿ ರೆಟ್ರೋ ಲುಕ್ ಪಡೆಯಲು ವಿಂಟೇಜ್ ಲುಕ್ ನೀಡುವ ಮೇಕಪ್ ಮಾಡಬೇಕು.
- ಹೇರ್ಸ್ಟೈಲ್ ಕೂಡ ಆದಷ್ಟೂ ಈ ಲುಕ್‌ಗೆ ಮ್ಯಾಚ್ ಆಗಬೇಕು.
- ಸೀರೆ ಡ್ರೇಪಿಂಗ್, ರೆಟ್ರೋ ಲುಕ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)