-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಲೂನ್ ಡೆನಿಮ್ ಡ್ರೆಸ್‌ಗಳು (Balloon Denim frock Fashion) ಮಾನ್ಸೂನ್ ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ. ಈ ಬಾರಿಯ ಮಾನ್ಸೂನ್ ಸೀಸನ್‌ಗೆ ಕಾಲಿಟ್ಟಿರುವ ಲೈಟ್‌ವೈಟ್ ಬಲೂನ್ ಡೆನಿಮ್ ಡ್ರೆಸ್‌ಗಳು ವಿಶೇಷವಾಗಿ ಕಾಲೇಜು ಯುವತಿಯರನ್ನು ಸೆಳೆದಿವೆ. ತಕ್ಷಣಕ್ಕೆ ನೋಡಲು ಫಿಟ್ & ಫ್ಲೇನರ್‌ನಂತೆ ಕಾಣುವ ಈ ಔಟ್‌ಫಿಟ್, ಸ್ಲಿಮ್ ಹುಡುಗಿಯರು ಧರಿಸಿದಾಗ ಬಾಡಿ ಮಾಸ್ ಇಂಡೆಕ್ಸ್ ಹೈಲೈಟ್ ಮಾಡುವುದರೊಂದಿಗೆ ಆಕರ್ಷಕವಾಗಿ ಬಿಂಬಿಸುತ್ತವೆ.
ಡೆನಿಮ್ ನ್ಯೂ ಲುಕ್
ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಸಿನಿಮಾ ಇವೆಂಟ್‌ನಲ್ಲಿ ಬಾಲಿವುಡ್ ನಟಿ ಶಾರ್ವರಿ ಧರಿಸಿದ ಬಲೂನ್ ಡೆನಿಮ್ ಮಿನಿ ಡ್ರೆಸ್ ಫ್ಯಾಷನ್ ಪ್ರಿಯ ಹುಡುಗಿಯರನ್ನು ಆಕರ್ಷಿಸಿತ್ತು.
ಟೀನೇಜ್ ಹುಡುಗಿಯರಿಗೆ ಪ್ರಿಯವಾದ ಮಿನಿ ಡೆನಿಮ್ ಬಲೂನ್ ಡ್ರೆಸ್
“ಇತ್ತೀಚೆಗೆ ನಾನಾ ಬಗೆಯ ಡೆನಿಮ್ ಡ್ರೆಸ್‌ಗಳು ಫ್ಯಾಷನ್ ಲೋಕದಲ್ಲಿ ಕಾಲಿಡುತ್ತಿದ್ದು, ಅವುಗಳಲ್ಲಿ ಇದೀಗ ಚಾಲ್ತಿಯಲ್ಲಿರುವ ಬಲೂನ್ ಡೆನಿಮ್ ಡ್ರೆಸ್ ಟೀನೇಜ್ ಯುವತಿಯರ ವಾರ್ಡ್ರೋಬ್ ಸೇರಿವೆ. ಅವುಗಳಲ್ಲಿ ಮಿನಿ ಅಥವಾ ಶಾರ್ಟ್ ಬಲೂನ್ ಡ್ರೆಸ್‌ಗಳು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಸ್ಲಿಮ್ ಹುಡುಗಿಯರು ಧರಿಸಿದಾಗ ಬೊಂಬೆಯಂತೆ ಬಿಂಬಿಸುವ ಈ ಬಲೂನ್ ಡೆನಿಮ್ ಡ್ರೆಸ್‌ಗಳು ಈ ಸೀಸನ್‌ಗೆ ತಕ್ಕಂತಹ ಡಿಸೈನ್‌ನಲ್ಲಿ ಆಗಮಿಸಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜಾಕೀರ್. ಅವರ ಪ್ರಕಾರ, ಈ ಡ್ರೆಸ್‌ಗಳು ಅತಿ ಹೆಚ್ಚಾಗಿ ಬಿಂದಾಸ್ ಹುಡುಗಿಯರನ್ನು ಸಿಂಗರಿಸಿವೆ.
ಏನಿದು ಬಲೂನ್ ಡೆನಿಮ್ ಡ್ರೆಸ್
ನೋಡಲು ಮಿನಿ ಫ್ರಾಕ್‌ನಂತೆ ಕಾಣುವ ಬಲೂನ್ ಡ್ರೆಸ್‌ನ ಸ್ಲೀವ್ ಉದ್ದನಾಗಿರುತ್ತವೆ. ಫುಲ್ ಸ್ಲೀವ್ ಹೊಂದಿರುತ್ತದೆ. ಇನ್ನು ವೇಸ್ಟ್‌ಲೈನ್‌ವರೆಗೂ ಫಿಟ್ ಆಗಿರುತ್ತವೆ. ಡೆನಿಮ್‌ನಲ್ಲಿ ಕೆಳಗೆ ಫ್ಲೇರ್ ನೀಡಲಾಗುವುದಿಲ್ಲವಾದ್ದರಿಂದ ಬಲೂನ್‌ನಂತಹ ವಿನ್ಯಾಸ ಡಬ್ಬಲ್ ಮಡಿಸಿದ ರೀತಿಯ ಡಿಸೈನ್ ಬಲೂನ್‌ನಂತೆ ಬಿಂಬಿಸುತ್ತದೆ. ಕೆಲವು ಡ್ರೆಸ್‌ಗಳು ಮಿನಿ ಫ್ರಾಕ್‌ನಂತೆ ಇರುತ್ತವೆ. ಹೊಟ್ಟೆಯ ಭಾಗದಲ್ಲಿ ಟೈಟಾಗಿರುತ್ತವೆ. ಕ್ಯಾಶುವಲ್ ಲುಕ್ ನೀಡುತ್ತವೆ. ಸಾಮಾನ್ಯ ಸ್ಯಾಟಿನ್ ಫ್ಯಾಬ್ರಿಕ್‌ನಲ್ಲಿ ಟ್ರೆಂಡಿಯಾಗಿದ್ದ ಈ ವಿನ್ಯಾಸ ಇದೀಗ ಡೆನಿಮ್ ಫ್ಯಾಬ್ರಿಕ್‌ನಲ್ಲಿ ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಇದನ್ನೂ ಓದಿ: Crush Saree Fashion: ಸೆಲೆಬ್ರೆಟಿ ಲುಕ್ ನೀಡುವ ಡಿಸೈನರ್ ಕ್ರಶ್ ಸೀರೆಗಳು
ಬಲೂನ್ ಡ್ರೆಸ್ ಪ್ರಿಯರಿಗೆ ಒಂದಿಷ್ಟು ಸಿಂಪಲ್ ಸಲಹೆ
- ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಬಲೂನ್ ಡ್ರೆಸ್ ಹೊಂದಬೇಕು.
- ಟಮ್ಮಿ ಭಾಗ ಅಗಲವಾಗಿದ್ದಲ್ಲಿ ಈ ಔಟ್‌ಫಿಟ್ ಬೇಡ.
- ಈ ಡ್ರೆಸ್ನೊಂದಿಗೆ ಹೈ ಹೀಲ್ಸ್ ಅಥವಾ ಸ್ನೀಕರ್ಸ್ ಮ್ಯಾಚ್ ಆಗುತ್ತದೆ.
- ನೆಕ್ಲೈನ್ ಅಗಲವಾಗಿಲ್ಲದ ಕಾರಣ ಹೆಚ್ಚು ಆಕ್ಸೆಸರೀಸ್ ಧರಿಸುವ ಅಗತ್ಯವಿಲ್ಲ.
- ಈ ಡ್ರೆಸ್ ಎಂತಹವರಿಗೂ ಯಂಗ್ ಲುಕ್ ನೀಡುತ್ತದೆ.
- ಸ್ಲಿಮ್ ಇರುವವರಿಗೆ ಹೇಳಿಮಾಡಿಸಿದ ವೆಸ್ಟರ್ನ್ ಔಟ್‌ಫಿಟ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)