Site icon Vistara News

Banaras Silk Saree Fashion: ಫೆಸ್ಟಿವ್‌ ಸೀಸನ್‌ನಲ್ಲಿ ಗ್ರ್ಯಾಂಡ್‌ ಬನಾರಸ್ ಸಿಲ್ಕ್ ಸೀರೆಗಳ ಹಂಗಾಮ!

Banaras silk saree fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಫೆಸ್ಟಿವ್‌ ಸೀಸನ್‌ನಲ್ಲಿ ವೈವಿಧ್ಯಮಯ (Banaras silk saree fashion) ಗ್ರ್ಯಾಂಡ್‌ ಬನಾರಸ್‌ ಸಿಲ್ಕ್ ಸೀರೆಗಳು ಹಂಗಾಮ ಎಬ್ಬಿಸಿವೆ. ಹೌದು, ಮೊದಲಿನಿಂದಲೂ ಬನಾರಸ್‌ ಸೀರೆಗಳು ಗ್ರ್ಯಾಂಡ್‌ ಸೀರೆಗಳ ಲಿಸ್ಟ್‌ನಲ್ಲಿವೆ. ಈ ಶೈಲಿಯ ಸೀರೆಗಳು ಮೂಲತಃ ಉತ್ತರ ಭಾರತದ ಬನರಾಸ್‌ನವಾದರೂ ದಕ್ಷಿಣ ಭಾರತದ ಮಹಿಳೆಯರನ್ನು ಮೊದಲಿನಿಂದಲೂ ಆಕರ್ಷಿಸಿವೆ. ಇತ್ತೀಚೆಗೆ ಇವುಗಳ ಹೊಸ ಪ್ರಿಂಟ್ಸ್ ಹಾಗೂ ನಯಾ ಪಾಸ್ಟೆಲ್‌ ಶೇಡ್ಸ್‌ಗಳ ಆಗಮನದಿಂದಾಗಿ ಮಹಿಳೆಯರಿಗೆ ಮಾತ್ರವಲ್ಲ, ಕಾಲೇಜು ಹುಡುಗಿಯರಿಗೂ ಈ ಸೀರೆಗಳು ಪ್ರಿಯವಾಗತೊಡಗಿವೆ. ಪರಿಣಾಮವಾಗಿ ಬನಾರಸ್‌ ಸಿಲ್ಕ್‌ ಸೀರೆಗಳು ಮೊದಲಿಗಿಂತ ಹೆಚ್ಚಾಗಿ ಈ ಜನರೇಷನ್‌ ಯುವತಿಯರನ್ನು ಬರಸೆಳೆದಿವೆ ಎನ್ನುತ್ತಾರೆ ಮಾಡೆಲ್‌ಗಳಾದ ಭೂಮಿಕಾ ರೆಡ್ಡಿ, ಕುಸುಮಾ, ಸುಷ್ಮಿತಾ.

ಬನಾರಸ್‌ ಸಿಲ್ಕ್‌ ಸೀರೆಗಳ ಜಾದೂ

ಪ್ರಮುಖವಾಗಿ 4 ಬಗೆಯ ಬನಾರಸ್‌ ಸೀರೆಗಳನ್ನು ಎವರ್‌ಗ್ರೀನ್‌ ಸೀರೆಗಳೆಂದು ಕರೆಯಲಾಗುತ್ತದೆ. ಅವುಗಳಲ್ಲಿ ಕತಾನ್‌, ಜರಿಯ ಕೋರಾ, ಜಾರ್ಜೆಟ್‌ನವು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ರೇಷ್ಮೆಯ ದಾರದಿಂದಲೇ ಸಿದ್ಧಪಡಿಸಲಾಗುವ ಬ್ರೋಕೆಡ್‌, ಗೋಲ್ಡ್ ಹಾಗೂ ಸಿಲ್ವರ್‌ ಲುಕ್‌ ನೀಡುವ ಬನಾರಸ್‌ ಸೀರೆಗಳಂತೂ ಈ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಿಡುಗಡೆಗೊಳ್ಳುತ್ತಿರುವುದು ಬೇಡಿಕೆ ಹೆಚ್ಚಿಸಿಕೊಳ್ಳಲು ಕಾರಣವಾಗಿದೆ.

ಯುವತಿಯರನ್ನು ಸೆಳೆದ ಬನಾರಸ್‌ ಸೀರೆಗಳು

ದಶಕಗಳ ಹಿಂದೆ ಬನಾರಸ್‌ ಸೀರೆಗಳು ಅತಿ ಹೆಚ್ಚು ಪ್ರಚಲಿತದಲ್ಲಿದ್ದವು. ಆದರೆ, ಹೆಚ್ಚು ವಿನ್ಯಾಸ ಲಭ್ಯವಿರಲಿಲ್ಲ. ಕೇವಲ ಮದುವೆ ಹಾಗೂ ಗ್ರ್ಯಾಂಡ್‌ ಸಮಾರಂಭಗಳಿಗೆ ಮಾತ್ರ ಈ ಸೀರೆಗಳನ್ನು ಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಇದೀಗ ಈ ಜನರೇಷನ್‌ ಯುವತಿಯರು ಇಂಡೋ-ವೆಸ್ಟರ್ನ್‌ ಶೈಲಿಯಲ್ಲಿ, ಇವನ್ನು ಉಡುವುದು ಆರಂಭವಾದ ನಂತರ ಇವುಗಳನ್ನು ಕೊಳ್ಳುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡಿತು ಎನ್ನುತ್ತಾರೆ ಸೀರೆ ಪ್ರೇಮಿ ಸುನೀತಾ ರೆಡ್ಡಿ.

ಬನಾರಸ್‌ ಸಿಲ್ಕ್‌ ಸೀರೆ ಆಯ್ಕೆ ಮಾಡುವುದು ಹೇಗೆ?

ಶುದ್ಧ ಬನಾರಸ್‌ ಸೀರೆಗಳನ್ನು ಆಯ್ಕೆ ಮಾಡುವಾಗ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಿಲ್ಕ್‌ ಮಾರ್ಕ್‌ನಿಂದಿಡಿದು ನಾನಾ ವಿಷಯಗಳನ್ನು ಗಮನಿಸಬೇಕಾಗುತ್ತದೆ ಎನ್ನುತ್ತಾರೆ ಸೀರೆ ಎಕ್ಸ್ಪರ್ಟ್ಸ್. ಇನ್ನು ಇದೀಗ ಕಡಿಮೆ ಬೆಲೆಯ ಬನಾರಸ್‌ ಸಿಲ್ಕ್‌ನ ರಿಪ್ಲಿಕಾ ಸೀರೆಗಳು ಮಾರುಕಟ್ಟೆಯಲ್ಲಿ ದೊರೆಯಲಾರಂಭಿಸಿವೆ. ಹಾಗಾಗಿ ಪರಿಶೀಲಿಸಿ ಖರೀದಿಸುವುದು ಉತ್ತಮ ಎನ್ನುತ್ತಾರೆ ಮಾಡೆಲ್‌ ಭೂಮಿಕಾ ರೆಡ್ಡಿ.

ಇದನ್ನೂ ಓದಿ: Celebrities Rakhi Celebration: ಫೆಸ್ಟಿವ್‌ ಸೀಸನ್‌ ವೇರ್ಸ್‌ನಲ್ಲಿ ಸೆಲೆಬ್ರೆಟಿಗಳ ರಾಖಿ ಸಂಭ್ರಮ

ಬನಾರಸ್‌ ಸೀರೆಗಳ ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version