ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್‌ಗಳು ಫ್ಯಾಷನ್ (Bell Bottom Jeans Fashion) ಲೋಕಕ್ಕೆ ಮತ್ತೊಮ್ಮೆ ಲಗ್ಗೆ ಇಟ್ಟಿವೆ. ಹೌದು. ಇದುವರೆಗೂ ಹೆಚ್ಚೆಂದರೇ ಕೇವಲ ಫಾರ್ಮಲ್ ಮೆನ್ಸ್ ಪ್ಯಾಂಟ್‌ಗೆ ಸೀಮಿತವಾಗಿದ್ದ ಬೆಲ್ ಬಾಟಮ್ ಸ್ಟೈಲ್, ಇದೀಗ ಡೆನಿಮ್ ಜೀನ್ಸ್ ಪ್ಯಾಂಟ್‌ಗೂ ಲಗ್ಗೆ ಇಟ್ಟಿದ್ದು, ಯುವತಿಯರನ್ನು ಬರ ಸೆಳೆದಿವೆ. ಹಾಲಿವುಡ್‌ನ ರೆಟ್ರೊ ಫ್ಯಾಷನ್‌ನಲ್ಲಿದ್ದ, ಈ ಫ್ಯಾಷನ್ ಹಂಗಾಮ ಎಬ್ಬಿಸಿವೆ. ಅದರಲ್ಲೂ ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್ ಕ್ರೇಜ್
ಬೆಲ್ ಬಾಟಮ್ ಸ್ಟೈಲ್‌ನ ಫಾರ್ಮಲ್ ಪ್ಯಾಂಟ್‌ಗಳು ನಮ್ಮಲ್ಲಿ ರೆಟ್ರೋ ಫ್ಯಾಷನ್‌ನಲ್ಲಿ ಅತಿ ಹೆಚ್ಚು ಟ್ರೆಂಡ್‌ನಲ್ಲಿದ್ದವು. ಇನ್ನು ಜೀನ್ಸ್ ಪ್ಯಾಂಟ್‌ನವು ಅಷ್ಟಾಗಿ ಫ್ಯಾಷನ್‌ನಲ್ಲಿ ಓಡಲಿಲ್ಲ! ಅಂದರೇ, ಟ್ರೆಂಡಿಯಾಗಲಿಲ್ಲ! ಆದರೆ, ಇದೀಗ ಇವು ಮತ್ತೊಮ್ಮೆ ಫ್ಯಾಷನ್ ಲೋಕಕ್ಕೆ ಎಂಟ್ರಿ ನೀಡಿದ್ದು, ಬಾಲಿವುಡ್ ಸಿನಿಮಾ ತಾರೆಯರ ಸ್ಟೈಲ್‌ನಲ್ಲಿ ಸೇರಿ ಹೋಗಿವೆ. ಪರಿಣಾಮ, ಇದರಿಂದ ಸ್ಪೂರ್ತಿಗೊಂಡ ಲೋಕಲ್ ಕಾಲೇಜು ಹುಡುಗಿಯರನ್ನು ಸೆಳೆದಿವೆ. ನೋಡಲು ರೆಟ್ರೊ ಸ್ಟೈಲ್‌ನಂತೆ ಇವು ಕಂಡರೂ, ಹುಡುಗಿಯರ ಇತರೇ ಸ್ಟೈಲಿಂಗ್ ಕಾನ್ಸೆಪ್ಟ್‌ನಿಂದಾಗಿ ಡಿಫರೆಂಟ್ ಲುಕ್ ನೀಡುತ್ತಿವೆ. ಹಾಗಾಗಿ ಕಾಲೇಜು ಹುಡುಗಿಯರ ಸದ್ಯದ ಕ್ರೇಝ್‌ನಲ್ಲಿ ಸೇರಿವೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳಾದ ಜೀನತ್ ಹಾಗೂ ಜನ್ನತ್.
ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್ ಆಯ್ಕೆ ಹೀಗಿರಲಿ
ಎತ್ತರವಾಗಿರುವವರಿಗೆ ಈ ಪ್ಯಾಂಟ್ ಚೆನ್ನಾಗಿ ಹೊಂದುತ್ತವೆ. ಹಾಗಾಗಿ ಯಾವುದೇ ಶೇಡ್‌ನದ್ದನ್ನು ಬೇಕಾದರೂ ಖರೀದಿಸಬಹುದು. ಪ್ಲಂಪಿಯಾಗಿರುವವರು ಆದಷ್ಟೂ ಆವಾಯ್ಡ್ ಮಾಡುವುದು ಉತ್ತಮ.
ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್ ಸ್ಟೈಲಿಂಗ್
- ಕ್ರಾಪ್ ಟಾಪ್, ಜಾಕೆಟ್ನೊಂದಿಗೂ ನೊಂದಿಗೆ ಧರಿಸಬಹುದು.
- ಮುಂಬರುವ ಸಮ್ಮರ್ ಸೀಸನ್ಗೂ ಹೊಂದುತ್ತದೆ.
- ಲಾಂಗ್ ಕೋಟ್ಸ್ ಜಾಕೆಟ್ ನೊಂದಿಗೆ ಮ್ಯಾಚ್ ಮಾಡುವುದು ಬೇಡ.
- ಉದ್ದಗಿರುವವರಿಗೆ ಆಕರ್ಷಕವಾಗಿ ಕಾಣುತ್ತವೆ.
- ಹೈ ಹೀಲ್ಸ್, ಶೂಗಳನ್ನು ಇದರೊಂದಿಗೆ ಧರಿಸಬಹುದು.
- ವೆಸ್ಟರ್ನ್ ಲುಕ್ ನೀಡುವುದು ಗ್ಯಾರಂಟಿ.
- ಲಾಂಗ್ ಟಾಪ್ನೊಂದಿಗೆ ಧರಿಸುವುದು ಬೇಡ!
- ಬಿಂದಾಸ್ ಲುಕ್ಗೆ ಸಾಥ್ ನೀಡುತ್ತವೆ.
- ಟ್ರೆಂಡಿಯಾಗಿರುವ ಪ್ರಿಂಟ್ಸ್ ಶಾರ್ಟ್ ಟಾಪ್ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ಕಲಾವಿದೆ ಸ್ಮಿತಾ ಪ್ರಕಾಶ್ ವಿಂಟರ್ ಫ್ಯಾಷನ್ ಝಲಕ್ ಹೀಗಿದೆ!