ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಿಗ್ ಜುಮಕಿಗಳು ಇದೀಗ ಯುವತಿಯರ ಕಿವಿಗಳನ್ನು ಅಲಂಕರಿಸುತ್ತಿವೆ. ನೋಡಲು ಪುಟ್ಟ ಬಟ್ಟಲಿನಂತೆ ಕಾಣುವ ಬಗೆಬಗೆಯ ಬಿಗ್ ಸೈಝಿನ ಜುಮಕಿಗಳು (Big Jhumka Fashion) ಇದೀಗ ಯುವತಿಯರ ಕಿವಿಯನ್ನು ಸಿಂಗರಿಸುತ್ತಿವೆ. ಎದ್ದು ಕಾಣಿಸುತ್ತಿವೆ. ಒಟ್ಟಿನಲ್ಲಿ, ಕಿವಿಗಿಂತ ಜುಮಕಿಗಳೇ ದೊಡ್ಡದಾಗಿವೆ.
ಬಟ್ಟಲಗಲದ ಜುಮಕಿಗಳು
ಒಂದೊಂದು ಸೀಸನ್‌ನಲ್ಲೂ ಒಂದೊಂದು ಬಗೆಯ ಜುಮಕಿಗಳು ಕಾಲಿಡುತ್ತಿರುತ್ತವೆ. ಮಿನಿ ಜುಮಕಿ, ಹ್ಯಾಂಗಿಂಗ್ ಹೂಪ್ ಜುಮಕಿ, ಬೀಡ್ಸ್, ಪರ್ಲ್ ಜುಮಕಿ ಹೀಗೆ ನಾನಾ ಬಗೆಯಲ್ಲಿ ಎಂಟ್ರಿ ನೀಡಿರುವ ಜುಮಕಿಗಳಲ್ಲಿ ಇದೀಗ ಬಟ್ಟಲಾಕಾರದ ಬಿಗ್ ಸೈಝಿನ ಜುಮಕಿಗಳು ಟ್ರೆಂಡಿಯಾಗಿವೆ. ಯಾವುದೇ ಟ್ರೆಡಿಷನಲ್ ಅಥವಾ ಎಥ್ನಿಕ್ ಉಡುಪಿಗೆ ಧರಿಸಿದಾಗ ಎದ್ದು ಕಾಣುತ್ತವೆ. ಅದರಲ್ಲೂ ಫೋಟೊ ಹಾಗೂ ವಿಡಿಯೊ ಕ್ಲಿಪ್‌ಗಳಲ್ಲಿ ಆಕರ್ಷಕವಾಗಿ ಕಾಣುತ್ತವೆ. ಹಾಗಾಗಿ ದೇಸಿ ಲುಕ್ ಬಯಸುವ ಹುಡುಗಿಯರು ಇವನ್ನು ಧರಿಸುವುದು ಸಾಮಾನ್ಯವಾಗಿದೆ. ಇನ್ನು ಬಟ್ಟಲದಗಲದ ಈ ಜುಮಕಿಗಳು ಕೂಡ ನಾನಾ ವಿನ್ಯಾಸದಲ್ಲಿ ದೊರೆಯುತ್ತಿವೆ.
ಲೈಟ್‌ವೈಟ್ ಬಿಗ್ ಜುಮಕಿ
ಬಟ್ಟಲಗಲದ ಬಿಗ್ ಜುಮಕಿಗಳನ್ನು ಧರಿಸಿದಾಗ ಭಾರವಾಗುವುದಿಲ್ಲವೇ! ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಇವು ಭಾರವಿಲ್ಲದ ಮೆಟಲ್‌ನಲ್ಲಿ ಆಗಮಿಸಿವೆ. ಲೈಟ್‌ವೇಟ್ ವೈಟ್ ಮೆಟಲ್, ಬ್ಲ್ಯಾಕ್ ಮೆಟಲ್ ಅಥವಾ ವನ್ ಗ್ರಾಮ್ ಗೋಲ್ಡ್‌ನಲ್ಲಿ ಕಾಲಿಟ್ಟಿವೆ. ಇವನ್ನು ಧರಿಸಿದಾಗ ಭಾರವೆನಿಸುವುದಿಲ್ಲ. ನೋಡಲು ಎಥ್ನಿಕ್ ಉಡುಪುಗಳಿಗೆ ಚೆನ್ನಾಗಿ ಕಾಣುತ್ತವೆ ಎನ್ನುವ ಸ್ಟೈಲಿಸ್ಟ್ ರಿಯಾ ಪ್ರಕಾರ, ಬಿಗ್ ಸೈಝಿನ ಜುಮಕಿಗಳಲ್ಲಿ ಸ್ಟಡ್ಸ್ ಹಾಗೂ ಹ್ಯಾಂಗಿಂಗ್ ಶೈಲಿಯವು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಇನ್ನು ಜುಮಕಿಯ ಕೆಳಗಡೆ ಸಾಲುಸಾಲಾಗಿ ಇರುವ ಬೀಡ್ಸ್‌ಗಳು ಅವನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಬಿಂಬಿಸುತ್ತವೆ ಎನ್ನುತ್ತಾರೆ.
ಬಟ್ಟಲಗಲದ ಜುಮಕಿ ಆಯ್ಕೆ ಮಾಡುವ ಮುನ್ನ
- ಟ್ರಯಲ್ ನೋಡಿ ಖರೀದಿ ಮಾಡಿ.
- ಯಾವುದೇ ಕಾರಣಕ್ಕೂ ನೋಡದೇ ಖರೀದಿಸಬೇಡಿ.
- ಆನ್ಲೈನ್ ಶಾಪಿಂಗ್ಗಿಂತ ಖುದ್ದು ನೋಡಿ ಧರಿಸಿ ಕೊಳ್ಳುವುದು ಉತ್ತಮ.
- ನಿಮ್ಮ ಕಿವಿಯ ಆಕಾರಕ್ಕೆ ಹೊಂದುವಂತಿರಬೇಕು.
- ನೋಡಲು ಆಕರ್ಷಕವಾಗಿರುವುದು ಮಾತ್ರವಲ್ಲ, ಧರಿಸಿದಾಗ ಅಲರ್ಜಿಯಾದಲ್ಲಿ ಧರಿಸುವುದನ್ನು ಆವಾಯ್ಡ್ ಮಾಡಿ.
- ಸ್ಟ್ರೀಟ್ ಶಾಪಿಂಗ್ನಲ್ಲೂ ಬಗೆಬಗೆಯ ಜುಮಕಿ ಡಿಸೈನ್ ಕಾಣಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Chessboard Pants Fashion: ಕಾಲೇಜು ಹುಡುಗಿಯರ ಬಿಂದಾಸ್ ಫ್ಯಾಷನ್‌ಗೆ ಸೇರಿದ ರೆಟ್ರೊ ಚೆಸ್ ಬೋರ್ಡ್ ಪ್ಯಾಂಟ್