Site icon Vistara News

Big Nosepin Fashion: ಜ್ಯುವೆಲ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಕಾಸಗಲದ ಮೂಗುತಿ

Nosepin Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಆಕರ್ಷಕ ಎಥ್ನಿಕ್‌ ಲುಕ್‌ಗಾಗಿ (Big Nosepin Fashion) ಕಾಸಗಲದ ಮೂಗುತಿ ಧರಿಸುವುದು ಇದೀಗ ಸಾಮಾನ್ಯವಾಗತೊಡಗಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಈ ಮೂಗುತಿಗಳು ಇದೀಗ ಹಳೆಯ ಕಾಲದ ಕಿವಿಯೊಲೆಗಳನ್ನು ಪ್ರತಿಬಿಂಬಿಸುವ ಆಕಾರ ಪಡೆದುಕೊಂಡಿವೆ. ಕಿವಿಯ ಓಲೆಗಳ ಡಿಸೈನ್‌ಗಳನ್ನು ಮೀರಿಸುವಂತಹ ನಾನಾ ವಿನ್ಯಾಸದಲ್ಲಿ ಬಂಗಾರ ಹಾಗೂ ಬಂಗಾರೇತರ ಲೋಹದಲ್ಲಿ ಬಿಡುಗಡೆಗೊಂಡಿವೆ.

ಬದಲಾದ ಮೂಗುತಿ ಟ್ರೆಂಡ್‌

ಕುಟುಂಬದ ಹಾಗೂ ಇತರೇ ಎಥ್ನಿಕ್‌ ಸಮಾರಂಭಗಳಲ್ಲಿ ಗ್ರ್ಯಾಂಡ್‌ ಸಾಂಪ್ರದಾಯಿಕ ಲುಕ್‌ಗೆ ಎದ್ದು ಕಾಣುವಂತಹ ಜ್ಯುವೆಲ್‌ ಫ್ಯಾಷನ್‌ನಲ್ಲಿ ಕಾಸಗಲದ ಮೂಗುತಿಗಳು ಬಿಡುಗಡೆಗೊಂಡಿವೆ. ಮಾನಿನಿಯರನ್ನು ನೋಡಲು ಅತ್ಯಂತ ಆಕರ್ಷಕವಾಗಿ ಬಿಂಬಿಸುತ್ತಿವೆ. ಅಲ್ಲದೇ, ಮಾನನಿಯರ ಟ್ರೆಡಿಷನಲ್‌ ಔಟ್‌ಫಿಟ್‌ ಅದರಲ್ಲೂ ಸೀರೆಗಳಿಗೆ ಮ್ಯಾಚ್‌ ಆಗುತ್ತಿವೆ. ಡಿಫರೆಂಟ್‌ ಲುಕ್‌ ನೀಡುವುದರೊಂದಿಗೆ ನಮ್ಮ ನೆಲದ ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರಾಶಿ. ಅವರ ಪ್ರಕಾರ, ಶತಮಾನಗಳ ಹಿಂದೆಲ್ಲಾ ಎರಡೆರಡು ಮೂಗಿಗೆ ಮೂಗುತಿ ಧರಿಸುವುದು ಸಂಪ್ರದಾಯವಾಗಿತ್ತು. ಇದೀಗ ಮೂಗುತಿ ಧರಿಸುವುದೇ ಕಡಿಮೆಯಾಗಿದೆ. ಕೆಲವರು ಇಂದಿಗೂ ಸಂಪ್ರದಾಯದ ಹೆಸರಲ್ಲಿ ಧರಿಸುತ್ತಾರೆ. ಇನ್ನು ಕೆಲವರು ಫ್ಯೂಶನ್‌ ಫ್ಯಾಷನ್‌ ಹೆಸರಲ್ಲಿ ಧರಿಸುತ್ತಾರೆ. ಕೆಲ ತಿಂಗಳಿನಿಂದ ಕಾಂತಾರ ಸಿನಿಮಾ ನಾಯಕಿಯ ಮೂಗುತಿ ಟ್ರೆಂಡ್‌ ಹುಟ್ಟು ಹಾಕಿತ್ತು. ಇದನ್ನು ನೋಡಿದ ನಂತರ ಒಂದಿಷ್ಟು ಮೂಗುತಿ ಪ್ರೇಮಿಗಳು ಹುಟ್ಟಿಕೊಂಡರು. ತದನಂತರ ಮದುವೆಗಳಲ್ಲೂ ಡಿಸೈನರ್‌ ಮೂಗುತಿ ಧರಿಸುವ ಟ್ರೆಂಡ್‌ ಶುರುವಾಯಿತು. ಇದೀಗ ಈ ಸಮ್ಮರ್‌ ಸೀಸನ್‌ನ ಎಥ್ನಿಕ್‌ ಫ್ಯಾಷನ್‌ನಲ್ಲಿ ಕಾಸಗಲದ ಮೂಗುತಿ ಧರಿಸುವ ಟ್ರೆಂಡ್‌ ಲಗ್ಗೆ ಇಟ್ಟಿದೆ ಎನ್ನುತ್ತಾರೆ ಅವರು.

ಇದನ್ನೂ ಓದಿ: Iti Acharya: ಫ್ಯಾಷನ್‌ ಶೋನಲ್ಲಿ ಅಪ್ಸರೆಯಂತೆ ಕಂಡ ಇತಿ ಆಚಾರ್ಯ

ಕಾಸಗಲದ ಮೂಗುತಿ ಪ್ರೇಮ

ಇಂದು ಕಾಸಗಲದ ಮೂಗುತಿಗಳು ಆರ್ಟಿಫಿಶಿಯಲ್‌ ಜ್ಯುವೆಲರಿ ಹಾಗೂ ಆಂಟಿಕ್‌ ಜ್ಯುವೆಲರಿ ಡಿಸೈನ್‌ಗಳಲ್ಲೂ ದೊರೆಯುತ್ತಿವೆ. ಉಳ್ಳವರು ಬಂಗಾರದ ಕಾಸಗಲದ ಮೂಗುತಿಗಳನ್ನು ಕೊಂಡು ಧರಿಸುತ್ತಿದ್ದಾರೆ. ಇನ್ನು ಆರ್ಟಿಫಿಶಿಯಲ್‌ ಹಾಗೂ ವನ್‌ ಗ್ರಾಮ್‌ ಗೋಲ್ಡ್‌ನಲ್ಲಾದಲ್ಲಿ ಆದಷ್ಟೂ ಎಲ್ಲಾ ಬಗೆಯ ಇಯರಿಂಗ್‌ಗಳಿಗೆ ಮ್ಯಾಚ್‌ ಆಗುವಂತವು ಇದೀಗ ಹೆಚ್ಚು ಚಾಲ್ತಿಗೆ ಬಂದಿವೆ. ಕೈಗೆಟಕುವ ದರದಲ್ಲಿ ಲಭ್ಯವಿದೆ ಎನ್ನುತ್ತಾರೆ ಮಾರಾಟಗಾರರು.

ಕಾಸಗಲದ ಮೂಗುತಿ ಪ್ರಿಯರಿಗೆ ಒಂದೈದು ಸಲಹೆ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version