Iti Acharya: ಫ್ಯಾಷನ್‌ ಶೋನಲ್ಲಿ ಅಪ್ಸರೆಯಂತೆ ಕಂಡ ಇತಿ ಆಚಾರ್ಯ - Vistara News

ಫ್ಯಾಷನ್

Iti Acharya: ಫ್ಯಾಷನ್‌ ಶೋನಲ್ಲಿ ಅಪ್ಸರೆಯಂತೆ ಕಂಡ ಇತಿ ಆಚಾರ್ಯ

ಬೆಂಗಳೂರಿನ ಬ್ರಿಗೇಡ್‌ ರೋಡ್‌ನ (Iti Acharya) ಬೆಂಗಳೂರು ಅರೆನಾದಲ್ಲಿ ನಡೆದ ಫ್ಯಾಷನ್‌ ಶೋನಲ್ಲಿ ನಟಿ ಹಾಗೂ ಮಾಡೆಲ್‌ ಇತಿ ಆಚಾರ್ಯ ಶ್ವೇತ ವರ್ಣದ ಮಿನುಗುವ ಸಿಕ್ವಿನ್ಸ್‌ ಡಿಸೈನರ್‌ವೇರ್‌ನಲ್ಲಿ ಧರೆಗಿಳಿದ ಅಪ್ಸರೆಯಂತೆ ಕಂಗೊಳಿಸಿದರು. ತಮ್ಮ ಈ ವಿಶೇಷ ಡಿಸೈನರ್‌ವೇರ್‌ ಬಗ್ಗೆ ವಿಸ್ತಾರದೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Model actress Iti Acharya looked like a nymph dressed in a fashion show
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಆಕಾಶದಿಂದ ಧರೆಗಿಳಿದ ಅಪ್ಸರೆಯಂತೆ ಕಾಣುತ್ತಿದ್ದರು ನಟಿ ಹಾಗೂ ಮಾಡೆಲ್‌ (Fashion Show News) ಇತಿ ಆಚಾರ್ಯ (Iti Acharya). ಅವರ ಸುತ್ತಮುತ್ತ ಎಲ್ಲರೂ ಶ್ವೇತವರ್ಣದ ಔಟ್‌ಫಿಟ್‌ನಲ್ಲಿದ್ದರು. ಇವರೆಲ್ಲರ ಮಧ್ಯೆ ಇತಿ ಮಾತ್ರ ಮಿನುಗುವ ವೈಟ್‌ ಶೇಡ್‌ನ ಸಿಕ್ವೀನ್ಸ್‌ ಡಿಸೈನರ್‌ ಔಟ್‌ಫಿಟ್‌ನಲ್ಲಿ ಧರೆಗಿಳಿದ ರಂಭೆಯಂತೆ ಕಾಣುತ್ತಿದ್ದರು.

ಹೌದು, ಸೆಲೆಬ್ರೆಟಿ ಡಿಸೈನರ್‌ ರಮೇಶ್‌ ಡೆಂಬ್ಲಾ ಬೆಂಗಳೂರಿನ ಅರೆನಾದಲ್ಲಿ ಆಯೋಜಿಸಿದ್ದ ಫ್ಯಾಷನ್‌ ಶೋ ಹಾಗೂ ಪೇಜ್‌ ತ್ರೀ ಪಾರ್ಟಿಯಲ್ಲಿ ಇತಿ ಆಚಾರ್ಯ ಕಾಣಿಸಿಕೊಂಡದ್ದು ಹೀಗೆ. ಇನ್ನು ಇವರೊಂದಿಗೆ ಕ್ಯಾಟ್‌ ವಾಕ್‌ ಮಾಡಿದ ಮಾಡೆಲ್‌ಗಳೆಲ್ಲರೂ ಎಂದಿನಂತೆ ಆಕರ್ಷಕವಾಗಿ ಕಾಣುತ್ತಿದ್ದರು. ಪಕ್ಕಾ ರ್ಯಾಂಪ್‌ ಅಲ್ಲದಿದ್ದರೂ ಹೆಜ್ಜೆ ಹಾಕುತ್ತಾ ಇಡೀ ಕಾರ್ಯಕ್ರಮದ ರಂಗು ಹೆಚ್ಚಿಸಿದ್ದರು. ಹೊಳೆಯುವ ತಾರೆಯರಂತೆ ಕಾಣಿಸುತ್ತಿದ್ದರು.

ಇತಿ ಆಚಾರ್ಯ ಸೆಲೆಬ್ರೆಟಿ ಶೋ ಸ್ಟಾಪರ್‌

ನಟಿ ಹಾಗೂ ಮಾಡೆಲ್‌ ಇತಿ ಆಚಾರ್ಯ ಈ ಫ್ಯಾಷನ್‌ ಶೋನ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ಮಿಂಚಿದರು. ನೋಡಲು ಥೇಟ್‌ ಅಪ್ಸರೆಯಂತೆ ಕಾಣಿಸುತ್ತಿದ್ದರು. ಹೊಳೆಯುವ ಶ್ವೇತ ವರ್ಣದ ಡಿಸೈನರ್‌ವೇರ್‌ ಅವರ ಇಡೀ ಲುಕ್‌ ಅನ್ನು ಕಂಪ್ಲೀಟ್‌ ಬದಲಿಸಿತ್ತು. ಇವರು ಅವರೇನಾ! ಎನ್ನುವಷ್ಟರ ಮಟ್ಟಿಗೆ ಸುಂದರವಾಗಿ ಕಾಣಿಸುತ್ತಿದ್ದರು.

ಇದನ್ನೂ ಓದಿ: Iti Acharya | ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ ಬಿಲ್‌ ಬೋರ್ಡ್‌ನಲ್ಲಿ ಮಿಂಚಿದ ಕನ್ನಡತಿ ಇತಿ ಆಚಾರ್ಯ

ರಮೇಶ್‌ ಡೆಂಬ್ಲಾ ಶೋನಲ್ಲಿ ವಾಕ್‌ ಮಾಡುವುದೇ ಖುಷಿ

ತಮ್ಮ ಡಿಸೈನರ್‌ವೇರ್‌ ಬಗ್ಗೆ ಮಾತನಾಡಿದ ನಟಿ ಇತಿ ಆಚಾರ್ಯ, ರೈನೋಸ್ಟೋನ್ಸ್‌ನಿಂದ ವಿನ್ಯಾಸಗೊಳಿಸಿದ ಆಯಿಸ್ಟರ್‌ ಟಾಪ್‌ ಹಾಗೂ ಸಿಲ್ವರ್‌ ಸಿಕ್ಷಿನ್ಸ್ನಿಂದ ಸ್ಕರ್ಟ್ ಸಿದ್ಧಪಡಿಸಲಾಗಿದೆ. ಇನ್ನು ಧರಿಸಿದ ಹೆಡ್‌ಗೇರ್‌ ಅತ್ಯಾಕರ್ಷಕವಾಗಿದೆ. ಇದಕ್ಕೆಲ್ಲಾ ಕಾರಣ ರಮೇಶ್‌ ಡೆಂಬ್ಲಾ ಎಂದಿದ್ದಾರೆ ಅವರು. ಈಗಾಗಲೇ ಸಾಕಷ್ಟು ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಫರ್‌ ಆಗಿ ವಾಕ್‌ ಮಾಡಿದ್ದೇನೆ. ಇಂದಿಗೂ ಮಾಡುತ್ತಿದ್ದೇನೆ. ಆದರೆ, ಸೆಲೆಬ್ರೆಟಿ ಡಿಸೈನರ್‌ ರಮೇಶ್‌ ಡೆಂಬ್ಲಾ ಅವರು ಡಿಸೈನ್‌ ಮಾಡಿದ ಉಡುಪಿನಲ್ಲಿ ವಾಕ್‌ ಮಾಡುವುದೇ ಒಂದು ಹೆಗ್ಗಳಿಕೆ. ಇವರ ಶೋನಲ್ಲಿ ನಾನು ವಾಕ್‌ ಮಾಡುತ್ತಿರುವುದು ಇದು ಎರಡನೆಯ ಬಾರಿ. ಮತ್ತೊಮ್ಮೆ ಅವರ ಶೋನಲ್ಲಿ ವಾಕ್‌ ಮಾಡಲು ಅವಕಾಶ ದೊರೆತದ್ದು ನನಗೆ ಖುಷಿಯಾಗಿದೆ. ಬೆಂಗಳೂರು ಫ್ಯಾಷನ್‌ ಶೋಗಳು ಇದೀಗ ಹೊಸತನವನ್ನು ರೂಢಿಸಿಕೊಂಡಿವೆ. ಹೊಸ ಕ್ರಿಯೇಟಿವಿಟಿಗೆ ದಾರಿ ಮಾಡಿ ಕೊಡುತ್ತಿವೆ. ಇದು ಮಾಡೆಲ್‌ಗಳಿಗೂ ಹೊಸದಾಗಿ ಕಾಣಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ನಟಿ ಇತಿ ಆಚಾರ್ಯ ವಿಸ್ತಾರದೊಂದಿಗೆ ಹಂಚಿಕೊಂಡಿದ್ದಾರೆ.

ಕಳೆದ ಬಾರಿ ಆಸ್ಕರ್‌ನ ರೆಡ್‌ಕಾರ್ಪೆಟ್‌ ತುಳಿದು ಸುದ್ದಿ ಮಾಡಿದ್ದ ಇತಿ ಆಚಾರ್ಯ ಈಗಾಗಲೇ ಕನ್ನಡ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಜತೆಜತೆಗೆ ರ್‍ಯಾಂಪ್‌ ಶೋಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ.

ಚಿತ್ರಗಳು: ಇತಿ ಆಚಾರ್ಯ, ಮಾಡೆಲ್‌/ನಟಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Summer Fashion: ಬೇಸಿಗೆಯ ಹೈ ಫ್ಯಾಷನ್‌ಗಾಗಿ ಬಂತು ಗ್ಲಾಮರಸ್‌ ಕೋ-ಆರ್ಡ್‌ ಸೆಟ್ಸ್

ಸಮ್ಮರ್‌ನ ಸುಡು ಬಿಸಿಲಿಗೆ (Summer Fashion) ನಾನಾ ಬಗೆಯ ಕೋ-ಆರ್ಡ್‌ ಸೆಟ್‌ಗಳು ಲಗ್ಗೆ ಇಟ್ಟಿದ್ದು, ಟಿನೇಜ್‌ ಹಾಗೂ ಕಾಲೇಜ್‌ ಹುಡುಗಿಯರ ಹೈ ಫ್ಯಾಷನ್‌ಗೆ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಈ ದಿನಗಳಲ್ಲಿ ಟ್ರೆಂಡಿಯಾಗಿವೆ?ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.

VISTARANEWS.COM


on

Summer Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯ ಬಿರು ಬಿಸಿಲಲ್ಲೂ ಹಾಟ್‌ ಲುಕ್‌ ನೀಡುವಂತಹ ಕೋ-ಆರ್ಡ್‌ ಸೆಟ್‌ಗಳು ಫ್ಯಾಷನ್‌ಲೋಕಕ್ಕೆ (Summer Fashion) ಕಾಲಿಟ್ಟಿವೆ. ಸಮ್ಮರ್‌ನ ಹಾಟ್‌ ಬಿಸಿಲಿಗೆ ನಾನಾ ಬಗೆಯ ಪ್ರಿಂಟೆಡ್‌ ಹಾಗೂ ಮಾನೋಕ್ರೋಮ್‌ ಶೇಡ್‌ನ ಕೋ-ಆರ್ಡ್‌ ಸೆಟ್‌ಗಳು ಲಗ್ಗೆ ಇಟ್ಟಿದ್ದು, ಟಿನೇಜ್‌ ಹಾಗೂ ಕಾಲೇಜ್‌ ಹುಡುಗಿಯರ ಅಲ್ಟ್ರಾ ಫ್ಯಾಷನ್‌ ಅಂದರೆ, ಸಮ್ಮರ್‌ ಹೈ ಫ್ಯಾಷನ್‌ನಲ್ಲಿ ಟಾಪ್‌ ಲಿಸ್ಟ್‌ಗೆ ಎಂಟ್ರಿ ನೀಡಿವೆ.
“ಕೋ-ಆರ್ಡ್‌ ಸೆಟ್‌ಗಳು ಕಳೆದ ಸೀಸನ್‌ನಿಂದಲೂ ಟ್ರೆಂಡಿಯಾಗಿವೆ. ಹಾಗೆಂದು ಈ ಸೀಸನ್‌ನಲ್ಲಿ ಕಣ್ಮರೆಯಾಗಿಲ್ಲ! ಬದಲಿಗೆ ಹೊಸ ರೂಪದಲ್ಲಿ ಎಂಟ್ರಿ ನೀಡಿವೆ. ಅದರಲ್ಲೂ ಗ್ಲಾಮರಸ್‌ ಹಾಗೂ ಹಾಟ್‌ ಲುಕ್‌ ನೀಡುವ ನಾನಾ ಬೇಸಿಗೆಯ ವಿನ್ಯಾಸದಲ್ಲಿ ಬಂದಿವೆ. ಧರಿಸಿದಾಗ ಕೇವಲ ಫ್ಯಾಷನ್‌ಗೆ ಮಾತ್ರ ಮ್ಯಾಚ್‌ ಆಗುವುದಲ್ಲ, ಜೊತೆಗೆ ಸೀಸನ್‌ನಲ್ಲಿ ಸೆಕೆಯಾಗದಂತಹ ರೀತಿಯಲ್ಲಿ ವಿನ್ಯಾಸದಲ್ಲಿ ಇವು ಆಗಮಿಸಿವೆ. ಇನ್ನು ಫ್ರೆಶ್‌ ಲುಕ್‌ ನೀಡುವ ಪ್ರಿಂಟ್ಸ್‌ ಹಾಗೂ ಶೇಡ್‌ಗಳಲ್ಲಿ ಇವು ಹುಡುಗಿಯರನ್ನು ಸೆಳೆದಿವೆ. ಕೆಲವಂತು ಹೈ ಸ್ಟ್ರೀಟ್‌ ಫ್ಯಾಷನ್‌ ಸೂಟ್‌ ಆಗುವಂತಹ ಡಿಸೈನ್‌ನಲ್ಲಿ ಕಂಡು ಬಂದಿದ್ದು, ಟೀನೇಜ್‌ ಹುಡುಗಿಯರಿಂದಿಡಿದು, ಹೈ ಫ್ಯಾಷನ್‌ ಪ್ರಿಯ ಯುವತಿಯರನ್ನು ಸೆಳೆದಿವೆ. ಪರಿಣಾಮ, ಈ ಸಮ್ಮರ್‌ ಸೀಸನ್‌ನ ಟ್ರೆಂಡ್‌ನಲ್ಲಿ ಟಾಪ್‌ಗೆ ಸೇರಿವೆ” ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ರಿಯಾ. ಅವರ ಪ್ರಕಾರ, ಸದ್ಯ ಹಾಟ್‌ ಟ್ರೆಂಡ್‌ನ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ.

Summer Fashion

ಪ್ರಿಂಟೆಡ್‌ ಆಫ್‌ ಶೋಲ್ಡರ್‌ ಕೋ-ಆರ್ಡ್‌ ಸೆಟ್‌

ಫ್ಲೋರಲ್‌, ಟ್ರಾಪಿಕಲ್‌ ಹಾಗೂ ಜೆಮೆಟ್ರಿಕಲ್‌ ವಿನ್ಯಾಸದ ಆಪ್‌ ಶೋಲ್ಡರ್‌ ಅಥವಾ ಶೋಲ್ಡರ್‌ ಲೆಸ್‌ ಇರುವಂತಹ ಪ್ರಿಂಟೆಡ್‌ ಕೋ ಆರ್ಡ್‌ ಸೆಟ್‌ಗಳು ಈ ಬೇಸಿಗೆಯ ಹೈ ಫ್ಯಾಷನ್‌ನಲ್ಲಿವೆ. ಸೆಕೆಯಾಗದ ಇವು ಭುಜಕ್ಕೆ ಗ್ಲಾಮರಸ್‌ ಲುಕ್‌ ನೀಡುವುದರೊಂದಿಗೆ ಹೈ ಫ್ಯಾಷನ್‌ ಟಚ್‌ ನೀಡುತ್ತವೆ. ಇವುಗಳಲ್ಲೆ ಕೆಲವು ಕೋಲ್ಡರ್‌ ಶೋಲ್ಡರ್‌ನವು ಎಂಟ್ರಿ ನೀಡಿದ್ದು, ಅವು ಕೂಡ ಟೀನೇಜ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

Summer Fashion

ರಾಂಪರ್‌ ಶೈಲಿಯ ಕೋ-ಆರ್ಡ್‌ ಸೆಟ್‌

ರಾಂಪರ್‌ ಶೈಲಿಯ ಕೋ-ಆರ್ಡ್‌ ಸೆಟ್‌ಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ. ಶಾರ್ಟ್‌ ಜಂಪ್‌ಸೂಟ್‌ನಂತೆ ಕಾಣುವ ಇವು ಚಿಕ್ಕ ಹೆಣ್ಣುಮಕ್ಕಳಿಗೂ ಪ್ರಿಯವಾಗಿವೆ. ಹಾಲಿಡೇ, ವೀಕೆಂಡ್‌ ಲುಕ್‌ ನೀಡುವ ಇವು ಬಿಂದಾಸ್‌ ಫ್ಯಾಷನ್‌ಗೆ ಸಾಥ್‌ ನೀಡುತ್ತಿವೆ. ಪ್ರಿಂಟೆಡ್‌ ಹೆಚ್ಚು ಚಾಲ್ತಿಯಲ್ಲಿವೆ. ಮಾನೋಕ್ರೋಮ್‌ ಶೇಡ್‌ನವು ಸೈಡಿಗೆ ಸರಿದಿವೆ.

Summer Fashion

ಶೋಲ್ಡರ್‌ ಲೆಸ್‌-ಸ್ಟ್ರಾಪ್‌ಲೆಸ್‌ ಕೋ-ಆರ್ಡ್‌ ಸೆಟ್‌

ತೋಳುಗಳಿಲ್ಲದ ಹಾಗೂ ಯಾವುದೇ ಚಿಕ್ಕ ಸ್ಟ್ರಾಪ್‌ಗಳಿಲ್ಲದ ಬಿಕಿನಿಯಂತೆ ಕಾಣುವ ಕೋ-ಆರ್ಡ್‌ ಸೆಟ್‌ಗಳು ಸದ್ಯ ಅಲಟ್ರಾ ಮಾಡರ್ನ್‌ ಹುಡುಗಿಯರ ವಾರ್ಡ್ರೋಬ್‌ ಸೇರಿವೆ. ಅದರಲ್ಲೂ ಬೀಚ್‌ ಫ್ಯಾಷನ್‌ ಅಥವಾ ರಿವರ್‌ ಸೈಡ್‌ ಫ್ಯಾಷನ್‌ನಲ್ಲಿ ಇವು ಟ್ರೆಂಡಿಯಾಗಿವೆ. ಬಾಲಿವುಡ್‌ ತಾರೆಯರ ಬಿಂದಾಸ್‌ ಸ್ಟೈಲ್‌ಸ್ಟೇಟ್‌ಮೆಂಟ್‌ನಲ್ಲೂ ಇವನ್ನು ಕಾಣಬಬಹುದು. ಅಷ್ಟೇಕೆ! ಗ್ಲಾಮರಸ್‌ ಲುಕ್‌ ಬಯಸುವ ಹುಡುಗಿಯರ ಹೈ ಹಾಲಿಡೇ ಫ್ಯಾಷನ್‌ ಸ್ಟೇಟ್‌ಮೆಂಟ್‌ನಲ್ಲೂ ಇವು ಇವೆ.

Summer Fashion

ಬೇಸಿಗೆ ಕೋ-ಆರ್ಡ್‌ ಸೆಟ್‌ ಪ್ರಿಯರಿಗಾಗಿ…

 • ಟ್ರೆಂಡಿ ಫ್ಲೋರಲ್‌ ವಿನ್ಯಾಸದವನ್ನು ಆಯ್ಕೆ ಮಾಡಿ.
 • ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.
 • ಸಮ್ಮರ್‌ ಹೇರ್‌ಸ್ಟೈಲ್‌ ಮಾಡಿ, ನೋಡಿ.
 • ಫುಟ್‌ವೇರ್‌ ಕೂಡ ಸೀಸನಬಲ್‌ ಆಗಿರಲಿ.
 • ಯಾವುದೇ ಎಥ್ನಿಕ್‌ ಆಕ್ಸೆಸರೀಸ್‌ ಅಥವಾ ಸ್ಟೈಲಿಂಗ್‌ ಮಾಡಬೇಡಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Star Summer Fashion: ಸಮ್ಮರ್‌ ಬಾಡಿಕಾನ್‌ ಪಾರ್ಟಿ ಡ್ರೆಸ್‌ನಲ್ಲಿ ನಟಿ ಡೈಸಿ ಬೋಪಣ್ಣ ಫಂಕಿ ಲುಕ್‌‌!

Continue Reading

ಫ್ಯಾಷನ್

Star Summer Fashion: ಸಮ್ಮರ್‌ ಬಾಡಿಕಾನ್‌ ಪಾರ್ಟಿ ಡ್ರೆಸ್‌ನಲ್ಲಿ ನಟಿ ಡೈಸಿ ಬೋಪಣ್ಣ ಫಂಕಿ ಲುಕ್‌‌!

ನಟಿ ಡೈಸಿ ಬೋಪಣ್ಣ (Daisy Bopanna) ಈ ಸಮ್ಮರ್‌ನಲ್ಲೂ (Star Summer Fashion) ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಅದು ಹೇಗೆ? ಅಂತಿರಾ ! ಟ್ರೆಂಡ್‌ನಲ್ಲಿರುವ ಡೀಪ್‌ ವೀ ನೆಕ್‌ನ ಬಾಡಿಕಾನ್‌ ಪಾರ್ಟಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಡ್ರೆಸ್?‌ ಈ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Star Summer Fashion
ಚಿತ್ರಗಳು : ಡೈಸಿ ಬೋಪಣ್ಣ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಡೈಸಿ ಬೋಪಣ್ಣ (Daisy Bopanna) ಈ ಸುಡು ಬಿಸಿಲ ಸಮ್ಮರ್‌ನಲ್ಲೂ (Star Summer Fashion) ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಅದು ಹೇಗೆ? ಅಂತಿರಾ! ಈ ಸೀಸನ್‌ ಟ್ರೆಂಡ್‌ನಲ್ಲಿರುವ ಡೀಪ್‌ ವೀ ನೆಕ್‌ನ ಬಾಡಿಕಾನ್‌ ಪಾರ್ಟಿ ಡ್ರೆಸ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ತಮ್ಮ ಔಟ್‌ಫಿಟ್‌ಗೆ ತಾವೇ ಸಮಜಾಯಿಷಿ ಕೂಡ ನೀಡಿಕೊಂಡಿದ್ದಾರೆ. ಟ್ಯಾನ್‌ ಆಗಿರುವ ಸ್ಕಿನ್‌ನಲ್ಲೂ ಪರ್ಪೆಕ್ಟ್‌ ಔಟ್‌ಫಿಟ್‌ ಧರಿಸಿದಾಗ ಇದು ಸಾಧ್ಯ ಎಂಬುದು ಅವರ ಅಭಿಪ್ರಾಯ. ಈ ಸಮ್ಮರ್‌ ಪಾರ್ಟಿ ಲುಕ್‌ಗೆ ಫ್ಯಾಷನ್‌ ವಿಮರ್ಶಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸಮ್ಮರ್‌ನ ಪಾರ್ಟಿವೇರ್‌ಗಳನ್ನು ಚೂಸ್‌ ಮಾಡುವುದು ಸುಲಭದ ಕೆಲಸ. ಸೀಸನ್‌ ಟ್ರೆಂಡ್‌ನಲ್ಲಿರುವ ಶೇಡ್ಸ್‌ ಹಾಗೂ ಡಿಸೈನ್‌ಗಳನ್ನು ಆಯ್ಕೆ ಮಾಡಿದರಾಯಿತು. ಅದರೊಂದಿಗೆ ಒಂದಿಷ್ಟು ಪಾಪ್‌ ಅಪ್‌ ಕಲರ್‌ನ ಐ ಮೇಕಪ್‌ ಹಾಗೂ ಫಂಕಿ ಅಥವಾ ಸಮ್ಮರ್‌ ಹೇರ್‌ ಸ್ಟೈಲ್‌ ಚೂಸ್‌ ಮಾಡಿದಲ್ಲಿ ಲುಕ್‌ ಮ್ಯಾಚ್‌ ಆಗುವುದು. ಆದರೆ, ಇಲ್ಲಿ ಆಯ್ಕೆ ಮಾಡುವ ಪಾರ್ಟಿವೇರ್‌ ಮಾತ್ರ ಗ್ಲಾಮರಸ್‌ ಆಗಿ ಇರುವುದರೊಂದಿಗೆ ಕಂಫರ್ಟಬಲ್‌ ಆಗಿರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಸೆಕೆಯಾಗಕೂಡದು. ಏರ್‌ ಕಂಡೀಷನ್‌ ರೂಮ್‌ನಿಂದ ಆಚೆ ಬಂದರೂ ಕೂಡ ಆರಾಮ ಎನಿಸಬೇಕು. ಆಗಷ್ಟೇ ಇವನ್ನು ಸೂಕ್ತ ರೀತಿಯಲ್ಲಿ ಕ್ಯಾರಿ ಮಾಡಲು ಸಾಧ್ಯ” ಎನ್ನುತ್ತಾರೆ ಸ್ಟೈಲಿಸ್ಟ್‌ ಜಾನ್‌. ಅವರ ಪ್ರಕಾರ, ಡೀಪ್‌ ನೆಕ್‌ಲೈನ್‌ ಡ್ರೆಸ್‌ಗಳು ಈ ಸೀಸನ್‌ನ ಟ್ರೆಂಡ್‌ನಲ್ಲಿವೆ ಎನ್ನುತ್ತಾರೆ.

Daisy Bopanna

ಡೀಪ್‌ ವೀ ಬಾಡಿಕಾನ್‌ ಪಾರ್ಟಿವೇರ್‌ ಅಥವಾ ಮಿಡಿ ಡ್ರೆಸ್‌

ಈ ಬೇಸಿಗೆಯಲ್ಲಿ ನಟಿ ಡೈಸಿ ಬೋಪಣ್ಣ ಧರಿಸಿರುವ ಡ್ರೆಸ್‌ ಡಿಸೈನರ್‌ ಡಿಸೈನ್‌ ಮಾಡಿದ ಸ್ಪೆಷಲ್‌ ಡ್ರೆಸ್‌ ಏನಲ್ಲ! ಬದಲಿಗೆ ಆನ್‌ಲೈನ್‌ ಮೂಲಕ ತರಿಸಿಕೊಂಡ ಉಡುಪಿದು. ನಾನಾ ಬ್ರಾಂಡ್‌ಗಳಲ್ಲಿ ಈ ಡಿಸೈನ್‌ ಲಭ್ಯ. ಎಮಾರಾಲ್ಡ್‌ ಶೇಡ್‌ನ ಈ ಡ್ರೆಸ್‌ ಸ್ಲಿವ್‌ಲೆಸ್‌ ಮಿಡಿ ಡ್ರೆಸ್‌ ಎಂದೂ ಕೂಡ ಕರೆಯಲಾಗುತ್ತದೆ. ಮಂಡಿಗಿಂತ ಕೆಳಗಿನ ತನಕ ನಿಲ್ಲುವ ಈ ಉಡುಪು ಸೆಂಟರ್‌ ಸ್ಲಿಟ್‌ ಹೊಂದಿದ್ದು, ಹಾಟ್‌ ಲುಕ್‌ ನೀಡುವ ಡೀಪ್‌ ವೀ ನೆಕ್‌ ಹೊಂದಿದೆ. ಕ್ಲಿವೇಜ್‌ನಿಂದಾಗಿ ಎಕ್ಸ್‌ಪೋಸ್‌ ಮಾಡಿದಂತಾಗಿದೆ. ಇದೆಲ್ಲಾ ಬಾಲಿವುಡ್‌ನಲ್ಲಿ ಹಾಗೂ ಸಿನಿಮಾ ಇಂಡಸ್ಟ್ರೀಯಲ್ಲಿ ಕಾಮನ್‌ ಬಿಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಕೇವಲ ನಾಲ್ಕು ಸಾವಿರ ರೂ.ಗಳ ಆಸು ಪಾಸಿನಲ್ಲಿ ದೊರಕುವ ಈ ಉಡುಪು, ಸದ್ಯ ವೆಸ್ಟರ್ನ್‌ ಔಟ್‌ಫಿಟ್‌ನಲ್ಲಿ ಚಾಲ್ತಿಯಲ್ಲಿದೆ. ಯಾರೂ ಬೇಕಾದರೂ ಇದನ್ನು ಧರಿಸಬಹುದು. ಆದರೆ, ಕ್ಲಿವೇಜ್‌ ನೆಕ್‌ ಧರಿಸಲು ಸಿದ್ಧರಾಗಿರಬೇಕಷ್ಟೇ! ಪಾರ್ಟಿ ಲುಕ್‌ ಅದರಲ್ಲೂ ಬ್ರಂಚ್‌, ಲಂಚ್‌ ಹಾಗೂ ನೈಟ್‌ ಸಮ್ಮರ್‌ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Daisy Bopanna

ಫ್ಯಾಷನ್‌ ಇನ್ಫೂಯೆನ್ಸರ್‌ ಡೈಸಿ ಬೋಪಣ್ಣ

ನಟಿ ಡೈಸಿ ಬೋಪಣ್ಣ, ಸಿನಿಮಾದಿಂದ ಸದ್ಯಕ್ಕೆ ಬ್ರೇಕ್‌ ತೆಗದುಕೊಂಡಿದ್ದರೂ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸಕ್ರಿಯರಾಗಿದ್ದಾರೆ. ಅಷ್ಟೇಕೆ! ಆಗಾಗ್ಗೆ ಫ್ಯಾಷನ್‌ವೇರ್‌ ಹಾಗೂ ಇತರೇ ವಿಷಯಗಳ ಬಗ್ಗೆ ಕ್ಲಿಪ್‌ಗಳನ್ನು ಹಾಕುತ್ತಲೇ ಇರುತ್ತಾರೆ. ಮೊದಲಿನಿಂದಲೂ ಫ್ಯಾಷೆನಬಲ್‌ ನಟಿಯಾಗಿರುವ ಇವರು, ಮೇಕಪ್‌ ಪ್ರಿಯೆ ಕೂಡ. ಸಾಕಷ್ಟು ಬಾರಿ ಈ ಕುರಿತಂತೆ ಟಿಪ್ಸ್‌ ಕೂಡ ನೀಡುತ್ತಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Daisy Bopanna

ಡೈಸಿ ಬೋಪಣ್ಣ ವೆಸ್ಟ್ರನ್‌ ಲುಕ್‌

ನಟಿ ಡೈಸಿ ಬೋಪಣ್ಣ ಈ ಜನರೇಷನ್‌ಗೆ ಹೊಂದುವಂತೆ ಸಾಕಷ್ಟು ಫ್ಯಾಷನ್‌ವೇರ್‌ ಧರಿಸುತ್ತಲೇ ಇರುತ್ತಾರೆ. ಇದರೊಂದಿಗೆ ಅವರ ಮೇಕಪ್‌ ಕೂಡ ಈ ಸೀಸನ್‌ಗೆ ಹೇಳಿ ಮಾಡಿಸಿದಂತಿದೆ. ಅವರಂತೆಯೇ ಮೇಕಪ್‌ ಮಾಡುವುದು ಸುಲಭ ಕೂಡ. ಇಲ್ಲಿದೆ ಟಿಪ್ಸ್.‌

 1. ಐ ಮೇಕಪ್‌ಗೆ ಈ ಸೀಸನ್‌ನ ಪಾಪ್‌ಅಪ್‌ ಕಲರ್ಸ್‌ ಚೂಸ್‌ ಮಾಡಿ.
 2. ಹೇರ್‌ಸ್ಟೈಲ್‌ ಫಂಕಿ ಲುಕ್‌ ನೀಡಲಿ.
 3. ಧರಿಸುವ ಪಾರ್ಟಿ ಲುಕ್‌ಗೆ ತಕ್ಕಂತೆ ಆಕ್ಸೆಸರೀಸ್‌ ಇರಲಿ.
 4. ಮಿನಿಮಲ್‌ ಆಕ್ಸೆಸರೀಸ್‌ ಬೆಸ್ಟ್‌.
 5. ಕಣ್ಣಿಗೆ ವಿಂಗ್‌ ಐ ಎಳೆದು ನೋಡಿ.

(ಲೇಖಕಿ ಫ್ಯಾಷನ್‌ ಪರ್ತಕರ್ತೆ )

ಇದನ್ನೂ ಓದಿ: Summer Fashion: ಹಾಟ್‌ಲುಕ್‌ಗಾಗಿ ಬಂತು 3 ಶೈಲಿಯ ಸ್ಲೀವ್‌ಲೆಸ್‌ ಸೀರೆ ಬ್ಲೌಸ್‌

Continue Reading

ಫ್ಯಾಷನ್

Summer Fashion: ಹಾಟ್‌ಲುಕ್‌ಗಾಗಿ ಬಂತು 3 ಶೈಲಿಯ ಸ್ಲೀವ್‌ಲೆಸ್‌ ಸೀರೆ ಬ್ಲೌಸ್‌

ಬೇಸಿಗೆಯಲ್ಲಿ ಉಡುವ ಸೀರೆಗಳಿಗೆ (Summer Fashion) ನಾನಾ ಬಗೆಯ ಸ್ಲಿವ್‌ಲೆಸ್‌ಬ್ಲೌಸ್‌ಗಳು ಚಾಲ್ತಿಗೆ ಬಂದಿದ್ದು, ಅವುಗಳಲ್ಲಿ 3 ಶೈಲಿಯವು ಹೆಚ್ಚು ಟ್ರೆಂಡಿಯಾಗಿವೆ. ಅವು ಯಾವುವು? ಯಾವ್ಯಾವ ಬಗೆಯ ಸೀರೆಗಳಿಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಸೀರೆ ಪರಿಣತರು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Summer Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀರೆಗೆ ಸ್ಲಿವ್‌ಲೆಸ್‌ಬ್ಲೌಸ್‌ ಧರಿಸುವ ಟ್ರೆಂಡ್‌ (Summer Fashion) ಈ ಬೇಸಿಗೆಯಲ್ಲಿ ಮರಳಿದೆ. ಬೇಸಿಗೆಯಲ್ಲಿ ಉಡುವ ನಾನಾ ಬಗೆಯ ವೆರೈಟಿ ಸೀರೆಗಳಿಗೆ ಈಗಾಗಲೇ ಲೆಕ್ಕವಿಲ್ಲದಷ್ಟು ಶೈಲಿಯವು ಮಾರುಕಟ್ಟೆಗೆ ಬಂದಿದ್ದು ಅವುಗಳಲ್ಲಿ ಬ್ರಾಡ್‌ನೆಕ್‌ಲೈನ್‌, ಸ್ಟ್ರಾಪ್‌ಕ್ರಾಪ್‌ಟಾಪ್‌ ಶೈಲಿಯವು ಮತ್ತು ಬಿಕಿನಿ ಸ್ಟೈಲ್‌ಸ್ಲಿವ್‌ಲೆಸ್‌ ಬ್ಲೌಸ್‌ಗಳು ಹೆಚ್ಚು ಬಿಕರಿಯಾಗುತ್ತಿವೆ. “ಸ್ಲಿವ್‌ಲೆಸ್‌ ಸೀರೆ ಬ್ಲೌಸ್‌ಗಳು ಈ ಸೀಸನ್‌ನ ಹಾಟ್‌ಟ್ರೆಂಡ್‌. ಪ್ರತಿಬಾರಿಯಂತೆ ಈ ಬಾರಿಯು ಈ ಕಾನ್ಸೆಪ್ಟ್ ಸಮ್ಮರ್‌ಸೀರೆ ಫ್ಯಾಷನ್‌ಗೆ ಕಾಲಿಟ್ಟಿದ್ದು, ಮಾನಿನಿಯರ ಲುಕ್‌ಗೆ ಗ್ಲಾಮರಸ್‌ಟಚ್‌ನೀಡುತ್ತಿವೆ. ನೋಡಲು ಗ್ಲಾಮರಸ್‌ಲುಕ್‌ನೀಡುವ ಈ ಸ್ಲಿವ್‌ಲೆಸ್‌ಬ್ಲೌಸ್‌ಗಳು ಇದೀಗ ಕೇವಲ ಕಾರ್ಪೋರೇಟ್‌ಕ್ಷೇತ್ರದ ಮಾನಿನಿಯರನ್ನು ಮಾತ್ರವಲ್ಲ, ಅಲ್ಟ್ರಾ ಮಾಡರ್ನ್ ಯುವತಿಯರನ್ನು ಹಾಗೂ ಟೀನೇಜ್‌ಹುಡುಗಿಯರನ್ನು ಬರಸೆಳೆಯುತ್ತಿವೆ. ಸೀರೆಯೊಂದಿಗೆ ಧರಿಸುವ ಸ್ಟೈಲ್‌ಕೂಡ ಡಿಫರೆಂಟಾಗಿ ಬದಲಾಗುತ್ತಿದೆ. ನೋಡಲು ಒಂದೇ ಬಗೆಯ ಕಾನ್ಸೆಪ್ಟ್‌ನಂತೆ ಕಂಡರೂ, ಸ್ಲಿವ್‌ಲೆಸ್‌ ಬ್ಲೌಸ್‌ಗಳಲ್ಲೆ ನಾನಾ ಬಗೆಯವು ದೊರೆಯುತ್ತಿವೆ. ಹೊಸ ವಿನ್ಯಾಸದವನ್ನು ಟೈಲರ್‌ಗಳು ಪರಿಚಯಿಸುತ್ತಿದ್ದಾರೆ” ಎನ್ನುತ್ತಾರೆ ಬ್ಲೌಸ್ ಡಿಸೈನರ್‌ಗಳು.

Summer Fashion

ಅಗಲವಾದ ನೆಕ್‌ಲೈನ್‌ ಸ್ಲಿವ್‌ಲೆಸ್‌ ಬ್ಲೌಸ್‌

ತೀರಾ ಅಗಲವಾದ ನೆಕ್‌ಲೈನ್‌ ಇರುವಂತಹ ಸ್ಲಿವ್‌ಲೆಸ್‌ ಬ್ಲೌಸ್‌ಗಳು ಈ ಬೇಸಿಗೆಯಲ್ಲಿ ಟ್ರೆಂಡಿಯಾಗಿವೆ. ಇವು ಸೀರೆ ಉಟ್ಟಾಗ ಸೆಕೆಯಾಗದಂತೆ ತಡೆಯುತ್ತವೆ. ಅಲ್ಲದೆ, ನೋಡಲು ಕೂಡ ಗ್ಲಾಮರಸ್‌ ಲುಕ್‌ ನೀಡುತ್ತವೆ. ಬ್ರಾಡ್‌ ನೆಕ್‌ ಇರುವಂತಹ ಸ್ಲಿವ್‌ಲೆಸ್‌ ಬ್ಲೌಸ್‌ಗಳು ಆದಷ್ಟೂ ಫಿಟ್‌ಆಗಿರಬೇಕು. ಇಲ್ಲವಾದಲ್ಲಿ ಪರ್ಫೆಕ್‌ ಆಗಿ ಕಾಣಿಸದು. ಇನ್ನು, ಪ್ರಿಂಟೆಡ್‌ಸೀರೆಗೆ ಸಾದಾ ಬ್ಲೌಸ್‌, ಸಾದಾ ಸೀರೆಗೆ ಪ್ರಿಂಟೆಡ್‌ನವನ್ನು ಮಿಕ್ಸ್‌-ಮ್ಯಾಚ್‌ ಮಾಡಬಹುದು ಎಂದು ಸಿಂಪಲ್‌ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

Summer Fashion

ಸ್ಟ್ರಾಪ್‌ ಕ್ರಾಪ್‌ ಟಾಪ್‌ಸ್ಲಿವ್‌ಲೆಸ್‌ ಬ್ಲೌಸ್‌

ನೋಡಲು ಕ್ರಾಪ್‌ಟಾಪ್‌ನಂತೆ ಕಾಣುವ ಈ ಸ್ಲಿವ್‌ಲೆಸ್‌ ಬ್ಲೌಸ್‌ಗಳು ಸ್ಟ್ರಾಪ್‌ಟಾಪ್‌ನಂತೆ ಕಾಣುತ್ತವೆ. ಇವು ಇದೀಗ ಅತಿ ಹೆಚ್ಚು ಫ್ಯಾಷನ್‌ನಲ್ಲಿವೆ. ಯಂಗ್‌ಲುಕ್‌ಗಾಗಿ ಇವನ್ನು ಧರಿಸುವುದು ಹೆಚ್ಚಾಗಿದೆ. ಶೋಲ್ಡರ್ ಎಕ್ಸ್ಪೋಸ್‌ ಮಾಡುವ ಇವನ್ನು ಧರಿಸುವಾಗ ಸ್ಟ್ರಾಪ್‌ಲೆಸ್‌ ಇನ್ನರ್‌ವೇರ್‌ ಧರಿಸುವುದು ಸೂಕ್ತ. ಸನ್‌ಟ್ಯಾನ್‌ ಆಗುವ ಚಾನ್ಸ್ ಹೆಚ್ಚಾಗಿರುವುದರಿಂದ ಒಳಾಂಗಣದಲ್ಲಿರುವ ಸಮಯದಲ್ಲಿ ಧರಿಸಬಹುದು. ಇಂಡೋ-ವೆಸ್ಟರ್ನ್ ಲುಕ್‌ಗೆ ಬೆಸ್ಟ್ ಎಂಬುದು ಫ್ಯಾಷನಿಸ್ಟ್‌ಗಳ ಅಭಿಪ್ರಾಯ.

Summer Fashion

ಬಿಕಿನಿ ಸ್ಟೈಲ್‌ಸ್ಲಿವ್‌ಲೆಸ್‌ ಬ್ಲೌಸ್‌

ಇನ್ನು ಹಾಟ್‌ಲುಕ್‌ ಬಯಸುವವರಿಗೆಂದು ಬಿಕಿನಿ ಸ್ಟೈಲ್‌ನ ಸ್ಲಿವ್‌ಲೆಸ್‌ ಬ್ಲೌಸ್‌ ಬಂದಿವೆ. ಇವು ರೆಡಿಮೇಡ್‌ ಮಾತ್ರವಲ್ಲ, ಸ್ಟಿಚ್ಚಿಂಗ್‌ ಮಾಡಿಸಿ, ಧರಿಸುವವರು ಕೂಡ ಹೆಚ್ಚಾಗಿದ್ದಾರೆ. ಮಿಕ್ಸ್ ಮ್ಯಾಚ್‌ಮಾಡಿ ಧರಿಸಬಹುದಾದ ಇವನ್ನು ಇಂಡೋ-ವೆಸ್ಟರ್ನ್ ಶೈಲಿಯ ಸೀರೆಗೆ ಧರಿಸುವವರು ಹೆಚ್ಚಾಗಿದ್ದಾರೆ. ಕಾಟನ್‌, ಲೆನಿನ್‌, ರಯಾನ್‌ ಹೀಗೆ ನಾನಾ ಬಗೆಯ ಸೀರೆಗಳಿಗೆ ಇವನ್ನು ಪ್ರಯೋಗ ಮಾಡುವುದು ಕಂಡು ಬರುತ್ತಿದೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು

Continue Reading

ಫ್ಯಾಷನ್

Ramzan Fashion: ರಂಜಾನ್‌ನಲ್ಲಿ ಟ್ರೆಂಡಿಯಾಯ್ತು ಬಗೆಬಗೆಯ ಗ್ರ್ಯಾಂಡ್‌ ಲುಕ್‌

ರಂಜಾನ್‌ ಹಬ್ಬಕ್ಕೆ (Ramzan Fashion) ಗ್ರ್ಯಾಂಡ್‌ ಲುಕ್‌ ಟ್ರೆಂಡಿಯಾಗಿದೆ. ಮೇಕಪ್‌ ಮಾತ್ರವಲ್ಲ, ಬಗೆಬಗೆಯ ಡಿಸೈನರ್‌ವೇರ್‌ಗಳು, ಹೇರ್‌ ಸ್ಟೈಲಿಂಗ್‌ ಕೂಡ ಇವುಗಳಲ್ಲಿ ಸೇರಿದೆ. ನೋಡಲು ಅತ್ಯಾಕಷಕವಾಗಿ ಕಾಣುವ ಈ ಕಾನ್ಸೆಪ್ಟ್‌ನಲ್ಲಿ ಏನೇನೆಲ್ಲಾ ಇದೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Ramzan Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಜಾನ್‌ ಹಬ್ಬಕ್ಕೆ (Ramzan Fashion) ವೈವಿಧ್ಯಮಯ ಗ್ರ್ಯಾಂಡ್‌ ಲುಕ್‌ ಟ್ರೆಂಡಿಯಾಗಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣುವ ಮೇಕಪ್‌ ಮಾತ್ರವಲ್ಲ, ಬಗೆಬಗೆಯ ಹೆವ್ವಿ ಡಿಸೈನರ್‌ವೇರ್‌ಗಳು ಹಾಗೂ ವೈವಿಧ್ಯಮಯ ಹೇರ್‌ ಸ್ಟೈಲಿಂಗ್‌ ಕೂಡ ಪ್ರಚಲಿತದಲ್ಲಿವೆ. ಧರಿಸುವ ಡಿಸೈನರ್‌ವೇರ್‌ ಜೊತೆ ಜೊತೆಗೆ ಮುಖದ ಮೇಕಪ್‌ ಹಾಗೂ ಎಥ್ನಿಕ್‌ ಲುಕ್‌ಗೆ ಸಾಥ್‌ ನೀಡುವ ಹೇರ್‌ಸ್ಟೈಲ್‌ಗಳು ಮಾನಿನಿಯರ ಹಾಗೂ ಹುಡುಗಿಯರ ಜೊತೆಯಾಗಿವೆ.

Ramzan Fashion

ಹೆವಿ ಡಿಸೈನ್‌ನ ಗಾಗ್ರ-ಲೆಹೆಂಗಾ-ಸಲ್ವಾರ್‌

ಹೆವ್ವಿ ಡಿಸೈನ್‌ನ ನಾನಾ ಬಗೆಯ ಡಿಸೈನರ್‌ವೇರ್‌ಗಳು ಈ ಫೆಸ್ಟೀವ್‌ ಸೀಸನ್‌ನಲ್ಲಿ ಕಾಲಿಟ್ಟಿದ್ದು, ಒಂದಕ್ಕಿಂತ ಒಂದು ಡಿಸೈನ್‌ಗಳು ಈ ರಂಜಾನ್‌ನಲ್ಲಿ ಯುವತಿಯರನ್ನು ಸವಾರಿ ಮಾಡತೊಡಗಿವೆ. ಅವುಗಳಲ್ಲಿ, ಸಿಲ್ವರ್‌-ಗೋಲ್ಡ್‌ ಎಂಬ್ರಾಯ್ಡರಿ ಥ್ರೆಡ್‌ ವಿನ್ಯಾಸ ಇರುವಂತಹ ಡಿಸೈನ್‌ನವು, ಮಿರರ್‌ ವರ್ಕ್‌ ಇರುವಂತವು, ಕುಂದನ್‌ ಡಿಸೈನ್‌ನವು ಮಲ್ಟಿ ಶೇಡ್‌ನ ಚಿತ್ತಾರ ಇರುವಂತಹ ಡಿಸೈನರ್‌ವೇರ್‌ಗಳು ಮಹಿಳೆಯರನ್ನು ಸೆಳೆದಿವೆ. ಜಗಮಗಿಸುವ ಡಿಸೈನ್‌ಗಳು ಹೆಚ್ಚೆಚ್ಚು ವಿನ್ಯಾಸದಲ್ಲಿ ಎಲ್ಲರನ್ನೂ ಸೆಳೆದಿವೆ.

Ramzan Fashion

ನೋ ಮೇಕಪ್‌ ಕಾನ್ಸೆಪ್ಟ್‌

ಈ ಫೆಸ್ಟೀವ್‌ ಸೀಸನ್‌ನಲ್ಲಿ ಮೇಕಪ್‌ ಮಾಡದಂತೆ ಕಾಣಿಸುವ ನೋ ಮೇಕಪ್‌ ಕಾನ್ಸೆಪ್ಟ್‌ ಚಾಲ್ತಿಯಲ್ಲಿದೆ. ಸಿಂಪಲ್‌ ಲುಕ್‌ ನೀಡುವ ಈ ಮೇಕಪ್‌ ಟ್ರೆಂಡ್‌ ಈ ಹಬ್ಬದ ಸೀಸನ್‌ನಲ್ಲಿ ಈಗಾಗಲೇ ಪ್ರಚಲಿತದಲ್ಲಿದೆ. ನ್ಯುಡ್‌ ಮೇಕಪ್‌ ಎನ್ನಲಾಗುವ ಇದರಲ್ಲಿ ಲೈಟಾಗಿರುವ ಬ್ಲಷರ್‌, ಲಿಪ್‌ಸ್ಟಿಕ್‌, ಗ್ಲಿಟರ್‌ ಇರದ ಐ ಮೇಕಪ್‌ ಸಿಂಪಲ್‌ ಲುಕ್‌ ನೀಡುತ್ತದೆ. ಬೇಕಿದ್ದಲ್ಲಿ ಗ್ರ್ಯಾಂಡ್‌ ಲುಕ್‌ ನೀಡುವ ಗ್ಲಿಟ್ಟರ್‌ ಐ ಮೇಕಪ್‌ ಹಬ್ಬದಂದು ಸೇರಿಸಿಕೊಳ್ಳಬಹುದು ಎನ್ನುತ್ತಾರೆ ಮೇಕಪ್‌ ಆಟಿಸ್ಟ್‌ಗಳು.

Ramzan Fashion

ಎಥ್ನಿಕ್‌ ಲುಕ್ಗೆ ಮೆಸ್ಸಿ ಹೇರ್‌ಸ್ಟೈಲ್‌

ಇದೀಗ ಲೂಸಾಗಿ ಹಾಕಬಹುದಾದ ಮೆಸ್ಸಿ ಜಡೆಗಳು ಹಬ್ಬದ ಅಲಂಕಾರದಲ್ಲಿ ಸೇರಿವೆ. ಫ್ರೆಂಚ್‌ ಫ್ಲಾಟ್‌, ಉಲ್ಟಾ ಜಡೆಗಳು, ಮಿಕ್ಸ್‌ ಮ್ಯಾಚ್‌ ಪಫ್‌ ಹೇರ್‌ಸ್ಟೈಲ್‌ಗಳು ಹಬ್ಬದ ಲುಕ್‌ಗೆ ಸಾಥ್‌ ನೀಡುತ್ತಿವೆ. ಇವುಗಳಿಗೆ ಮಿರ ಮಿರ ಮಿನುಗುವ ಜಗಮಗಿಸುವ ಕ್ಲಿಪ್‌ಗಳು, ಆಟಿಫಿಶಿಯಲ್‌ ಹೇರ್‌ ಆಕ್ಸೆಸರೀಸ್‌ಗಳು ಸಿಂಗಾರಕ್ಕೆ ಸಾಥ್‌ ನೀಡುತ್ತಿವೆ.
“ರಂಜಾನ್‌ನಲ್ಲಿ ಟ್ರೆಂಡಿಯಾಗುವ ಡಿಸೈನರ್‌ವೇರ್‌ಗಳು, ಆಕ್ಸೆಸರೀಸ್‌ಗಳು ಇತರೇ ಗ್ರ್ಯಾಂಡ್‌ ಸಮಾರಂಭಗಳಲ್ಲೂ ಧರಿಸಬಹುದು ಅಷ್ಟೇಕೆ! ಹಬ್ಬ ಆಚರಿಸದವರೂ ಕೂಡ ಈ ಕಾನ್ಸೆಪ್ಟ ಅನ್ನು ಗ್ರ್ಯಾಂಡ್‌ ಕಾಯಕ್ರಮಗಳಲ್ಲಿ ಬಳಸಿಕೊಳ್ಳಬಹುದು. ಆ ಮಟ್ಟಕ್ಕೆ ಈ ಸೀಸನ್‌ನ ಟ್ರೆಂಡಿ ಡಿಸೈನರ್‌ವೇರ್‌ಗಳು ಎಲ್ಲಾ ಸಮುದಾಯದ ಯುವತಿಯರಿಗೆ ಪ್ರಿಯವಾಗಿವೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಗ್ರ್ಯಾಂಡ್‌ ಲುಕ್‌ ಪ್ರಿಯರಿಗೆ ಖರೀದಿ ಮಾಡಲು ಹಾಗೂ ಕಾನ್ಸೆಪ್ಟ್‌ ಬಳಸಿಕೊಳ್ಳಲು ಇದು ಸಕಾಲ” ಎನ್ನುತ್ತಾರೆ.

Ramzan Fashion
 • ರಂಜಾನ್‌ ಹಬ್ಬ ಟ್ರೆಂಡಿ ಡಿಸೈನರ್‌ವೇರ್‌ಗಳ ಸೀಸನ್‌.
 • ಗ್ರ್ಯಾಂಡ್‌ ಹೇರ್‌ಸ್ಟೈಲ್‌ ಆಕ್ಸೆಸರೀಸ್‌ ಈ ಸೀಸನ್‌ನಲ್ಲಿ ಕೊಳ್ಳಿ.
 • ಈ ಸೀಸನ್‌ನಲ್ಲಿ ಟ್ರೆಂಡಿಯಾಗುವ ಔಟ್‌ಫಿಟ್ಸ್‌ ಇತರೇ ಸಮಾರಂಭಗಳಲ್ಲೂ ಧರಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Beach Fashion: ಸಮ್ಮರ್‌ ಬೀಚ್‌ಸೈಡ್‌ ಫ್ಯಾಷನ್‌ನಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಅಂಶಗಳು

Continue Reading
Advertisement
Kannada New Movie Puksatte Paisa set on theator
ಸಿನಿಮಾ9 mins ago

Kannada New Movie: ಕಾಸಿನ ಹಿಂದೆ ಬಿದ್ದವರ ಕನಸಿನ ಕಥೆ `ಪುಕ್ಸಟ್ಟೆ ಪೈಸ’ ಥಿಯೇಟರಿನತ್ತ

Terror Attack
ವಿದೇಶ28 mins ago

Terror Attack: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 11 ಜನರನ್ನು ಅಪಹರಿಸಿ ಬರ್ಬರ ಹತ್ಯೆ

Urvashi Rautela
ಕ್ರೀಡೆ52 mins ago

Urvashi Rautela: ಕ್ರಿಕೆಟಿಗರಾದ ಪಂತ್​,ನಸೀಮ್​ಗೆ ಕೈಕೊಟ್ಟು ಖ್ಯಾತ ಫುಟ್ಬಾಲರ್​ ಜತೆ ಡೇಟಿಂಗ್ ಆರಂಭಿಸಿದ ಊರ್ವಶಿ ರೌಟೇಲಾ​

murder-case
ಕ್ರೈಂ1 hour ago

Murder Case: ಹೆಂಡತಿಯ ಕೊಂದ ಗಂಡನ ಸುಳಿವಿಗೆ 3 ಕೋಟಿ ರೂ. ಬಹುಮಾನ!

Gold price
ಚಿನ್ನದ ದರ1 hour ago

Gold Price Explainer: ಚಿನ್ನದ ದರ ಇಷ್ಟೊಂದು ಏರಲು ಏನು ಕಾರಣ? ಬಂಗಾರದ ಮೇಲೆ ಹೂಡಿಕೆಗಿದು ಸಕಾಲವೇ?

Lok Sabha Election 2024
ಬೆಂಗಳೂರು2 hours ago

Lok Sabha Election 2024 : ಮಾವಿನ ಹಣ್ಣಿನ ಬ್ಯಾಗ್‌ ಬಿಡ್ರೀ ಎಂದವರ ಬಳಿ ಗರಿ ಗರಿ ನೋಟು; ಜಯನಗರದಲ್ಲಿ 4 ಕೋಟಿ ರೂ. ಸೀಜ್‌

Sonu Srinivas Gowda shares Jail Experience
ಸಿನಿಮಾ2 hours ago

Sonu Srinivas Gowda: ಸಿಕ್ಕಾಪಟ್ಟೆ ಸೊಳ್ಳೆ ಕಾಟ ಇತ್ತು ಎಂದು ಜೈಲಿನ ಅನುಭವ ಹಂಚಿಕೊಂಡ ಸೋನು ಗೌಡ!

CM Siddaramaiah
ಕರ್ನಾಟಕ2 hours ago

ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿದ್ದರಾಮಯ್ಯ; ಚುನಾವಣೆ ಮೊದಲೇ ಸೋಲೊಪ್ಪಿಗೆ?

Siddaramaiah
ಕರ್ನಾಟಕ2 hours ago

ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಶ್ರೀನಿವಾಸ ಪ್ರಸಾದ್!‌ ಏನಿದರ ಮರ್ಮ?

Vinesh Phogat
ಕ್ರೀಡೆ2 hours ago

Vinesh Phogat: ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ; ಡಬ್ಲ್ಯುಎಫ್‌ಐ ವಿರುದ್ಧ ಗಂಭೀರ ಆರೋಪ ಹೊರಿಸಿದ ವಿನೇಶ್

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 day ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 day ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ2 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20242 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ4 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ4 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

ಟ್ರೆಂಡಿಂಗ್‌