-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಸೀಸನ್‌ನಲ್ಲಿ ಬ್ಲೇಜರ್ ಸೀರೆ ನಟಿ ಶ್ವೇತಾ ಚೆಂಗಪ್ಪ (Blazer Saree Fashion) ಅವರನ್ನು ಸಿಂಗರಿಸಿದೆ. ಹೌದು, ಮಾನ್ಸೂನ್ ಸೀಸನ್‌ಗೆ ತಕ್ಕಂತೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಲೇಯರ್ ಲುಕ್ ನೀಡುವ ಆಕರ್ಷಕ ಬ್ಲ್ಯಾಕ್ ಬ್ಲೇಜರ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಇದು ಅವರಿಗೆ ಕ್ಲಾಸಿ ಲುಕ್ ನೀಡಿದೆ. ಅಂದಹಾಗೆ, ಶ್ವೇತಾ ಚೆಂಗಪ್ಪ ಮೊದಲಿನಿಂದಲೂ ಫ್ಯಾಷೆನಬಲ್ ಲೇಡಿ. ರಿಯಾಲಿಟಿ ಶೋಗಳಲ್ಲಿ ನಾನಾ ಬಗೆಯ ಪ್ರಯೋಗಾತ್ಮಕ ಡಿಸೈನರ್‌ವೇರ್ ಹಾಗೂ ಸೀರೆಗಳಲ್ಲಿ ಅಂದವಾಗಿ ಕಾಣಿಸಿಕೊಳ್ಳುವ ಇವರು ನಟಿ ಕೂಡ. ಇನ್ನು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಈ ಫ್ಯಾಷನೆಬಲ್ ಲುಕ್‌ಗಾಗಿ ಫಾಲೋವರ್ಸ್ ಕೂಡ ಹೊಂದಿದ್ದಾರೆ.
ಏನಿದು ಬ್ಲೇಜರ್ ಸೀರೆ ಫ್ಯಾಷನ್?
ಎಥ್ನಿಕ್ ಡಿಸೈನ್ ಹೊಂದಿದ ಬ್ಲೇಜರ್ ಮೇಲೆ ಧರಿಸುವ ಸೀರೆಯಿದು. ಬ್ಲೇಜರ್ ಡಿಸೈನ್‌ನಿಂದ ಸ್ಪೂರ್ತಿಗೊಂಡ ಸೀರೆ ಮೇಲೆ ಧರಿಸುವ ಡಿಸೈನರ್ ಮೇಲುಡುಗೆಯಿದು. ಸೀರೆಗೆ ಲೇಯರ್ ಲುಕ್ ಕಲ್ಪಿಸುತ್ತದೆ. ಅಲ್ಲದೇ, ನೋಡಲು ಅತ್ಯಾಕರ್ಷಕವಾಗಿ ಬಿಂಬಿಸುತ್ತದೆ. ಶ್ವೇತಾ ಚಂಗಪ್ಪ ಉಟ್ಟಿರುವ ಈ ಸೀರೆಯನ್ನು ಮಯಾರಾ ಕೌಚರ್ ವಿನ್ಯಾಸಗೊಳಿಸಿದೆ. ಸಾಲಿಡ್ ಬ್ಲ್ಯಾಕ್ ಶೇಡ್‌ನ ಈ ಸೀರೆಯ ಬ್ಲೇಜರ್ ಕಂಪ್ಲೀಟ್ ಎಂಬ್ರಾಯ್ಡರಿ ಒಳಗೊಂಡಿದೆ. ಸಾದಾ ಸೀರೆಯೊಳಗಿನ ಪಲ್ಲು ಕೂಡ ಬಾರ್ಡರ್ ಡಿಸೈನ್‌ನಿಂದ ಅಲಂಕಾರಗೊಂಡಿದೆ. ಇನ್ನು, ಈ ಬ್ಲೇಜರ್‌ನ ಸ್ಲೀವ್ ಡಿಫರೆಂಟ್ ಎಂಬ್ರಾಯ್ಡರಿ ಹೊಂದಿದ್ದು, ಬಟನ್ ಇಲ್ಲದ ಈ ಬ್ಲೇಜರ್, ಸೀರೆಯ ಅಂದ ಹೆಚ್ಚಿಸಿದೆ.
ಶ್ವೇತಾ ಚೆಂಗಪ್ಪ ಮಾನ್ಸೂನ್ ಫ್ಯಾಷನ್
ತಮ್ಮ ಈ ಲುಕ್ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡ ಶ್ವೇತಾ ಚೆಂಗಪ್ಪ, ಮಾನ್ಸೂನ್‌ನಲ್ಲಿ ಆದಷ್ಟೂ ಕಂಫರ್ಟಬಲ್ ಫ್ಯಾಷನ್ ಅಳವಡಿಸಿಕೊಳ್ಳುತ್ತಾರಂತೆ. ಯಾವುದೇ ಉಡುಗೆಯಾದರೂ ಸೀಸನ್‌ಗೆ ತಕ್ಕಂತೆ ಇರುವುದರೊಂದಿಗೆ ಕ್ಲಾಸಿಯಾಗಿಯೂ ಕಾಣಿಸಬೇಕು ಎನ್ನುತ್ತಾರೆ. ಆನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವಾಗ ಎಥ್ನಿಕ್ ಡಿಸೈನರ್‌ವೇರ್ ಧರಿಸುವುದು ನನಗಿಷ್ಟ, ಔಟಿಂಗ್‌ನಲ್ಲಿ ಸಿಂಪಲ್ ಸ್ಟೈಲ್‌ಸ್ಟೇಟ್‌ಮೆಂಟ್‌ಗಳಿಷ್ಟ ಎನ್ನುತ್ತಾರೆ.
ಮಾನ್ಸೂನ್ ಲುಕ್‌ಗೆ ಶ್ವೇತಾ 3 ಸಿಂಪಲ್ ಟಿಪ್ಸ್
- ಲೇಯರ್ ಲುಕ್ ಮಾಡುವಾಗ ಕಂಫರ್ಟಬಲ್ ಫ್ಯಾಷನ್‌ಗೆ ಆದ್ಯತೆ ನೀಡಬೇಕು.
- ಟ್ರಾವೆಲ್ ಮಾಡುವಾಗ ಆದಷ್ಟೂ ರಿಂಕಲ್ ಫ್ರೀ ಫ್ಯಾಷನ್‌ವೇರ್ಸ್ ಕ್ಯಾರಿ ಮಾಡುವುದು ಉತ್ತಮ.
- ಮಾನ್ಸೂನ್‌ನಲ್ಲಿ ಸಿಂಪಲ್ ಮೇಕಪ್ ಮಾಡಿ.
ಇದನ್ನೂ ಓದಿ: National Handloom day 2024: ಕರ್ನಾಟಕದ ಹೆಮ್ಮೆಯ ವಿಶ್ವ ಪ್ರಸಿದ್ಧ ಹ್ಯಾಂಡ್ ಲೂಮ್ ಸೀರೆಗಳಿವು
(ಲೇಖಕಿ ಫ್ಯಾಷನ್ ಪತ್ರಕರ್ತೆ)