Site icon Vistara News

BBK SEASON 10: ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ʻಪವಿ ಪೂವಪ್ಪʼ ಬೋಲ್ಡ್‌ ಪೋಟೊಸ್‌ ವೈರಲ್‌!

Pavi Poovappa Bold Photos

ಈ ವಾರದ ‘ಸೂಪರ್ ಸಂಡೆ ವಿತ್‌ ಸುದೀಪ್‌’ (BBK SEASON 10) ಎಪಿಸೋಡ್‌ನಲ್ಲಿ ಐವತ್ತು ದಿನಗಳ ಪಯಣದ ವಿಟಿಯನ್ನೂ ಹಾಕಿ ತೋರಿಸಲಾಗಿದೆ. ಬಿಗ್ ಬಾಸ್​ನ ಪ್ರತೀ ಸೀಸನ್​ಲ್ಲಿ ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧಿಗಳು ಎಂಟ್ರಿ ಪಡೆಯುತ್ತಾರೆ. ಈಗಾಗಲೇ ವಾಹಿನಿ ಪ್ರೋಮೊ ಕೂಡ ಹಂಚಿಕೊಂಡಿದೆ.

ಉದಯ್ ಸೂರ್ಯ, ಅವಿನಾಶ್ ಶೆಟ್ಟಿ, ಪವಿ ಪೂವಪ್ಪ, ಶೈನ್ ಶೆಟ್ಟಿ ಇರಬಹುದು ಎಂದು ಪ್ರೋಮೊ ನೋಡಿ ಊಹಿಸುತ್ತಿದ್ದಾರೆ. ಪವಿ ಪೂವಪ್ಪ ಮಾತ್ರ ಬಿಗ್‌ ಬಾಸ್‌ ಮನೆಗೆ ಬರುವುದು ಫಿಕ್ಸ್‌ ಎಂದು ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: BBK SEASON 10: ಡಬಲ್ ವೈಲ್ಡ್‌ಕಾರ್ಡ್ ಎಂಟ್ರಿ; ಮನೆಯಲ್ಲಿ ಎಂಥ ಬಿರುಗಾಳಿ ಎಬ್ಬಿಸಬಹುದು?

ಇದೀಗ ಪವಿ ಪೂವಪ್ಪ ಅವರ ಬೋಲ್ಡ್‌ ಫೋಟೊಗಲು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಪವಿ ಪೂವಪ್ಪ ಅವರು ಮೂಲತಃ ಮಾಡೆಲ್ ಆಗಿದ್ದು, ಪಾನಿಕುಟ್ಟೀರ ಪವಿತ್ರ ಪೂವಪ್ಪ ಇವರ ಪೂರ್ತಿ ಹೆಸರು. ಕಳೆದ 10 ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಎಂಬ ಟೈಟಲ್ ಕೂಡ ಪಡೆದಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಬಿಕಿನಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ 1 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಖತ್ ಬೋಲ್ಡ್ ಆಗಿ ಅವರು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.

ಸದ್ಯ ಮನೆಯಲ್ಲಿ ಮೈಕಲ್‌ ಈ ವಾರ ಕ್ಯಾಪ್ಟನ್‌ ಆಗಿದ್ದಾರೆ. ಬಿಗ್‌ಬಾಸ್‌ ಕನ್ನಡ ಇತಿಹಾಸದಲ್ಲಿಯೇ, ಕ್ಯಾಪ್ಟನ್‌ಶಿಪ್‌ನಲ್ಲಿ ಇದ್ದು, ಎಲಿಮಿನೇಟ್‌ ಆದ ಮೊದಲ ಸ್ಪರ್ಧಿಯಾಗಿ ನೀತು ಹೊರಗೆ ಹೋಗಿದ್ದಾರೆ.

Exit mobile version