BBK SEASON 10: ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ʻಪವಿ ಪೂವಪ್ಪʼ ಬೋಲ್ಡ್‌ ಪೋಟೊಸ್‌ ವೈರಲ್‌! - Vistara News

ಫ್ಯಾಷನ್

BBK SEASON 10: ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ʻಪವಿ ಪೂವಪ್ಪʼ ಬೋಲ್ಡ್‌ ಪೋಟೊಸ್‌ ವೈರಲ್‌!

BBK SEASON 10: ಉದಯ್ ಸೂರ್ಯ, ಅವಿನಾಶ್ ಶೆಟ್ಟಿ, ಪವಿ ಪೂವಪ್ಪ, ಶೈನ್ ಶೆಟ್ಟಿ ಇರಬಹುದು ಎಂದು ಪ್ರೋಮೊ ನೋಡಿ ಊಹಿಸುತ್ತಿದ್ದಾರೆ. ಪವಿ ಪೂವಪ್ಪ ಮಾತ್ರ ಬಿಗ್‌ ಬಾಸ್‌ ಮನೆಗೆ ಬರುವುದು ಫಿಕ್ಸ್‌ ಎಂದು ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ ನೆಟ್ಟಿಗರು.

VISTARANEWS.COM


on

Pavi Poovappa Bold Photos
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Pavi Poovappa

ಈ ವಾರದ ‘ಸೂಪರ್ ಸಂಡೆ ವಿತ್‌ ಸುದೀಪ್‌’ (BBK SEASON 10) ಎಪಿಸೋಡ್‌ನಲ್ಲಿ ಐವತ್ತು ದಿನಗಳ ಪಯಣದ ವಿಟಿಯನ್ನೂ ಹಾಕಿ ತೋರಿಸಲಾಗಿದೆ. ಬಿಗ್ ಬಾಸ್​ನ ಪ್ರತೀ ಸೀಸನ್​ಲ್ಲಿ ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧಿಗಳು ಎಂಟ್ರಿ ಪಡೆಯುತ್ತಾರೆ. ಈಗಾಗಲೇ ವಾಹಿನಿ ಪ್ರೋಮೊ ಕೂಡ ಹಂಚಿಕೊಂಡಿದೆ.

Pavi Poovappa

ಉದಯ್ ಸೂರ್ಯ, ಅವಿನಾಶ್ ಶೆಟ್ಟಿ, ಪವಿ ಪೂವಪ್ಪ, ಶೈನ್ ಶೆಟ್ಟಿ ಇರಬಹುದು ಎಂದು ಪ್ರೋಮೊ ನೋಡಿ ಊಹಿಸುತ್ತಿದ್ದಾರೆ. ಪವಿ ಪೂವಪ್ಪ ಮಾತ್ರ ಬಿಗ್‌ ಬಾಸ್‌ ಮನೆಗೆ ಬರುವುದು ಫಿಕ್ಸ್‌ ಎಂದು ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: BBK SEASON 10: ಡಬಲ್ ವೈಲ್ಡ್‌ಕಾರ್ಡ್ ಎಂಟ್ರಿ; ಮನೆಯಲ್ಲಿ ಎಂಥ ಬಿರುಗಾಳಿ ಎಬ್ಬಿಸಬಹುದು?

Pavi Poovappa

ಇದೀಗ ಪವಿ ಪೂವಪ್ಪ ಅವರ ಬೋಲ್ಡ್‌ ಫೋಟೊಗಲು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಪವಿ ಪೂವಪ್ಪ ಅವರು ಮೂಲತಃ ಮಾಡೆಲ್ ಆಗಿದ್ದು, ಪಾನಿಕುಟ್ಟೀರ ಪವಿತ್ರ ಪೂವಪ್ಪ ಇವರ ಪೂರ್ತಿ ಹೆಸರು. ಕಳೆದ 10 ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

Pavi Poovappa

ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಎಂಬ ಟೈಟಲ್ ಕೂಡ ಪಡೆದಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಬಿಕಿನಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Pavi Poovappa

ಇನ್​ಸ್ಟಾಗ್ರಾಮ್​ನಲ್ಲಿ 1 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಖತ್ ಬೋಲ್ಡ್ ಆಗಿ ಅವರು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.

Pavi Poovappa

ಸದ್ಯ ಮನೆಯಲ್ಲಿ ಮೈಕಲ್‌ ಈ ವಾರ ಕ್ಯಾಪ್ಟನ್‌ ಆಗಿದ್ದಾರೆ. ಬಿಗ್‌ಬಾಸ್‌ ಕನ್ನಡ ಇತಿಹಾಸದಲ್ಲಿಯೇ, ಕ್ಯಾಪ್ಟನ್‌ಶಿಪ್‌ನಲ್ಲಿ ಇದ್ದು, ಎಲಿಮಿನೇಟ್‌ ಆದ ಮೊದಲ ಸ್ಪರ್ಧಿಯಾಗಿ ನೀತು ಹೊರಗೆ ಹೋಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಫ್ಯಾಷನ್

Dhruthi Utsava Fashion Show: ಧೃತಿ ಉತ್ಸವದಲ್ಲಿ ಯಶಸ್ವಿಯಾದ ಮಹಿಳೆಯರ ಫ್ಯಾಷನ್‌ ಶೋ

ಧೃತಿ ಉತ್ಸವದಲ್ಲಿ ರಾಜ ರವಿವರ್ಮಾ ಪೇಟಿಂಗ್ಸ್ ಥೀಮ್‌ಗೆ ತಕ್ಕಂತೆ ನಡೆದ ಫ್ಯಾಷನ್‌ ಶೋನಲ್ಲಿ (Dhruthi Utsava Fashion Show), ಮಹಿಳೆಯರು ರೆಡಿಯಾಗಿ ರ‍್ಯಾಂಪ್‌ ವಾಕ್‌ ಮಾಡಿದರು. ಸಾಂಸ್ಕೃತಿಕ ಹಿನ್ನೆಲೆಗೆ ಹೊಂದುವಂತಹ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಂಡರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

A successful women's fashion show at Dhruti Utsav
ಚಿತ್ರಗಳು: ಧೃತಿ ಉತ್ಸವದಲ್ಲಿ ನಡೆದ ಫ್ಯಾಷನ್‌ ಶೋನ ಝಲಕ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ನಡೆದ ಧೃತಿ ಉತ್ಸವದಲ್ಲಿ (Dhruthi Utsava Fashion Show) ರಾಜ ರವಿವರ್ಮಾ ಪೇಟಿಂಗ್ಸ್‌ನಲ್ಲಿನ ಆಯ್ದ ಕೆಲವು ಕ್ಯಾರೆಕ್ಟರ್‌ಗಳಿಗೆ ತಕ್ಕಂತೆ ಕಾಣಿಸಿಕೊಂಡ ಮಹಿಳೆಯರು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ಟ್ರೆಡಿಷನಲ್‌ ಹಾಗೂ ಸಾಂಸ್ಕೃತಿಕ ಹಿನ್ನೆಲೆಗೆ ಹೊಂದುವಂತಹ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಂಡು ನೋಡುಗರ ಮನಸೆಳೆದರು.

Stepped models

ರಾಜ ರವಿವರ್ಮಾ ಥೀಮ್‌ನ ಫ್ಯಾಷನ್‌ ಶೋ

ರಾಜ ರವಿವರ್ಮಾ ಥೀಮ್‌ ಇರಿಸಿಕೊಂಡು ಹಮ್ಮಿಕೊಳ್ಳಲಾದ ಈ ಮಹಿಳೆಯರ ಫ್ಯಾಷನ್‌ ಶೋನಲ್ಲಿ ಮೈಸೂರಿನ ಕಲಾವಿದ ಎಲ್‌. ಕೆ. ಆಚಾರ್ಯರವರು ರಚಿಸಿದ ಚಿತ್ತಾರಗಳು ಕೂಡ ಜೊತೆ ಜೊತೆಯಲ್ಲೆ ವೇದಿಕೆ ಮೇಲೆ ಅನಾವರಣಗೊಂಡವು.

Raja Ravivarma themed fashion show

ಹೆಜ್ಜೆ ಹಾಕಿದ ಹಾಕಿದ ಮಾಡೆಲ್‌ಗಳು

ರಾಧೆಯಾಗಿ ಅನಘಾ, ರಾಣಿ ಲಕ್ಷ್ಮಿ ಬಾಯಿಯಾಗಿ ಸಂಜನಾ, ತಂಬೂರ ಹಿಡಿದಿರುವ ಜಾನ್ಹವಿ, ಕುರುಪಮ್‌ ರಾಣಿಯಾಗಿ ಅನುಷಾ, ಚಂದ್ರನ ಬೆಳಕಿನಲ್ಲಿನ ರಾಧೆಯಾಗಿ ತನುಶ್ರೀ, ಜಾನಕಿ ಬಾಯಿಯಾಗಿ ಶಿಶಿರಾ, ಹಣ್ಣು ಹಿಡಿದಿರುವ ಮಹಿಳೆಯಾಗಿ ಲಿಖಿತಾ, ವಯಲೀನ್‌ ಹಿಡಿದ ಯುವತಿಯಾಗಿ ವೈಷ್ಣವಿ, ಮಗುವಿನೊಂದಿಗೆ ಮಹಿಳೆ ಹೀಗೆ ಪೇಟಿಂಗ್‌ನಲ್ಲಿರುವ ಮಹಿಳೆಯರಂತೆಯೇ ಸಿಂಗರಾಗೊಂಡ ಮಹಿಳೆಯರು ಫ್ಯಾಷನ್‌ ಶೋನಲ್ಲಿ ವಾಕ್‌ ಮಾಡಿ ಸೈ ಎನಿಸಿಕೊಂಡರು. ಇದು ರಾಜಾ ರವಿವರ್ಮಾ ಪೇಟಿಂಗ್‌ಗಳನ್ನು ಕಣ್ಮುಂದೆ ತಂದು ನಿಲ್ಲಿಸಿದವು.

Aparna Rao's words

ಅಪರ್ಣಾ ರಾವ್‌ ಮಾತು

“ಧೃತಿ ಮಾರುಕಟ್ಟೆ ಮಹಿಳೆಯರಿಂದ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ನಡೆಯುತ್ತಿರುವ ಮಾರುಕಟ್ಟೆಯಾಗಿದೆ. ಇಲ್ಲಿ ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಜೊತೆಗೆ ಮನೋರಂಜನೆ ನೀಡುವಂತಹ ಕಾರ್ಯಕ್ರಮಗಳನ್ನು ಧೃತಿ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ. ಫ್ಯಾಷನ್‌ ಶೋ ಮಾತ್ರವಲ್ಲ, ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಯಶಸ್ವಿಯಾಗಿ ನಡೆಸಲಾಗಿದೆ” ಎಂದು ಸಂಸ್ಥಾಪಕರಾದ ಅಪರ್ಣಾ ರಾವ್‌ ಅವರು ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞೆ ಗೀತಾ ರಾಮನುಜಂ, ಕಲಾವಿದರಾದ ಜಯಲಕ್ಷ್ಮಿ ಪಾಟೀಲ್‌, ದೀಪಾ ರವಿಶಂಕರ್‌ ಪಾಲ್ಗೊಂಡಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Family Spends Crores On Designer Clothing: ಮದುವೆ ಪೂರ್ವ ಸಂಭ್ರಮದಲ್ಲಿ ಡ್ರೆಸ್‌ಗೆ ಕೋಟಿ ಕೋಟಿ ಹಣ ಚೆಲ್ಲಿದ ಅಂಬಾನಿ ಫ್ಯಾಮಿಲಿ!

Continue Reading

ಫ್ಯಾಷನ್

Ambani Family Spends Crores On Designer Clothing: ಮದುವೆ ಪೂರ್ವ ಸಂಭ್ರಮದಲ್ಲಿ ಡ್ರೆಸ್‌ಗೆ ಕೋಟಿ ಕೋಟಿ ಹಣ ಚೆಲ್ಲಿದ ಅಂಬಾನಿ ಫ್ಯಾಮಿಲಿ!

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ರ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ, ಕುಟುಂಬದವರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳಿಗೂ ಅಂಬಾನಿ ಫ್ಯಾಮಿಲಿ ಕೋಟಿಗಟ್ಟಲೇ ಹಣ ಸುರಿದಿದೆ. ಸರದಿಯಂತೆ 3 ದಿನಗಳ ಕಾಲ ಪ್ರತಿಯೊಬ್ಬರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಕುರಿತಂತೆ (Ambani Family Spends Crores On Designer Clothing) ಫ್ಯಾಷನ್‌ ವಿಮರ್ಶಕರು ವಿಶ್ಲೇಶಿಸಿರುವುದೇನು? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Ambani Family Spends Crores On Designer Clothing
ಚಿತ್ರಗಳು : ಅಂಬಾನಿ ಕುಟುಂಬದವರ ಗ್ರ್ಯಾಂಡ್‌ ಡಿಸೈನರ್‌ವೇರ್‌ ಚಿತ್ರಗಳು.
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ರ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ, ಕುಟುಂಬದವರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳಿಗೂ ಅಂಬಾನಿ ಫ್ಯಾಮಿಲಿ ಕೋಟಿಗಟ್ಟಲೇ ಹಣ ಸುರಿದಿದೆ. ಸರದಿಯಂತೆ 3 ದಿನಗಳ ಕಾಲ ಪ್ರತಿಯೊಬ್ಬರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳು ಫ್ಯಾಷನ್‌ ಪ್ರಿಯರ ಕಣ್ಣರಳಿಸಿರುವುದು ಮಾತ್ರವಲ್ಲ, ಸಾಮಾನ್ಯ ಜನರ ಹುಬ್ಬನ್ನೇರಿಸಿವೆ. ಅಬ್ಬಬ್ಬಾ., ಎನ್ನುವಷ್ಟರ ಮಟ್ಟಿಗೆ ಅಲ್ಟಿಮೆಟ್‌ ಹೈ ಫ್ಯಾಷನ್‌ಗೆ ನಾಂದಿ ಹಾಡಿದೆ. ಪರಿಣಾಮ, ಈಗಾಗಲೇ ಇವುಗಳ ರಿಪ್ಲಿಕಾ ಡಿಸೈನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲು ಸಜ್ಜಾಗಿವೆ ಎಂದು ಮುಂಬರುವ ಫ್ಯಾಷನ್‌ ಬಗ್ಗೆ ಸುಳಿವು (Ambani Family Spends Crores On Designer Clothing) ನೀಡುತ್ತಾರೆ ಫ್ಯಾಷನಿಸ್ಟ್‌ಗಳು.

Nisha ambani
Nisha ambani

ರಾಯಲ್‌ ಫ್ಯಾಷನ್‌ ಕುರಿತಂತೆ ಫ್ಯಾಷನ್‌ ವಿಮರ್ಶಕರ ವಿಶ್ಲೇಷಣೆ

ಕಳೆದ ಮೂರ್ನಾಲ್ಕು ದಿನಗಳಿಂದ ಬಹುತೇಕ ಸೋಷಿಯಲ್‌ ಮೀಡಿಯಾದ ಫ್ಯಾಷನ್‌ ಪೇಜ್‌ಗಳಲ್ಲಿ, ಅಂಬಾನಿ ಫ್ಯಾಮಿಲಿ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳದ್ದೇ ವ್ಲಾಗ್‌ಗಳು! ಅವರೆಲ್ಲರೂ ಧರಿಸಿದ್ದ ಒಂದೊಂದು ಡಿಸೈನರ್‌ವೇರ್‌ಗಳಿಂದಿಡಿದು, ಬ್ರಾಂಡ್‌, ಲೆಬೆಲ್‌, ಆಕ್ಸೆಸರೀಸ್‌ ಹಾಗೂ ಮೇಕಪ್‌ ಕುರಿತಂತೆ ವಿಷಯಗಳೇ ಹರಿದಾಡುತ್ತಿದ್ದವು. ಆ ಮಟ್ಟಿಗೆ ಇದು ಸುದ್ದಿಯಾಗಿದೆ. ಇನ್ನು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸೆಲೆಬ್ರೆಟಿಗಳ ಬಗ್ಗೆ ಹೇಳುವುದೇ ಬೇಡ! ಅವರು ಧರಿಸಿದ ಔಟ್‌ಫಿಟ್‌ಗಳು, ಟ್ರೆಂಡ್‌ ಹುಟ್ಟು ಹಾಕುವಷ್ಟರ ಮಟ್ಟಿಗೆ ಪಬ್ಲಿಸಿಟಿ ಪಡೆದಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಿನತ್‌. ಇನ್ನು, ಪ್ರಯೋಗಾತ್ಮಕ ಗ್ರ್ಯಾಂಡ್‌ ದೇಸಿ ಡಿಸೈನರ್‌ವೇರ್‌ಗಳು ಮತ್ತು ಕಾಕ್‌ಟೈಲ್‌ ಔಟ್‌ಫಿಟ್‌ಗಳ ಒಂದೊಂದು ಡಿಸೈನ್‌ಗಳು ಕೂಡ ಮುಂಬರುವ ಸೀಸನ್‌ಗೆ ಕಾಣಿಸಿಕೊಳ್ಳುವುದು ಖಚಿತ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್‌. ಇದೊಂದು ಜಾಗತೀಕ ಮಟ್ಟದಲ್ಲಿ ಸದ್ದು ಮಾಡಿದ ರಾಯಲ್‌ ಫ್ಯಾಷನ್‌ ವೆಡ್ಡಿಂಗ್‌ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ನಿಶಾ ಶರ್ಮಾ. ಅವರ ಪ್ರಕಾರ, ಇದೊಂದು ಲೈವ್‌ ರಾಯಲ್‌ ಫ್ಯಾಷನ್‌ ವೆಡ್ಡಿಂಗ್‌ ರ‍್ಯಾಂಪ್‌ನಂತಿತ್ತು ಎನ್ನುತ್ತಾರೆ.

Neetha ambani & Nisha ambani
Neetha ambani & Nisha ambani

ದುಬಾರಿ ಬೆಲೆಯ ಡಿಸೈನರ್‌ವೇರ್‌ಗಳು

3 ದಿನಗಳ ಕಾಲ ಸರದಿಯಂತೆ ಧರಿಸಿದ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳಿಗೆ ಕೋಟಿಗಟ್ಟಲೇ ಹಣ ಸುರಿಯಲಾಗಿದೆ. ಅವರೆಲ್ಲರ ಒಂದೊಂದು ಉಡುಪು, ಶ್ರೀ ಸಾಮಾನ್ಯನ ಲೈಫ ಅನ್ನೇ ಸೆಟಲ್‌ ಮಾಡುವಷ್ಟರ ಮಟ್ಟಿಗೆ ದುಬಾರಿ ಬೆಲೆ ಹೊಂದಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ.

ಪ್ರತಿಯೊಬ್ಬರದು ಯೂನಿಕ್‌ ಡಿಸೈನರ್‌ವೇರ್ಸ್

ಅನಂತ್‌-ರಾಧಿಕಾ ಮರ್ಚೆಂಟ್‌ ಮಾತ್ರವಲ್ಲ, ಮುಖೇಶ್‌-ನೀತಾ ಅಂಬಾನಿ, ಆಕಾಶ್–ಶ್ಲೋಕಾ , ಇಶಾ ಅಂಬಾನಿ ಸೇರಿದಂತೆ ಅಂಬಾನಿ ಫ್ಯಾಮಿಲಿಯವರೆಲ್ಲರ ಡಿಸೈನರ್‌ವೇರ್‌ಗಳು ಸೆಲೆಬ್ರೆಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಸೇರಿದಂತೆ ಇಂಟರ್‌ನ್ಯಾಷನಲ್‌ ಡಿಸೈನರ್‌ಗಳ ಲೆಬೆಲ್‌ನದ್ದಾಗಿವೆ. ಕಾಕ್‌ಟೈಲ್‌ ಗೌನ್‌ನಿಂದಿಡಿದು, ದೇಸಿ ಲೆಹೆಂಗಾ, ಸೂಟ್‌, ಸೀರೆ ಎಲ್ಲವೂ ವಜ್ರ-ವೈಡೂರ್ಯ ಹೊಂದಿರುವ ಯೂನಿಕ್‌ ಡಿಸೈನ್‌ದ್ದಾಗಿವೆ. ಡಿಸೈನ್‌ಗಳಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ! ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ ರಾಬರ್ಟ್.

Shloka & Radhika merchant
Shloka & Radhika merchant

ನಿಮಗೆ ಗೊತ್ತೇ!

ಇಶಾ ಅಂಬಾನಿ, ತಮ್ಮ ಮದುವೆಯಲ್ಲಿ, 150 ಕ್ಯಾರೆಟ್‌ ವಜ್ರ ಹಾಗೂ ವೈಡೂರ್ಯಗಳನ್ನು ಹೊಂದಿದ ಡಿಸೈನರ್‌ವೇರ್‌ಗಳನ್ನು ಧರಿಸಿದ್ದರಂತೆ. ಇನ್ನು, ಇದರ ಬೆಲೆ ಅಂದಾಜು 90 ಕೋಟಿ ರೂ.ಗಳನ್ನು ಮೀರಿಸಿತ್ತಂತೆ. ಹಾಗಾದಲ್ಲಿ, ಮುಂಬರುವ ಅನಂತ್‌-ಅಂಬಾನಿ ಮದುವೆಯ ಡಿಸೈನರ್‌ವೇರ್‌ಗಳಿಗೆ ಅಂಬಾನಿ ಕುಟುಂಬ ಎಷ್ಟು ಹಣ ಚೆಲ್ಲಬಹುದೆಂದು ನೀವೇ ಊಹಿಸಿ ನೋಡಿ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wardrobe Malfunction 2024: ಪಾಪ್‌ ಐಕಾನ್‌ ರಿಹಾನಾ ಡ್ರೆಸ್‌ ಎಡವಟ್ಟು! ಹೀಗಾಗದಂತೆ ಎಚ್ಚರ ವಹಿಸುವುದು ಹೇಗೆ?

Continue Reading

ಫ್ಯಾಷನ್

Nita Ambani: ಮಗನ ಮದುವೆ: ಕೈ ಮಗ್ಗದ ಕಾಂಚೀವರಂ ಸೀರೆಯುಟ್ಟು ಮಿಂಚಿದ ನೀತಾ ಅಂಬಾನಿ!

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅಪ್ಪಟ ಪ್ರೇಮಿಯಾಗಿರುವ ನೀತಾ ಅಂಬಾನಿ ಅವರು ಅನಂತ್- ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲೂ ಸ್ಥಳೀಯ ಕಲಾವಿದರ ಅಮೋಘ ಕಲಾ ಕೌಶಲದ ಕಡೆಗೆ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದರು.

VISTARANEWS.COM


on

Nita Ambani Kanchipuram sari at Anant-Radhika pre-wedding
Koo

ಅನಂತ್ ಅಂಬಾನಿ (Nita Ambani) ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಧರಿಸಿದ್ದರು. ಈ ಸೀರೆಯ ವಿಶೇಷತೆ ಏನೆಂದರೆ, ಇದು ದಕ್ಷಿಣ ಭಾರತದ ನೇಕಾರರು ಕೈಯಿಂದಲೇ ಸಿದ್ಧಪಡಿಸಿದ್ದಾಗಿದೆ. ಇದನ್ನು ಕೈ ಮಗ್ಗದ ಸೀರೆ ಎನ್ನಲಾಗುತ್ತದೆ. ಯಂತ್ರಗಳಿಂದ ಅಲ್ಲದೆ, ಕುಶಲಕರ್ಮಿಗಳು ತಮಗೆ ತಲೆತಲಾಂತರದಿಂದ ಬಂದಂಥ ಅದ್ಭುತ ಕಲೆಯನ್ನು ಮೂಡಿಸಿರುವಂಥ ಮೇರು ಕಲಾಕೃತಿ ಇದು. ಭಾರತೀಯ ಸಾಂಪ್ರದಾಯಿಕ ಕರಕುಶಲತೆ ಬಗ್ಗೆ ನೀತಾ ಅಂಬಾನಿ ಅವರಿಗೆ ಇರುವಂಥ ಗೌರವ, ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಇದು ಇನ್ನೊಂದು ಸುಮಧುರ ಕ್ಷಣವಾಗಿತ್ತು.

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅಪ್ಪಟ ಪ್ರೇಮಿಯಾಗಿರುವ ನೀತಾ ಅಂಬಾನಿ ಅವರು ಅನಂತ್- ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲೂ ಸ್ಥಳೀಯ ಕಲಾವಿದರ ಅಮೋಘ ಕಲಾ ಕೌಶಲದ ಕಡೆಗೆ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದರು.

ರಿಲಯನ್ಸ್ ನ ಸ್ವದೇಶ್ ಎಂಬ ಉಪಕ್ರಮವು ಸಮುದಾಯಗಳ ಕೈ ಬಲಪಡಿಸುತ್ತದೆ ಹಾಗೂ ಪಾರಂಪರಿಕ ಕರಕುಶಲತೆಯ ಸಂರಕ್ಷಣೆ ಮಾಡುತ್ತದೆ.

ಇದನ್ನೂ ಓದಿ: Nita Ambani: ಅನಂತ್ ಅಂಬಾನಿ ಮದುವೆ: ವಿಶ್ವಂಭರಿ ಸ್ತುತಿಗೆ ನೀತಾ ಅಂಬಾನಿ ಅದ್ಭುತ ನೃತ್ಯ!

ವಿಶ್ವಂಭರಿ ಸ್ತುತಿಗೆ ಅದ್ಭುತ ನೃತ್ಯ ಪ್ರದರ್ಶನ ನೀಡಿದ ನೀತಾ ಅಂಬಾನಿ

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮಗ ಅನಂತ್ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದಿದೆ. ನೀತಾ ಅಂಬಾನಿ ಹಾಗೂ ಅವರ ಜತೆಗೆ ಇತರರು ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ್ದಾರೆ. ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡಿದ್ದು, ವಿಶಾಲವಾದ ವೇದಿಕೆಯಲ್ಲಿ ಈ ಸಮಾರಂಭಕ್ಕೆ ಇನ್ನಷ್ಟು ಕಳೆ ಕಟ್ಟುವಂತೆ ಮಾಡಿದ್ದಾರೆ.

ಅಂದ ಹಾಗೆ, ಅನಂತ್ ಅಂಬಾನಿ ಅವರ ಭಾವೀ ಪತ್ನಿ ರಾಧಿಕಾ ಮರ್ಚಂಟ್ ಸಹ ಅತ್ಯುತ್ತಮ ನೃತ್ಯಪಟು. ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಸ್ವತಃ ನೀತಾ ಅಂಬಾನಿ ಅವರು ಈ ಹಿಂದೆಯೂ ಸಹ ನೃತ್ಯ ಪ್ರದರ್ಶನವನ್ನು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಭಾರತೀಯ ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವತಾ ಆರಾಧನೆ ಹೀಗೆ ವಿವಿಧ ರೀತಿಯ ಆಚರಣೆಗಳನ್ನು ಮಾಡಲಾಗುತ್ತದೆ.

Continue Reading

ಫ್ಯಾಷನ್

Wardrobe Malfunction 2024: ಪಾಪ್‌ ಐಕಾನ್‌ ರಿಹಾನಾ ಡ್ರೆಸ್‌ ಎಡವಟ್ಟು! ಹೀಗಾಗದಂತೆ ಎಚ್ಚರ ವಹಿಸುವುದು ಹೇಗೆ?

ಪಾಪ್‌ ಐಕಾನ್‌ ರಿಹಾನಾ ವಾರ್ಡ್ರೋಬ್‌ ಮಲ್‌ಫಂಕ್ಷನ್‌ನಂತಾಗದಿರಲು (Wardrobe Malfunction 2024) ಎಚ್ಚರ ವಹಿಸುವುದು ಸುಲಭ. ಇದಕ್ಕಾಗಿ ಒಂದಿಷ್ಟು ಟಿಪ್ಟ್‌ಗಳನ್ನು ಪಾಲಿಸಬೇಕಷ್ಟೇ! ಆ ನಂತರ ಎದುರಾಗಬಹುದಾದ ಇಂತಹ ಮುಜುಗರದಿಂದ ಪಾರಾಗಬಹುದು ಎನ್ನುತ್ತಾರೆ ಫ್ಯಾಷನ್‌ ಸ್ಟೈಲಿಸ್ಟ್‌ಗಳು.

VISTARANEWS.COM


on

Wardrobe Malfunction
ಚಿತ್ರಗಳು: ಪಾಪ್‌ ಐಕಾನ್‌ ರಿಹಾನಾ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಾರ್ಡ್ರೋಬ್‌ ಮಾಲ್‌ಫಂಕ್ಷನ್‌ (Wardrobe Malfunction 2024) ಎಂಬುದು ದೊಡ್ಡ ದೊಡ್ಡ ಸ್ಟಾರ್‌ಗಳಿಗೂ ಹೊರತಾಗಿಲ್ಲ! ಇದಕ್ಕೆ ಉದಾಹರಣೆ ಎಂಬಂತೆ, ಅಂಬಾನಿ ಫ್ಯಾಮಿಲಿಯ ಪ್ರಿ ವೆಡ್ಡಿಂಗ್‌ ಸಮಾರಂಭದಲ್ಲಿ ಪಾಪ್‌ ಐಕಾನ್‌ ರಿಹಾನಾ ಸ್ಟೇಜ್‌ ಶೋ ನೀಡುವಾಗ ಇದ್ದಕ್ಕಿಂದ್ದಂತೆ, ಪರ್ಫಮಾನ್ಸ್ ಮಧ್ಯೆ ಆಕೆ ಧರಿಸಿದ್ದ ಫ್ಲೊರಸೆಂಟ್‌ ಗ್ರೀನ್ ಶೇಡ್‌ನ ತೆಳುವಾದ ಡಿಸೈನರ್‌ವೇರ್‌ ಕೈಗಳ ಕೆಳಗೆ ಹರಿದು ಹೋಗಿದ್ದು… ತಕ್ಷಣಕ್ಕೆ ಆಕೆಗೆ ಇದು ಗೊತ್ತಾಗದಿದ್ದರೂ, ಆಕೆಯ ಬಹುತೇಕ ಫೋಟೋಗಳಲ್ಲಿ ಇದು ದಾಖಲಾಗಿ ಉಳಿದು ಹೋಯಿತು. ಅರೆರೆ, ಸೆಲೆಬ್ರೆಟಿ ಡಿಸೈನರ್‌ಗಳು ಡಿಸೈನ್‌ ಮಾಡಿದ ದುಬಾರಿ ಡಿಸೈನರ್‌ವೇರ್‌ಗಳೂ ಹೀಗೆ ಇದ್ದಕ್ಕಿದ್ದಂತೆ ಹರಿದು ಹೋಗುತ್ತವೆಯೇ! ಇದ್ಯಾಕೆ ಹೀಗೆ! ಎಂಬ ಸಂಶಯ ಎಲ್ಲರಲ್ಲೂ ಮೂಡಬಹುದು. ಇಂತಹ ಸನ್ನಿವೇಶಗಳು ಸೃಷ್ಟಿಯಾಗದಂತೆ ಏನೆಲ್ಲಾ ಮಾಡಬಹುದು? ಆದಲ್ಲಿ, ಏನು ಮಾಡಬಹುದು ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್‌ಫರ್ಟ್ ಕರೀಷ್ಮಾ ಇಲ್ಲಿ ಟಿಪ್ಸ್ ನೀಡಿದ್ದಾರೆ.

rihanna ambani wedding

ವಾರ್ಡ್ರೋಬ್‌ ಮಲ್‌ಫಂಕ್ಷನ್‌

ಅಂದಹಾಗೆ, ಸ್ಟೇಜ್‌ ಮೇಲೆ ಕಾರ್ಯಕ್ರಮ ನೀಡುವಾಗ, ಫ್ಯಾಷನ್‌ ಶೋಗಳಲ್ಲಿ ನಡೆಯುವಾಗ ಸ್ಟಾರ್‌ಗಳು ಇಂತಹ ಮುಜುಗರಕ್ಕೊಳಗೀಡಾಗಿರುವುದು ಇದು ಮೊದಲೇನಲ್ಲ! ಬಾಲಿವುಡ್‌ನ ಕಂಗನಾರಿಂದ ಹಿಡಿದು, ಸ್ಯಾಂಡಲ್‌ವುಡ್‌ನ ರಾಗಿಣಿಯೂ ಕೂಡ ಇದನ್ನು ಎದುರಿಸಿದ್ದಾರೆ. ಇನ್ನು, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪಾಪ್‌ ಐಕಾನ್‌ ರಿಹಾನಾಳ ಉಡುಪು ಪ್ರೋಗ್ರಾಂ ನಡುವೆ, ಇದ್ದಕ್ಕಿದ್ದಂತೆ ಹರಿದು ಹೋಗಿರುವುದು ಹೊಸತೇನಲ್ಲ! ಕಾರಣ ಇಷ್ಟೇ! ಕೆಲವು ಸೆಲೆಬ್ರೆಟಿಗಳು ಕಾರ್ಯಕ್ರಮಕ್ಕೆ ಕೆಲವೇ ಕ್ಷಣಗಳಿರುವಾಗ, ಟ್ರಯಲ್‌ ನೋಡದೇ, ಡೈರೆಕ್ಟ್ ಆಗಿ ಧರಿಸುವ ಡಿಸೈನರ್‌ವೇರ್‌ಗಳು ಹೀಗಾಗುತ್ತವೆ. ವಾರ್ಡ್ರೋಬ್‌ ಮಲ್‌ಫಂಕ್ಷನ್‌ಗೆ ಒಳಗಾಗುತ್ತವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಇನ್ನು, ಸಾಮಾನ್ಯ ಯುವತಿಯರು ಬಹಳಷ್ಟು ಬಾರಿ, ಇಂತಹ ಸನ್ನಿವೇಶಗಳನ್ನು ಆಗಾಗ್ಗೆ ನಾನಾ ವಿಧದಲ್ಲಿ ಎದುರಿಸುತ್ತಿರುತ್ತಾರೆ. ಇದರಿಂದ ಪಾರಾಗಲು ಏನು ಮಾಡಬಹುದು? ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಟಿಪ್ಸ್.

Rihanna wardrobe malfunction

ಕಾರ್ಯಕ್ರಮಗಳಿಗೆ ಧರಿಸುವ ಮುನ್ನ ಟ್ರಯಲ್‌ ಮಾಡಿ ನೋಡಿ

ಯಾವುದೇ ಡಿಸೈನರ್‌ವೇರ್‌ ಧರಿಸುವ ಮುನ್ನ, ಟ್ರಯಲ್‌ ಮಾಡಿ ನೋಡುವುದು ಅಗತ್ಯ. ಇಲ್ಲವಾದಲ್ಲಿ ಧರಿಸಿದ ನಂತರ ಟೈಟಾಗಿ ಹರಿದುಹೋಗಬಹುದು. ಹಾಗಾಗಿ ಉಡುಪಿನ ಬಗ್ಗೆ ಅತಿ ಹೆಚ್ಚು ಆತ್ಮವಿಶ್ವಾಸ ಬೇಡ.

ಡೆಲಿಕೇಟ್‌ ಡಿಸೈನರ್‌ವೇರ್‌ ಆಯ್ಕೆ

ಡೆಲಿಕೇಟ್‌ ಡಿಸೈನರ್‌ವೇರ್ಸ್ ಆಯ್ಕೆ ಮಾಡುವಾಗ, ನಿಮ್ಮ ಬಾಡಿ ಮಾಸ್‌ ಇಂಡೆಕ್ಸ್ಗೆ ಅದು ಹೊಂದುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.

Beware of transparent sheer fabric

ಪಾರದರ್ಶಕ ಶೀರ್‌ ಫ್ಯಾಬ್ರಿಕ್‌ ಬಗ್ಗೆ ಎಚ್ಚರ

ಪಾರದರ್ಶಕವಾಗಿರುವ ಔಟ್‌ಫಿಟ್‌ಗಳು ಅತಿ ಬೇಗ ಹರಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಔಟ್‌ಫಿಟ್‌ಗಳ ಫಿಟ್ಟಿಂಗ್‌ ಕೊಂಚ ಲೂಸಾಗಿದ್ದರೇ ಉತ್ತಮ.

ಉತ್ತಮ ಫ್ಯಾಬ್ರಿಕ್‌ಗೆ ಆದ್ಯತೆ

ಕಂಫರ್ಟಬಲ್‌ ಡಿಸೈನರ್‌ವೇರ್‌ಗೆ ಆದ್ಯತೆ ನೀಡಿ. ಲೆಬೆಲ್‌ ಹಾಗೂ ಬ್ರಾಂಡ್‌ ಹೆಸರಿಗಾಗಿ ಉಡುಪನ್ನು ಧರಿಸಬೇಡಿ. ಬದಲಿಗೆ ಗುಣಮಟ್ಟದ ಫ್ಯಾಬ್ರಿಕ್‌ಗೆ ಮಾನ್ಯತೆ ನೀಡಿ.

Beware of transparent sheer fabric

ಪಾರಾಗಲು ಹೀಗೆ ಮಾಡಿ

ನಿಮ್ಮ ಬಳಿ ಅಲ್ಟರ್‌ನೇಟಿವ್‌ ಔಟ್‌ಫಿಟ್‌, ಜಾಕೆಟ್‌ ಅಥವಾ ದುಪಟ್ಟಾ ಜೊತೆಗಿರಲಿ. ವಾರ್ಡ್ರೋಬ್‌ ಮಲ್‌ಫಂಕ್ಷನ್ ಆದರೂ ತಕ್ಷಣ ಬೆಚ್ಚಿ ಬೀಳದೇ, ಈಸಿಯಾಗಿ ಕ್ಯಾರಿ ಮಾಡಲು ಟ್ರೈ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Wedding Fashion: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರೆಟಿಗಳ ಹೈ ಫ್ಯಾಷನ್‌ ಹೀಗಿತ್ತು!

Continue Reading
Advertisement
Missile Attack
ವಿದೇಶ26 mins ago

Missile Attack: ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ; ಕೇರಳ ಮೂಲದ ವ್ಯಕ್ತಿ ಸಾವು

Raja Marga Column Beena das2
ಸ್ಫೂರ್ತಿ ಕತೆ2 hours ago

Raja Marga Column : ಕ್ರಾಂತಿ ಸಿಂಹಿಣಿ ಬೀನಾ ದಾಸ್! ಅನಾಥ ಶವದ ಪರ್ಸಲ್ಲಿತ್ತು ಸುಭಾಸ್ ಚಿತ್ರ!

Best Ways To Clean Fruits
ಆಹಾರ/ಅಡುಗೆ3 hours ago

Best Ways To Clean Fruits: ಹಣ್ಣುಗಳನ್ನು ತಿನ್ನುವ ಮೊದಲು ನೀವು ಈ ವಿಧಾನದಲ್ಲಿ ತೊಳೆದುಕೊಂಡಿದ್ದೀರಾ?

Sunny weather across the karnataka
ಮಳೆ3 hours ago

Karnataka Weather: ರಾಜ್ಯಾದ್ಯಂತ ಇಂದು ಬಿಸಿಲಿನ ವಾತಾವರಣ

Supreme Court On Udhayanidhi Stalin
ದೇಶ4 hours ago

ವಿಸ್ತಾರ ಸಂಪಾದಕೀಯ: ‘ಅಧರ್ಮ’ ಹೇಳಿಕೆಯ ಸ್ಟಾಲಿನ್‌ಗೆ ಸುಪ್ರೀಂ ಚಾಟಿ; ಇನ್ನಾದರೂ ಬುದ್ಧಿ ಬರಲಿ

Dina Bhavishya
ಭವಿಷ್ಯ5 hours ago

Dina Bhavishya: ಈ ರಾಶಿಯವರಿಗೆ ಕೂಡಿ ಬರಲಿದೆ ಕಂಕಣಭಾಗ್ಯ

Water tanker to be seized if not registered by March 7‌ says DK Shivakumar
ಪ್ರಮುಖ ಸುದ್ದಿ9 hours ago

Water Crisis: ಮಾ. 7ರೊಳಗೆ ನೋಂದಣಿ ಮಾಡಿಸದಿದ್ರೆ ನೀರಿನ ಟ್ಯಾಂಕರ್‌ ಸೀಜ್, ಸರ್ಕಾರದಿಂದಲೇ ದರ ನಿಗದಿ: ಡಿಕೆಶಿ

Seema Haider Sachin Meena
ದೇಶ10 hours ago

3 ಕೋಟಿ ರೂ. ಕೇಳಿ ಪಾಕ್‌ನಿಂದಲೇ ನೋಟಿಸ್‌ ಕಳುಹಿಸಿದ ಸೀಮಾ ಹೈದರ್‌ ಮೊದಲ ಪತಿ!

Accused sent to police custody for raising pro-Pakistan slogans
ಪ್ರಮುಖ ಸುದ್ದಿ10 hours ago

Sedition Case: ಪಾಕ್‌ ಪರ ಘೋಷಣೆ ಕೂಗಿದವರಿಗೆ 3 ದಿನ ಪೊಲೀಸ್‌ ಕಸ್ಟಡಿ: ಕೋರ್ಟ್‌ ಆದೇಶ

Mouth Freshner
ದೇಶ10 hours ago

Mouth Freshener: ರೆಸ್ಟೋರೆಂಟ್‌ನಲ್ಲಿ ಮೌತ್‌ ಫ್ರೆಶ್‌ನರ್‌ ಬಳಸಿದ ಐವರಿಗೆ ರಕ್ತದ ವಾಂತಿ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ16 hours ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ20 hours ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌