Site icon Vistara News

Winter Cardigan Fashion: ಚಳಿಗಾಲದಲ್ಲಿ ಸ್ಟೈಲಿಶ್‌ ಆಗಿ ಕಾಣಿಸುವ ಕಾರ್ಡಿಗಾನ್‌ ಫ್ಯಾಷನ್‌

Winter Cardigan Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಲೇಯರ್‌ ಲುಕ್‌ಗೆ ಸಾಥ್‌ ನೀಡಲು ವೈವಿಧ್ಯಮಯ ಕಾರ್ಡಿಗಾನ್‌ಗಳು ಫ್ಯಾಷನ್‌ (Winter Cardigan Fashion) ಲೋಕಕ್ಕೆ ಕಾಲಿಟ್ಟಿವೆ. ಉಡುಪಿನ ಮೇಲೆ ಧರಿಸಿದಾಗ ನೋಡಲು ಮನಮೋಹಕವಾಗಿ ಕಾಣುವ ವೆರೈಟಿ ವಿನ್ಯಾಸದ ಕಾರ್ಡಿಗಾನ್ಸ್‌ ಈ ಚಳಿಗಾಲದಲ್ಲಿ ಟ್ರೆಂಡಿಯಾಗಿವೆ. ಕ್ಯಾಶುವಲ್‌ ಹಾಗೂ ಫಾರ್ಮಲ್‌ ಔಟ್‌ಫಿಟ್‌ಗಳಿಗೂ ಒಪ್ಪುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.

“ಕಾರ್ಡಿಗಾನ್‌ಗಳು ಚಳಿಗಾಲದ ಫ್ಯಾಷನ್‌ನಲ್ಲಿ (Winter Cardigan Fashion) ಟಾಪ್‌ ಲಿಸ್ಟ್‌ನಲ್ಲಿವೆ. ಸೆಲೆಬ್ರೆಟಿಗಳಿಂದಿಡಿದು ಸಾಮಾನ್ಯ ಮಹಿಳೆಯರು ಧರಿಸಬಹುದಾದ ಲೇಯರ್‌ ಲುಕ್‌ ನೀಡುವ ಔಟ್‌ಫಿಟ್‌ಗಳಿವು. ಕಡಿಮೆ ದರದಿಂದ ಹೆಚ್ಚಿನ ಬೆಲೆಯ ಕಾರ್ಡಿಗಾನ್‌ಗಳು ಆಯಾ ಫ್ಯಾಬ್ರಿಕ್‌ ಹಾಗೂ ಡಿಸೈನ್‌ಗಳ ಆಧಾರ ಮೇಲೆ ದೊರೆಯುತ್ತವೆ. ನೋಡಲು ಕೂಡ ಇವು ವಿಂಟರ್‌ ಫ್ಯಾಷನ್‌ಗೆ ಹೇಳಿ ಮಾಡಿಸಿದಂತಿರುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜಿನತ್‌. ಅವರ ಪ್ರಕಾರ, ಇವುಗಳನ್ನು ಔಟಿಂಗ್‌ಗೆ ಹೋಗುವಾಗ, ಟ್ರಾವೆಲ್‌ ಮಾಡುವಾಗ ಹಾಗೂ ಹಾಲಿಡೇ ಫ್ಯಾಷನ್‌ನಲ್ಲೂ ಧರಿಸಬಹುದು ಎನ್ನುತ್ತಾರೆ.

ವಿಂಟರ್‌ನಲ್ಲಿ ಕಾಲಿಟ್ಟ ಕಾರ್ಡಿಗಾನ್‌ಗಳು

ವೇಸ್ಟ್‌ಲೈನ್‌, ಶಾರ್ಟ್‌ಲೆಂಥ್‌ ಕಾರ್ಡಿಗಾನ್‌, ಫ್ಲೋರ್‌ ಲೆಂಥ್‌ ಕಾರ್ಡಿಗಾನ್‌, ವುಲ್ಲನ್‌ ಲಾಂಗ್‌ ಕಾರ್ಡಿಗಾನ್‌, ಮ್ಯಾಕ್ಸಿ ಸ್ಟೈಲ್‌ ಕಾರ್ಡಿಗಾನ್, ಮ್ಯಾಕ್ಸಿ ಸ್ಟೈಲ್‌ ಕಾರ್ಡಿಗಾನ್‌, ಸ್ಲಿವ್‌ಲೆಸ್‌ ಕಾರ್ಡಿಗಾನ್‌, ಫುಲ್‌ ಸ್ಲೀವ್‌ ಹಾಗೂ ತ್ರೀ ಫೋರ್ತ್ ಕಾರ್ಡಿಗಾನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಕಾರ್ಡಿಗಾನ್ಸ್‌ ವೆಸ್ಟರ್ನ್‌ ಶೈಲಿಯ ಸ್ಟಿಚ್‌ಗಳನ್ನು ಹೊಂದಿರುವುದರಿಂದ ಕೊಂಚ ವಿಭಿನ್ನ ಲುಕ್‌ ನಿಡುತ್ತವೆ. ಯಾವುದೇ ಕ್ಯಾಶುವಲ್‌ ಹಾಗೂ ಫಾರ್ಮಲ್‌ಗಳ ಉಡುಪುಗಳ ಬಣ್ಣಕ್ಕೆ ಹೊಂದುವಂತೆ ಧರಿಸಬಹುದು. ಈ ಸೀಸನ್‌ನಲ್ಲಿ ಡಬ್ಬಲ್‌ ಶೇಡ್ಸ್‌ನದ್ದೂ ಟ್ರೆಂಡ್‌ನಲ್ಲಿಲ್ಲ. ಪ್ರಿಂಟೆಡ್‌ನವು ಎಲ್ಲವಕ್ಕೂ ಹೊಂದುವುದಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಮಿಕ್ಸ್‌ ಮ್ಯಾಚ್‌ ಮಾಡಿ ನೋಡಿ

ಕಾರ್ಡಿಗಾನ್ಸ್‌ ಜಾಕೆಟ್‌ಗಳಂತೆಯೂ ಕಾಣಿಸುವುದರಿಂದ ಜೀನ್ಸ್‌ ಹಾಗೂ ಇತರೇ ಪ್ಯಾಂಟ್‌ಗಳ ಮೇಲೆ ಹಾಕಬಹುದು. ಹೆಚ್ಚಾಗಿ ಉದ್ದವಾಗಿರುವುದರಿಂದ ಪ್ಲಸ್‌ ಸೈಜ್‌ನವರೂ ಧರಿಸಬಹುದು. ದಪ್ಪಗಿರುವವರಿಗೆ ಇವು ಚೆನ್ನಾಗಿ ಕಾಣಿಸುತ್ತವೆ. ಕೆಲವು ಲಾಂಗ್‌ ಕಾರ್ಡಿಗಾನ್ಸ್‌ ತಕ್ಷಣಕ್ಕೆ ನೋಡಲು ಟ್ರೆಂಚ್‌ ಕೋಟ್‌ನಂತೆ ಕಂಡರೂ ಸ್ಲೋಪಿಯಾಗಿರುವುದರಿಂದ ಕಂಫರ್ಟಬಲ್‌ ಆಗಿರುತ್ತವೆ.

ಕಾರ್ಡಿಗಾನ್‌ ರೂಲ್ಸ್

ಇನ್ನು ಮಾಡೆಲ್‌ ಜಾನ್ಹವಿ ಪ್ರಕಾರ, ಇಂಡಿಯನ್‌ ಸೀರೆಗೆ ಯಾವುದೇ ಕಾರಣಕ್ಕೂ ಕಾರ್ಡಿಗಾನ್ಸ್‌ ಧರಿಸಕೂಡದು. ಆವಾಯ್ಡ್‌ ಮಾಡುವುದು ಉತ್ತಮ. ಇದರ ಬದಲು ಸ್ವೆಟರ್‌ ಧರಿಸುವುದು ಉತ್ತಮ. ಅಥವಾ ತೆಳುವಾದ ಜಾಕೆಟ್‌ ಕೂಡ ಓಕೆ. ಹಿಪ್‌ ಅಗಲವಾಗಿರುವವರು ಆದಷ್ಟೂ ಲಾಂಗ್‌ ಕಾರ್ಡಿಗಾನ್‌ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇನ್ನು ಶಾರ್ಟ್‌ ಆಗಿರುವವರು ಕ್ರಾಪ್‌ ಇಲ್ಲವೇ ಶಾರ್ಟ್‌ ಕಾರ್ಡಿಗಾನ್‌ ಧರಿಸಬಹುದು. ಇನ್ನು ಕಾರ್ಡಿಗಾನ್‌ಗಳ ಆಯ್ಕೆ ಅವರವರ ಪರ್ಸನಾಲಿಟಿಗೆ ತಕ್ಕಂತೆ ಇರುವುದು ಉತ್ತಮ.

ಕಾರ್ಡಿಗಾನ್‌ ಲುಕ್‌ ಹೀಗಿರಲಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ವೆಡ್ಡಿಂಗ್‌ ಪರ್ಸ್

Exit mobile version