ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೈವಿಧ್ಯಮಯ ಔಟ್‌ಫಿಟ್ಸ್, ಎಥ್ನಿಕ್‌ವೇರ್ಸ್ ಹಾಗೂ ಕಂಫರ್ಟಬಲ್ ಫ್ಯಾಷನ್‌ವೇರ್ಸ್‌ನಲ್ಲಿ ಕಾಣಿಸಿಕೊಂಡ ತಾರೆಯರು ರಂಗು ರಂಗಾಗಿ ಹೋಳಿ (Stars Holi Fashion) ಆಚರಿಸಿದರು. ಎಥ್ನಿಕ್ ಲುಕ್‌ನಲ್ಲಿ ಸಿನಿಮಾ ನಟಿಯರು ಕಾಣಿಸಿಕೊಂಡರೇ, ನಟರು ತಮಗೆ ಕಂಫರ್ಟಬಲ್ ಎಂದನಿಸಿದ ಕ್ಯಾಶುವಲ್ ವೇರ್ಸ್ ಹಾಗೂ ವೈಟ್ ಧೋತಿ-ಕುರ್ತಾ, ಪೈಜಾಮ-ಶಾರ್ಟ್ ಕುರ್ತಾಗಳಲ್ಲಿ ಕಾಣಿಸಿಕೊಂಡರು. ಇನ್ನು ಕಿರುತೆರೆ ನಟ-ನಟಿಯರು ತಮ್ಮದೇ ಆದ ಹೋಳಿ ಉಡುಪುಗಳಲ್ಲಿ ಮಿಂದೆದ್ದರು. ಪೇಜ್3 ಹಾಗೂ ಫ್ಯಾಷನ್ ಸೆಲೆಬ್ರೆಟಿಗಳು ರಂಗಿನ ಹಬ್ಬದ ಡ್ರೆಸ್‌ಕೋಡ್‌ನಲ್ಲಿ ಹೋಳಿ ಹಬ್ಬವನ್ನು ಕಲರ್‌ಫುಲ್ ಆಗಿ ಆಚರಿಸಿದರು. ಹೀಗೆ ತಾರೆಯರು, ಮಾಡೆಲ್‌ಗಳು ಹಾಗೂ ಇತರೇ ಕ್ಷೇತ್ರದ ಸೆಲೆಬ್ರೆಟಿಗಳು ಫೆಸ್ಟಿವ್ ಸೆಲೆಬ್ರೇಷನ್‌ಗೆ ಹೊಂದುವಂತೆ ವೈವಿಧ್ಯಮಯ ಔಟ್‌ಫಿಟ್‌ಗಳನ್ನು ಧರಿಸಿ, ಸಂಭ್ರಮಿಸಿದರು.
ಸ್ಯಾಂಡಲ್‌ವುಡ್ ತಾರೆಯರ ಹೋಳಿ ಔಟ್‌ಫಿಟ್ಸ್
ಎಂದಿನಂತೆ ಈ ಬಾರಿಯೂ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಅವರು ನಡೆಸಿದ ಹೋಳಿ ಸಂಭ್ರಮಾಚರಣೆಯಲ್ಲಿ ಎಥ್ನಿಕ್ ಔಟ್‌ಫಿಟ್ಸ್‌ನಲ್ಲಿ ಅನು ಪ್ರಭಾಕರ್, ಪಲ್ಲವಿ ಗುರುಕಿರಣ್, ಗಣೇಶ್, ಅಮೂಲ್ಯ, ಸೇರಿದಂತೆ ನಾನಾ ನಟಿಯರು ಆಕರ್ಷಕ ಧಿರಿಸಿನಲ್ಲಿ ಪಾಲ್ಗೊಂಡಿದ್ದರು. ಹೋಳಿ ಆಚರಣೆಗೆ ಹೇಳಿಮಾಡಿಸಿದ್ದ ಕುರ್ತಾ, ದುಪಟ್ಟಾ ಹಾಗೂ ಬಗೆಬಗೆಯ ಡ್ರೆಸ್‌ಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರು. ಕೆಲವರು ಶ್ವೇತ ವರ್ಣದ ಧಿರಿಸಿಗೆ ಪ್ರಾಮುಖ್ಯತೆ ನೀಡಿದ್ದರೇ, ಮತ್ತೆ ಕೆಲವರು ಇತರೇ ವರ್ಣದ ಉಡುಪಿನಲ್ಲಿ ಕಾಣಿಸಿಕೊಂಡರು. ಅವರಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಧರಿಸಿದ್ದ ಬಿಳಿ ವರ್ಣದ ಲಂಗ-ದಾವಣಿ ಶೈಲಿಯ ಔಟ್‌ಫಿಟ್ ಎಲ್ಲರನ್ನು ಸೆಳೆಯಿತು.
ಇನ್ನು ನಟ ಗಣೇಶ್, ರಘು ಮುಖರ್ಜಿ, ನಿರಂಜನ್ ಸುದೀಂದ್ರ, ಉಪೇಂದ್ರ, ಗುರುಕಿರಣ್ ಸೇರಿದಂತೆ ಸಾಕಷ್ಟು ಸ್ಯಾಂಡಲ್‌ವುಡ್ ಮಂದಿ ಹೋಳಿಯಲ್ಲಿ, ಕಂಫರ್ಟಬಲ್ ಉಡುಪಿನಲ್ಲಿ ಪಾಲ್ಗೊಂಡು ಮೋಜು ಅನುಭವಿಸಿದರು.
ಇನ್ನು, ನಟ ಶರಣ್ ಫ್ಯಾಮಿಲಿಯೊಂದಿಗೆ ಆಚರಿಸಿರುವ ಫೋಟೋ ಹಾಗೂ ನಟಿ ಸುಧಾರಾಣಿ ಹೋಳಿಯ ಲುಕ್‌ನಲ್ಲಿ ಡಾನ್ಸ್ ಮಾಡಿರುವ ಫೋಟೋ, ಸಂಗೀತಾ ಭಟ್ ಗ್ಲಾಮರಸ್ ಫೋಟೋ ಈಗಾಗಲೇ ಅಭಿಮಾನಿಗಳನ್ನು ಸೆಳೆದಿದೆ.
ಇದನ್ನು ಹೊರತು ಪಡಿಸಿದರೇ, ಕಿರುತೆರೆ ನಟ-ನಟಿಯರು ಕೂಡ ಎಥ್ನಿಕ್ ಔಟ್‌ಫಿಟ್ಸ್‌ನಲ್ಲಿ ತಂತಮ್ಮ ಟೀಮ್‌ನೊಂದಿಗೆ ಸಂಭ್ರಮಿಸಿದ್ದಾರೆ.
ಬಾಲಿವುಡ್ ತಾರೆಯರ ಹೋಳಿ ಔಟ್‌ಫಿಟ್ಸ್
ಬಾಲಿವುಡ್‌ನಲ್ಲಿ ಕೇಳಬೇಕೇ! ಆಕರ್ಷಕ ಡಿಸೈನರ್ ಔಟ್‌ಫಿಟ್‌ಗಳಲ್ಲಿ ನಟ-ನಟಿಯರು ಹೋಳಿ ಪಾರ್ಟಿ ಮಾಡಿದರು. ಕೆಲವೆಡೆ ಡ್ರೆಸ್ಕೋಡ್‌ಗೆ ತಕ್ಕಂತೆ ವೈಟ್ ಕುರ್ತಾ ಹಾಗೂ ಪೈಜಾಮದಲ್ಲಿ ನಟರು ಕಾಣಿಸಿಕೊಂಡರೇ, ನಟಿಯರು ಮಾತ್ರ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡು ಪೋಸ್ ನೀಡಿದರು. ಈ ಲಿಸ್ಟ್‌ನಲ್ಲಿ ಬಿಗ್ ಬಿ ಫ್ಯಾಮಿಲಿ , ಪಟೌಡಿ ಫ್ಯಾಮಿಲಿ ಮಾತ್ರವಲ್ಲ, ಶಿಲ್ಪಾ ಶೆಟ್ಟಿ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ರಿತಿಕ್ ರೋಷನ್, ಕಾರ್ತಿಕ್, ಅನನ್ಯಾ, ಶ್ರದ್ಧಾ, ದಿಶಾ ಪಟಾನಿ, ಜಾನ್ವಿ ಸ್ನೇಹಿತರ ವರ್ಗ ಸೇರಿದಂತೆ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ತಮ್ಮ ಔಟ್‌ಫಿಟ್‌ನಲ್ಲೆ ಹೈಲೈಟ್ ಆದರು. ನಟಿ ರಶ್ಮಿಕಾ ಮಂದಣ್ಣ, ವೈಟ್ ಟೀ ಶರ್ಟ್‌ನಲ್ಲಿ, ಗ್ರೂಪ್‌ನೊಂದಿಗೆ ಹೋಳಿ ಆಚರಿಸಿದ್ದಾರೆ.
ಫ್ಯಾಷನ್ ಸೆಲೆಬ್ರೆಟಿಗಳ ಹೈಲೈಟ್
ಫ್ಯಾಷನ್ ಲೋಕದ ಸೆಲೆಬ್ರೆಟಿಗಳಂತೂ ಈ ಕಾರ್ಯಕ್ರಮಗಳಿಗೆಂದೇ ತಮ್ಮದೇ ಆದ ಡಿಸೈನರ್‌ವೇರ್ ಧರಿಸಿ ಸಂಭ್ರಮಿಸುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಫ್ಯಾಷನ್ ಡಿಸೈನರ್‌ಗಳಾದ ರಮೇಶ್ ಡೆಂಬ್ಲಾ, ವಿದ್ಯಾ, ಪ್ರಸಾದ್ ಬಿದ್ದಪ್ಪಾ, ಪೇಜೆಂಟ್‌ಗಳ ಡೈರೆಕ್ಟರ್‌ಗಳಾದ ಪ್ರತಿಭಾ, ಅನಿ ಥಾಮಸ್, ಮಾಡೆಲ್‌ಗಳಾದ ಚಂದನಾ, ದೀಪ್ತಿ, ದರ್ಶ್ ಹೋಳಿ ಆಚರಣೆಯಲ್ಲಿ ಡಿಫರೆಂಟ್ ಲುಕ್ಸ್‌ನಲ್ಲಿ ಕಾಣಿಸಿಕೊಂಡರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Garden Printed Fashionwears: ಬೇಸಿಗೆ ಫ್ಯಾಷನ್‌ನಲ್ಲಿ ಗಾರ್ಡನ್ ಪ್ರಿಂಟ್ಸ್ ಹಂಗಾಮ!