-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಮನವಮಿಯಂದು (Celebrities Ramanavami) ಸಿಂಪಲ್ ಎಥ್ನಿಕ್‌ವೇರ್‌ಗಳನ್ನು ಧರಿಸಿದ ನಾನಾ ಸೆಲೆಬ್ರೆಟಿಗಳು ರಾಮನಾಮ ಜಪ ಮಾಡಿ, ಹಬ್ಬ ಆಚರಿಸಿದ್ದಾರೆ. ಹಬ್ಬ ಎಂದಾಕ್ಷಣ ಎಂತಹ ಸೆಲೆಬ್ರೆಟಿಗಳು ಕೂಡ ತಾತ್ಕಲಿಕವಾಗಿ, ವೆಸ್ಟರ್ನ್ ವೇರ್‌ಗಳಿಂದ ದೂರ ಉಳಿದು ಎಥ್ನಿಕ್‌ವೇರ್ ಅಥವಾ ಟ್ರೆಡಿಷನಲ್ ವೇರ್‌ಗಳನ್ನು ಆಯ್ಕೆ ಮಾಡುತ್ತಾರೆ. ಅದು ದೊಡ್ಡ ಹಬ್ಬವಾಗಲಿ, ಬಿಡಲಿ, ದೇವರ ಪೂಜೆ ಎಂದಾಕ್ಷಣಾ ಸಿಂಪಲ್‌ವೇರ್‌ಗಳನ್ನು ಧರಿಸುತ್ತಾರೆ. ಅವು ಟ್ರೆಡಿಷನಲ್ ಪೂಜೆಗಳಿಗೆ ಪೂರಕವಾಗಿರುವಂತಿರುತ್ತವೆ. ಈ ನಿಟ್ಟಿನಲ್ಲಿ, ಹಬ್ಬಗಳು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಪ್ರಮೋಟ್ ಮಾಡುತ್ತಿವೆ ಎನ್ನಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಫೆಸ್ಟೀವ್ ಸೀಸನ್‌ನ ಔಟ್‌ಫಿಟ್‌ಗಳು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಸಹಕರಿಸುತ್ತಿವೆಯಂತೆ.
ಸಂಸ್ಕೃತಿ ಬಿಂಬಿಸುವ ಉಡುಗೆಗಳು
ನಮ್ಮ ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆಗಳನ್ನು ಪ್ರಮೋಟ್ ಮಾಡುವಲ್ಲಿ ಇತ್ತೀಚೆಗೆ ಸೆಲೆಬ್ರೆಟಿಗಳು ಕೂಡ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾ ಕೂಡ ಸಹಕಾರಿಯಾಗಿದೆ. ಇದನ್ನು ನೋಡುವ ಅಭಿಮಾನಿಗಳು ಹಾಗೂ ಫ್ಯಾಷನ್ ಪ್ರಿಯರು ಕೂಡ ತಾವೇನೂ ಕಡಿಮೆ ಇಲ್ಲವೆಂಬಂತೆ ಹಬ್ಬಗಳಿಗೆ ಮ್ಯಾಚ್ ಆಗುವ ಉಡುಗೆ-ತೊಡುಗೆಗಳನ್ನು ಧರಿಸುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ಪೂರಕವಾಗಿದೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಸ್ಟೈಲಿಸ್ಟ್ ದಾಮಿನಿ.
ಲಂಗ-ದಾವಣಿಯಲ್ಲಿ ಕಾರುಣ್ಯ
ರಾಮನವಮಿ ಹಬ್ಬವನ್ನು ವಿಶ್ ಮಾಡಿರುವ ನಟಿ ಕಾರುಣ್ಯ, ಹಸಿರು ಲಂಗ, ಮರೂನ್ ವರ್ಣದ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಅವರ ಈ ಟ್ರೆಡಿಷನಲ್ ಡಿಸೈನರ್‌ವೇರ್‌ನಲ್ಲಿ ಕಾರುಣ್ಯ, ಸ್ಟ್ರೀಟ್ ಫೋಟೋಗ್ರಾಫಿಯಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ವಿಶ್ ಮಾಡಿದ್ದಾರೆ.
ಕಲರ್‌ಫುಲ್ ಸಲ್ವಾರ್ ಸೂಟ್‌ನಲ್ಲಿ ರಾಗಿಣಿ
ನಟಿ ರಾಗಿಣಿ ಮಲ್ಟಿ ಕಲರ್‌ನ ದುಪಟ್ಟಾದ ಸಲ್ವಾರ್ ಸೂಟ್‌ನಲ್ಲಿ ಹಬ್ಬದ ವಿಶ್ ಮಾಡಿದ್ದಾರೆ. ಪೂಜೆ ಮುಗಿಸಿದ ನಂತರ ಇರುವ ಲುಕ್ ಇವರದ್ದಾಗಿದ್ದು, ವರ್ಣಮಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಣೀತಾ ರಾಮನ ಪೂಜೆ
ಮಗಳೊಂದಿಗೆ ದೇವಸ್ಥಾನಕ್ಕೆ ತೆರಳಿ, ರಾಮ ಪೂಜೆ ಮಾಡಿರುವ ನಟಿ ಪ್ರಣೀತಾ, ಸಿಂಪಲ್ ಪಾಸ್ಟೆಲ್ ಶೇಡ್ ಉಡುಗೆಯಲ್ಲಿ ರಾಮನನ್ನು ಪೂಜಿಸಿದ್ದಾರೆ.
ಪ್ರಿಯಾಂಕಾ ಚಿಂಚೊಳ್ಳಿಯ ರಾಮನ ಪೂಜೆ
ಮನೆಯಲ್ಲೆ ರಾಮನ ಜಪ, ಪೂಜೆ ಮಾಡಿರುವ ಪ್ರಿಯಾಂಕಾ ಚಿಂಚೊಳ್ಳಿ, ಎಂದಿನಂತೆ ಟ್ರೆಡಿಷನಲ್ ಲುಕ್‌ನಲ್ಲಿ ಪೂಜೆ ಕೈಗೊಂಡಿದ್ದಾರೆ.
ಅಂಕಿತಾ ಅಮರ್ ರಾಮ ನಾಮ
ನಟಿ ಅಂಕಿತಾ ಅಮರ್, ಕುಂಕುಮ ಬಳಿದುಕೊಂಡ ಸಾಮಾನ್ಯ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಇಷ್ಟ ದೇವರ ಹಬ್ಬವನ್ನು ಆಚರಿಸಿದ್ದಾರೆ. ಸಿಂಪಲ್ ಚೂಡಿದಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲ ನಟಿ ಅನ್ಯಾ ಶೆಟ್ಟಿಯ ರಾಮನ ಜಪ
ಬಾಲನಟಿ ಅನ್ಯಾ ಶೆಟ್ಟಿ ಇದೀಗ ಟೀನೇಜ್ ಹುಡುಗಿಯಾಗಿದ್ದು, ಲಂಗ-ದಾವಣಿ ಧರಿಸಿ, ರಾಮನಾಮ ಜಪ ಮಾಡಿದ್ದಾರೆ. ಉದ್ದ ಕೂದಲಿನ ನಗುಮೊಗದ ಅನ್ಯಾ ಆಗಾಗ್ಗೆ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸೆಲೆಬ್ರೆಟಿಗಳು ಮಾತ್ರವಲ್ಲ, ಬಾಲಿವುಡ್, ಸ್ಯಾಂಡಲ್‌ವುಡ್ ಹಾಗೂ ಕಿರುತೆರೆ-ಹಿರಿತೆರೆಯ ನಾನಾ ತಾರೆಯರು ಕೂಡ ರಾಮನವಮಿಯಂದು ತಮ್ಮದೇ ಆದ ಸಿಂಪಲ್ ಎಥ್ನಿಕ್‌ವೇರ್‌ಗಳಲ್ಲಿ ರಾಮನನ್ನು ಪೂಜಿಸಿ ಸಂಭ್ರಮಿಸಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ಕಲಾವಿದೆ ಸ್ಮಿತಾ ಪ್ರಕಾಶ್ ವಿಂಟರ್ ಫ್ಯಾಷನ್ ಝಲಕ್ ಹೀಗಿದೆ!